Food Recipes
ಬೇಸಿಗೆ ಬಂದಿದೆ. ಬಿಸಿಲು ನೆತ್ತಿ ಸುಡುತ್ತಿದೆ. ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಸುಡು ಸುಡು ಬಿಸಿಲು ದೇಹವನ್ನು ಬಲು ಬೇಗನೆ ಡೀ ಹೈಡ್ರೇಟ್ ಮಾಡಿಬಿಡುತ್ತದೆ. ದೇಹ ಡೀ ಹೈಡ್ರೇಟ್ ಆದರೆ ಸ್ಟ್ರೋಟ್, ಪಾರ್ಶ್ವವಾಯು, ಹೃದಯಾಘಾತ, ತಲೆಸುತ್ತು, ಹೀಟ್ ಸ್ಟ್ರೋಕ್, ಆಮಶಂಕೆ ಇನ್ನೂ ಹಲವಾರು ರೀತಿಯ ಕಾಯಿಲೆಗಳಿಗೆ ಕಾರಣ ಆಗುತ್ತವೆ. ಬೇಸಿಗೆ ಸಮಯದಲ್ಲಿ ತಿನ್ನುವ ಆಹಾರದ ಮೇಲೆ ಹೆಚ್ಚಿನ ಎಚ್ಚರಿಕೆ ಇರಿಸಬೇಕು. ಅತಿಯಾದ ಮಸಾಲೆ ಪದಾರ್ಥ ಸೇವಿಸಬಾರದು. ಬದಲಿಗೆ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಪದಾರ್ಥಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಬೇಸಿಗೆಯಲ್ಲಿ ಸರಳವಾಗಿ ಮಾಡಿ ತಿನ್ನಬಹುದಾದ ವಿಶಿಷ್ಟವಾದ ಆದರೆ ಆರೋಗ್ಯಕ್ಕೆ ಬಹಳ ಒಳ್ಳೆಯದಾದ ಅನ್ನದ ರೆಸಿಪಿ (ತೆಲುಗಿನಲ್ಲಿ ಇದನ್ನು ಸದ್ದೆನ್ನ) ಮಾಡುವ ವಿಧಾನ ಇಲ್ಲಿ ತಿಳಿಯೋಣ.
ರಾತ್ರಿ ಉಳಿದ ಅನ್ನವನ್ನು ಯಾವುದಾದರೂ ಒಂದು ಪಾತ್ರೆಗೆ ಬಗ್ಗಿಸಿಕೊಳ್ಳಬೇಕು. ಮಡಿಕೆಗೆ ಹಾಕಿಕೊಂಡರೆ ಬಹಳ ಉತ್ತಮ. ಉಳಿದ ಅನ್ನ ಮುಳುಗುವಷ್ಟು ನೀರು ಹಾಕಿಕೊಳ್ಳಬೇಕು. ಈಗ ಅದಕ್ಕೆ ಕಾಯಿಸಿ ಆರಿಸಿದ ಹಾಲು ಸ್ವಲ್ಪ ಹಾಕಿಕೊಳ್ಳಿ. ಹಾಲಿನ ಬದಲಿಗೆ ತುಸು ಮಜ್ಜಿಗೆ ಹಾಕಿಕೊಂಡರೂ ನಡೆಯುತ್ತದೆ. ಬಳಿಕ ಅದೇ ಪಾತ್ರೆಗೆ ಗಟ್ಟಿಯಾದ ಮೊಸರು ಹಾಕಿ. ಬಳಿಕ ಒಂದು ಈರುಳ್ಳಿಯನ್ನು ತುಸು ದೊಡ್ಡ ತುಂಡುಗಳಂತೆ ಕತ್ತರಿಸಿ ಅದೇ ಪಾತ್ರೆಗೆ ಹಾಕಿ. ನಾಲ್ಕು ತೊಟ್ಟು ಮುರಿದ ಮೆಣಸಿನಕಾಯಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಕಲಸಿ, ಪಾತ್ರೆಯನ್ನು ಮುಚ್ಚಿಟ್ಟು ಬಿಡಿ.
Bengaluru: ಡಿಗ್ರಿ, ರೆಸ್ಯೂಮೆ ಬೇಕಿಲ್ಲ, 40 ಲಕ್ಷ ಸಂಬಳದ ಉದ್ಯೋಗ ಬೆಂಗಳೂರಲ್ಲಿ
ಬೆಳಗೆ ಎದ್ದು ಪಾತ್ರೆಗೆ ಇನ್ನಷ್ಟು ಮೊಸರು ಅಥವಾ ಮಜ್ಜಿಗೆ ಸೇರಿಸಿ, ಅಗತ್ಯ ಎನಿಸಿದರೆ ಇದಕ್ಕೆ ಸಣ್ಣದಾಗಿ ಒಗ್ಗರಣೆ ಸಹ ಕೊಟ್ಟುಕೊಳ್ಳಬಹುದು. ಬೇಡ ಎಂದುಕೊಂಡವರು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಬೆರೆಸಿ ತಿಂದು ನೋಡಿ. ಹೊಟ್ಟೆಯಲ್ಲಿ ತಣ್ಣನೆಯ ಅನುಭೂತಿ ಆಗುತ್ತದೆ. ಈ ಆಹಾರ ದೇಹಕ್ಕೆ ತಂಪು ನೀಡುವುದು ಮಾತ್ರವೇ ಅಲ್ಲ, ಇದು ಹೊಟ್ಟೆಯ ಆರೋಗ್ಯ ಅಂದರೆ ನಮ್ಮ ಗಟ್ ಹೆಲ್ತ್ಗೆ ಬಹಳ ಒಳ್ಳೆಯದು. ಅನ್ನ, ಮೊಸರನ್ನು ರಾತ್ರಿ ಪೂರ ನೆನೆಸಿಟ್ಟ ಕಾರಣ ಅದು ಫರ್ಮೆಂಟ್ ಆಗುತ್ತದೆ. ಇದರಿಂದ ಅದರ ಒಳಗೆ ಒಳ್ಳೆಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅದನ್ನು ಸೇವಿಸಿದಾಗ ನಮ್ಮ ಗಟ್ ಹೆಲ್ತ್ ಉತ್ತಮಗೊಳ್ಳುತ್ತದೆ. ಇದರಿಂದ ದೇಹದ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ.