Deepavali Festival
ಹಬ್ಬಗಳು ಬಂದರೆ ಮನೆಯಲ್ಲಿದ್ದು, ದೇವರ ಪೂಜೆ ಮಾಡಿ, ಒಳ್ಳೆಯ ಅಡುಗೆ ಮಾಡಿ ಮನೆ ಮಂದಿಯೆಲ್ಲ ಸೇರಿಕೊಂಡು ತಿನ್ನುವ ರೂಢಿ. ಬಾಲಿವುಡ್ ಸೆಲೆಬ್ರಿಟಿಗಳು ಸಹ ಇದನ್ನೇ ಪಾಲಿಸುತ್ತಾರೆ. ಆದರೆ ದೀಪಾವಳಿ ಹಬ್ಬ ಒಂದನ್ನು ಬಿಟ್ಟು. ದೀಪಾವಳಿ ಹಬ್ಬ ಬಂತೆಂದರೆ ಸಾಕು ಬಾಲಿವುಡ್’ನ ಕೆಲವು ಸೆಲೆಬ್ರಿಟಿಗಳು ದೇಶವನ್ನೇ ಬಿಟ್ಟು ಹೊರಡುತ್ತಾರೆ. ಅವರು ವಾಪಾಸ್ ಬರುವುದು ಎರಡು ವಾರಗಳ ಬಳಿಕವೇ. ಇದಕ್ಕೆ ಕಾರಣವೂ ಇದೆ.
ಬಾಲಿವುಡ್ ಸ್ಟಾರ್ ನಟರಾದ, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ವಿರಾಟ್ ಕೊಹ್ಲಿ-ಅನುಷ್ಕಾ ಶೆಟ್ಟಿ ಈ ಬಾರಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಇನ್ನೂ ಕೆಲವರು ದೇಶ ಬಿಟ್ಟು ಹೋಗುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ದೀಪಾವಳಿಯಲ್ಲಿ ಹೊಡೆಯಲಾಗುವ ಪಟಾಕಿ. ಈ ಹಬ್ಬದಲ್ಲಿ ಹೊಡೆಯುವ ಪಟಾಕಿಯಿಂದಾಗಿ ಮುಂಬೈ, ದೆಹಲಿ, ಬೆಂಗಳೂರು ಸೆರತಿದಂತೆ ಹಲವು ನಗರಗಳಲ್ಲಿ ವಾಯುಮಾಲಿನ್ಯ ಸಾಮಾನ್ಯಕ್ಕಿಂತಲೂ ಹತ್ತು ಪಟ್ಟು ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಕೆಲ ಸೆಲೆಬ್ರಿಟಿಗಳು ದೀಪಾವಳಿ ಸಂದರ್ಭದಲ್ಲಿ ದೇಶ ಬಿಟ್ಟು ಹೋಗುತ್ತಾರೆ.
ಹೃತಿಕ್ರೋಷನ್ ಮಗನಿಗೆ ಉಸಿರಾಟದ ಸಮಸ್ಯೆ ಇದೆ ಹಾಗಾಗಿ ಅವರು ಪ್ರತಿ ದೀಪಾವಳಿ ವೇಳೆಗೆ ಮಗನನ್ನು ಕರೆದುಕೊಂಡು ಹೋಗುತ್ತಾರೆ. ಶಾರುಖ್ ಖಾನ್’ಗೆ ಚರ್ಮದ ಅಲರ್ಜಿ ಇದ್ದು ವಾಯುಮಾಲಿನ್ಯದಿಂದ ಇದು ಹೆಚ್ಚಾಗುತ್ತದೆ ಆದ್ದರಿಂದ ಅವರೂ ಸಹ ದೇಶ ಬಿಟ್ಟು ಹೋಗುತ್ತಾರೆ. ಇನ್ನು ಸಂಜಯ್ ದತ್’ಗೆ ಸಹ ಉಸಿರಾಟದ ಸಮಸ್ಯೆ ಇದೆ ಹಾಗಾಗಿ ಅವರೂ ಸಹ ದುಬೈಗೆ ಹೋಗಿಬಿಡುತ್ತಾರೆ. ಅಕ್ಷಯ್ ಕುಮಾರ್ ಪತ್ನಿ ಹಾಗೂ ಅವರ ತಾತುಗೆ ಯಸಿರಾಟದ ಸಮಸ್ಯೆ ಇದೆ ಹಾಗಾಗಿ ಅವರೂ ಸಹ ಕುಟುಂಬದವರನ್ನು ಕರೆದುಕೊಂಡು ಹೊರದೇಶಕ್ಕೆ ಹೋಗುತ್ತಾರೆ. ಇತ್ತೀಚೆಗೆ ಪೋಷಕರಾಗಿರುವ ಆಲಿಯಾ ಭಟ್-ರಣ್ಬೀರ್ ತಮ್ಮ ಪುಟ್ಟ ಮಗಳ ಆರೋಗ್ಯದ ಮೇಲೆ ಪರಿಣಾಮ ಬೀರವಾರದು ಎಂಬ ಕಾರಣಕ್ಕೆ ಹಾಗೂ ಇದೇ ಕಾರಣಕ್ಕೆ ಸೀಪಿಕಾ ಹಾಗೂ ರಣ್ವೀರ್ ಸಿಂಗ್ ಸಹ ದೇಶ ಬಿಟ್ಟು ಹೊರಗೆ ಹೋಗುತ್ತಾರೆ.
Bigg Boss Kannada: ಯುವತಿಯನ್ನು ಕೆಟ್ಟದಾಗಿ ಮುಟ್ಟಿದ ಕನ್ನಡ ಬಿಗ್’ಬಾಸ್ ಸ್ಪರ್ಧಿ?
ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೂ ಸಹ ಉಸಿರಾಟದ ಸಮಸ್ಯೆ ಇದೆ. ಅಭಿಷೇಕ್ ಬಚ್ಚನ್ ಅವರಂತೂ ಕೋವಿಡ್ ಸಮಯದಲ್ಲಿ ತೀವ್ರ ಸಮಸ್ಯೆಗೆ ಒಳಗಾಗಿದ್ದರು. ಅಭಿಷೇಕ್ ಬಾಲ್ಯದಿಂದಲೂ ಸಹ ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ.