Site icon Samastha News

Tata Nano: ಮತ್ತೆ ಬರುತ್ತಿದೆ ಟಾಟಾ ನ್ಯಾನೋ, ಈ ಬಾರಿ ಬೆಲೆ ಎಷ್ಟಿರಲಿದೆ

Tata Nano

Relaunch Nano Car 2024

Tata Nano

ಟಾಟಾ ಸಂಸ್ಥೆ ದಶಗಳಿಂದಲೂ ಭಾರತದ ಮಧ್ಯಮ, ಬಡ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸೇವೆ ನೀಡುತ್ತಾ ಬರುತ್ತಿದೆ. ಎರಡು ದಶಕದ ಹಿಂದೆ ಮಧ್ಯಮ ವರ್ಗದವರು ಕಾರು ಖರೀದಿಸುವುದು ಕನಸಾಗಿದ್ದ ಸಮಯದಲ್ಲಿ ಟಾಟಾ ಸಂಸ್ಥೆ ನ್ಯಾನೋ ಕಾರು ಮಾರುಕಟ್ಟೆಗೆ ತಂದಿತ್ತು. ಕೇವಲ 1 ಲಕ್ಷ ರೂಪಾಯಿಗೆ ಲಭ್ಯವಿದ್ದ ನ್ಯಾನೋ ಕಾರು ಬಡವರ ಕಾರು ಎಂದೇ ಬಿಂಬಿತವಾಗಿತ್ತು. ಈಗಲೂ ರಸ್ತೆಯ ಮೇಲೆ ಅಲ್ಲಲ್ಲಿ ಈ ನ್ಯಾನೋ ಕಾರುಗಳು ನೋಡಲು ಸಿಗುತ್ತವೆ.

ಆದರೆ ಕಾಲಾಂತರದಲ್ಲಿ ಬೇಡಿಕೆ ಕುಸಿದ ಕಾರಣ ಹಾಗೂ ಮಾರುತಿ ಸಂಸ್ಥೆಯು ಆಲ್ಟೋ ಕೆ10 ಪ್ರತಿಸ್ಪರ್ಧೆ ಒಡ್ಡಿದ ಕಾರಣ ಟಾಟಾ ಸಂಸ್ಥೆ ನ್ಯಾನೊ ಕಾರಿನ ಉತ್ಪಾದನೆ ನಿಲ್ಲಿಸಿತ್ತು, ಆದರೆ ಈಗ ರತನ್ ಟಾಟಾರ ಮೆಚ್ಚಿನ ಕಾರು ಮತ್ತೆ ಮಾರುಕಟ್ಟೆಗೆ ಬರುತ್ತಿದೆ.

ಈ ಹಿಂದೆ, ನ್ಯಾನೋ ಕಾರು ಎಲೆಕ್ಟ್ರಿಕ್ ವರ್ಷನ್ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಎಲೆಕ್ಟ್ರಿಕ್ ಕಾರನ್ನು ಒಂದು-ಎರಡು ಲಕ್ಷದಲ್ಲಿ ನಿರ್ಮಿಸಿ ಮಾರಾಟ ಮಾಡುವುದು ಅಸಾಧ್ಯವಾದ್ದರಿಂದ, ನ್ಯಾನೋ ಕಾರನ್ನು ಇಂಧನ ಚಾಲಿತ ವಾಹನವನ್ನಾಗಿಯೇ ಮಾರುಕಟ್ಟೆಗೆ ತರಲಿದೆ ಟಾಟಾ ಸಂಸ್ಥೆ.

ಹೊಸ ಅವತಾರ ತಳೆದ ಮಾರುತಿ ಆಲ್ಟೋ, ಗ್ರಾಹಕರ ಹುಬ್ಬೇರುವುದು ಗ್ಯಾರೆಂಟಿ

ಹೊಸದಾಗಿ ಬರಲಿರುವ ಕಾರು ಎರಡು ಅಥವಾ ಮೂರು ಸಿಲಿಂಡರ್ ಪೆಟ್ರೋಲ್, ಸಿಎನ್ ಜಿ ಎಂಜಿನ್ ಅನ್ನು ಹೊಂದಿರಲಿದ್ದು, ಕೆಲವು ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರಲಿದೆ. ಕೇಂದ್ರ ಸರ್ಕಾರದ ಬಿಎಸ್ 6 ನಿಯಮಗಳಿಗೆ ಅನುಗುಣವಾಗಿಯೇ ಈ ಕಾರನ್ನು ಅಭಿವೃದ್ಧಿ ಪಡಿಸಲಾಗುತ್ತಿತ್ತು. ಕೆಲವು ಆಧುನಿಕ ತಂತ್ರಜ್ಞಾನವನ್ನೂ ಸಹ ಕಾರಿಗೆ ಅಳವಡಿಸಲಾಗುತ್ತಿದೆ.

14 ವರ್ಷಗಳ ಹಿಂದೆ ಅತ್ಯಂತ ಕಡಿಮೆ ದರಕ್ಕೆ ಮಾರುಕಟ್ಟೆಗೆ ಬಿಡುಗಡೆ ಆಗಿದ್ದ ನ್ಯಾನೋ ಈ ಬಾರಿಯೂ ಸಹ ಕಡಿಮೆ ದರದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಈ ಬಾರಿ ಕೆಲವು ಸುರಕ್ಷತಾ ಆಯ್ಕೆಗಳು ಹಾಗೂ ನವೀನ ತಂತ್ರಜ್ಞಾನ ಬಳಸಿರುವ ಕಾರಣ ಕಳೆದ ಬಾರಿಗಿಂತಲೂ ತುಸಿವಷ್ಟೆ ದುಬಾರಿ ಬೆಲೆಯಲ್ಲಿ ಕಾರು ಮಾರುಕಟ್ಟೆಗೆ ಬರಲಿದೆ. ಈ ಬಾರಿ ಸುಮಾರು 3 ರಿಂದ ನಾಲ್ಕು ಲಕ್ಷದ ಬೆಲೆಯಲ್ಲಿ ನ್ಯಾನೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸುವ ಯೋಚನೆಯಲ್ಲಿದೆ ಟಾಟಾ.

Exit mobile version