Loan
ಸಾಲ, ಭಾರತದಲ್ಲಿ ಹಲವರು ದ್ವೇಷಿಸುವ ಹಲವರು ಪ್ರೇಮಿಸುವ ವಸ್ತು. ಯಾರಿಗೆ ದ್ವೇಷವೋ ಗೊತ್ತಿಲ್ಲ ಆದರೆ ಬ್ಯಾಂಕುಗಳಿಗಂತೂ ಸಾಲ ಎಂದರೆ ಬಹಳ ಇಷ್ಟ. ಇದೇ ಕಾರಣಕ್ಕೆ ಬ್ಯಾಂಕ್ ಗಳು ಕರೆದು ಕರೆದು ತನ್ನ ಗ್ರಾಹಕರಿಗೆ ಸಾಲ ಕೊಡುತ್ತವೆ. ಈ ಸಾಲ ಕೊಡುವ ಸಂಭ್ರಮದಲ್ಲಿ ಒಬ್ಬ ವ್ಯಕ್ತಿಯ ಹೆಸರಲ್ಲಿ ಇನ್ನೊಬ್ಬ ವ್ಯಕ್ತಿಗೆ ಸಾಲ ಕೊಟ್ಟು ಬಿಡುತ್ತವೆ. ಈ ರೀತಿಯ ಪ್ರಕರಣಗಳು ಪ್ರತಿದಿನವೂ ದಾಖಲಾಗುತ್ತಿವೆ.
ಇತ್ತೀಚೆಗೆ ನಡೆದ ಘಟನೆಯನ್ನು ಉದಾಹರಣೆಯಾಗಿ ನೋಡಿ, ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ 36 ವರ್ಷದ ಸುರೇಶ್ ಎಂಬ ವ್ಯಕ್ತಿಯೊಬ್ಬರು ಸಾಲಕ್ಕಾಗಿ HDFC ಬ್ಯಾಂಕ್ ನ ಬ್ರ್ಯಾಂಚ್ ಒಂದರಲ್ಲಿ ಅಪ್ಲೈ ಮಾಡಿದ್ದರು. ಆ ಬ್ರ್ಯಾಂಚ್ ನ ಸಾಲದ ವಿಭಾಗದವರು ಆನ್ ಲೈನ್ ಮೂಲಕ ಅರ್ಜಿ ತುಂಬಿಕೊಂಡರು. ಆದರೆ ಕೆಲ ದಿನಗಳ ಬಳಿಕ ವಿಚಾರಿಸಿದಾಗ ನಿಮ್ಮ ಹೆಸರಲ್ಲಿ ಈಗಾಗಲೇ ಮೂರು ಲಕ್ಷ ಸಾಲ ಇದೆ. ಸರಿಯಾಗಿ ಲೋನ್ ಕಟ್ಟಿಲ್ಲವಾದ್ದರಿಂದ ನಿಮ್ಮ ಸಿಬಿಲ್ ಸ್ಕೋರ್ ನೆಗೆಟಿವ್ ಆಗಿದೆ. ನಿಮಗೆ ನಮ್ಮ ಬ್ಯಾಂಕ್ ನಲ್ಲಿ ಮಾತ್ರವಲ್ಲ ಯಾವ ಬ್ಯಾಂಕ್ ನಲ್ಲೂ ಖಾಸಗಿ ಸಾಲ ಸಿಗಲ್ಲ ಎಂದಿದ್ದಾರೆ.
ಆ ವ್ಯಕ್ತಿ ಸುರೇಶ್ ಕೂಡಲೆ ಸಿಬಿಲ್ ನ ಕಸ್ಟಮರ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ನಿಜಕ್ಕೂ ಆತನ ಹೆಸರಲ್ಲಿ, ಆತನದ್ದೇ ಪ್ಯಾನ್ ಕಾರ್ಡ್ ಗೆ 2018 ರಿಂದಲೂ ಸತತವಾಗಿ ಸಾಲ ನೀಡಿದ್ದು ಕಂಡು ಬಂದಿದೆ. ಆನ್ ಲೈನ್ ಬಗ್ಗೆ ಪರಿಚಯವಿದ್ದ ಆ ವ್ಯಕ್ತಿ ಸಿಬಿಲ್ ಸಿಬ್ಬಂದಿ ನೀಡಿದ ಕೆಲವು ಮಾಹಿತಿಯನ್ನು ಆಧರಿಸಿ ಹುಡುಕಾಡಿದಾಗ ತಿಳಿದುಬಂದಿದ್ದು, ಮುತೂಟ್ ಫೈನ್ಯಾನ್ಸ್ ಹಾಗೂ ಮುತೂಟ್ ಗೋಲ್ಡ್ ಲೋನ್ ನಲ್ಲಿ 2018 ರಿಂದಲೂ ಸುರೇಶ್ ಹೆಸರಿನಲ್ಲಿ ಸಾಲ ಪಡೆಯಲಾಗುತ್ತಿದೆ. ಈ ಸಾಲದ ಮೊತ್ತ ಪ್ರತಿಬಾರಿ ಒಂದೇ ಖಾತೆಗೆ ಹೋಗುತ್ತಿದೆ.
ಆ ಖಾತೆಯ ಮಾಹಿತಿ ಪಡೆದು, ಖಾತೆಯ ಓನರ್ ಗೆ ಕರೆ ಮಾಡಿದಾಗ ಅಸಲಿ ವಿಷಯ ಬೆಳೆಕಿಗೆ ಬಂದಿದೆ. ಸಾಲ ಪಡೆದ ವ್ಯಕ್ತಿಯ ಹೆಸರು ಹಾಗೂ ಖಾಸಗಿ ಕಂಪೆನಿ ಜನ್ಮ ದಿನಾಂಕ ಒಂದೇ ಆಗಿದ್ದರಿಂದ ಉದ್ಯೋಗಿಯ ಪ್ಯಾನ್ ನಂಬರ್ ಮುತೂಟ್ ನ ಸಿಸ್ಟಂನಲ್ಲಿ ಆಟೊಮೆಟಿಕ್ ಆಗಿ ಫೆಚ್ ಆಗಿಬಿಟ್ಟಿದೆ. ಅಥವಾ ಯಾರೋ ಬೇರೆ ಕಾರಣಕ್ಕೆ ಸುರೇಶ್ ಪ್ಯಾನ್ ಸಂಖ್ಯೆ ಪಡೆದುಕೊಂಡವರು ಮುತೂಟ್ ನಲ್ಲಿ ಅದನ್ನು ಬಳಸಿಕೊಂಡಿದ್ದಾರೆ. ಈಗ ಸುರೇಶ್ ಸಿಬಿಲ್ ಸಂಸ್ಥೆಗೆ ಈ ಬಗ್ಗೆ ದೂರು ನೀಡಿದ್ದಾನೆ. ಸಿಬಿಲ್ ನವರು ದೂರು ಇತ್ಯರ್ಥ ಮಾಡಲು ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ.
Blinkit: ಆಂಬುಲೆನ್ಸ್ ಸೇವೆ ಆರಂಭಿಸಿದ ಉದ್ಯಮಿಗೆ ಕೇಂದ್ರ ಸಚಿವರ ಎಚ್ಚರಿಕೆ
ಆದರೆ ನೀವು ಈಗ ನಿಮ್ಮ ಹೆಸರಲ್ಲಿ ಬೇರೆಯವರು ಸಾಲ ಪಡೆದಿಲ್ಲ ಎಂದು ಹೇಗೆ ಚೆಕ್ ಮಾಡಿಕೊಳ್ಳಬಹುದು? ಇಲ್ಲಿದೆ ಸರಳ ಉಪಾಯ. ಮೊಬೈಲ್ ನಲ್ಲಿರುವ ಗೂಗಲ್ ಪೇ, ಫೋನ್ ಪೇ ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡುವ ಆಯ್ಕೆ ಇರುತ್ತದೆ. ಅದರಲ್ಲಿ ಚೆಕ್ ಮಾಡಿದರೆ ನಿಮ್ಮ ಹೆಸರಲ್ಲಿ ಸಾಲ ಇದೆಯೇ, ಇದ್ದರೆ ಅದನ್ನು ಸರಿಯಾಗಿ ಪಾವತಿ ಮಾಡಲಾಗುತ್ತಿದೆಯೇ ಎಂಬ ಮಾಹಿತಿ ಗೊತ್ತಾಗುತ್ತದೆ. ಇದರ ಹೊರತಾಗಿ ಕೆಲವು ಸಿಬಿಲ್ ಚೆಕ್ ಮಾಡುವ ಅಪ್ಲಿಕೇಶನ್ ಗಳು ಸಹ ಲಭ್ಯ ಇವೆ. ಆದರೆ ನೆನಪಿರಲಿ, ಪದೇ ಪದೇ ಸಿಬಿಲ್ ಸ್ಕೋರ್ ಚೆಕ್ ಮಾಡುವುದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.