ಈ ರೋಗ ಲಕ್ಷಣಗಳು ಕಂಡು ಬಂದರೆ ನಿಮಗೆ ವಿಟಮಿನ್ ಡಿ ಕೊರತೆ ಇದೆ ಎಂದರ್ಥ
ವಿಟಮಿನ್ ಡಿ ಕೊರತೆ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಸುಲಭವಾಗಿ ಈ ಸಮಸ್ಯೆಯಿಂದ ಪಾರಾಗಬಹುದು ಆದರೆ ಮಾಹಿತಿ ಇರಬೇಕು.
ವ್ಯಕ್ತಿಯೊಬ್ಬರಿಗೆ ವಿಟಮಿನ್ ಡಿ ಸಮಸ್ಯೆ ಇದೆಯೆಂಬುದು ತಿಳಿದುಕೊಳ್ಳುವುದು ಬಲು ಮುಖ್ಯ, ವಿಟಮಿನ್ ಡಿ ಕೊರತೆಯ ಲಕ್ಷಣಗಳಿವು.
ಅತಿಯಾದ ಸುಸ್ತು, ಬೆಳಿಗ್ಗೆ ತುಸು ಉತ್ಸಾಹದಿಂದಿರುವ ವ್ಯಕ್ತಿ ಬರಬರುತ್ತಾ ಸುಸ್ತಿನ ಅನುಭವ ಹೆಚ್ಚಾಗುತ್ತದೆ. ಸಂಜೆ ವೇಳೆಗೆ ಬಹಳ ಸುಸ್ತಾಗಿರುತ್ತಾನೆ.
ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ ಬೆಳಿಗ್ಗೆ ಎದ್ದಾಗ ಕೆಳ ಬೆನ್ನು ನೋವುತ್ತಿರುತ್ತದೆ, ಸಂಜೆ ವೇಳೆಗೆ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ.
ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ವಿಶೇಷವಾಗಿ ಮಣಿಕಟ್ಟು, ಮೊಣಕಾಲು ಇಂಥಹಾ ಎರಡು ಮೂಳೆಗಳು ಸಂಧಿಸುವ ಜಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಬಹಳ ಬೇಗ ಮೂಡ್ ಬದಲಾಗುತ್ತಿರುತ್ತದೆ. ಅದರಲ್ಲೂ ಒಂದು ರೀತಿ ಖಿನ್ನತೆಯ ಭಾವ ಆವರಿಸುತ್ತದೆ. ಹೆಚ್ಚು ಮೌನವಾಗಿಯೇ ಉಳಿಯುತ್ತೀರಿ.
ಕೆಟ್ಟ ಆಲೋಚನೆಗಳು ತಲೆಯಲ್ಲಿ ಹೆಚ್ಚು ಬರಲು ಪ್ರಾರಂಭಿಸುತ್ತವೆ, ಕೆಲಸ ಮಾಡುವ ಬದಲಿಗೆ ಕೆಲಸದ ಬಗ್ಗೆ ಯೋಚನೆಯೇ ಹೆಚ್ಚಾಗುತ್ತದೆ
ವಿಟಮಿನ್ ಡಿ ಕೊರತೆಯಿಂದ ತಲೆ ನೋವು ಸಹ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಅಸಾಧ್ಯ ನೋವಲ್ಲದಿದ್ದರೂ ಆಗೊಮ್ಮೆ ಈಗೊಮ್ಮೆ ನೋವು ಇರುತ್ತದೆ.
ಬಹಳ ಬೇಗ ದಣಿವಾಗುತ್ತದೆ, ನಿಲ್ಲುವುದು, ಓಡಾಡುವುದಕ್ಕಿಂತಲೂ ಕೂರುವುದು ಅಥವಾ ಮಲಗುವುದಕ್ಕೆ ದೇಹ ಹವಣಿಸುತ್ತದೆ