ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಕೀಪರ್
ಈ ಪಂದ್ಯದಲ್ಲಿ ಪೃಥ್ವಿ ಶಾ ಕ್ಯಾಚ್ ಹಿಡಿದ ಧೋನಿ, ಟಿ20 ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ 300ನೇ ವಿಕೆಟ್ ಪಡೆದ (ಕ್ಯಾಚ್ + ಸ್ಟಂಪ್) ವಿಶ್ವದ ಮೊದಲ ಕೀಪರ್ ಎನಿಸಿದ್ದಾರೆ.
ಧೋನಿ ಬಳಿಕ 2ನೇ ಸ್ಥಾನದಲ್ಲಿರುವ ಆರ್ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಟಿ20 ಕ್ರಿಕೆಟ್ನಲ್ಲಿ ವಿಕೆಟ್ ಹಿಂದೆ ನಿಂತು 276 ಬ್ಯಾಟರ್ಗಳನ್ನು ಔಟ್ ಮಾಡಿದ್ದಾರೆ. ಈ ಪೈಕಿ 207 ಕ್ಯಾಚ್ಗಳಿವೆ.
ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್ 3ನೇ ಸ್ಥಾನದಲ್ಲಿದ್ದು, ವಿಕೆಟ್ ಹಿಂದೆ 274 ವಿಕೆಟ್ ಉರುಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 269 ವಿಕೆಟ್ ಬ್ಯಾಟರ್ಗಳನ್ನು ಔಟ್ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದಾರೆ.