Tomy: ‘ಟಾಮಿ’ ನಾಯಿಯ ಹೆಸರೊ, ನಾಯಕನ ಹೆಸರೊ?

0
107

Tomy

ದೇಶದ ಜನತೆಗೆ ಗೌರಿ-ಗಣೇಶ ಹಬ್ಬದ ಸಂಭ್ರಮ. ಸಿನಿಮಾ ಮಂದಿಗೆ ಹಬ್ಬಗಳು ಮತ್ತಷ್ಟು ವಿಶೇಷ. ಹಬ್ಬ ಸಂಭ್ರಮಿಸುವ ಜೊತೆಗೆ ಹೊಸ ಸಿನಿಮಾ ಅನೌನ್ಸ್ ಮಾಡುವುದು, ಸಿನಿಮಾದ ಬಗ್ಗೆ ಅಪ್ಡೇಟ್ ನೀಡುವುದು ವಿಚಾರಗಳನ್ನು ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಗೌರಿ ಗಣೇಶ ಹಬ್ಬಕ್ಕೂ ಕೂಡ ಸಾಕಷ್ಟು ಹೊಸ ಸಿನಿಮಾಗಳು ಅನೌನ್ಸ್ ಆಗಿದೆ. ಈ ನಡುವೆ ಹೊಸಬರ ಹೊಸ ಸಿನಿಮಾ ಗಮನ ಸೆಳೆಯುತ್ತಿದೆ. ಹೌದು ಗಣೇಶ ಹಬ್ಬದ ಪ್ರಯುಕ್ತ ಹೊಸ ಸಿನಿಮಾ ತಂಡ ‘ಟಾಮಿ’ ಎನ್ನುವ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಸಿನಿಮಾ ಎನ್ನುವುದೆ ವಿಶೇಷ.

‘ಟಾಮಿ’ ಶ್ವಾನ ಪ್ರಿಯರಿಗೆ ಈ ಹೆಸರು ಮತ್ತಷ್ಟು ಆಪ್ತ. ಈ ಚಿತ್ರಕ್ಕೆ ಆಶು ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಡುವ ಜೊತೆಗೆ ಫಸ್ಟ್ ಟೈಮ್ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ನಿರ್ದೇಶಕ ನಾಯಕ ಆಶು ಅವರಿಗೆ ಚೊಚ್ಚಲ ಸಿನಿಮಾ ಅಂದ ಮಾತ್ರಕ್ಕೆ ಚಿತ್ರರಂಗವೇನು ಹೊಸದೇನಲ್ಲ. ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನಿಮಾಗಳಿಗೆ ಅದರಲ್ಲೂ ಕಿಚ್ಚ ಸುದೀಪ್ ನಟನೆಯ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮುಕುಂದ ಮುರಾರಿ’, ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ ‘ಅಂಬಿ ನಿಂಗೆ ವಯಸ್ಸಾಯ್ತೊ’, ಕೋಟಿಗೊಬ್ಬ-3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ ಆಶು.

Darshan: ದರ್ಶನ್ ಚಿತ್ರಗಳ ಸೋರಿಕೆ ಹಿಂದೆ ಸರ್ಕಾರದ ಕೈವಾಡ?

ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಾಯಕ ಆಶು, ಜೊತೆಯಲ್ಲಿ ನಾಯಿ ಹಾಗೂ ಆರ್ ಎಕ್ಸ್ ಬೈಕ್ ನೋಡಬಹುದು. ಪೋಸ್ಟರ್ ನೋಡುತ್ತಿದ್ದರೆ ನಾಯಕ ನಾಯಿ ಪ್ರೇಮಿ ಜೊತೆಗೆ ಆರ್ ಎಕ್ಸ್ ಬೈಕ್ ನ ಲವರ್ ಕೂಡ ಆಗಿರುತ್ತಾನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಟಾಮಿ ಸಿನಿಮಾದಲ್ಲಿ ಬಹುತೇಕ ಹೊಸಬರು‌. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಅನೇಕ ಸ್ನೇಹಿತರು ಸೇರಿ ಬಂಡವಾಳ ಹೂಡುತ್ತಿದ್ದಾರೆ. ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಪ್ರದ್ಯುತನ್ ‘ಟಾಮಿ’ ಸಿನಿಮಾಗೂ ಸಂಗೀತ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here