ನೇರಳೆ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.
ಆಯುರ್ವೇದದಲ್ಲಿ ನೇರಳೆ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಸಾಕಷ್ಟು ವಿಷಯಗಳ ಉಲ್ಲೇಖವಿದೆ.
ನೇರಳೆ ಹಣ್ಣು ಸೇವನೆಯಿಂದ ಮಧು ಮೇಹ ಅಥವಾ ಶುಗರ್ ನಿಯಂತ್ರಣದಲ್ಲಿರುತ್ತದೆ. ಈ ಹಣ್ಣು ಸೇವನೆಯಿಂದ ಶುಗರ್ ಆಗದು.
ನೇರಳೆ ಹಣ್ಣಿನ ಬೀಜ ಬೇರ್ಪಡಿಸಿ ಒಣಗಿಸಿ ಪುಡಿ ಮಾಡಿ ಅದನ್ನು ಡಯಾಬಿಟೀಸ್ ಚಿಕಿತ್ಸೆಗೆ ಬಳಸಲಾಗುತ್ತದೆ.
ನೇರಳೆ ಹಣ್ಣು ದೇಹದಲ್ಲಿ ಆಂಟಿಆಕ್ಸಿಡೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಪ್ರತಿದಿನ ತುಸು ನೇರಳೆ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಗಟ್ ಹೆಲ್ತ್ ಅಥವಾ ಅನ್ನನಾಳದ ಆರೋಗ್ಯದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ಆಗುತ್ತಿದೆ. ನಿಯಮಿತವಾಗಿ ನೇರಳೆ ಹಣ್ಣು ಸೇವನೆಯಿಂದ ಗಟ್ ಹೆಲ್ತ್ ಚೆನ್ನಾಗಿರುತ್ತದೆ.
ರಕ್ತದ ಹಿಮೋಗ್ಲೋಬಿನ್ ಅಂಶವನ್ನು ನೇರಳೆ ಹಣ್ಣು ಹೆಚ್ಚು ಮಾಡುತ್ತದೆ. ಹಿಮಕೊಗ್ಲೋಬಿನ್ ದೇಹಕ್ಕೆ ಅತ್ಯಗತ್ಯ, ಇದರ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳಾಗುತ್ತವೆ.
ನೇರಳೆ ಹಣ್ಣಿನ ನಿಯಮಿತ ಸೇವನೆಯಿಂದ ದೇಹದ ಅನವಶ್ಯಕ ಕೊಬ್ಬು ಕರಗಿ ದೇಹವು ಸಪೂರವಾಗುತ್ತದೆ. ಡಯಟ್ ನಲ್ಲಿರುವವರಿಗೆ ಇದು ಉತ್ತಮ ಆಹಾರ
ನೇರಳೆ ಹಣ್ಣು ಸೇವನೆ ಹಲ್ಲುಗಳನ್ನು ಹಾಗೂ ಒಸಡುಗಳನ್ನು ಬಲಗೊಳಿಸುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಷಿಯಂ ಅಂಶವೂ ಇದೆ.
ನೇರಳೆ ಹಣ್ಣಿನ ಸೇವನೆಯು ಉಸಿರಾಟದ ಕ್ರಮವನ್ನು ಉತ್ತಮ ಪಡಿಸುತ್ತದೆ. ಶ್ವಾಸಕೋಶದ ಸಮಸ್ಯೆಗಳನ್ನು ಪರಿಹರಿಸುತ್ತದೆ.