Site icon Samastha News

Vegetable: ಎಚ್ಚರ! ಮಾರುಕಟ್ಟೆಗೆ ಬಂದಿವೆ ನಕಲಿ‌ ಬೆಳ್ಳುಳ್ಳಿ

Vegetable

Vegetable

ತಿನ್ನುವ ಆಹಾರ ವಿಷವಾಗಿರುವ ಈ ಕಾಲದಲ್ಲಿ ಕೆಲವು ಪುಂಡರು ಆಹಾರ ಪದಾರ್ಥಗಳನ್ನು‌ ನಕಲಿ ಮಾಡಿ ಮಾರುಕಟ್ಟೆಗೆ ಹರಿಬಿಡುತ್ತಿದ್ದಾರೆ. ಈ ಹಿಂದೆ ನಕಲಿ ಅಕ್ಕಿ, ನಕಲಿ ಓಆರ್ ಎಸ್, ನಕಲಿ ಪನ್ನೀರ್ ಗಳನ್ನು ಕೆಲವು ದುರುಳರು ಮಾರುಕಟ್ಟೆಗೆ ಬಿಟ್ಟಿದ್ದರು. ಈಗ ನಕಲಿ ಬೆಳ್ಳುಳ್ಳಿಯನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಈ ನಕಲಿ ಬೆಳ್ಳುಳ್ಳಿ ನೋಡಲು ಥೇಟ್ ಅಸಲಿ ಬೆಳ್ಳುಳ್ಳಿಯಂತೆಯೇ ಇದೆ.

ಪ್ರಸ್ತುತ ಈ ನಕಲಿ ಬೆಳ್ಳುಳ್ಳಿಯ ಹಾವಳಿ ಮಹಾರಾಷ್ಟ್ರದಲ್ಲಿ ಬಲು ಜೋರಾಗಿದೆ. ಮಹಾರಾಷ್ಟ್ರದ ಅಕೋಲ ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ನಕಲಿ‌ ಬೆಳ್ಳುಳ್ಳಿಗಳು‌ಕಂಡು ಬಂದಿವೆ. ಏನಿಲ್ಲ, ಸಿಮೆಂಟ್ ನಿಂದ ಈ‌ ನಕಲಿ ಬೆಳ್ಳುಳ್ಳಿಗಳನ್ನು ಮಾಡಲಾಗಿದ್ದು, ಹೊರಗಡೆ ಬಿಳಿ ಬಣ್ಣ ಹೊಡೆದು ಥೇಟ್ ಬೆಳ್ಳುಳ್ಳಿಯಂತೆ ಕಾಣುವಂತೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಕೆಲವು ಕಡೆಗಳಲ್ಲಿ ಈ ಸಿಮೆಂಟ್ ಬೆಳ್ಳುಳ್ಳಿಯನ್ನು ಮಾರಾಟ ಮಾಡಲಾಗಿದೆ.

ನಿಜವಾದ ಬೆಳ್ಳುಳ್ಳಿ ಜೊತೆಗೆ ನಕಲಿ ಬೆಳ್ಳುಳ್ಳಿಯನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ನಿಜವಾದ ಬೆಳ್ಳುಳ್ಳಿಗಿಂತಲೂ ಮೂರು ಪಟ್ಟು ತೂಕ ಈ ಸಿಮೆಂಟ್ ಬೆಳ್ಳುಳ್ಳಿ ಬರುವಂತಿದ್ದು, ಅರ್ಧ ಕೆಜಿ ಬೆಳ್ಳಿ ಕೊಂಡರೆ ಅದಕ್ಕೆ ಮೂರು-ನಾಲ್ಕು ನಕಲಿ ಬೆಳ್ಳುಳ್ಳಿ ಹಾಕಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ. ಮನೆಗೆ ತಂದು ಅಡುಗೆ ಮಾಡಲು ಮುಂದಾದಾಗಲಷ್ಟೆ ಗ್ರಾಹಕರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತಿದೆ.

Lorry Driver: ತಿಂಗಳಿಗೆ ಹತ್ತು ಲಕ್ಷ ಗಳಿಸುತ್ತಾರೆ ಈ ಲಾರಿ ಡ್ರೈವರ್

ಬೆಳ್ಳುಳ್ಳಿ ಬೆಲೆ ಬಲು ದುಬಾರಿ ಆಗಿದ್ದು, ಕೆಜಿಗೆ 300 ರಿಂದ 350 ರೂಪಾಯಿಗೆ ಕೆಲ ರಾಜ್ಯಗಳಲ್ಲಿ ಮಾರಾಟ ಆಗುತ್ತಿದೆ‌ ಹಣ ಉಳಿಸಲೆಂದು ಕೆಲ ಸಣ್ಣ-ಪುಟ್ಟ ವ್ಯಸಪಾರಿಗಳು ಹೀಗೆ ಸಿಮೆಂಟ್ ನಿಂದ ಮಾಡಿದ ಬೆಳ್ಳುಳ್ಳಿಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದಾರೆ. ನಕಲಿ ಬೆಳ್ಳುಳ್ಳಿ ಕೊಂಡ ಗ್ರಾಹಕರು ಪರೀಕ್ಷಿಸದೆ ಅದನ್ನು ಅಡುಗೆಗೆ ಹಾಕಿದರೆ ಕತೆ ಮುಗಿದಂತೆಯೇ.

Exit mobile version