Site icon Samastha News

Varthur Santhosh: ಮಧ್ಯಮ ವರ್ಗದ ಕನಸು ನನಸು ಮಾಡುತ್ತಿರುವ ಮಾರುತಿ: ವರ್ತೂರು ಸಂತೋಶ್

Varthur Santhosh

Varthur Santhosh

‘ಕಾರು ಎನ್ನುವುದು ಕೇವಲ ಶ್ರೀಮಂತರಿಗಷ್ಟೆ ಮೀಸಲಾಗಿತ್ತು. ಬಡವರು ಕಾರು ಕೊಳ್ಳುವ ಕನಸು ಸಹ ಕಾಣಲಾಗುತ್ತಿರಲಿಲ್ಲ, ಅದನ್ನು ಬದಲಿಸಿದ್ದು ಮಾರುತಿ ಸಂಸ್ಥೆ. ಕಾರು, ಮಧ್ಯಮ ಮಾತ್ರವೇ ಅಲ್ಲದೆ ಬಡ ಮಧ್ಯಮ ವರ್ಗಕ್ಕೂ ಸಿಗುವಂತೆ ಮಾಡಿ, ಅವರ ಕನಸು ನನಸು ಮಾಡಿದ ಭಾರತದ ಹೆಮ್ಮೆಯ ಸಂಸ್ಥೆ ಮಾರುತಿ’ ಎಂದು ಮಾಜಿ ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಬಿಮಲ್ ಮಾರುತಿ ಅರೆನಾ ಶೋರೂಂನಲ್ಲಿ ಸ್ವಿಫ್ಟ್​ ಕಾರಿನ ಹೊಸ ಮಾದರಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ತಾವು ಸಹ ಈ ಬಿಮಲ್ ಮಾರುತಿ ಸಂಸ್ಥೆಯ ಸಂತೃಪ್ತ ಗ್ರಾಹಕ ಎಂದ ವರ್ತೂರು ಸಂತೋಷ್, ‘ಮಾರುತಿ ಸಂಸ್ಥೆ ದಶಕಗಳಿಂದಲೂ ಭಾರತದ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸೇವೆ ನೀಡುತ್ತಾ ಬಂದಿದೆ. ಸುಲಭದ ದರಕ್ಕೆ ಗುಣಮಟ್ಟದ ಕಾರುಗಳನ್ನು ಒದಗಿಸುವ ಕಾರ್ಯವನ್ನು ಹಲವು ವರ್ಷಗಳಿಂದಲೂ ಮಾಡುತ್ತಲೇ ಬಂದಿದೆ. ಈಗ ಬಿಡುಗಡೆ ಮಾಡಲಾಗಿರುವ ಹೊಸ ಸ್ವಿಫ್ಟ್ ಕಾರು ಈ ಹಿಂದಿನ ಸ್ವಿಫ್ಟ್ ಕಾರಿಗಿಂತಲೂ ನೋಡಲು ಉತ್ತಮವಾಗಿರುವ ಜೊತೆಗೆ ಸಾಕಷ್ಟು ಆಂತರಿಕ ಸುರಕ್ಷತೆ ಆಯ್ಕೆಗಳನ್ನು ಒಳಗೊಂಡಿದೆ’ ಎಂದು ತಮ್ಮದೇ ವಿಧಾನದಲ್ಲಿ ಹೇಳಿದರು.

ಮಾರುತಿ ಸಂಸ್ಥೆಯು ಹೊಸ ಮಾದರಿಯ ಸ್ವಿಫ್ಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಸ್ವಿಫ್ಟ್ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಸ ಸ್ವಿಫ್ಟ್​ಗೆ ಹೊಸ ಡಿಸೈನ್ ಅನ್ನು ನೀಡಲಾಗಿದೆ. ಇನ್ನಷ್ಟು ರಿಫೈನ್ ಆಗಿರುವ ಎಂಜಿನ್ ನೀಡಲಾಗಿದೆ. ಎಲ್ಲ ವೇರಿಯೆಂಟ್​ಗಳಲ್ಲಿಯೂ ಆರು ಏರ್​ಬ್ಯಾಗ್ ನೀಡಿ ಭದ್ರತೆಗೆ ಹೆಚ್ಚಿನ ಆದ್ಯತೆ ಒದಗಿಸಲಾಗಿದೆ. ಇದರ ಜೊತೆಗೆ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಇನ್ನಿತರೆ ಹೆಚ್ಚುವರಿ ಸುರಕ್ಷತಾ ಆಯ್ಕೆಗಳನ್ನು ನೀಡಲಾಗಿದೆ. ಹೊಸ ಸ್ವಿಫ್ಟ್​ನ ಬುಕಿಂಗ್ ಈಗಾಗಲೇ ಆರಂಭವಾಗಿದೆ.

ವಿಜಯಪುರದ ಬಿಮಲ್ ಮಾರುತಿ ಅರೆನಾ ಶೋರೂಂನಲ್ಲಿ ಇಂದು ಹೊಸ ಮಾರುತಿ ಸ್ವಿಫ್ಟ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ವರ್ತೂರು ಸಂತೋಷ್ ಅವರನ್ನು ದೇವನಹಳ್ಳಿ ಕ್ಲಸ್ಟರ್​ನ ಬಿಮಲ್ ಮಾರುತಿ ಅರೆನಾ ಪ್ರಧಾನ ವ್ಯವಸ್ಥಾಪಕ ಅಜಯ್ ಗೌಡ, ವಿಜಯಪುರ ಬಿಮಲ್ ಮಾರುತಿ ಅರೆನಾ ಸೇಲ್ಸ್ ಮ್ಯಾನೇಜರ್ ಶ್ರೀಕಾಂತ್, ಮೋಹನ್ ಶ್ರೀವತ್ಸ, ರಕ್ಷಿತ್ ಇನ್ನೂ ಹಲವು ಸಿಬ್ಬಂದಿ ಸೇರಿ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಯೂತ್ ಪ್ರೋಗ್ರಾಂನ ಪ್ರಶಾಂತ್ ಸಹ ಹಾಜರಿದ್ದರು.

Exit mobile version