Site icon Samastha News

Tharun Sudhir: ನಿರ್ದೇಶಕ ತರುಣ್, ನಟಿ ಸೋನಲ್ ಮದುವೆ ಆಮಂತ್ರಣ ಪತ್ರಿಕೆ ನೋಡಿದಿರಾ?

Tharun Sudhir

Tharun Sudhir

‘ಚೌಕ’, ‘ಕಾಟೇರ’, ‘ರಾಬರ್ಟ್’ ಸಿನಿಮಾಗಳ ನಿರ್ದೇಶಕ ಮತ್ತು ಕೆಲವು ಸಿನಿಮಾಗಳಲ್ಲಿ ನಟನಾಗಿಯೂ ನಟಿಸಿರುವ ತರುಣ್ ಸುಧೀರ್ ವಿವಾಹವಾಗುತ್ತಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಸೋನಲ್ ಅವರನ್ನು ತರುಣ್ ವಿವಾಹವಾಗುತ್ತಿದ್ದು, ಇವರಿಬ್ಬರ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಮದುವೆ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆಯುವ ಕಾರ್ಯಕ್ರಮ ಆರಂಭವಾಗಿದೆ. ಇದಕ್ಕಾಗಿ ಅಪರೂಪದ ಆಮಂತ್ರಣ ಪತ್ರಿಕೆಯನ್ನು ತರುಣ್ ಮತ್ತು ಸೋನಲ್ ವಿನ್ಯಾಸ ಮಾಡಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆಯನ್ನು ಈ ಜೋಡಿ ತಯಾರು ಮಾಡಿಸಿದ್ದಾರೆ.

ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಗಳಿವೆ. ಆಮಂತ್ರಣ ಪತ್ರಿಕೆಯನ್ನು ಸಣ್ಣ ಚೀಲವೊಂದರಲ್ಲಿ ಇಡಲಾಗಿದ್ದು, ಆ ಚೀಲದಲ್ಲಿ ಸೀಡ್ ಬಾಲ್ ಗಳು ಇವೆ. ಮದುವೆ ಮುಗಿದ ಮೇಲೆ ಆಮಂತ್ರಣ ಪತ್ರಿಕೆಯನ್ನು ಏನು ಕಸದ ಬುಟ್ಟಿಗೆ ಹಾಕಬೇಕು ಎಂಬ ಬೇಸರವಿಲ್ಲ. ಏಕೆಂದರೆ ಇವರ ಆಮಂತ್ರಣ ಪತ್ರಿಕೆಯನ್ನು ಕಸದ ಬುಟ್ಟಿಗೆ ಹಾಕುವಂತಿಲ್ಲ ಬದಲಿಗೆ ಮಣ್ಣಿಗೆ ಹಾಕಿದರೆ ಅಲ್ಲಿಯೇ ಒಂದು ಸುಂದರವಾದ ಗಿಡ ಬೆಳೆಯುತ್ತದೆ. ಖಾಲೆ ಹಾಳೆಗಳು ಹರಿದು ಅವರು ಮಣ್ಣು ಸೇರಿದರೆ ಅಲ್ಲಿಯೂ ಸಹ ಒಂದು ಸುಂದರವಾದ ಹೂವಿನ ಗಿಡ ಬೆಳೆಯುತ್ತದೆ. ಆಮಂತ್ರಣ ಪತ್ರಿಕೆ ಜೊತೆಗೆ ಕೊಟ್ಟಿರುವ ಪೆನ್ನು ಮತ್ತು ಪೆನ್ಸಿಲ್ ಬೆರೆದು ಖಾಲಿ ಆದರೆ ಅದನ್ನು ಮಣ್ಣಿಗೆ ಹಾಕಿ ಅದರಿಂದಲೂ ಸಹ ಚಂದದ ಹೂವಿನ ಗಿಡ ಹಾಗೂ ತರಕಾರಿ ಗಿಡ ಬೆಳೆಯುತ್ತದೆ. ಅಂದಹಾಗೆ ಆಹ್ವಾನ ಪತ್ರಿಕೆಯ ಜೊತೆಗೆ ಕೆಲವು ಚಾಕಲೇಟ್​ಗಳನ್ನು ಸಹ ಈ ಜೋಡಿ ನೀಡುತ್ತಿದೆ. ಇಡೀ ಆಹ್ವಾನ ಮತ್ರಿಕೆಯನ್ನು ಸಣ್ಣ ಚೀಲದಲ್ಲಿ ಕೊಡಲಾಗುತ್ತಿದೆ. ಒಟ್ಟಾರೆ ಈ ಆಹ್ವಾನ ಪತ್ರಿಕೆ ಪರಿಸರ ಸ್ನೇಹಿಯಾಗಿರುವ ಜೊತೆಗೆ ಬಹಳ ಭಿನ್ನವಾಗಿದೆ.

https://samasthanews.com/bengalurus-infamous-thief-chor-imran-arrested-in-bengaluru-traffic/

ತರುಣ್ ಸುಧೀರ್ ಹಾಗೂ ಸೋನಲ್ ಅವರ ಮದುವೆ ಸಮಾರಂಭ ಆಗಸ್ಟ್ 10 ಮತ್ತು 11 ರಂದು ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಆಗಸ್ಟ್ 10 ರಂದು ಮದುವೆ ಆರತಕ್ಷತೆ ಇರಲಿದೆ. ಅದರ ಮರುದಿನ ಅಂದರೆ ಆಗಸ್ಟ್ 11 ರಂದು ಮುಂಜಾನೆ 10:50ಕ್ಕೆ ಮುಹೂರ್ತ ಇರಲಿದೆ. ಇವರಿಬ್ಬರ ಮದುವೆ ಕಾರ್ಯಕ್ರಮ ಮೈಸೂರು ರಸ್ತೆ, ಆರ್​ವಿ ಕಾಲೇಜಿನ ಬಳಿ ಇರುವ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

Exit mobile version