Site icon Samastha News

Vodafone: ಹೋರಾಟ ಮುಂದುವರೆಸಿದ ವೋಡಾಫೋನ್, ದೊಡ್ಡ ಡೀಲ್​ಗೆ ಸಹಿ

Vodafone 5G

Vodafone

ನೆನಪು ಮಾಡಿಕೊಳ್ಳಿ, ಕೆಲ ವರ್ಷಗಳ ಹಿಂದೆ ಭಾರತದ ನೆಟ್​ವರ್ಕ್​ ಕ್ಷೇತ್ರದಲ್ಲಿ ಅದೆಷ್ಟು ಕಂಪೆನಿಗಳಿದ್ದವು. ಏರ್​ಟೆಲ್, ಏರ್​ಸೆಲ್, ಎಂಟಿಎನ್​ಎಲ್, ಬಿಎಸ್​ಎನ್​ಎಲ್, ವೊಡಾಫೋನ್, ಟಾಟಾ ಡೊಕೊಮೊ, ರಿಲಯನ್ಸ್, ಐಡಿಯಾ ಹೀಗೆ ಹೆಸರು ಹೇಳುತ್ತಾ ಹೋಗಬಹುದಾಗಿತ್ತು. ಆದರೆ ಈಗ ಉಳಿದಿರುವುದು ಎರಡೇ ಸಂಸ್ಥೆಗಳು ಒಂದು ಏರ್ಟೆಲ್ ಇನ್ನೊಂದು ಜಿಯೋ. ಆದರೆ ವೊಡಾಫೋನ್ ಸಹ ಭಾರತದಲ್ಲಿ ಇನ್ನೂ ಇದೆ. ಆದರೆ ಕಳೆದ ಕೆಲ ವರ್ಷಗಳಿಂದಲೂ ಅರೆಜೀವದಲ್ಲಿದೆ, ಬಹಳ ಕಷ್ಟಪಟ್ಟು ಉಸಿರಾಡುತ್ತಿದೆ. ವೊಡಾಫೋನ್ ಅನ್ನು ಪೂರ್ಣವಾಗಿ ಮುಗಿಸಿಬಿಡಲು ಏರ್ಟೆಲ್, ಜಿಯೋ ಎರಡೂ ಪ್ರಯತ್ನ ಪಡುತ್ತಿವೆಯಾದರೂ ಸಾಧ್ಯವಾಗುತ್ತಿಲ್ಲ. ಇದೀಗ ವೊಡಾಫೋನ್ ದೊಡ್ಡ ಡೀಲ್ ಒಂದಕ್ಕೆ ಸಹಿ ಹಾಕಿದ್ದು, ಮತ್ತೆ ಉಳಿವಿಗಾಗಿ ಹೋರಾಟ ಮುಂದುವರೆಸಿದೆ.

ಸರ್ಕಾರಕ್ಕೆ ಭಾರಿ ಮೊತ್ತದ ದಂಡ ತೆತ್ತು, ಇತರೆ ನೆಟ್​ವರ್ಕ್​ ಸಂಸ್ಥೆಗಳಿಗೂ ಭಾರಿ ಮೊತ್ತದ ಹಣ ಪಾವತಿ ಮಾಡಿ, ಭಾರಿ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರನ್ನು ಕಳೆದುಕೊಂಡ ಬಳಿಕ ವೊಡಾಫೋನ್ ಭಾರತದಲ್ಲಿ ಅಸ್ಥಂಗತವಾಯ್ತು ಎಂದೇ ಎಲ್ಲರೂ ಭಾವಿಸಿದ್ದರು. ಷೇರು ಮಾರುಕಟ್ಟೆಯಲ್ಲಿ ಸಹ ವೊಡಾಫೋನ್​ನ ಷೇರು ದರ ಕೇವಲ 3 ರೂಪಾಯಿಗೆ ಕುಸಿದಿತ್ತು. ಆದರೆ ಇದೀಗ ಮತ್ತೆ ಎದ್ದು ನಿಲ್ಲುವ ಸೂಚನೆ ನೀಡಿರುವ ವೊಡಾಫೋನ್, ಕೆಲ ದೊಡ್ಡ ಸಂಸ್ಥೆಗಳೊಟ್ಟಿಗೆ ಭಾರಿ ದೊಡ್ಡ ಡೀಲ್​ಗೆ ಸಹಿ ಹಾಕಿದೆ.

ಒಂದು ಕಾಲದಲ್ಲಿ ಅತ್ಯುತ್ತಮ ಮೊಬೈಲ್​ಗಳನ್ನು ಉತ್ಪಾದಿಸಿ ಟಾಪ್​ನಲ್ಲಿ ಆದರೆ ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಇದ್ದೂ ಇಲ್ಲದಂತಾಗಿರುವ ನೋಕಿಯಾ ಹಾಗೂ ಎರಿಕ್ಸನ್ ಸಂಸ್ಥೆಯೊಂದಿಗೆ ವೊಡಾಫೋನ್ ದೊಡ್ಡ ಡೀಲ್ ಒಂದನ್ನು ಮಾಡಿಕೊಂಡಿದೆ. ನೋಕಿಯಾ, ಎರಿಕ್ಸನ್ ಜೊತೆಗೆ ಸ್ಯಾಮ್​ಸಂಗ್ ಜೊತೆಗೂ ಸಹ ವೊಡಾಫೋನ್ಕೈ ಜೋಡಿಸಿದ್ದು, 4ಜಿ, 5ಜಿ ನೆಟ್​ವರ್ಕ್​ ಮತ್ತು ನೆಟ್​ವರ್ಕ್ ಆಧಾರಿತ ಸೇವೆಗಳನ್ನು, ವಸ್ತುಗಳನ್ನು ಮಾರಾಟ ಮಾಡುವ ಒಪ್ಪಂದ ಇದಾಗಿದೆ.

Spin Mop: ಮನೆ ಒರೆಸುವ ಕೆಲಸಕ್ಕೆ ಹಾಕಿ ಬ್ರೇಕ್, ಬಂದಿದೆ ಆಟೊಮ್ಯಾಟಿಕ್ ಮಾಪ್, ಬೆಲೆಯೂ ಕಡಿಮೆ

30 ಸಾವಿರ ಕೋಟಿಯ ದೊಡ್ಡ ಡೀಲ್ ಇದಾಗಿದೆ. ಮೂರು ವರ್ಷದ 55 ಸಾವಿರ ಕೋಟಿ ಡೀಲ್​ನ ಮೊದಲ ಭಾಗ ಇದಾಗಿದ್ದು, ಮುಂದಿನ ಮೂರು ವರ್ಷಗಳ ಕಾಲ ನೆಟ್​ವರ್ಕಿಂಗ್​ ಎಕ್ಯುಪ್​ಮೆಂಟ್​ಗಳನ್ನು ವೋಡಾಫೋನ್ ನೀಡಲಿದೆ. ಗ್ರಾಹಕರ ಬಳಕೆ ಅನುಭವವನ್ನು ಉತ್ಕೃಷ್ಟಗೊಳಿಸಲು ಈ ಒಪ್ಪಂದ ಸಹಾಯ ಮಾಡಲಿದೆ. ಇದರ ಜೊತೆಗೆ ವೋಡಾಫೋನ್ ದೇಶದಾದ್ಯಂತ ತನ್ನ ನೆಟ್​ವರ್ಕ್ ಹೆಚ್ಚಳಕ್ಕೂ ಇದು ಸಹಾಯ ಮಾಡಲಿದೆ.

Exit mobile version