Site icon Samastha News

Dog Attack: ಮಗುವಿನ ಮೇಲೆ ದಾಳಿ ಮಾಡಿದ ಸಾಕು ನಾಯಿಗಳು, ಮಾಲೀಕನ ಬಂಧನ

Dog Attack

Dog Attack

ನಾಯಿಗಳು ನೂರಾರು ವರ್ಷಗಳಿಂದಲೂ ಮನುಷ್ಯ ಮಿತ್ರ. ಮನುಷ್ಯನೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಿಗಳು. ಮನುಷ್ಯನ ಅತ್ಯಂತ ನೆಚ್ಚಿನ ಸಾಕು ಪ್ರಾಣಿ. ಮನುಷ್ಯನ ಮನೆಯಲ್ಲಿಯೂ ನಾಯಿಗಳು ಸ್ಥಾನ ಪಡೆದಿವೆ. ನಾಯಿಗಳು ಮನುಷ್ಯನಿಗೆ ಬೇಷರತ್ ಪ್ರೇಮ ನೀಡುವ ಜೊತೆಗೆ ಮನೆಯ ಕಾವಲುಗಾರನಾಗಿಯೂ ಕೆಲಸ ಮಾಡುತ್ತಾ ಬಂದಿದೆ. ಆದರೆ ಕೆಲವು ಸಾಕು ನಾಯಿಗಳು ಅತ್ಯಂತ ಹಿಂಸಾತ್ಮಕ ಪ್ರವೃತ್ತಿಯನ್ನು ಹೊಂದಿದ್ದು ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ಮಾಡಿ ಕೊಂದ ಉದಾಹರಣೆಗಳೂ ಸಹ ಇವೆ. ಇದೀಗ ಚೆನ್ನೈನಲ್ಲಿ ಇಂಥಹುದೇ ಒಂದು ಘಟನೆ ನಡೆದಿದೆ. ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಎರಡು ರ್ಯಾಟ್​ವಿಲ್ಲರ್ ನಾಯಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ.

ಚೆನ್ನೈನ ಥೌಸಂಡ್ಸ್ ಲೈಟ್ ಏರಿಯಾನಲ್ಲಿ ಈ ದುರ್ಘಟನೆ ನಡೆದಿದೆ. ಸಾರ್ವಜನಿಕ ಪಾರ್ಕ್​ ಒಂದರಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಮೇಲೆ ಎರಡು ರ್ಯಾಟ್​ವಿಲ್ಲರ್ ನಾಯಿಗಳು ದಾಳಿ ಮಾಡಿವೆ. ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲಕಿ ಅದೇ ಪಾರ್ಕ್​ನ ಸೆಕ್ಯೂರಿಟಿ ಗಾರ್ಡ್​ನ ಮಗಳಾಗಿದ್ದಾಳೆ. ಘಟನೆಗೆ ಸಂಭಂಧಿಸಿದಂತೆ ನಾಯಿಗಳ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ನಾಯಿಯನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ಇಬ್ಬರು ನೌಕರರ ಮೇಲೂ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಬಾಲಕಿಯ ಪೋಷಕರು ಹೇಳುವಂತೆ ಪೋಷಕರು ಬಂದು ಬಾಲಕಿಯನ್ನು ಬಿಡುಸುವ ವರೆಗೆ ಮಾಲೀಕ ನಾಯಿಯನ್ನು ಹಿಂದಕ್ಕೆ ಕರೆಯುವ ಪ್ರಯತ್ನವನ್ನೇ ಮಾಡಿರಲಿಲ್ಲವಂತೆ.

Bengaluru: ಅಡ್ವಾನ್ಸ್ ರಹಿತ ಬಾಡಿಗೆ ಮನೆ, ಬೆಂಗಳೂರಿನಲ್ಲಿ ಹೀಗೊಂದು ಟ್ರೆಂಡ್

ನಾಯಿಗಳ ಮಾಲೀಕನನ್ನು‌ ಬಂಧಿಅಇರುವ ಚೆನ್ನೈ ಪೊಲೀಸರು, ಬೇಜವಾಬ್ದಾರಿ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳನ್ನು ನಾಯಿಗಳ ಮಾಲೀಕನ ಮೇಲೆ ಹೊರಿಸಿದ್ದಾರೆ. ಅಲ್ಲದೆ ನಾಯಿಗಳಿಗೆ ನಿಯಮಗಳ ಅನುಸಾರ ವ್ಯಾಕ್ಸಿನೇಷನ್ ಹಾಗೂ ಸ್ಟೆರಿಲೇಷನ್ ಅನ್ನು ಸಹ ಮಾಲೀಕ ಮಾಡಿಸಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಕೆಲವು ಜಾತಿಯ ನಾಯಿಗಳನ್ನು ಸಾಕುವುದಕ್ಕೆ ನಿಷೇಧವಿದೆ. ಈಗ ಬಾಲಕಿ ಮೇಲೆ ದಾಳಿ ಮಾಡಿರುವ ರ್ಯಾಟ್ ವಿಲ್ಲರ್ ನಾಯಿಯನ್ನು ಸಹ ಸಾಕುವಂತಿಲ್ಲ. ಈ ಜಾತಿಯ ನಾಯಿಗಳು ಆಕ್ರಮಣಕಾರಿ ಹಾಗೂ ಹಿಂಸಾತ್ಮಕ ಪ್ರವೃತ್ತಿ  ಹೊಂದಿರುತ್ತವೆಯಾದ್ದರಿಂದ  ರ್ಯಾಟ್ ವಿಲ್ಲರ್ ಸೇರಿದಂತೆ 23 ಜಾತಿಗಳ ನಾಯಿಗಳನ್ನು ಸಾಕುವುದಕ್ಕೆ ನಿಷೇಧ ಹೇರಿ ಇದೇ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡೊಸಿದೆ. ಈ ಪಟ್ಟಿಯಲ್ಲಿ ಪಿಟ್ ಬುಲ್, ಅಮೆರಿಕನ್ ಬುಲ್ ಡಾಗ್, ಮ್ಯಾಸ್ಟಿಫ್ ಸೇರಿದಂತೆ ಇನ್ನೂ ಕೆಲವು ನಾಯಿಗಳಿವೆ.

Exit mobile version