Vijayalakshmi Darshan
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರುತ್ತಿದ್ದಂತೆ ಕೆಲವರು ಅವರ ತೇಜೋವಧೆಗೆ ಇಳಿದಂತೆ ಒಂದರ ಹಿಂದೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವು ಟಿವಿ ಮಾಧ್ಯಮಗಳಲ್ಲಿ ದರ್ಶನ್ ವಿರುದ್ಧ ಅಸಾಂವಿಧಾನಿಕ ಪದಗಳ ಬಳಕೆಯೂ ಆಗಿದೆ. ದರ್ಶನ್ ಅಭಿಮಾನಿಗಳ ಮೇಲೂ ಸಹ ನಿಂದನಾಸ್ತ್ರ ಬಳಸಲಾಗಿದೆ. ಅತಿರೇಕದ ವರ್ತನೆ ತೋರಿದ ಕೆಲ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿದ್ದಾರೆ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅಭಿಮಾನಿಗಳನ್ನುದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
Instagram, ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯಲಕ್ಷ್ಮಿ ದರ್ಶನ್, ‘ನನ್ನ ಪ್ರೀತಿಯ ಸಹೋದರರೆ, ದರ್ಶನ್ ಅವರಿಗೆ ತಮ್ಮ ಅಭಿಮಾಗಳೆಂದರೆ ಅಪಾರ ಪ್ರೀತಿ, ನೀವು ಅವರನ್ನು ಪ್ರೀತಿಸುವಷ್ಟೆ ಅವರು ತಮ್ಮ ‘ಸೆಲೆಬ್ರಿಟಿಗಳನ್ನು’ ತಮ್ಮ ಹೃದಯದಲ್ಲಿ ಹೊತ್ತಿರುವುದು ನಿಮಗೆ ಗೊತ್ತೆ ಇದೆ. ನನಗೆ, ನಿಮಗೆ, ನಮ್ಮೆಲ್ಲರಿಗೂ ಇದೊಂದು ಪರೀಕ್ಷೆಯ ಸಮಯ. ನಾವು ತಾಳ್ಮೆ ಕಳೆದುಕೊಂಡು ಮಾತನಾಡಿದರೆ ಹಾನಿಯಾಗುವುದು ನಮಗೇ’ ಎಂದಿದ್ದಾರೆ ವಿಜಯಲಕ್ಷ್ಮಿ.
https://samasthanews.com/renuka-swamy-case-accused-raghus-wife-blame-darshan-for-her-bad-situation/
‘ಆದ್ದರಿಂದ ಶಾಂತಿಯಿಂದ ಇರೋಣ, ನಿಮ್ಮ ಆತಂಕವನ್ನು ನಾನು ದರ್ಶನ್ ಅವರಿಗೆ ತಲುಪಿಸಿದ್ದೇನೆ. ಅವರೂ ಸಹ ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ, ನ್ಯಾಯ ಸಿಗುವ ಭರವಸೆ ನನಗೆ ಇದೆ. ಇಂಥಹ ಕಷ್ಟದ ಸಮಯದಲ್ಲಿ ದರ್ಶನ್ ರ ಅನುಪಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಕೇಡು ಬಯಸುವ, ಕೇಡು ಮಾಡಲು ಯತ್ನಿಸುತ್ತಿರುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮರಳಿ ಬರಲಿದೆ’ ಎಂದಿದ್ದಾರೆ.
ಪ್ರಕರಣದಲ್ಲಿ ದರ್ಶನ್ ನ್ಯಾಯಾಂಗ ಬಂಧನಕ್ಕೆ ಒಳಗಾದ ಬಳಿಕ ವಿಜಯಲಕ್ಷ್ಮಿ ಅವರು ಹೊರಗಿನಿಂದ ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ಪತಿಗಾಗಿ ವಾದಿಸಲು ರಾಜ್ಯದ ಅತ್ಯುತ್ತಮ ವಕೀಲ ನಾಗೇಶ್ ಅವರನ್ನು ಒಪ್ಪಿಸಿದ್ದಾರೆ. ಈ ಹಿಂದೆ ದರ್ಶನ್ ವಿಜಯಲಕ್ಷ್ಮಿ ಮೇಲೆ ಭೀಕರ ಹಲ್ಲೆ ನಡೆಸಿದ್ದರು, ಆಗ ಪತಿ ವಿರುದ್ಧ ನೀಡಿದ್ದ ದೂರು ಹಿಂಪಡೆದು ದರ್ಶನ್ ಜೈಲಿನಿಂದ ಬೇಗ ಹೊರಬರುವಂತೆ ಮಾಡಿದ್ದರು, ಬಳಿಕ ಮತ್ತೊಮ್ಮೆ ದರ್ಶನ್, ವಿಜಯಲಕ್ಷ್ಮಿ ಅವರಿಗೆ ಬೆದರಿಕೆ ಹಾಕಿದ್ದಾಗಲೂ ಮೌನವಾಗಿ ಸಹಿಸಿದ್ದರು, ಈಗ ಮತ್ತೊಮ್ಮೆ ಪತಿಯ ಬೆಂಬಲಕ್ಕೆ ವಿಜಯಲಕ್ಷ್ಮಿ ನಿಂತಿದ್ದಾರೆ.