ತೆಂಗಿನ ಎಣ್ಣೆ ಬಳಕೆಯಿಂದ ಆರೋಗ್ಯದ ಮೇಲೆ ಆಗುವ 9 ಉಪಯೋಗಗಳು
ತೆಂಗಿನ ಎಣ್ಣೆ ಬಳಕೆಯಿಂದ ಕೂದಲು ಮಿರ ಮಿರನೆ ಮುಂಚುತ್ತದೆ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ
ತೆಂಗಿನ ಎಣ್ಣೆಯುಕ್ತ ಅಡುಗೆ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶದ ಏರಿಕೆ ನಿಧಾನವಾಗುತ್ತದೆ.
ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸುವುದು ಒಳ್ಳೆಯದು. ಇತರೆ ಎಣ್ಣೆಗಳಿಗಿಂತಲೂ ತೆಂಗಿನ ಎಣ್ಣೆ ಅಡುಗೆಗೆ ಬಳಸಿದರೆ ಉತ್ತಮ.
ಕೆಂಡವಾದ ಕಲಬುರಗಿ; ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ತಾಪಮಾನ
ತೆಂಗಿನ ಎಣ್ಣೆ ಹಚ್ಚುವುದರಿಂದ ಒಡೆದ ಕೂದಲು ರಿಪೇರಿಯಾಗುತ್ತದೆ. ತಲೆಹೊಟ್ಟು ನಿವಾರಣೆಯೂ ಆಗುತ್ತದೆ.
ತೆಂಗಿನ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ, ಅಲ್ಲದೆ ಒಣ ಚರ್ಮ ಸಮಸ್ಯೆ ಇಲ್ಲದಾಗುತ್ತದೆ.
ತೆಂಗಿನ ಎಣ್ಣೆಯುಕ್ತ ಆಹಾರ ಸೇವನೆಯಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ, ದಿನವೆಲ್ಲ ಉಲ್ಲಾಸಭರಿತವಾಗಿರಬಹುದು.
ತೆಂಗಿನ ಎಣ್ಣೆಯುಕ್ತ ಆಹಾರ ಸೇವನೆಯಿಂದ ಪಚನ ಕ್ರಿಯೆ ಸುಲಭವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆ ಆಗುತ್ತದೆ.
ತೆಂಗಿನ ಎಣ್ಣೆಯ ನಿಯಮಿತ ಸೇವನೆಯಿಂದ ಶರೀರದಲ್ಲಿನ ಮೂಳೆಗಳು ಗಟ್ಟಿಯಾಗುತ್ತವೆ. ಮಾಂಸಖಂಡಗಳು ಬಲಗೊಳ್ಳುತ್ತವೆ.