Site icon Samastha News

Samantha: ಸಮಂತಾ ಬಗ್ಗೆ ನೀಚ ಹೇಳಿಕೆ ನೀಡಿದ ಸಚಿವೆ, ತೆಲುಗು ಚಿತ್ರರಂಗದ ತೀವ್ರ ಆಕ್ರೋಶ, ರಾಹುಲ್ ಗಾಂಧಿಗೂ ಮನವಿ

samantha

Samantha

ಯೋಗ್ಯತೆ, ಅರ್ಹತೆ ಇಲ್ಲದವರು ರಾಜಕಾರಣಿಗಳಾದರೆ ಏನಾಗುತ್ತದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಈಗಾಗಲೇ ಇವೆ‌ ಇದಕ್ಕೆ ಹೊಸ ಸೇರ್ಪಡೆ ತೆಲಂಗಾಣದ ಸಚಿವೆ ಕೊಂಡ ಸುರೇಖ. ತಮ್ಮ ರಾಜಕೀಯ ಲಾಭಕ್ಕಾಗಿ ನಟಿ ಸಮಂತಾ ವಿರುದ್ಧ ಅತ್ಯಂತ ನೀಚ ಹೇಳಿಕೆಯನ್ನು ಕೊಂಡ ಸುರೇಖ ನೀಡಿದ್ದಾರೆ.‌ ವಿಚಿತ್ರವೆಂದರೆ ಈಕೆ ಸಾಮಾನ್ಯ ರಾಜಕಾರಣಿಯಲ್ಲಿ ತೆಲಂಗಾಣ ರಾಜ್ಯದ ಸಚಿವೆ!

ಇತ್ತೀಚೆಗಷ್ಟೆ ನಾಗಾರ್ಜುನ ಅವರ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಅಕ್ರಮ ಕಟ್ಟಡವೆಂದು ಗುರುತಿಸಿ ಬೀಳಿಸಲಾಯ್ತು. ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಕೊಂಡ ಸುರೇಖ, ‘ಈ ಹಿಂದಿನ ಸರ್ಕಾರದಲ್ಲೇ ಎನ್ ಕನ್ವೆನಗಷನ್ ಸೆಂಟರ್ ಅನ್ನು ಬೀಳಿಸಲು ಮುಂದಾಗಿದ್ದರು. ಆಗ ಸಚಿವ ಆಗಿದ್ದ ಕೆಟಿಆರ್, ಕನ್ವೆನ್ಷನ್ ಸೆಂಟರ್ ಅನ್ನು ಬೀಳಿಸಬಾರದೆಂದರೆ ಸಮಂತಾ ಅನ್ನು ನನ್ನ ಬಳಿ ಕಳಿಸು ಎಂದು ನಾಗಾರ್ಜುನಾಗೆ ಹೇಳಿದ್ದ, ಅಂತೆಯೇ ನಾಗಾರ್ಜುನ ಹಾಗೂ ಅವರ ಕುಟುಂಬದವರು ಸಮಂತಾಗೆ ಕೆಟಿಆರ್ ಬಳಿ ಹೋಗಿ ರಾತ್ರಿ ಕಳೆಯಲು ಹೇಳಿದ್ದರು, ಆದರೆ ಸಮಂತಾ ಇಪ್ಪಿಕೊಳ್ಳಲಿಲ್ಲ. ಅದಕ್ಕೆ ಸಮಂತಾಗೆ ನಾಗ ಚೈತನ್ಯ ವಿಚ್ಛೇದನ ನೀಡಿದ’ ಎಂದಿದ್ದರು.

ಸುರೇಖಾರ ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ತೆಲುಗಿನ ಸ್ಟಾರ್ ನಟ, ನಟಿಯರು ಸೇರಿದಂತೆ ರಾಷ್ಟ್ರಮಟ್ಟದ ಸ್ಟಾರ್ ನಟ-ನಟಿಯರು ಸಹ ಸಚಿವೆ ಸುರೇಖಾರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಕೂಡಲೆ ಸುರೇಖಾ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಮಾತ್ರವಲ್ಲದೆ, ಸಮಂತಾ ಮತ್ತು ಅಕ್ಕಿನೇನಿ ಕಟುಂಬದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

HD Kumaraswamy: 14 ಮೂಡಾ ಸೈಟು ವಾಪಸ್: ಕುಮಾರಸ್ವಾಮಿ ಹೇಳಿದ್ದೇ ಬೇರೆ

ನಟಿ ಸಮಂತಾ ಸಹ ಸುರೇಖಾ ಹೇಳಿಕೆ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದು, ಇಂಥಹಾ ವಿಷಕಾರಿ ಹೇಳಿಕೆ ನೀಡುವವರು ಸಚಿವೆ ಆಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿಚ್ಛೇದನ ಪರಸ್ಪರ ಸಮ್ಮತಿಯಿಂದ ಆಗಿದೆಯೇ ಹೊರತು ರಾಜಕೀಯ ಪ್ರೇರಿತವಲ್ಲ, ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ.  ನಾಗಾರ್ಜುನ ಪತ್ನಿ ಅಮಲಾ ಸಹ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿಕೆ ನೀಡಿರುವ ಸುರೇಖಾ ಅವರನ್ನು ಕಟುವಾದ ಮಾತುಗಳಲ್ಲಿ ಖಂಡಿಸಿದ್ದಾರೆ. ನಟ ಜೂ ಎನ್’ಟಿಆರ್, ಅಲ್ಲು ಅರ್ಜುನ್ ಇನ್ನೂ ಹಲವರು ಸಚಿವೆ ಸುರೇಖಾ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version