Business: 8 ಲಕ್ಷ ಹಣ ಹೂಡಿಕೆ ಮಾಡಿ, ಸಾವಿರಾರು ಕೋಟಿ ದುಡಿದ ಬಿಪಿನ್, ಯಾರೀತ?

0
199
Business

Business

ಶ್ರಮ ಪಡುವ ಮನಸ್ಸಿದ್ದವರಿಗೆ ಸರಿಯಾದ ದಾರಿ ಸಿಕ್ಕಿಬಿಟ್ಟರೆ ಅವರ ಯಶಸ್ಸನ್ನು ಯಾರಿಗೂ ತಡೆಯಲಾಗುವುದಿಲ್ಲ. ಅಂಥಹವರಲ್ಲಿ ಒಬ್ಬರು ಬಿಪಿನ್. ದೆಹಲಿಯ ಬಿಪಿನ್ ಅವರ ಪೂರ್ತಿ ಹೆಸರು ಬಿಪಿನ್ ಪ್ರೀತ್ ಸಿಂಗ್. ದೆಹಲಿ ಐಐಟಿ ವಿದ್ಯಾರ್ಥಿ ಬಿಪಿನ್ , 2005-6 ರ ಸಮಯದಲ್ಲಿ ದೆಹಲಿಯ ಟೆಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು‌. ಆ ಸಮಯದಲ್ಲಿ ಭಾರತದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದು ಗಮನಿಸಿದ ಬಿಪಿನ್, ತಮ್ಮ ಪತ್ನಿ ಉಪಾಸನಾ ಜೊತೆ ಸೇರಿ 2009 ರಲ್ಲಿ ಮೋಬಿಕ್ ವಿಕ್ ಹೆಸರಿನ ಸಂಸ್ಥೆ ಪ್ರಾರಂಭ ಮಾಡಿದರು.

ಕಂಪೆನಿ ಪ್ರಾರಂಭಿಸಲು ಆರಂಭದಲ್ಲಿ ಹಣ ಸಿಗದಿದ್ದಾಗ ತಾವು ಉಳಿಸಿದ್ದ ಎಂಟು ಲಕ್ಷ ಹಣವನ್ನು ಹೂಡಿ, ದ್ವಾರಕೆಯಲ್ಲಿ ಸಣ್ಣ ಕಚೇರಿ ತೆರೆದರು. ಕೆಲಿಕಾಮ್ ಕಂಪೆನಿ ಹಾಗೂ ಗ್ರಾಹಕರಿಗೆ ಆನ್’ಲೈನ್ ರೀಚಾರ್ಜ್ ಸೇವೆ ಒದಗಿಸುವ ಸಂಸ್ಥೆಯದು. ಆದರೆ ಆಗ ಇಂಟರ್ನೆಟ್ ದುಬಾರಿ ಆಗುದ್ದ ಕಾರಣ ರೀಚಾರ್ಜ್ ಟಾಪ್ ಅಪ್ ಮೂಲಕವೇ ಆಗುತ್ತಿತ್ತು. ಅದೇ ಸಮಯದಲ್ಲಿ ಬಿಪಿನ್ ಮತ್ತು ಉಪಾಸನಾ ಎಸ್’ಎಂಎಸ್ ಮೂಲಕ ರೀಚಾರ್ಜ್ ಮಾಡುವ ಆಯ್ಕೆ ಪರಿಚಯಿಸಿದರು. ಅದಕ್ಕೆ ಇಂಟರ್ನೆಟ್ ಅವಶ್ಯಕತೆಯೇ ಇರಲಿಲ್ಲ.

ಆರಂಭದಲ್ಲಿ ಬಹಳ ನಿಧಾನಗತಿಯಲ್ಲಿ ಸಾಗಿದ್ದ ಬಿಪಿನ್ ಅವರ ಕಂಪೆನಿ ವೇಗ ಪಡೆದುಕೊಂಡಿದ್ದು 2015 ರ ಬಳಿಕವೇ. ಪಿವಿಆರ್, ಕೆಫೆ ಕಾಫಿ ಡೇ ಇನ್ನಿತರೆ ಕೆಲವು ಕಂಪೆನಿಗಳು ಆನ್’ಲೈನ್ ಪೇಮೆಂಟ್’ಗೆ ಬಿಪಿನ್’ರ ಸಂಸ್ಥೆಯ ಟೆಕ್ನಾಲಜಿಯ ಸಹಾಯ ಬಯಸಿ ಒಪ್ಪಂದ ಮಾಡಿಕೊಂಡವು. ಅದಾದ ಬಳಿಕ ಬಿಪಿನ್ ಅವರ ಸಂಸ್ಥೆ ಹಿಂತಿರುಗಿ ನೋಡಿದ್ದಿಲ್ಲ. 2015 ರ ವೇಳೆಗೆ ಬಿಪಿನ್ ಅವರ ಮೊಬಿವಿಕ್ ಬಳಿ‌ 15 ಸಾವಿರ ವ್ಯಾಲೆಟ್’ಗಳಿದ್ದವು. ಆದರೆ ಅದಾದ ಬಳಿಕ ಭಾರತದಲ್ಲಿ ಕೆಲವು ದೊಡ್ಡ ಟೆಕ್ ಸಂಸ್ಥೆಗಳು ಬಿಪಿನ್ ಅವರ ಮೊಬಿವಿಕ್ ಮಾದರಿಯ ಫಿನ್’ಟೆಕ್ ಕಂಪೆನಿಗಳನ್ನು ಪ್ರಾರಂಭಿಸಲು ಆರಂಭಿಸಿದವು. ಆಗ ಮತ್ತೆ ಬಿಪಿನ್’ಗೆ ಹಿನ್ನಡೆ ಆಯ್ತು.

ಧೃತಿಗೆಡದ, ಬಜಾಜ್ ಫೈನಾನ್ಸ್ ಜೊತೆ ಒಪ್ಪಂದ ಮಾಡಿಕೊಂಡರು. ತಮ್ಮ ಸಂಸ್ಥೆಯ 10.83% ಷೇರುಗಳನ್ನು ಬಜಾಜ್’ಗೆ ಮಾರಾಟ ಮಾಡಿದರು. ಬಜಾಜ್ ಫೈನ್ಯಾನ್ಸ್ ಭಾರತದಲ್ಲಿ‌ ಬಹುದೊಡ್ಡದಾಗಿ ಬೆಳೆಯಿತು, ಅದರ ಜೊತೆಯಾಗಿ ಬಿಪಿನ್ ಸಂಸ್ಥೆಯೂ ಬೆಳೆಯಿತು. ಈಗ ಅವರ ಸಂಸ್ಥೆಯ ಬಳಿ 100 ಮಿಲಿಯನ್ ಅಂದರೆ 10 ಕೋಟಿ ಗ್ರಾಹಕರಿದ್ದಾರೆ.

Share Market: ಕರಡಿ ಆಟ: ಎರಡು ದಿನದಲ್ಲಿ‌ 13 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು

2024 ರಲ್ಲಿ ಮೊಬಿವಿಕ್ ಭಾರತದ ಅತಿ ದೊಡ್ಡ ಫಿನ್’ಟೆಕ್ ಸಂಸ್ಥೆ. ಬಿಪಿನ್’ರ ಸಂಸ್ಥೆಯ ವಾರ್ಷಿಕ ಆದಾಯ 890 ಕೋಟಿ ರೂಪಾಯಿ. ಮೊಬಿವಿಕ್’ನ ಮಾರುಕಟ್ಟೆ ಗಾತ್ರ 23 ಸಾವಿರ ಕೋಟಿಗೂ ಹೆಚ್ಚು. ಸ್ವತಃ ಬಿಪಿನ್’ರ ಆಸ್ತಿ ಮೌಲ್ಯ ಸುಮಾರು 6 ಸಾವಿರ ಕೋಟಿ, ಅವರ ಪತ್ನಿ ಉಪಾಸನಾ ಆಸ್ತಿ ಮೌಲ್ಯ‌ 2.6 ಸಾವಿರ ಕೋಟಿಗೂ ಹೆಚ್ಚು.

LEAVE A REPLY

Please enter your comment!
Please enter your name here