Tumbbad movie: ಬಿಡುಗಡೆ ಆಗಾದ ಫ್ಲಾಪ್, ರಿ-ರಿಲೀಸ್ ನಲ್ಲಿ ಭಾರಿ ಹಣ ಗಳಿಸಿದೆ ಈ ಸಿನಿಮಾ

0
82
Tumbbad Movie

Tumbbad movie

ಕೆಲವು‌ ಸಿನಿಮಾಗಳು ಬಿಡುಗಡೆ ಆದಾಗ ಅಷ್ಟೇನು ಒಳ್ಳೆಯ ಪ್ರದರ್ಶನ ಕಂಡಿರುವುದಿಲ್ಲ. ಆದರೆ ಕಾಲ ಸರಿದಂತೆ ಜನ ನೋಡಿ ಮೆಚ್ಚಿ, ಸಿನಿಮಾದ ಬಗ್ಗೆ ಚರ್ಚೆ ಮಾಡಿ ಅದು ಇನ್ನಷ್ಟು ಜನರಿಗೆ ತಲುಪಿ ಆ ಸಿನಿಮಾ ಕಲ್ಟ್ ಎನಿಸಿಕೊಳ್ಳುತ್ತದೆ. ಕನ್ನಡದ ‘ಆಕ್ಸಿಡೆಂಟ್’, ‘ಶಾಂತಿ-ಕ್ರಾಂತಿ’ ಹಿಂದಿಯ ‘ಪ್ಯಾಸಾ’, ‘ಗ್ಯಾಂಗ್ಸ್ ಆಫ್ ವಾಸೇಪುರ್’ ಇನ್ನೂ ಕೆಲ ಸಿನಿಮಾಗಳನ್ನು ಈ ಪಟ್ಟಿಗೆ ಸೇರಿಸಬಹುದು. ಆದರೆ ಹೀಗೆ ಬಿಡುಗಡೆ ಆದಾಗ ಫ್ಲಾಪ್ ಆಗಿ ಮರು ಬಿಡುಗಡೆಯಲ್ಲಿ ಭಾರಿ ದೊಡ್ಡ ಹಿಟ್ ಆದ ಉದಾಹರಣೆಗಳು ಇಲ್ಲ. ಆದರೆ ಈಗ ಒಂದು ಸಿನಿಮಾ ಆ ದಾಖಲೆ ಮಾಡಿದೆ. ಅದುವೇ ಮರಾಠಿಯ ಹಾರರ್ ಸಿನಿಮಾ ‘ತುಂಬಾಡ್’

‘ತುಂಬಾಡ್’ ಸಿನಿಮಾ ಮೊದಲು ಬಿಡುಗಡೆ ಆಗಿದ್ದು 2018 ರಲ್ಲಿ. ಮೊದಲು ಬಿಡುಗಡೆ ಆದಾಗ ದೊಡ್ಡ ಯಶಸ್ಸನ್ನೇನು ಈ ಸಿನಿಮಾ ಗಳಿಸಲಿಲ್ಲ. ಸಿನಿಮಾಕ್ಕೆ ಆಗ ಸುಮಾರು‌ 15 ಕೋಟಿ ಖರ್ಚು ಮಾಡಲಾಗಿತ್ತು. ಬಹುತೇಕ ಅಷ್ಟೆ ಹಣ ಬಾಕ್ಸ್ ಆಫೀಸ್ ನಿಂದ ಮರಳಿ ಬಂತು. ಚಿತ್ರಮಂದಿರದ ಬಾಡಿಗೆ, ತೆರಿಗೆ, ಪ್ರಚಾರಕ್ಕೆ ಖರ್ಚು ಮಾಡಿದ ಹಣ ಎಲ್ಲ ಲೆಕ್ಕ ಹಾಕಿದರೆ ಸಿನಿಮಾ ಫ್ಲಾಪ್ ಎಂದೇ ಹೇಳಬೇಕು.

ಆದರೆ ಸಿನಿಮಾ ಬಿಡುಗಡೆ ಆದಾಗ ಕೆಲ ವಿಮರ್ಶಕರು ಸಿನಿಮಾವನ್ನು ಕೊಂಡಾಡಿದ್ದರು. ಆ ಬಳಿಕ ಕೋವಿಡ್ ಸಮಯದಲ್ಲಿ ಒಟಿಟಿಗಳ ಬೂಮ್ ಆದಾಗ ಮಲಾಯಳಂ ಸಿನಿಮಾಗಳ ಜೊತೆಗೆ ಕೆಲ ಒಳ್ಳೆಯ ಮರಾಠಿ ಸಿನಿಮಾಗಳನ್ನೂ ಸಹ ಜನ ನೋಡಿದರು ಅದರಲ್ಲಿ ‘ತುಂಬಾಡ್’ ಸಹ ಒಂದು. ಆದರೆ ಈ ಸಿನಿಮಾದ ಕತೆ, ಮೇಕಿಂಗ್ ಮಾಡಿರುವ ರೀತಿ, ಪಾತ್ರಧಾರಿಗಳ ನಟನೆ ಈ ಸಿನಿಮಾಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲೇ ಕಲ್ಟ್ ಸಿನಿಮಾ ಎಬ ಹೆಸರು ತಂದು‌ ಕೊಟ್ಟಿತು. ವಿಷ್ಯುಲಿ ಅದ್ಭುತವಾಗಿದ್ದ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡಿದ್ದಕ್ಕೆ ಹಲವು ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು.

ಇದೀಗ ಕಳೆದ ವಾರವಷ್ಟೆ ‘ತುಂಬಾಡ್’ ಸಿನಿಮಾವನ್ನು ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಕೆಲವು ನಗರಗಲ್ಲಿ ಕೆಲವೇ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಯ್ತು. ಜನ‌ಮುಗಿಬಿದ್ದು ಸಿನಿಮಾ ನೋಡಿದರು. ಬೇಡಿಕೆ ನೋಡಿ ಚಿತ್ರಮಂದಿರಗಳ ಸಂಖ್ಯೆ, ಮಲ್ಟಿಪ್ಲೆಕ್ಸ್’ಗಳಲ್ಲಿ ಶೋಗಳ ಸಂಖ್ಯೆ ಹೆಚ್ಚು ಮಾಡಲಾಯ್ತು. ಈಗ ಸಿನಿಮಾ ಬಿಡುಗಡೆ ಆಗಿ ಎರಡು ವಾರವಾದರೂ ಸಹ ಈಗಲೂ ಕೆಲವೆಡೆ ಈ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಾಣಿತ್ತಿದೆ.

Bigg Boss Kannada: ಈ ಬಾರಿ ಬಿಗ್​ಬಾಸ್​ಗೆ ಹೋಗುತ್ತಿರುವವರು ಇವರೇ ನೊಡಿ

ಮರು ಬಿಡುಗಡೆ ಆದ ಎರಡೇ ವಾರದಲ್ಲಿ ಈ ಸಿನಿಮಾ ಸುಮಾರು 25 ಕೋಟಿ ರೂಪಾಯಿ ಹಣ ಗಳಿಸಿದೆ‌. ಭಾರತದ ಇನ್ಯಾವುದೇ ಸಿನಿಮಾ ಸಹ ಮರು ಬಿಡುಗಡೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಗಳಿಕೆ ಮಾಡಿಲ್ಲ. ‘ತುಂಬಾಡ್’ ಸಿನಿಮಾ ಹೊಸ ದಾಖಲೆಯನ್ನೇ ಬರೆದಿದೆ.

LEAVE A REPLY

Please enter your comment!
Please enter your name here