Site icon Samastha News

Toyota: ಅತ್ಯಂತ ಕಡಿಮೆ ಬೆಲೆಗೆ ಹೊಸ ಫಾರ್ಚ್ಯುನರ್, ಖರೀದಿಸಲು ಸಿದ್ಧವೆ?

Toyota

Toyota

ಬೆಂಜ್, ಬಿಎಂಡಬ್ಲುಗಳು ತೀರಾ ಹೈ ಸ್ಟೇಟಸ್ ಜನರ ಕಾರಾಯ್ತು. ಆದರೆ ಭಾರತೀಯರ ಪಾಲಿಗೆ ಐಶಾರಾಮಿ ಕಾರೆಂದರೆ ಅದು ಇನ್ನೋವಾ ಮತ್ತು ಫಾರ್ಚುನರ್. ಅದರಲ್ಲೂ ಫಾರ್ಚುನರ್ ಕಾರೆಂದರೆ ಅದೊಂದು‌ ಗತ್ತು. ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ದಿಮೆದಾರರು, ಉದ್ದಿಮೆದಾರ ಬಲು ಮೆಚ್ಚಿನ ಕಾರು ಫಾರ್ಚುನರ್. ಕಾರಿಗೆ ಇರುವ ಗತ್ತಿನಂತೆ ಇದರ ಬೆಲೆಯೂ ಭಾರಿ ದುಬಾರಿ. ಆದರೆ ಈಗ ಟೊಯಾಟಾ ಸಂಸ್ಥೆ ಕಡಿಮೆ ದರಕ್ಕೆ ಫಾರ್ಚುನರ್ ಬಿಡುಗಡೆ ಮಾಡಲು ಸಿದ್ಧವಾಗಿದೆ. ಖರೀದಿಸಲು ನೀವು ಸಿದ್ಧವಾ?

ಬೆಂಗಳೂರಿನಲ್ಲಿ ಟೊಯಾಟಾ ಫಾರ್ಚುನರ್ ಬೆಲೆ 42 ಲಕ್ಷದಿಂದ ಆರಂಭವಾಗಿ 64 ಲಕ್ಷ ರೂಪಾಯಿಗಳ ವರೆಗೆ ಇದೆ. ಆದರೆ ಟೊಯೊಟಾ ಈಗ ಬಿಡುಗಡೆಗೆ ಮುಂದಾಗಿರುವ ಫಾರ್ಚುನರ್ ಬೆಲೆ ಇದರ ಅರ್ಧಕ್ಕಿಂತಲೂ ಕಡಿಮೆ! ಹೌದು, ಟೊಯೊಟಾ ಮಿನಿ ಫಾರ್ಚುನರ್ ಅನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. ಮೂಲ ಫಾರ್ಚುನರ್’ನ ಅರ್ಧಕ್ಕಿನಂತಲೂ ಕಡಿಮೆ ಬೆಲೆಗೆ ಇದನ್ನು ಮಾರಾಟ ಮಾಡಲು ಸಿದ್ಧವಾಗಿದೆ.

ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಎಸ್’ಯುವಿ, ಮಿನಿ ಎಸ್’ಯುವಿ ಕಾರುಗಳ ಭರಾಟೆ ಹೆಚ್ಚಾಗಿರುವುದನ್ನು ಗಮನಿಸಿರು  ಟೊಯೊಟಾ ಸಂಸ್ಥೆ, ಥೇಟ್ ಫಾರ್ಚುನರ್ ಅನ್ನೇ ಹೋಲುವ ಆದರೆ ಗಾತ್ರದಲ್ಲಿ ತುಸು ಚಿಕ್ಕದಾಗಿರುವ ಮಿನಿ ಫಾರ್ಚುನರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಕಾರಿನ ಪ್ರಯೋಗಿಕ ಚಲಾವಣೆ ಮಾಡಲಾಗುತ್ತಿದೆ. ಮಿನಿ ಫಾರ್ಚುನರ್ ನ ಬೆಲೆ ಇನ್ನೂ ನಿಗದಿಯಾಗಿಲ್ಲ. ಆದರೆ ಇದರ ಬೆಲೆ 10 ರಿಂದ 20 ಲಕ್ಷದ ಒಳಗೆ ಇರಲಿದೆ ಎನ್ನಲಾಗುತ್ತಿದೆ.

Royal Enfield: ಶೀಘ್ರ ಬರಲಿದೆ ಕಡಿಮೆ ಬೆಲೆಯ ರಾಯಲ್ ಎನ್’ಫೀಲ್ಡ್ ಬುಲೆಟ್

ಟೊಯೊಟಾ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಗ್ಲಾಂಜಾ, ಲ್ಯಾಂಡ್ ಕ್ರೂಜರ್, ಹೈರೈಡರ್, ಇನ್ನೊವಾ, ವೆಲ್ ಫೈರ್ ಕಾರುಗಳನ್ನು ಅದ್ಧೂರಿಯಾಗಿ ಮಾರಾಟ ಮಾಡುತ್ತಿದೆ. ಎಸ್’ಯುವಿ ಮಾದರಿಯಲ್ಲಿ ಟೊಯಾಟಾದ ಹೈರೈಡರ್ ಹೊರತು ಪಡಿಸಿ ಬೇರೆ ಕಾರುಗಳಿಲ್ಲ, ಹಾಗಾಗಿ ಮಾರುತಿಯ ಬ್ರಿಜಾ, ಮಹೀಂದ್ರಾ ಎಕ್ಸ್ ಯುವಿ, 3XO ಇನ್ನಿತರೆ ಕಾರುಗಳಿಗೆ ಸ್ಪರ್ಧೆ ಒಡ್ಡಲೆಂದು ಈ ಕಾರನ್ನು ಮಾರುಕಟ್ಟೆಗೆ ತರುತ್ತಿದೆ

Exit mobile version