ಒಂದೆಲಗ ಸೇವನೆಯಿಂದ ಆಗುವ ಪ್ರಯೋಜನಗಳು

ಒಂದೆಲಗವನ್ನು ಜೇನು ತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು, ಶೀತ, ಉಸಿರಾಟದ ತೊಂದರೆ ನಿವಾರಣೆ ಆಗುತ್ತದೆ.

 ಮಾತಿನಲ್ಲಿ ಉಗ್ಗುವಿಕೆ ಇರುವವರು ದಿನಕ್ಕೆ 4-5 ಒಂದೆಲಗ ಸೇವಿಸಿದರೆ ಉಗ್ಗುವಿಕೆ ಕಡಿಮೆ ಆಗುತ್ತದೆ.

ಮಕ್ಕಳ ಬುದ್ಧಿ ಚುರುಕಾಗಲು ದಿನಕ್ಕೆ ಒಂದು ಒಂದೆಲಗವನ್ನು ಸೇವಿಸಲು ನೀಡಬಹುದು.

ಒಂದೆಲಗ ಸಕ್ಕರೆ ಕಾಯಿಲೆಗೆ ರಾಮಬಾಣ, ಒಂದೆಲಗವನ್ನು ಒಣಗಿಸಿ ಪುಡಿ ಮಾಡಿ ಮಧುಮೇಹಿಗಳಿಗೆ ಮಿಯಮಿತವಾಗಿ ಕೊಟ್ಟರೆ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇರುತ್ತದೆ.

ತಲೆ ಕೂದಲು ಉದುರುವಿಕೆ, ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ತೆಂಗಿನ ಎಣ್ಣೆಯಲ್ಲಿ ಒಂದೆಲಗದ ಪಯಡಿ ಬೆರೆಸಿ ಹಚ್ಚಿಕೊಳ್ಳಬಹುದು.

ಮಲಬದ್ಧತೆ ಇರುವವರು ಒಂದೆಲಗದ ಚಟ್ನಿ ಅಥವಾ ತಂಬುಳಿ ಮಾಡಿ ಸೇವಿಸಬಹುದು.

ಒಂದೆಲಗ ಸೊಪ್ಪಿನ ರಸವನ್ನು ಹಾಲಿಗೆ ಬೆರೆಸಿ ಕುಡಿಯುವದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಗಾಯವಾದ ಜಾಗಗಳಿಗೆ ಒಂದೆಲಗದ‌ ಸೊಪ್ಪು ಹಚ್ಚುವುದರಿಂದ ಗಾಯಗಳು ಬೇಗ ಗುಣವಾಗುತ್ತವೆ.

ಒಂದೆಲಗ ಸೇವನೆಯಿಂದ ದೇಹ ತಂಪಾಗಿರುತ್ತದೆ.‌ ದೈಹಿಕ ಶಕ್ತಿ ಹೆಚ್ಚುತ್ತದೆ. ಸ್ಮರಣ ಶಕ್ತಿ ಸಹ ಹೆಚ್ಚುತ್ತದೆ.