Site icon Samastha News

Food Safety: ದಿನ ಬಳಕೆಯ ಈ ವಸ್ತುಗಳನ್ನು ಪೆಟ್ರೋಲಿಯಂನಿಂದ ಮಾಡಲಾಗುತ್ತದೆ, ನಿಮಗಿದು ಗೊತ್ತೆ?

Food Safety

Food Safety

ಪೆಟ್ರೋಲಿಯಂ ಅಥವಾ ಇಂಧನ ಕೇವಲ ವಾಹನಗಳನ್ನು ಓಡಿಸಲು ವಿದ್ಯುತ್‌ ಉತ್ಪಾಧಿಸಲು ಮಾತ್ರವೇ ಬಳಕೆ ಆಗುವುದಿಲ್ಲ. ಪೆಟ್ರೋಲಿಯಂನಿಂದ ಸುಮಾರು 6000 ಕ್ಕೂ ಹೆಚ್ಚು ದಿನ ಬಳಕೆ ವಸ್ತುಗಳನ್ನು ಸಹ ಮಾಡಲಾಗುತ್ತದೆ. ನಾವು ಪ್ರತಿದಿನ ಸೇವಿಸುವ, ಮೈಗೆ ಹಚ್ಚಿಕೊಳ್ಳುವ ವಸ್ತುಗಳಲ್ಲಿ ಸಹ ಪೆಟ್ರೋಲಿಯಂ ಇರುತ್ತದೆಯೆಂದರೆ ನಂಬಬಲ್ಲಿರಾ? ವ್ಯಕ್ತಿ ದಿನನಿತ್ಯದ ತನ್ನ ಬದುಕಿನಲ್ಲಿ ಬಳಸುವ ಕೆಲವು ವಸ್ತುಗಳ ಪಟ್ಟಿ ಇಲ್ಲಿದೆ. ಈ ವಸ್ತುಗಳನ್ನು ಪೆಟ್ರೋಲಿಯಂ ಬಳಸಿ ಮಾಡಲಾಗುತ್ತದೆ.

ಚಾಕಲೇಟ್‌

ಕೆಲವು ಚಾಕಲೇಟ್‌ಗಳಲ್ಲಿ ಪೆಟ್ರೋಲಿಯಂ ಅನ್ನು ಬಳಲಾಗುತ್ತದೆ. ಚಾಕಲೇಟ್‌ನ ಹೊರಮೈ ಗಟ್ಟಿಯಾಗಿಯೂ ಹಾಗೂ ಹೊಳೆಯುವಂತೆಯೂ ಮಾಡಲು ಪೆಟ್ರೋಲಿಂ ಬಳಕೆ ಮಾಡಲಾಗುತ್ತದೆ. ಚಾಕಲೇಟ್‌ಗಳಲ್ಲಿ ಫ್ಯಾರಾಫಿನ್‌ ವ್ಯಾಕ್ಸ್‌ ಎಂಬ ಪೆಟ್ರೋಲಿಯಂ ಎಕ್ಸ್‌ ಟ್ರಾಕ್ಟ್‌ ಅನ್ನು ಬಳಸಲಾಗುತ್ತದೆ. ಚಾಕಲೇಟ್‌ಗೆ ಕಡಿಮೆ ಕರಗುವ ಬಿಂದು (ಲೋ ಮೆಲ್ಟಿಂಗ್‌ ಪಾಯಿಂಟ್)‌ ಅದು ತುಸು ಹೆಚ್ಚು ಕೆಂಪರೇಚರ್‌ನಲ್ಲಿಯೂ ಕರಗದೇ ಇರಲೆಂದು ಇದನ್ನು ಬಳಸಲಾಗುತ್ತದೆ.

ಟೂತ್‌ಪೇಸ್ಟ್‌

ಹಲ್ಲುಜ್ಜಲು ಬಳಸುವ ಟೂತ್‌ಪೇಸ್ಟ್‌ನಲ್ಲಿ ಎಣ್ಣೆಯ ಉತ್ಪನ್ನಗಳಾದ ಪೋಲಿಯೆತಿಲಿನ್‌ ಗ್ಲೈಕಾನ್‌ ಇನ್ನಿತರೆಗಳನ್ನು ಸೇರಿಸಲಾಗುತ್ತದೆ. ಇದರ ಜೊತೆಗೆ ಪೆಟ್ರೋಲಿಯಮ್‌ ಉತ್ಪನ್ನವಾದ ಪೋಲೋಕ್ಸಾಮರ್‌ 407 ಅನ್ನು ಬಳಸಲಾಗುತ್ತದೆ.

ಸುಗಂಧ ದ್ರವ್ಯ

ಪ್ರತಿ ನಿತ್ಯ ಮೈಗೆ ಹಚ್ಚಿಕೊಳ್ಳುವ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಲಾಗುತ್ತದೆ. ಅಸಲಿಗೆ ಬೆಂಕಿ ಕಡ್ಡಿ ಹೊತ್ತಿಸಿ ಅದಕ್ಕೆ ಪರ್ಫ್ಯೂಮ್‌ ಸ್ಪ್ರೇ ಮಾಡಿದರೆ ಅದು ಇನ್ನಷ್ಟು ಜೋರಾಗಿ ಉರಿದು ಬೆಂಕಿಯ ಉಂಡೆಗಳನ್ನು ಉಗಿಯುತ್ತದೆ. ಇದರಲ್ಲಿ ಗಾಢವಾದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಮಾಡಲಾಗಿರುತ್ತದೆ.

ಬಣ್ಣಗಳು

ಮನೆಗೆ ಹಚ್ಚುವ ಹಾಗೂ ಇತರೆ ಕೆಲವು ಬಣ್ಣಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಗಾಢವಾಗಿ ಬಳಸಲಾಗಿರುತ್ತದೆ. ಬಣ್ಣಗಳ ವಾಸನೆಯಿಂದಲೇ ಪೆಟ್ರೋಲಿಯಂ ವಾಸನೆ ಹೊಡೆಯುತ್ತದೆ. ಇದರಲ್ಲಿ ಕೆಲವು ಸಿಂಥೆಟಿಕ್‌ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸಲಾಗಿರುತ್ತದೆ.

ಮಾತ್ರೆಗಳು

ಹಲವು ಮಾತ್ರೆಗಳು ವಿಶೇಷವಾಗಿ ಟ್ಯೂಬ್‌ ಮಾತ್ರೆಗಳ ಮೇಲೆ ನುಂಗಲು ಅನುಕೂಲವಾಗಲೆಂದು ಪ್ಲಾಸ್ಟಿಕ್‌ ಮಾದರಿಯ ಕೋಟ್‌ ಬಳಸಲಾಗಿರುತ್ತದೆ. ಇದರಲ್ಲಿ ಸಹ ಪೆಟ್ರೋಲಿಯಂನಿಂದ ಎಕ್ಸ್ಟ್ರಾಕ್ಟ್‌ ಮಾಡಲಾದ ವಸ್ತುಗಳನ್ನು ಬಳಸಲಾಗುತದೆ.

ವೆನಿಲ್ಲಾ ಐಸ್‌ಕ್ರೀಂ

ಪೆಟ್ರೋಲಿಯಂನಿಂದ ಪಡೆಯಲಾಗುವ ಸಿಂಥೆಟಿಕ್‌ ಆಯಿಲ್‌ನಿಂದ ಫೂಡ್‌ ಫ್ಲೇವರಿಂಗ್‌ನಲ್ಲಿ ಬಳಸಲಾಗುತ್ತದೆ. ವೆನಿಲ್ಲಾ, ಲೆಮೆನ್‌, ಆಲ್ಮಾಂಡ್‌ ಫೂಡ್‌ ಫ್ಲೇವರಿಂಗ್‌ಗೆ ಸಿಂಥೆಟಿಕ್‌ ಆಯಿಲ್‌ ಬಳಸಲಾಗುತ್ತದೆ. ಹಾಗಾಗಿ ಕೆಲವು ಬ್ರ್ಯಾಂಡ್‌ನ ವೆನಿಲ್ಲಾ ಐಸ್‌ಕ್ರೀಂನಲ್ಲಿ ಪೆಟ್ರೋಲಿಯಂನ ಉತ್ಪನ್ನವಾದ ಸಿಂಥೆಟಿಕ್‌ ಆಯಿಲ್‌ ಬಳಕೆ ಮಾಡಲಾಗುತ್ತದೆ.

ವ್ಯಾಸಲೀನ್‌

ಚಳಿಗಾಲದಿಂದ ತ್ವಚೆ ರಕ್ಷಣೆಗೆ ಬಳಸುವ ಕ್ರೀಂ ನಲ್ಲಿ ಪೆಟ್ರೋಲಿಯಂ ಬಳಕೆ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಅಸಲಿಗೆ ಇದರ ಹೆಸರೇ ಪೆಟ್ರೋಲಿಯಂ ಜೆಲ್ಲಿ. ವ್ಯಾಸಲೀನ್‌ ಎಂಬುದು ಅದನ್ನು ತಯಾರಿಸುವ ಕಂಪೆನಿಯ ಹೆಸರು. ಪೆಟ್ರೋಲಿಯಂ ಜೆಲ್ಲಿಯನ್ನು ಜನ ತುಟಿಕೆ, ಕೈಗೆ, ಕಾಲಿಗೆ ಹಚ್ಚಿಕೊಳ್ಳುತ್ತಾರೆ.

ಏರ್‌ ಫ್ರಶ್ನರ್‌

ಕಾರುಗಳಲ್ಲಿ, ಮನೆಗಳಲ್ಲಿ, ಕಚೇರಿಗಳಲ್ಲಿ, ಬಾತ್‌ ರೂಂಗಳಲ್ಲಿ ಬಳಸಲಾಗುವ ಏರ್‌ ಫ್ರೆಶ್ನೆರ್‌ಗಳಲ್ಲಿ ಪೆಟ್ರೋಲಿಯಂ ಜೆಲ್ಲಿ ಬಳಸಲಾಗುತ್ತದೆ. ಏರ್‌ ಫ್ರೆಶ್ನರ್‌ಗಳು ಸುಗಂಧವನ್ನು ಹೊರಸೂಸುತ್ತವೆ. ಸುಗಂಧಗಳ ತಯಾರಿಕೆಯಲ್ಲಿ ಪೆಟ್ರೋಲಿಯಂ ಉತ್ಪನ್ನದ ಬಳಕೆ ವ್ಯಾಪಕವಾಗಿರುತ್ತವೆ. ಮೈಗೆ ಹಚ್ಚಿಕೊಳ್ಳುವ ಸುಗಂಧ ದ್ರವ್ಯದಲ್ಲೂ ಪೆಟ್ರೋಲಿಯಂ ಬಳಸಲಾಗುತ್ತದೆ.

ಸೊಳ್ಳೆಗಳ ಬಗ್ಗೆ ಈ ಅಪರೂಪದ ಮಾಹಿತಿ ನಿಮಗೆ ಗೊತ್ತೆ?

ಶೇವಿಂಗ್‌ ಕ್ರೀಂ

ಶೇವಿಂಗ್‌ ಮಾಡಲು ಬಳಸುವ ಶೇವೀಂಗ್‌ ಕ್ರೀಂನಲ್ಲಿ ಸಹ ಪೆಟ್ರೋಲಿಯಂನಿಂದ ಹೊರತೆಗೆಯಲಾಗುವ ಕೆಲವು ವಸ್ತುಗಳನ್ನು ಬಳಸಲಾಗುತ್ತದೆ. ಕ್ರೂಡ್‌ ಆಯಿಲ್‌ನಿಂದ ಹೊರತೆಗೆಯಲಾಗುವ ಐಸೋಪೆಂಟೇನ್‌ ಅನ್ನು ಶೇವಿಂಗ್‌ ಕ್ರೀಂನಲ್ಲಿ ಬಳಸಲಾಗುತ್ತದೆ. ಇದರಲ್ಲಿ ಮನುಷ್ಯನ ಮುಖದ ಮೇಲಿರುವ ಎಣ್ಣೆಯ ಅಂಶವನ್ನು ಹೋಗಲಾಡಿಸುವ ಗುಣವಿರುತ್ತದೆ.

Exit mobile version