Ugadi Astrology
ಶ್ರೀ ಶಾಲಿವಾಹನ ಗತಶಕ 1964ನೇ ಕ್ರೋಧಿ ನಾಮ ಸಂವತ್ಸರ
ಮೇಷ
ಮೇಷ ರಾಶಿಯವರಿಗೆ ಈ ವರ್ಷ ಶುಭಫಲ ಹೆಚ್ಚಿದೆ. ಗುರುವು ಜನ್ಮಸ್ಥಾನದಲ್ಲಿರುವ ಕಾರಣ ವಾಹನ ಖರೀದಿ, ಆಸ್ತಿ ಖರೀದಿ ಯೋಗಗಳು ಎದ್ದು ಕಾಣುತ್ತಿವೆ. ವ್ಯಾಪಾರಸ್ಥರಿಗೂ ಈ ವರ್ಷ ಲಾಭವಾಗಲಿದೆ. ಷೇರು, ಹೋಟೆಲ್ ಉದ್ಯಮ ಹೊಂದಿರುವವರಿಗೆ ಲಾಭ ಪಕ್ಕಾ. ನ್ಯಾಯಾಲಯದ ಪ್ರಕರಣಗಳು ಸಾಮಾನ್ಯವಾಗಿ ಸಾಗುತ್ತವೆ. ಕೃಷಿ ವೃತ್ತಿಯವರಿಗೂ ಇದು ಒಳ್ಳೆಯ ಸಮಯ. ಆಗಾಗ್ಗೆ ಮನಸ್ಸಿನಲ್ಲಿ ಚಾಂಚಲ್ಯ ಮೂಡುತ್ತದೆಯಾದರೂ ಅದನ್ನು ನಿರ್ಲಕ್ಷಿಸಿ ಗುರಿಯ ಕಡೆಗೆ ಮುನ್ನುಗ್ಗಿ. ಆಗಸ್ಟ್ ತಿಂಗಳಲ್ಲಿ ತುಸು ಅನಾರೋಗ್ಯ ಕಾಡಲಿದೆ. ತೀರ್ಥಕ್ಷೇತ್ರಗಳ ಸಂದರ್ಶನ ಮಾಡಿ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಪ್ರಯತ್ನ ಬಿಡಬೇಡಿ. ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿದೆ. ಒಟ್ಟಾರೆಯಾಗಿ ಮುಂದಿನ ಯುಗಾದಿಯ ವರೆಗೆ ಮೇಷ ರಾಶಿಯವರಿಗೆ ಶುಭ ಫಲ ಹೆಚ್ಚು, ಪ್ರಯತ್ನ ಬಿಡಬಾರದಷ್ಟೆ.
ವೃಷಭ
ವರ್ಷಾರಂಭದಲ್ಲಿ ಕುಟುಂಬದಲ್ಲಿ ಕಿರಿ-ಕಿರಿ ಉಂಟಾದರೂ ಸಹ ಆ ನಂತರ ಆರ್ಥಿಕ ಏಳಿಗೆಯುಂಟಾಗುತ್ತದೆ. ಕೌಟುಂಬಿಕ ಕಲಹಗಳು ಸುಖಾಂತ್ಯ ಕಾಣುತ್ತವೆ. ಬಂಗಾರ, ಹವಳ, ತಾಮ್ರ ವ್ಯಾಪಾರಿಗಳಿಗೆ ಲಾಭವಿದೆ. ವಿದ್ಯಾರ್ಥಿಗಳಿಗೆ ಅಕ್ಟೋಬರ್ ನಂತರ ಒಳ್ಳೆಯ ಸಮಯವಿದೆ. ಸಾಮಾಜಿಕ ಗೌರವವೂ ಪ್ರಾಪ್ತವಾಗುತ್ತದೆ. ಉನ್ನತ ಶಿಕ್ಷಣ ಪಡೆದವರಿಗೆ ಉದ್ಯೋಗ ದೊರೆಯಲಿದೆ. ಈ ವರ್ಷ ವೃಷಭ ರಾಶಿಯವರಿಗೆ ಮಿಶ್ರ ಫಲವಿದೆ.
ಮಿಥುನ
ಮಿಥುನ ರಾಶಿಯವರಿಗೆ ಈ ವರ್ಷ ಮಧ್ಯಮ ಫಲವಿದೆ. ಆದರೆ ಈ ವರ್ಷ ಮಿಥುನ ರಾಶಿಯವರು ಸಾಕಷ್ಟು ಪರಿಶ್ರಮದಿಂದ ಕೆಲಸ ಮಾಡಲಿದ್ದಾರೆ. ಕೆಲಸದ ನಿಮಿತ್ತ ಹಳೆಯ ಗೆಳೆಯರು, ಬಂಧುಗಳ ಭೇಟಿ ಆಗಲಿದ್ದಾರೆ. ಎಲ್ಲರ ನೆರವು ದೊರೆತು ಕೆಲಸದಲ್ಲಿ ಉತ್ಸಾಹ ಮೂಡಲಿದೆ. ಸೆಪ್ಟೆಂಬರ್ ಬಳಿಕ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಪುರಸ್ಕಾರಗಳು ಸಿಗಲಿವೆ. ಅತಿಯಾಗಿ ಕೆಲಸ ಮಾಡುವುದರಿಂದ ಕೆಲವು ಅನಾರೋಗ್ಯಗಳು ಕಾಡಬಹುದು. ಹೋಟೆಲ್, ಷೇರು ಹೂಡಿಕೆದಾರರಿಗೆ ಶುಭವಾಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲಿದ್ದಾರೆ.
ಕರ್ಕಟಕ
ಈ ವರ್ಷ ಯಾವುದೇ ಹೊಸ ಉದ್ಯಮ ಪ್ರಾರಂಭ ಮಾಡುವುದು ಬೇಡ. ಇರುವ ವ್ಯಾಪಾರವನ್ನೇ ಮುಂದುವರೆಸಿ. ಉದ್ಯೋಗಸ್ಥರು ಸಹ ಇರುವ ಉದ್ಯೋಗ ಬಿಡುವುದು ಬೇಡ. ಕೃಷಿ ಚಟುವಟಿಕೆ ಮಾಡುವವರಿಗೆ. ಕೃಷಿ ಸಲಕರಣೆ ಮಾರಾಟ ಮಾಡುವವರಿಗೆ ಒಳ್ಳೆಯ ಲಾಭವಿದೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಯೋಗವೂ ಇದೆ. ವರ್ಷದ ಆರಂಭದಲ್ಲಿ ಆರ್ಥಿಕ ಹಿನ್ನಡೆ, ಮನಸ್ಸಿನಲ್ಲಿ ಕ್ಷೋಭೆ ಎದುರಿಸುತ್ತೀರಾದರೂ ವರ್ಷಾಂತ್ಯದ ವೇಳೆಗೆ ಆರ್ಥಿಕ ಸ್ಥಿರತೆ ಬರಲಿದೆ.
ಸಿಂಹ
ಈ ವರ್ಷ ಸವಾಲಿನ ವರ್ಷವಾಗಿರಲಿದೆ. ಸೆಪ್ಟೆಂಬರ್ ವರೆಗೆ ಒಳ್ಳೆಯ ಸಮಯವಿದೆ. ಅದಾದ ಬಳಿಕ ಕೆಲವು ಸವಾಲುಗಳು ಎದುರಾಗಲಿವೆ. ಕೆಲವು ಸಮಸ್ಯೆಗಳು ಕಾಡಲಿವೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಬೇಕಾಗುತ್ತದೆ. ಮನೆಯಿಂದ ದೂರ ಹೋಗುವ ಸಮಯವೂ ಬರಬಹುದು. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಕುಟುಂಬದಲ್ಲಿಯೂ ಸಣ್ಣ-ಪುಟ್ಟ ಸಮಸ್ಯೆಗಳು ಬರಲಿವೆ. ತಾಳ್ಮೆಯೇ ನಿಮ್ಮ ಆಯುಧವಾಗಿರಲಿ. ಡಿಸೆಂಬರ್ ಬಳಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ನಿಮ್ಮ ಕೆಲಸದಿಂದ ಅಧಿಕಾರಿಗಳು, ಕುಟುಂಬದವರು ಖುಷಿಯಾಗಲಿದ್ದಾರೆ.
ಕನ್ಯಾ
ಈ ವರ್ಷ ಜೀವನದಲ್ಲಿ ಕೆಲವು ಬದಲಾವಣೆಗಳಾಗಲಿವೆ. ಕೆಲವು ಚಿಂತೆಗಳು ಕಾಡಲಿವೆ. ಪೋಷಕರಿಗೆ ಅನಾರೋಗ್ಯ ಎದುರಾಗಲಿದೆ. ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಯೋಚಿಸಿ, ಹಿರಿಯರ ಸಲಹೆ ಪಡೆಯಿರಿ. ದೇವರ ಆರಾಧನೆ ಬಿಡಬೇಡಿ. ಮುಂದಿನ ಮಾರ್ಚ್ ತಿಂಗಳಿಗೆ ಪರಿಸ್ಥಿತಿ ಸರಿಹೋಗುತ್ತದೆ. ಕುಟುಂಬದಲ್ಲಿ ಸಂತಸ ತುಂಬಲಿದೆ. ಮಂಗಳಕಾರ್ಯಗಳು ನಡೆಯಲಿವೆ. ಯಾರಿಗೂ ಸಾಲ ನೀಡಲು ಹೋಗಬೇಡಿ. ಯಾರಿಗೂ ಜಾಮೀನು ಹಾಕುವುದು ಸಹ ಬೇಡ. ಉದ್ಯೋಗ ಮಾಡುತ್ತಿರುವವರಿಗೆ ಸ್ಥಳ ಬದಲಾವಣೆ ಆಗಲಿದೆ.
ತುಲಾ
ಉದ್ಯೋಗ ಬದಲಾವಣೆಗೆ ಇದು ಸಕಾಲ. ವ್ಯಾಪಾರಸ್ಥರಿಗೆ ಈ ವರ್ಷ ತುಸು ತಾಳ್ಮೆ ಇರಬೇಕಾಗುತ್ತದೆ. ಹಣಕಾಸಿನ ವ್ಯವಹಾರ ಮಾಡುವಾಗ ಹೆಚ್ಚು ಎಚ್ಚರಿಕೆ ಇರಲಿ. ಸೆಪ್ಟೆಂಬರ್ ವರೆಗೆ ವೃತ್ತಿಯಲ್ಲಿ ಯಶಸ್ಸು ದೊರಕಲಿದೆ. ಆ ಬಳಿಕ ಕೆಲಸದಲ್ಲಿ ತುಸು ನಿರಾಸಕ್ತಿ ಇರಲಿದೆ. ಖರ್ಚು ವೆಚ್ಚಗಳು ಹೆಚ್ಚಾಗಬಹುದು, ಹಣಕಾಸಿನ ವಿಚಾರದಲ್ಲಿ ಈ ವರ್ಷ ನಿಯಂತ್ರಣವಿರಲಿ. ಆರೋಗ್ಯ ಉತ್ತಮ ಸ್ಥಿತಿಯಲ್ಲಿರಲಿದೆ. ಅವಿವಾಹಿತರಿಗೆ ವಿವಾಹ ಯೋಗವೂ ಇದೆ.
ವೃಶ್ಚಿಕ
ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ವಾಹನ ಖರೀದಿ, ಆಸ್ತಿ ಖರೀದಿ, ಮನೆ ಖರೀದಿ ಮಾಡುವ ಯೋಚನೆಯಲ್ಲಿರುವವರು ಮುಂದುವರೆಯಬಹುದು. ಪರಿಶ್ರಿಮಿ ವಿದ್ಯಾರ್ಥಿಗಳಿಗೆ ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನ್ಯಾಯಾಲಯದ ವಾದಗಳು ನಿಮ್ಮ ಪರವಾಗಲಿವೆ. ಪೂರ್ವಜರ ಆಸ್ತಿ ಮಾರಾಟದಿಂದ ಲಾಭವೂ ಆಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ವಿದ್ಯಾರ್ಥಿಗಳಿಗೂ ಸಹ ಉತ್ತಮ ಸಮಯ ಇದಾಗಲಿದ್ದು, ಶೈಕ್ಷಣಿಕ ಸಾಧನೆ ಮಾಡಲಿದ್ದಾರೆ.
ಧನು
ಉದ್ಯೋಗದಲ್ಲಿರುವವರಿಗೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಲಭಿಸಲಿದೆ. ಆರ್ಥಿಕ ಪರಿಸ್ಥಿತಿ ಅಲ್ಪ ಸುಧಾರಣೆ ಆಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಲಭಿಸಲಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ಮನೆ, ವಾಹನ ದುರಸ್ತಿ ಮಾಡಿಸುವಿರಿ, ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗಲಿದೆ. ಸಹೋದರ, ಸಹೋದರಿಯ ನೆರವು ನಿಮಗೆ ದೊರಕಲಿದೆ. ನವೆಂಬರ್ ತಿಂಗಳಲ್ಲಿ ವಿದೇಶ ಪ್ರಯಾಣ ಯೋಗವೂ ಇದೆ. ಸಮಾಜದಲ್ಲಿ ಗೌರವವನ್ನು ಸಹ ಪಡೆಯುವಿರಿ.
ಮಕರ
ವರ್ಷದ ಆರಂಭದಲ್ಲಿ ವಾಹನ ಚಲಾವಣೆ ಮಾಡುವಾಗ ಸಾಕಷ್ಟು ಜಾಗರೂಕರಾಗಿರಬೇಕಾಗುತ್ತದೆ. ವರ್ಷದ ಮಧ್ಯ ಭಾಗದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ಆಹಾರದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಹಣ ಗಳಿಸುವ ಹೊಸ ಮೂಲ ತೆರೆದುಕೊಳ್ಳಲಿದೆ. ಆದರೆ ಹಣಗಳಿಕೆಗೆ ಅಡ್ಡ ದಾರಿ ಹಿಡಿಯುವುದು ಬೇಡ. ವೈರಿಗಳೊಂದಿಗೆ, ಮುನಿಸು ಹೊಂದಿರುವ ಸಂಬಂಧಿಗಳೊಂದಿಗೆ ಸಂಬಂಧ ಸುಧಾರಣೆಯಾಗಲಿದೆ. ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿ ಇದರಿಂದ ಗೌರವ ಪ್ರಾಪ್ತಿಯಾಗಲಿದೆ.
ಕುಂಭ
ಹಳೆಯ ವಿವಾದಗಳೆಲ್ಲ ಕೊನೆಯಾಗಲಿವೆ. ತಂದೆ-ತಾಯಿಯ ಜೊತೆಗೆ ತೀರ್ಥಕ್ಷೇತ್ರ ದರ್ಶನ ಮಾಡಲಿದ್ದೀರಿ. ಸಹೋದರ-ಸಹೋದರಿಯರಿಗೆ ಸಹಾಯ ಮಾಡಲಿದ್ದೀರಿ. ಕುಟುಂಬದಲ್ಲಿ ಈ ವರ್ಷ ಸಂತಸದ ವಾತಾವರಣ ಇರಲಿದೆ. ಕೆಲಸದ ಸ್ಥಳದಲ್ಲಿ ಯಶಸ್ಸು ಸಿಗಲಿದೆ. ವೃತ್ತಿಯಲ್ಲಿ ಉನ್ನತ ಹುದ್ದೆಗಳು ಸಹ ಲಭಿಸಲಿವೆ. ಸಹೋದ್ಯೋಗಿಗಳಿಂದ, ಹಿರಿಯ ಅಧಿಕಾರಿಗಳಿಂದ ಬೆಂಬಲದ ಜೊತೆಗೆ ಅಭಿನಂದನೆಗಳು ಸಹ ಲಭ್ಯವಾಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿ, ಆದರೂ ಖರ್ಚುಗಳ ಮೇಲೆ ತುಸು ಹಿಡಿತವಿರಲಿ.
ಮೀನ
ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಮನೆಯಲ್ಲಿ ತುಸು ಕಿರಿ-ಕಿರಿ ಇರಲಿದೆ. ಕುಟುಂಬದಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಕೌಟುಂಬಿಕ ಕಾರಣದಿಂದ ಮಾನಸಿಕ ಒತ್ತಡಕ್ಕೂ ಒಳಗಾಗುವಿರಿ. ಆಗಸ್ಟ್ ತಿಂಗಳಲ್ಲಿ ಶುಭ ಸುದ್ದಿಯೊಂದು ಬರಲಿದೆ. ಕೆಲಸದಲ್ಲಿ ನೀವು ತೋರುವ ಚಾಕಚಕ್ಯತೆ, ಪರಿಶ್ರಮದಿಂದ ಹಿರಿಯ ಅಧಿಕಾರಿಗಳಿಂದ ಹೊಗಳಿಕೆ ಪ್ರಾಪ್ತವಾಗುವುದು. ವಿದ್ಯಾರ್ಥಿಗಳಿಗೆ ನವೆಂಬರ್ ತಿಂಗಳಲ್ಲಿ ಶುಭ ಸುದ್ದಿ ಬರಲಿದೆ. ಹೆಚ್ಚು ಸಾಲ ಮಾಡುವುದು ಬೇಡ. ಖರ್ಚು ಮಿತವಾಗಿರಲಿ. ಕೆಲಸದ ಮೇಲೆ ಶ್ರಧ್ಧೆ ಇರಲಿ.