Health: 40 ವರ್ಷ ದಾಟಿದ್ದೀರ? ಈ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲೇ ಬೇಕು

0
34
Health
Health

Health

ಮೊದಲೆಲ್ಲ 40 ವರ್ಷ ವಯಸ್ಸೆಂದರೆ ಅದು ಹದಿ ವಯಸ್ಸಿನ ವಿಸ್ತರಣೆ ಎಂಬಂತಿತ್ತು. ಆದರೆ ಈಗ ಹಾಗಿಲ್ಲ, ಈಗ 40 ವರ್ಷ ವಯಸ್ಸೆಂದರೆ 60ಕ್ಕೆ ಸಮ ಎಂಬಂತಾಗಿದೆ. 35 ವರ್ಷ ದಾಟಿದರೆ ಸಾಕು ಈಗ ನಡು ಬಗ್ಗಲು ಆರಂಭವಾಗಿಬಿಟ್ಟಿದೆ. 40 ದಾಟಿದರಂತೆ ಮುಗಿದೇ ಹೋಯ್ತು, ಸಕ್ಕರೆ, ಬಿಪಿ ಇನ್ನೂ ಹಲವು ಕಾಯಿಲೆಗಳು ಜೊತೆಗೆ ಮಂಡಿ ನೋವು, ಕಾಲು ನೋವು ಅನಗತ್ಯ ಸುಸ್ತುಗಳು ಕಾಡಲು ಆರಂಭಿಸುತ್ತವೆ. ಇದೇ ಕಾರಣಕ್ಕೆ 40 ದಾಟುತ್ತಿದ್ದಂತೆ ಪುರುಷ ಹಾಗೂ ಮಹಿಳೆಯರು ಇಬ್ಬರೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು ಕಡ್ಡಾಯ ಎಂಬಂತಾಗಿಬಿಟ್ಟಿದೆ.

40 ವರ್ಷ ದಾಟಿದ ಪುರುಷರಿಗೆ ಪಿಎಸ್​ಎ (ಪ್ರೊಸ್ಟೇಟ್ ಸ್ಪೆಸಿಫಿಕ್ ಆಂಟಿಜನ್) ಪರೀಕ್ಷೆ ಮಾಡಿಸುವುದು ಅವಶ್ಯಕ ಎನ್ನುತ್ತಾರೆ ವೈದ್ಯರು. ಇದರಿಂದ ಆ ವ್ಯಕ್ತಿಯ ದೇಹದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಇದೆಯೇ ಅಥವಾ ರಕ್ತದಲ್ಲಿ ಪ್ರೊಸ್ಟೇಟ್ ಅಂಶ ಎಷ್ಟಿದೆ ಎಂಬುದು ತಿಳಿಯುತ್ತದೆ. ಆ ಮೂಲಕ ಹಲವು ರೀತಿಯ ಕ್ಯಾನ್ಸರ್​ನಿಂದ ಮುಂಚಿತವಾಗಿ ತಪ್ಪಿಸಿಕೊಳ್ಳಬಹುದು. ಅಥವಾ ಶೀಘ್ರವೇ ಚಿಕಿತ್ಸೆ ಪ್ರಾರಂಭ ಮಾಡಬಹುದು.

40 ದಾಟಿದ ಪುರುಷರು ಮತ್ತು ಮಹಿಳೆಯರು ಸಿಬಿಸಿ (ಕಂಪ್ಲೀಟ್ ಬ್ಲಡ್ ಕೌಂಟ್) ಪರೀಕ್ಷೆ. ಎಲ್​ಎಫ್​ಟಿ (ಲಿವರ್ ಫಂಕ್ಷನ್ ಟೆಸ್ಟ್) ಕೆಎಫ್​ಟಿ (ಕಿಡ್ನಿ ಫಂಕ್ಷನ್ ಟೆಸ್ಟ್) ಗಳನ್ನು ಮಾಡಿಸಲೇ ಬೇಕು. ಮಹಿಳೆಯರು ವಿಶೇಷವಾಗಿ ಸಿಎ15-3 ಪರೀಕ್ಷೆಯನ್ನು ಮಾಡಿಸಲೇ ಬೇಕಿದೆ. ಇದು ಸ್ತನ ಕ್ಯಾನ್ಸರ್ ಇದೆಯೇ ಅಥವಾ ಸನಿಹದಲ್ಲಿ ಬರಲಿದೆಯೇ ಎಂಬುದನ್ನು ಪತ್ತೆ ಮಾಡುತ್ತದೆ.

Fruits: ಕೀಟನಾಶಕ ಬಳಸಿದ ಹಣ್ಣು ತಿನ್ನುವ ಮುಂಚೆ ಹೀಗೆ ಮಾಡಲೇ ಬೇಕು

ಇದರ ಜೊತೆಗೆ ಸಿಇಎ ಟೆಸ್ಟ್ ಸಹ ಬಹಳ ಮಹತ್ವದ್ದು. ಈ ಪರೀಕ್ಷೆಯಿಂದ ಹಲವು ವಿದಧ ಕ್ಯಾನ್ಸರ್ ಪರೀಕ್ಷೆಗಳು ಆಗಲಿವೆ. ವಿಶೇಷವಾಗಿ ಕೋಲನ್ ಕ್ಯಾನ್ಸರ್​ನ ಪತ್ತೆ ಇದರಿಂದ ಸಾಧ್ಯವಿದೆ. ಕ್ಯಾನ್ಸರ್ ಮಾರ್ಕರ್​ನ ಹಲವು ಪರೀಕ್ಷೆಗಳು ಇವೆ. ಈ ಪರೀಕ್ಷೆಗಳೆಲ್ಲ ಸರಿಯಾದ ಸ್ಥಳದಲ್ಲಿ ಮಾಡಿಸಿದರೆ ಬಹಳ ಕಡಿಮೆ ಮೊತ್ತದವು. ಹಾಗಾಗಿ ಈ ಪರೀಕ್ಷೆಗಳನ್ನು ಮಾಡಿಸಿ ಮುಂಚಿತವಾಗಿಯೇ ಬರಬಹುದಾದ ಅನಾರೋಗ್ಯವನ್ನು ಗುರುತಿಸಿ ಪ್ರಿವೆಂಟ್ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here