Rahul Gandhi: ರಾಹುಲ್ ಗಾಂಧಿ ಹೊಲೆದ ಚಪ್ಪಲಿಗೆ 10 ಲಕ್ಷ ಆಫರ್, ಆದರೂ ಮಾರದ ಅಂಗಡಿಯವ

0
152
Rahul Gandhi

Rahul Gandhi

ರಾಹುಲ್ ಗಾಂಧಿ ಹೊಲೆದೊರುವ‌ ಚಪ್ಪಲಿಗೆ ಹತ್ತು ಲಕ್ಷ ರೂಪಾಯಿ ಬೆಲೆ ಕೊಡಲು ಕೆಲವರು ಮುಂದೆ ಬಂದಿದ್ದಾರೆ. ಹಾಗಿದ್ದರೂ ಸಹ ಆ ಬಡ ಚಮ್ಮಾರ ರಾಹುಲ್‌ಹೊಲೆದ ಚಪ್ಪಲಿಗಳನ್ನು ಮಾರುವ‌ ಮನಸ್ಸು ಮಾಡಿಲ್ಲ. ಆ ಚಪ್ಪಲಿಗಳನ್ನು ಶೋಕೇಷಿನಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ ಅಂಗಡಿ ಮಾಲೀಕ.

ಜುಲೈ 26 ಕ್ಕೆ ರಾಹುಲ್ ಗಾಂಧಿ ಉತ್ತರ ಪ್ರದೇಶದ‌ ಸುಲ್ತಾನಪುರಕ್ಕೆ ಭೇಟಿ ನೀಡಿದ್ದರು. ದಾರಿಯಲ್ಲಿ‌ ಹೋಗುವಾಗ ರಸ್ತೆ ಬದಿಯಲ್ಲಿದ್ದ ಒಂದು ಚಪ್ಪಲಿ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಅಂಗಡಿ ಮಾಲೀಕ ರಾಮ್ ಚೇತನ್ ಜೊತೆಗೆ ಮಾತನಾಡುತ್ತಾ ಕಾಲ‌ಕಳೆದಿದ್ದರು, ಅವರ ಕುಟುಂಬದ ಬಗ್ಗೆ, ವೃತ್ತಿಯ ಬಗ್ಗೆ ಮಾತನಾಡಿದ್ದರು. ರಾಮ್ ಚೇತನ್ ಇಂದ ಚಪ್ಪಲಿ ಮಾಡುವುದು ಹೇಗೆ ತೀಳಿದುಕೊಂಡು ಅಲ್ಲಿಯೇ ಒಂದು ಚಪ್ಪಲಿ ಸಹ ಹೊಲಿದರು.

ರಾಹುಲ್ ಗಾಂಧಿ ಬಂದು ಹೋದಮೇಲೆ ರಾಮ್ ಚೇತನ್ ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ. ಹಲವಾರು ಜನ ರಾಮ್ ಚೇತನ್ ಅಂಗಡಿಗೆ ಬಂದು ಫೋಟೊ ತೆಗೆಸಿಕೊಂಡು ಹೋಗುತ್ತಿದ್ದಾರೆ. ರಾಮ್ ಚೇತನ್ ಚಪ್ಪಲಿ ವ್ಯಾಪಾರವೂ ದುಪ್ಪಟ್ಟಾಗಿದೆ. ರಾಮ್ ಚೇತನ್ ಅಂಗಡಿಗೆ ಭೇಟಿ ಕೊಟ್ಟಾಗ ರಾಹುಲ್‌ ಗಾಂಧಿ ಹೊಲೆದಿದ್ದ ಚಪ್ಪಲಿಯನ್ನು ಕೊಂಡು ಕೊಳ್ಳಲು ಹಲವರು ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ಚಪ್ಪಲಿಯನ್ನು‌ ಹತ್ತು ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಲು ಹಲವರು ಮುಂದೆ ಬಂದಿದ್ದಾರಂತೆ ಆ ಚಪ್ಪಲಿಗಳನ್ನು ರಾಮ್ ಚೇತನ್ ಮಾರಿಲ್ಲ.

Bengaluru: ಮಾವಿನ ಹಣ್ಣು ರಪ್ತಿನಲ್ಲಿ ದಾಖಲೆ ಬರೆದ ಕೆಂಪೇಗೌಡ ವಿಮಾನ ನಿಲ್ದಾಣ

‘ಅದು ನನ್ನ ಪಾಲಿಗೆ ಅದೃಷ್ಟದ ಚಪ್ಪಲಿಗಳು ಯಾವುದೇ ಕಾರಣಕ್ಕೂ ನಾನು ಆ ಚಪ್ಪಲಿಗಳನ್ನು ಮಾರಾಟ ಮಾಡುವುದಿಲ್ಲ. ಅವುಗಳನ್ನು ಶೋಕೇಷಿನಲ್ಲಿ ಇಡುತ್ತೇನೆ. ಆದರೆ ಎಷ್ಟರ‌ಹಣ ಕೊಟ್ಟರೂ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ ರಾಮ್ ಚೇತನ್. ‘ನನ್ನ ಅಂಗಡಿಯಲ್ಲಿ ಕೂತು ಚಪ್ಪಲಿ ಹೊಲೆಯುವ‌ ಮೂಲಕ ರಾಹುಲ್‌ ಗಾಂಧಿ ನನ್ನ ಪಾಲುದಾರರಾಗಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ’ ಎಂದಿದ್ದಾರೆ ರಾಮ್ ಚೇತನ್.

LEAVE A REPLY

Please enter your comment!
Please enter your name here