Site icon Samastha News

Ratan Tata: ಟಾಟಾ ಕಂಪೆನಿ‌ ಹೊರತಾಗಿ ರತನ್ ಟಾಟಾ ಹೂಡಿಕೆ ಮಾಡಿರುವ ಹತ್ತು ಸಂಸ್ಥೆಗಳು ಇವು

Ratan Tata

Ratan Tata

ರತನ್ ಟಾಟಾ, ಭಾರತದ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಉದ್ಯಮಿ. ಭಾರತದ ಪ್ರಗತಿಯಲ್ಲಿ ಸರ್ಕಾರಗಳ ಪಾತ್ರ ಎಷ್ಟಿದೆಯೋ ಬಹುತೇಕ ಅಷ್ಟೆ ಪಾತ್ರ ಟಾಟಾ ಸಂಸ್ಥೆಯದ್ದು ಸಹ. ಟಾಟಾ, ರಿಲಯನ್ಸ್ ಸಂಸ್ಥೆಗಳು ಇಲ್ಲದೇ ಹೋಗಿದಿದ್ದರೆ ಭಾರತದ ಜಿಡಿಪಿ ಈಗಿನದ್ದಿಕ್ಕಿಂತಲೂ ಅರ್ಧದಷ್ಟು ಮಾತ್ರವೇ ಇರುತ್ತಿತ್ತು ಎನ್ನಲಾಗುತ್ತದೆ. ಅಂದಹಾಗೆ ಟಾಟಾ ಸಮೂಹ ಸಂಸ್ಥೆಯ ಹಾಲಿ ಮಾಲೀಕ ರತನ್ ಟಾಟಾ ಕೇವಲ ಟಾಟಾ ಸಂಸ್ಥೆ ಮಾತ್ರವೇ ಅಲ್ಲದೆ ಬೇರೆ ಕಂಪೆನಿಗಳ ಮೇಲಿಯೂ ಹೂಡಿಕೆ ಮಾಡಿದ್ದಾರೆ. ರತನ್ ಟಾಟಾ ಅವರು ಖಾಸಗಿಯಾಗಿ ಹೂಡಿಕೆ ಮಾಡಿರುವ ಹೊಸ ಸಂಸ್ಥೆಗಳ ಪಟ್ಟಿ ಇಲ್ಲಿದೆ.

ಪೇಟಿಂ

ಜನಪ್ರಿಯ ಹಣಕಾಸು ವರ್ಗಾವಣೆ ಮಾತ್ರವೇ ಅಲ್ಲದೆ ವಿವಿಧ ಆನ್​ಲೈನ್ ಸೇವೆಗಳ ಮಾರಾಟವನ್ನೂ ಮಾಡುತ್ತಿರುವ ಪೇಟಿಂ ಸಂಸ್ಥೆಯಲ್ಲಿ ರತನ್ ಟಾಟಾ ಹೂಡಿಕೆ ಮಾಡಿದ್ದಾರೆ. ಪೇಟಿಂ ಮಾಲೀಕ ಸಂಸ್ಥೆ ಒನ್​97 ಮೇಲೆ ರತನ್ ಅವರು ಹೂಡಿಕೆ ಮಾಡಿದ್ದಾರೆ.

ಕಾರ್​ದೇಖೊ

ಕಳೆದ ಕೆಲವು ವರ್ಷಗಳಿಂದ ಮುನ್ನೆಲೆಗೆ ಬಂದಿರುವ ಕಾರ್​ದೇಖೋ ಸಂಸ್ಥೆಯ ಮೇಲೆ ಸಹ ರತನ್ ಟಾಟಾ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆಯ ಭವಿಷ್ಯದ ಬಗ್ಗೆ ವಿಶ್ವಾಸ ಹೊಂದಿದ್ದ ರತನ್ ಟಾಟಾ ಅವರು 2015ರಲ್ಲಿಯೇ ಈ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದರು.

ಓಲಾ/ಓಲಾ ಎಲೆಕ್ಟ್ರಿಕ್

ಭಾರತದ ಜನಪ್ರಿಯ ಟ್ಯಾಕ್ಸಿ ಸೇವಾ ಸಂಸ್ಥೆ ಓಲಾ ಹಾಗೂ ಓಲಾ ಎಲೆಕ್ಟ್ರಿಕ್ ಮೇಲೆ ದೊಡ್ಡ ಮೊತ್ತದ ಹೂಡಿಕೆಯನ್ನು ರತನ್ ಟಾಟಾ ಮಾಡಿದ್ದಾರೆ. ಈ ಸಂಸ್ಥೆಯ ಮೇಲೂ ಸಹ 2015 ರಲ್ಲಿಯೇ ಹೂಡಿಕೆ ಮಾಡಿದ್ದರು. ಸಂಸ್ಥೆ ಬೆಳೆಯಲು ಮಾರ್ಗದರ್ಶನ ನೀಡಿದ್ದರು.

Rich Indian: ರದ್ದಿ ಆರಿಸುತ್ತಿದ್ದ ಈ ಭಾರತೀಯ ಇಂದು ದುಬೈನ ಭಾರಿ ಶ್ರೀಮಂತರಲ್ಲಿ ಒಬ್ಬ

ಕ್ಯೂರ್ ಫಿಟ್

ಬೆಂಗಳೂರು ಸೇರಿದಂತೆ ಭಾರತದ ಬಹುತೇಕ ದೊಡ್ಡ ನಗರಗಳಲ್ಲಿ ಪ್ರಮುಖ ಏರಿಯಾಗಳಲ್ಲಿ ಕಂಡು ಬರುವ ಕ್ಯೂರ್ ಫಿಟ್ ಹೆಸರಿನ ಫಿಟ್​ನೆಸ್​ ವೆಲ್ ಸಂಸ್ಥೆಯ ಮೇಲೆ 2011 ರಲ್ಲಿಯೇ ರತನ್ ಟಾಟಾ ಹೂಡಿಕೆ ಮಾಡಿದ್ದಾರೆ.

ಲೆನ್ಸ್​ಕಾರ್ಟ್​

ದೇಶದ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಶಾಪ್​ಗಳನ್ನು ತೆಗೆದಿರುವ ಮತ್ತು ಐವೇರ್ ವಿಭಾಗದಲ್ಲಿ ಹೊಸ ಕ್ರಾಂತಿಯನ್ನೇ ಬರೆದಿರುವ ಪಿಯೂಷ್ ಬನ್ಸಾಲ್ ಒಡೆತನದ ಲೆನ್ಸ್​ಕಾರ್ಟ್​ ಮೇಲೆ 2016 ರಲ್ಲಿ ಹೂಡಿಕೆ ಮಾಡಿದರು. ಅಸಲಿಗೆ ಈ ಸಂಸ್ಥೆ 2010 ರಲ್ಲಿ ಪ್ರಾರಂಭವಾಯ್ತು.

ಸ್ನ್ಯಾಪ್​ಡೀಲ್

ಫ್ಲಿಟ್​ಕಾರ್ಟ್, ಅಮೆಜಾನ್​ ಅಂಥಹಾ ದೊಡ್ಡ ಸಂಸ್ಥೆಗಳಿಗೆ ಠಕ್ಕರ್ ನೀಡುತ್ತಿರುವ ಆನ್​ಲೈನ್ ಡೆಲಿವರಿ ಸಂಸ್ಥೆಯಾಗಿರುವ ಸ್ನ್ಯಾಪ್​ಡೀಲ್ ಸಂಸ್ಥೆಯ ಮೇಲೆ ಸಹ ರತನ್ ಟಾಟಾ 2014 ರಲ್ಲಿಯೇ ಹೂಡಿಕೆ ಮಾಡಿದ್ದರು.

ಈ ಜನಪ್ರಿಯ ಸಂಸ್ಥೆಗಳ ಹೊರತಾಗಿ, ಭಾರಿ ಯಶಸ್ವಿ ಸಂಸ್ಥೆ ಎನಿಸಿಕೊಂಡಿರುವ ಜಿವಾಮೆ, ಅರ್ಬನ್ ಲ್ಯಾಡರ್, ಇತ್ತೀಚೆಗಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಅರ್ಬನ್ ಕಂಪೆನಿ, ಅಬ್ರಾ, ಇತ್ತೀಚೆಗೆ ಐಪಿಓ ಹೊರತಂದ ಫಸ್ಟ್ ಕ್ರೈ ಇನ್ನೂ ಹಲವಾರು ಕಂಪೆನಿಗಳ ಮೇಲೆ ರತನ್ ಟಾಟಾ ಹೂಡಿಕೆ ಮಾಡಿದ್ದಾರೆ.

Exit mobile version