Tirupati Laddu: ತಿರುಪತಿಯಲ್ಲಿ ಮೊದಲು ಕೊಡಲಾಗುತ್ತಿದ್ದ ಪ್ರಸಾದವೇ ಬೇರೆ, ಲಡ್ಡು ಕೊಡಲು ಆರಂಭ ಮಾಡಿದ್ದು ಏಕೆ?

0
180
Tiruapti laddu

Tirupati Laddu

ತಿರುಪತಿ ಲಡ್ಡು ಮಾಡಲು ಬಳಸಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಧಕ್ಕೆ ತಂದಿದೆ. ತುಪ್ಪದಲ್ಲಿ ಉದ್ದೇಶ ಪೂರ್ವಕವಾಗಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತೆ ಎಂಬಿತ್ಯಾದಿಯ ತನಿಖೆ ನಡೆಯುತ್ತಿದೆ. ಆದರೆ ನಿಮಗೆ ಗೊತ್ತೆ, ತಿರುಪತಿಯಲ್ಲಿ ಮೊದಲು ಕೊಡಲಾಗುತ್ತಿದ್ದ ಪ್ರಸಾದ ಲಡ್ಡು ಅಲ್ಲ. ಲಡ್ಡು ಬದಲಿಗೆ ಬೇರೆ ಪ್ರಸಾದಗಳನ್ನು ತಿರುಪತಿಯಲ್ಲಿ ನೀಡಲಾಗುತ್ತಿತ್ತು, ಆದರೆ ಲಡ್ಡು ಕೊಡಲು ಆರಂಭಿಸಿದ್ದು ಯಾರು? ಯಾವಾಗ? ಮಾಹಿತಿ ಇಲ್ಲಿದೆ.

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ತಿರುಪತಿ ವೆಂಕಟರಮಣಸ್ವಾಮಿ ದೇವಾಲಯ ಹೊಂದಿದೆ ಎನ್ನಲಾಗುತ್ತದೆ. 9 ಅಥಹಾ 10ನೇ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಬ್ರಾಹ್ಮಣರಿಂದ ಆಳ್ವಿಕೆಗೆ ಒಳಪಟ್ಟಿದ್ದ ತಿರುಚನೂರ್​ ಆ ಬಳಿಕ ಇಂದಿನ ತಿರುಪತಿ ಆಯಿತು. ಆಗೆಲ್ಲ ವೆಂಕಟೇಶ್ವರ ಸ್ವಾಮಿಗೆ ಕುರಿಯ ತುಪ್ಪದ ದೀಪ ಬಿಟ್ಟರೆ ಇನ್ನೇನೂ ಇರಲಿಲ್ಲವಂತೆ. ಆದರೆ ಚೋಳರು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ದೇವಾಲಯಗಳು ಶ್ರೀಮಂತಗೊಳ್ಳುತ್ತಾ ಸಾಗಿದವು ಎನ್ನಲಾಗುತ್ತದೆ. ಅವರ ಸಮಯದಲ್ಲಿಯೇ ದೇವಾಲಯಗಳಲ್ಲಿ ಕಂಚಿನ ವಿಗ್ರಹ, ದೇವರ ವಿಗ್ರಹಗಳಿಗೆ ಆಭರಣಗಳನ್ನು ತೊಡಿಸುವುದು, ಬೇರೆ ಬೇರೆ ರೀತಿಯ ದೇವರ ಆರಾಧನೆಗಳನ್ನು ಸಹ ಪ್ರಾರಂಭ ಮಾಡಲಾಯ್ತತಂತೆ.

11 ಶತಮಾನದಲ್ಲಿ ತಮಿಳುನಾಡಿನ ದೇವಾಲಯಗಳಿಗೆ ಧಾರ್ಮಿಕ ಕಾರ್ಯಸೂಚಿಗಳನ್ನು ಅಂದಿನ ಚೋಳ ರಾಜರು ನೀಡಿದ್ದರಂತೆ. ಆ ಸಮಯದಲ್ಲಿ ತಿರುಪತಿಗೆ ಕಂಚಿನ ಆಭರಣ ಹಾಗೂ ಕೇವಲ ಏಳು ದಿನದ ಧಾರ್ಮಿಕ ಕಾರ್ಯಕ್ರಮ ಸೂಚಿಯನ್ನು ನೀಡಲಾಗಿತ್ತು. ಆದರೆ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಅದೃಷ್ಟ ಬದಲಾಗಿದ್ದು ಚೋಳರ ಆಡಳಿತ ಅಂತ್ಯದ ಬಳಿಕ ಅಂದರೆ 12 ಶತಮಾನದಲ್ಲಿ ಚೋಳರ ಅವಸಾನ ಆದ ಬಳಿಕ, ಚೋಳರ ಕಾಲದಲ್ಲಿದ್ದ ಸ್ಥಳೀಯ ನಾಯಕರು ತಮ್ಮ ಬಳಿ ಇದ್ದ ಭಾರಿ ಪ್ರಮಾಣದ ಚಿನ್ನ, ಜಮೀನುಗಳನ್ನು ಪುಣ್ಯ ಕ್ಷೇತ್ರಗಳಿಗೆ ದಾನ ಮಾಡಿದರು. ಆ ಸಂದರ್ಭದಲ್ಲಿ ತಿರುಪತಿಗೆ ಭಾರಿ ಪ್ರಮಾಣದ ಚಿನ್ನ ಮತ್ತು ಫಲವತ್ತಾದ ಜಮೀನು ದೊರೆತಿತು. ಆಗ ಮೊದಲ ಬಾರಿಗೆ ತಿರುಪತಿಯಲ್ಲಿ ಸಿಹಿಯಾದ ಪೊಂಗಲ್ ಅನ್ನು ಪ್ರಸಾದವಾಗಿ ಕೊಡಲು ಪ್ರಾರಂಭ ಮಾಡಲಾಯ್ತು. ತುಪ್ಪ, ಸಕ್ಕರೆ, ಅನ್ನ-ಬೇಳೆಗಳನ್ನು ಬಳಸಿ ಮಾಡಲಾಗುತ್ತಿದ್ದ ಪೊಂಗಲ್ ಇದಾಗಿತ್ತು. ಇದೇ ತಿರುಪತಿ ವೆಂಕಟೇಶ್ವರ ಸ್ವಾಮಿಯ ಮೊದಲ ಪ್ರಸಾದವಾಯ್ತು.

ಅದೇ ಸಮಯದಲ್ಲಿ ತಿರುಪತಿಗೆ ವೈಷ್ಣವ ಬ್ರಾಹ್ಮಣರು ಬಂದರು. ಸ್ಥಳೀಯ ಕುರಿಗಾಹಿ ಸಮುದಾಯದೊಟ್ಟಿಗೆ ಒಪ್ಪಂದ ಮಾಡಿಕೊಂಡ ವೈಷ್ಣವ ಬ್ರಾಹ್ಮಣರು ತಿರುಪತಿಯ ಹಿಡಿತವನ್ನು ಬಹುತೇಕ ತೆಗೆದುಕೊಂಡರು. ಕುರಿಗಾಹಿ ಸಮಯದಾಯದವಾದ ಯಾದವ ರಾಯರ್ ಅವರು ಜೇನು, ವಿಳ್ಯೆದ ಎಲೆ-ಅಡಿಕೆ, ಸಕ್ಕರೆ, ಅರಿಶಿಣ, ತರಕಾರಿ ಸಾಂಬಾರು, ಚಂದನಗಳನ್ನು ದೇವರಿಗೆ ಅರ್ಪಿಸಲು ಪ್ರಾರಂಭಿಸಿದರು. ತಿರುಮಲನಲ್ಲಿ ಒಂದು ಅರಮನೆಯನ್ನು ಸಹ ಇವರು ನಿರ್ಮಿಸಿದರು. 13ನೇ ಶತಮಾನದ ವೇಳೆಗೆ ವೆಂಕಟೇಶ್ವರ ಸ್ವಾಮಿ ದೇವಾಲಯ ಒಂದು ಉತ್ತಮ ಸೌಲಭ್ಯವುಳ್ಳ ದೇವಾಲಯ ಆಗಿತ್ತು, ಆದರೂ ತಮಿಳುನಾಡಿನ ಕೆಲ ಇತರೆ ದೇವಾಲಯಗಳಿಗೆ ಹೋಲಿಸಿದರೆ ಸಾಧಾರಣ ದೇವಾಲಯ ಮಾತ್ರವೇ ಆಗಿತ್ತು.

13ನೇ ಶತಮಾನದ ವೇಳೆ ದಕ್ಷಿಣ ಭಾರತದ ಸ್ಥಳೀಯ ಎನಿಸಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ಉಗಮವಾಯ್ತು. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ತಿರುಪತಿ ತಿಮ್ಮಪ್ಪನ ಶ್ರೀಮಂತಿಗೆ ಹೆಚ್ಚಾಯ್ತು. ವಿಜಯನಗರ ಸಾಮಾಜ್ಯದ ಅವಧಿಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಬದಲಾಯ್ತು. ಸ್ಥಳೀಯ ಆಡಳಿತದಲ್ಲಿ ಬ್ರಾಹ್ಮಣರಿಗೆ ಪ್ರಾಮುಖ್ಯತೆ ದೊರಕಿತು. ಹಲವೆಡೆ ಬ್ರಾಹ್ಮಣರೇ ಸ್ಥಳೀಯ ಆಡಳಿತಗಾರರಾದರು. ವಿಜಯನಗರ ಸಾಮ್ರಾಜ್ಯದಲ್ಲಿಯೂ ಸಹ ಬ್ರಾಹ್ಮಣ ಸಮುದಾಯದವರಿಗೆ ಪ್ರಾಮುಖ್ಯತೆ ದೊರಕಿತು. ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಲು ಪ್ರಾರಂಭವಾಯ್ತು. ಇದು ದಕ್ಷಿಣ ಭಾರತದ ದೇವಾಲಯಗಳ ಉಳಿವು ಮತ್ತು ಪ್ರಗತಿಗೆ ಪ್ರಮುಖ ಕಾರಣವಾಯ್ತು.

Tirupati Laddu: ದನದ ಕೊಬ್ಬು ಪತ್ತೆಯಾದ ಬಳಿಕ ಮಾರಾಟವಾದ ತಿರುಪತಿ ಲಡ್ಡುಗಳ ಸಂಖ್ಯೆ ಎಷ್ಟು ಗೊತ್ತೆ?

ವಿಜಯನಗರ ಸಾಮ್ರಾಜ್ಯದ ಅರಸರು ಕುಶಲ ಆಡಳಿತಗಾರರಾಗಿದ್ದು, ಸ್ಥಳೀಯ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಇದರ ಜೊತೆಗೆ ತಿರುಪತಿ ತಿಮ್ಮಪ್ಪನ ಅಪ್ರತಿಮ ಭಕ್ತರಾಗಿದ್ದ ಇವರು, ತಮ್ಮ ಗೆಲುವಿಗೆ ತಿಮ್ಮಪ್ಪನೇ ಕಾರಣ ಎಂದು ಸಹ ನಂಬಿದ್ದರು. ಯಾವುದೇ ಮಹತ್ತರ ಕಾರ್ಯ ಮಾಡುವ ಮುನ್ನ ದೇವಾಲಯಕ್ಕೆ ಭೇಟಿ ನೀಡುವ ಕಾಣಿಕೆಗಳನ್ನು ನೀಡುವ ಸಂಪ್ರದಾಯ ಪಾಲಿಸುತ್ತಿದ್ದರು. ಇದನ್ನು ಸ್ಥಳೀಯ ಜಮೀನ್ದಾರರು, ಪಾಳ್ಯೆಗಾರರು ಪಾಲಿಸಲು ಮೊದಲಾದರು. ಇದರಿಂದಾಗಿ ಭಾರಿ ಪ್ರಮಾಣದ ಕಾಣಿಕೆಗಳು, ಚಿನ್ನದ ನಾಣ್ಯಗಳು, ಗೋವುಗಳು, ಕುರಿಗಳು, ಜಮೀನು ಇನ್ನಿತರೆ ಸಂಪತ್ತು ತಿರುಪತಿ ತಿಮ್ಮಪ್ಪನನ್ನು ಅರಸಿ ಬರತೊಡಗಿತು. 1400 ರಿಂದ 1600 ಅಷ್ಟರಲ್ಲಿ ತಿರುಪತಿ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ದೇವಾಲಯ ಆಗಿಬಿಟ್ಟಿತ್ತು. ಇದಕ್ಕೆ ವಿಜಯನಗರ ಸಾಮ್ರಾಜ್ಯದ ಅರಸರ ಕಾಣ್ಕೆ ಬಹಳ ದೊಡ್ಡದು.

ಲಡ್ಡು ಕೊಡಲಾರಂಭಿಸಿದ್ದು ಯಾವಾಗ?

1600ರ ವರೆಗೂ ತಿರುಪತಿಯಲ್ಲಿ ಮುಖ್ಯ ಪ್ರಸಾದ ಸಿಹಿ ಪೊಂಗಲ್ ಆಗಿತ್ತು. ವೈಷ್ಣವ ಬ್ರಾಹ್ಮಣರು ಇದೇ ಪ್ರಸಾದವನ್ನು ಮಾಡಿ ಭಕ್ತರಿಗೆ ನೀಡುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಅಸ್ಥಂಗತದ ಬಳಿಕ ತಿರುಪತಿಯ ಪ್ರಾಮುಖ್ಯತೆ ತುಸು ಕಡಿಮೆ ಆಗಿತ್ತು. ಹಾಗೆಂದು ಪೂರ್ಣವಾಗಿ ತಿರುಪತಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿರಲಿಲ್ಲ. ಆದರೆ ಆ ವರೆಗೂ ವಿಜಯನಗರ ಸಾಮ್ರಾಜ್ಯದ ಅರಸರು ಮಾತ್ರವೇ ದೇವಾಲಯದ ಪೋಷಕರಾಗಿದ್ದರು ಆದರೆ 17ರ ಶತಮಾನದಲ್ಲಿ ದೇವಾಲಯದ ಸ್ಥಳೀಯ ಬ್ರಾಹ್ಮಣರು ಇತರೆ ಅರಸರು, ಪಾಳೆಗಾರರಿಂದಲೂ ಕಾಣ್ಕೆಗಳನ್ನು ಸ್ವೀಕರಿಸಲು ಆರಂಭಿಸಿದರು. ಆಗ ಅವರಿಗೆ ಮಾತ್ರವೇ ಪ್ರಸಾದ ನೀಡಲಾಗುತ್ತಿತ್ತು. ಕೆಲವು ಇತಿಹಾಸಕಾರರ ಪ್ರಕಾರ 17ನೇ ಶತಮಾನದಲ್ಲಿಯೇ ಮೊದಲ ಬಾರಿಗೆ ಪ್ರಸಾದವನ್ನು ಭಕ್ತಾಧಿಗಳಿಗೆ ಮಾರಾಟ ಮಾಡಲಾಯ್ತಂತೆ. ಕೆಲವು ಸಾಮಂತರು, ದೇವಾಲಯದ ಅನುಮತಿ ಪಡೆದು ಪ್ರಸಾದವಾದ ಪೊಂಗಲ್ ಅನ್ನು ಭಕ್ತರಿಗೆ ಮಾರಾಟ ಮಾಡುತ್ತಿದ್ದರಂತೆ.

ಆದರೆ ನವಾಬರ ಕಾಲದಲ್ಲಿ ನವಾಬರು, ತಿರುಪತಿ ದೇವಾಲಯದ ಮೇಲೆ ಸಾಕಷ್ಟು ತೆರಿಗೆ ಹೇರಿ ಒಳ್ಳೆಯ ಹಣ ಮಾಡಿಕೊಂಡರು ಎನ್ನುತ್ತಾರೆ ಇತಿಹಾಸ ತಜ್ಞರು, ಈ ಸಮಯದಲ್ಲಿ ತಿರುಪತಿ ತನ್ನ ಸಾಕಷ್ಟು ಆಸ್ತಿ, ಚಿನ್ನವನ್ನು ಸಹ ಕಳೆದುಕೊಂಡಿತಂತೆ. ಆದರೆ ಬ್ರಿಟೀಷರ ಆಳ್ವಿಕೆಯಲ್ಲಿ ಮತ್ತೆ ತಿರುಪತಿಗೆ ತನ್ನ ಹಳೆಯ ಮಹತ್ವ, ಸುರ್ಣಕಾಲ ಮರಳಿತು. ಬ್ರಿಟೀಷರ ಕಾಲದಲ್ಲಿ ತಿರುಪತಿ ಪ್ರವಾಸಿ ತಾಣವಾಗಿ ಬೆಳೆಯಿತು, ಅಲ್ಲದೆ ಅದೇ ಸಮಯದಲ್ಲಿ ನಿರ್ಮಾಣವಾದ ರೈಲು ಮಾರ್ಗದಿಂದಾಗಿ ಉತ್ತರ ಭಾರತದ ಭಕ್ತರು ಸಹ ದೊಡ್ಡ ಸಂಖ್ಯೆಯಲ್ಲಿ ಆಗಮಿಸಲು ಆರಂಭಿಸಿದರು. ಅದೇ ಸಮಯದಲ್ಲಿಯೇ ತಿರುಪತಿ ತಿಮ್ಮಪ್ಪ ಅಥವಾ ವೆಂಕಟೇಶ್ವರ ಸ್ವಾಮಿಗೆ ಬಾಲಾಜಿ ಎಂಬ ಹೆಸರು ಸಹ ಬಂತು.

Hindu Temple: ಅಮೆರಿಕದಲ್ಲಿ‌ ಎರಡು ಹಿಂದೂ ದೇವಾಲಯಗಳ ಮೇಲೆ ದಾಳಿ: ಹಿಂದೂಗಳ ಮೇಲೆ ಏಕೆ ಈ ದ್ವೇಷ

ಉತ್ತರ ಭಾರತದಿಂದ ಬರುವ ಭಕ್ತರಿಗೆ ಪೊಂಗಲ್ ಪ್ರಸಾದದಿಂದ ಸಮಸ್ಯೆ ಉಂಟಾಯ್ತು. ತಿರುಪತಿಯಲ್ಲಿ ದರ್ಶನ ಪಡೆದು ದಿನಗಳ ಕಾಲ ಪ್ರಯಾಣ ಪಡೆದು ಊರಿಗೆ ತಲುಪುತಿದ್ದ ಅವರಿಗೆ ಪೊಂಗಲ್ ಅನ್ನು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿತ್ತು. ಅದು ಕೆಟ್ಟು ಹೋಗುತ್ತಿತ್ತು, ಹಾಗಾಗಿ ಉತ್ತರ ಭಾರತದವರ ಅನುಕೂಲಕ್ಕಾಗಿ ಲಡ್ಡುವನ್ನು ಪ್ರಸಾದವನ್ನಾಗಿ ಕೊಡಲು ಆರಂಭಿಸಲಾಯ್ತು. 1940 ರಲ್ಲಿ ಮೊದಲ ಬಾರಿಗೆ ಲಡ್ಡು ಅನ್ನು ಪ್ರಸಾದವನ್ನಾಗಿ ನೀಡಲು ಪ್ರಾರಂಭಿಸಿತು ತಿರುಪತಿ ಆಡಳಿತ ಮಂಡಳಿ. ಆ ನಂತರದ ದಿನಗಳಲ್ಲಿ ಲಡ್ಡುವೇ ಜನಪ್ರಿಯವಾಗಿ, ದಶಕಗಳಿಂದಲೂ ಲಡ್ಡು ಅನ್ನೇ ಪ್ರಸಾದವನ್ನಾಗಿ ನೀಡುತ್ತಾ ಬರಲಾಗುತ್ತಿದೆ. ಆದರೆ ಈಗ ಲಡ್ಡುಗೆ ಬಳಲಾಗುತ್ತಿರುವ ತುಪ್ಪದಲ್ಲಿ ಕಲಬೆರೆಕೆ ಪತ್ತೆಯಾಗಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here