Udith Case
ದೇಶದಲ್ಲಿ ಪ್ರತಿದಿನ ಕೊಲೆಗಳು ನಡೆಯುತ್ತವೆ. ದೇಶದ ನ್ಯಾಯಾಲಯಗಳಲ್ಲಿ ಲಕ್ಷಾಂತರ ಕೊಲೆ ಪ್ರಕರಣಗಳ ವಿಚಾರಣೆ ಈಗಲೂ ನಡೆಯುತ್ತಿದೆ. ಆದರೆ ಕೆಲವೇ ವರ್ಷಗಳ ಹಿಂದೆ ಪುಣೆಯಲ್ಲಿ ನಡೆದ ಒಂದು ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ವಿಶ್ವದಲ್ಲಿಯೇ ಅಪರೂಪದ್ದು. ಆ ಕೊಲೆ ಪ್ರಕರಣವನ್ನು ಕಾನೂನು ವಿದ್ಯಾರ್ಥಿಗಳು, ಅಪರಾಧ ಶಾಸ್ತ್ರ ವಿದ್ಯಾರ್ಥಿಗಳು ಪಠ್ಯದ ರೀತಿಯಲ್ಲಿ ಓದುತ್ತಾರೆ. ಏನದು ಪ್ರಕರಣ? ಇಲ್ಲಿ ತಿಳಿಯೋಣ.
ಉದಿತ್ ಮತ್ತು ಅದಿತಿ ಜಮ್ಮು ನಿವಾಸಿಗಳು ಎಳವೆಯಲ್ಲಿಯೇ ಇವರಿಬ್ಬರ ನಡುವೆ ಪ್ರೀತಿಯಿತ್ತು. ಇವರ ಪ್ರೀತಿಗೆ ಮನೆಯವರ ಒಪ್ಪಿಗೆಯೂ ದೊರಕಿತ್ತು ಇಬ್ಬರೂ ಚೆನ್ನಾಗಿ ಓದುತ್ತಿದ್ದರೂ. ಇಬ್ಬರೂ ಪದವಿ ಮುಗಿಸಿದ ಬಳಿಕ ಮದುವೆಯಾಗುವುದಾಗಿ ನಿಶ್ಚಯಿಸಿ, ಎಂಬಿಎ ಮಾಡಲೆಂದು ದೇಶದ ಪ್ರತಿಷ್ಟಿತ ಪುಣೆಯ ಐಐಎಂಗೆ ದಾಖಲಾದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಈ ಇಬ್ಬರ ಪ್ರೀತಿಯ ನಡುವೆ ಪ್ರೇಮ್ ಹೆಸರಿನ ಯುವಕನ ಎಂಟ್ರಿ ಆದ ಮೇಲೆ ಈ ಮೂವರ ಜೀವನವೇ ಬದಲಾಗಿ ಹೋಯ್ತು.
ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್ ಮೇಲೆ ಎಫ್ ಐಆರ್
ಅದಿತಿಗೆ ಪ್ರೇಮ್ ಮೇಲೆ ಪ್ರೀತಿಯಾಯಿತು. ಆತನ ಮೂಲ ಜೈಪುರ. ಇದು ಉದಿತ್ ಗೆ ತಿಳಿದು, ಆತ ಅದಿತಿ ಮೇಲೆ ಜಗಳ ಮಾಡಿದ. ಇದು ಅದಿತಿ ಹಾಗೂ ಪ್ರೇಮ್ ಗೆ ಹಿಡಿಸಲಿಲ್ಲ. ಇಬ್ಬರೂ ಸೇರಿ ಉದಿತ್ ಗೆ ಬೆದರಿಕೆಗಳನ್ನು ಹಾಕಿದರು. ಉದಿತ್ ಈ ಬಗ್ಗೆ ತನ್ನ ಮನೆಯಲ್ಲಿಯೂ ಮಾಹಿತಿ ನೀಡಿದ. ಇಬ್ಬರೂ ಕೆಲ ಕಾಲ ಕಾಲೇಜಿನಿಂದ ನಾಪತ್ತೆಯಾಗಿ ಎಲ್ಲಿಗೋ ಹೋಗಿದ್ದರು. ಅದನ್ನು ಉದಿತ್, ಅದಿತಿಯ ಪೋಷಕರಿಗೆ ತಿಳಿಸಿದ್ದ.
2007 ರ ಏಪ್ರಿಲ್ 23 ರಂದು ಅದಿತಿ, ಉದಿತ್ ಗೆ ಕರೆ ಮಾಡಿ ಪುಣೆಯ ಲಾಡ್ಜ್ ಒಂದರ ಬಳಿ ಭೇಟಿ ಆಗುವಂತೆ ಹೇಳಿದಳು. ಅಂತೆಯೇ ಉದಿತ್ ಅಲ್ಲಿಗೆ ಹೋದ. ಬಳಿಕ ಅಲ್ಲಿಯೇ ರೈಲ್ವೆ ಸ್ಟೇಷನ್ ಬಳಿ ಇದ್ದ ಹೋಟೆಲ್ ಗೆ ಹೋಗಿ ತಿಂಡಿ ತಿನ್ನೋಣ ಎಂದಳು. ಅದಕ್ಕೂ ಸರಿ ಎಂದ. ಹೋಟೆಲ್ ಗೆ ಹೋದಾಗ ಅಲ್ಲಿ ಅದಿತಿ, ತಾನು, ತನ್ನ ಗೆಳತಿಯರೊಟ್ಟಿಗೆ ಶಿರಡಿಗೆ ಹೋಗಿದ್ದಾಗಿಯೂ ಅಲ್ಲಿಂದ ಪ್ರಸಾದ ತಂದಿರುವುದಾಗಿ ಹೇಳಿ ಉದಿತ್ ಗೆ ನೀಡಿದಳು. ಅದನ್ನು ತಿಂದ ಉದಿತ್ ಗೆ ವಾಂತಿ ಶುರುವಾಯ್ತು, ಕೆಲವೇ ನಿಮಿಷದಲ್ಲಿ ಆತ ಕೆಳಗೆ ಬಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ.
ಮೊದಲಿಗೆ ಇದನ್ನು ಆಕಸ್ಮಿಕ ಮರಣ ಎಂದು ಪುಣೆಯ ನಿಡಿ ಪೊಲೀಸ್ ಠಾಣೆ ಪೊಲೀಸರು ನಮೂದಿಸಿಕೊಂಡಿದ್ದರು. ಆದರೆ ಅದಿತಿ ಹಾಗೂ ಪ್ರೇಮ್ ತನ್ನ ಮಗನಿಗೆ ಬೆದರಿಕೆ ಹಾಕಿದ್ದು, ಹಾಗೂ ಮಗ ಸಾಯುವ ಸಮಯದಲ್ಲಿ ಅಲ್ಲಿ ಅದಿತಿ ಹಾಜರಿದ್ದ ವಿಷಯ ತಿಳಿದು ಅನುಮಾನಗೊಂಡ ಉದೊತ್ ರ ತಂದೆ ದೂರು ದಾಖಲಿಸಿದರು. ಕೂಡಲೆ ಉದಿತ್ ನ ಶವದ ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ಮರಣೋತ್ತರ ಪರೀಕ್ಷೆಯಲ್ಲಿ ಉದಿತ್ ದೇಹದಲ್ಲಿ ಆರ್ಸೆನಿಕ್ ಎಂಬ ಅಪಾಯಕಾರಿ ವಿಷವಿರುವುದು ತಿಳಿದು ಬಂತು. ಕೂಡಲೆ ಅದಿತಿಯನ್ನು ಆಕೆಯ ಬಾಯ್ ಫ್ರೆಂಡ್ ಪ್ರೇಮ್ ನನ್ನೂ ಬಂಧಿಸಲಾಯ್ತು.
ಆದರೆ ಆ ನಂತರ ಕೇಸು ಇನ್ನಷ್ಟು ಜಠಿಲವಾಯ್ತು. ಏಕೆಂದರೆ ಉದಿತ್, ಅದಿತಿ ನೀಡಿದ ಪ್ರಸಾದದಿಂದಲೇ ಸಾವನ್ನಿಪ್ಪಿದ್ದಾನೆ ಎಂದು ನಿರೂಪಿಸಲು ಯಾವುದೇ ಸಾಕ್ಷ್ಯಗಳಿರಲಿಲ್ಲ. ಆಗಿನ ಸಮಯದಲ್ಲಿ ಸಿಸಿಟಿವಿ ಫೋನ್ ಗಳು ಸಹ ಇರಲಿಲ್ಲ. ಕೊನೆಗೆ ಪೊಲೀಸರು ಉಪಾಯ ಮಾಡಿ ಆರೋಪಿಗಳ ಬ್ರೈನ್ ಮ್ಯಾಪಿಂಗ್ ಮಾಡಿಸಲು ಮುಂದಾದರು. ಅದಕ್ಕೆ ಆರೋಪಿಗಳ ಒಪ್ಪಿಗೆಯನ್ನು ಜಾಣತನದಿಂದಲೇ ಪಡೆದರು.
ಬ್ರೈನ್ ಮ್ಯಾಪಿಂಗ್ ನಲ್ಲಿ ಅದಿತಿ ಹಾಗೂ ಪ್ರೇಮ್ ಇಬ್ಬರೂ ಉದಿತ್ ಅನ್ನು ಕೊಲ್ಲುವ ನಿರ್ಣಯ ಮಾಡಿದ್ದು, ಆರ್ಸೆನಿಕ್ ವಿಷ ಖರೀದಿಸಿದ್ದು, ಅದನ್ನು ಪ್ರಸಾದದಲ್ಲಿ ಬೆರೆಸಿದ್ದನ್ನು ಒಪ್ಪಿಕೊಂಡರು. ಆದರೆ ಆ ಮ್ಯಾಪಿಂಗ್ ನಲ್ಲಿಯೂ ಅದಿತಿ ಹಾಗೂ ಪ್ರೇಮ್ ಆರ್ಸೆನಿಕ್ ವಿಷವನ್ನು ಎಲ್ಲಿ ಖರೀದಿಸಿದರು ಎಂಬ ವಿಷಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೂ ಸಗ ಪುಣೆ ಹೈಕೋರ್ಟ್ ಬ್ರೈನ್ ಮ್ಯಾಪಿಂಗ್ ವರದಿ ಆಧಾರದಲ್ಲಿ ಅದಿತಿ ಹಾಗೂ ಪ್ರೇಮ್ ಗೆ ಸೆಕ್ಷನ್ 302 ಅಡಿಯಲ್ಲಿ ಶಿಕ್ಷೆ ವಿಧಿಸಿತು.
ಮಾರನೇಯ ದಿನವೇ ಈ ಸುದ್ದಿ ವಿಶ್ವದಾದ್ಯಂತ ಕಾಡ್ಗೊಚ್ಚಿನಂತೆ ಹರಡಿತು. ಕೇವಲ ಬ್ರೈನ್ ಮ್ಯಾಪಿಂಗ್ ಆಧಾರದಲ್ಲಿ ಶಿಕ್ಷೆ ವಿಧಿಸಲಾದ ವಿಶ್ವದ ಮೊಟ್ಟ ಮೊದಲ ಪ್ರಕರಣ ಇದಾಯ್ತು. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಒದು ಸುದ್ದಿಯಾಯ್ತು. ಅಮೆರಿಕ, ರಷ್ಯಾ ಸೇರಿದಂತೆ ಕೆಲವು ದೇಶಗಳ ತಜ್ಞರು ಭಾರತಕ್ಕೆ ಬಂದು ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ, ಅದರ ನಿರ್ದಿಷ್ಟತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆದರೆ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು, ಸುಪ್ರೀಂ ನಲ್ಲಿ ಪ್ರಕರಣ ಇಂದಿಗೂ ನಡೆಯುತ್ತಿದೆ. ಅದಿತಿ, ಪ್ರೇಮ್ ಈಗಲೂ ಬದುಕಿದ್ದಾರೆ.