Weekly Astrology: ಈ ವಾರ ನಾಲ್ಕು ರಾಶಿಯವರಿಗೆ ಅದೃಷ್ಟ

0
105
Weekly Astrology

Weekly Astrology

ವರ್ಷದ ಕೊನೆಯ ತಿಂಗಳು ಡಿಸೆಂಬರ್ ಅರ್ಧ ಮುಗಿದಿದೆ. ಈ ತಿಂಗಳ ಮೂರನೇ ವಾರ ಇದಾಗಿದೆ. ಡಿಸೆಂಬರ್ 16 ರಿಂದ ಡಿಸೆಂಬರ್ 23 ರ ವರೆಗೆ ಇರಲಿದೆ. ಪ್ರಮುಖವಾದ ವಾರ ಇದಾಗಿದ್ದು, ಕೆಲವು ಗ್ರಹಗತಿಗಳ ಬದಲಾವಣೆ ಆಗಲಿದೆ. ಈ ವಾರ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಶುಭ ಫಲ ಇದೆ. ಆದರೆ ಯಾವುದರ ಬಗ್ಗೆಯೂ ಅನ್ಯತಾ ಹೆಚ್ಚು ಯೋಚನೆ ಮಾಡಬೇಡಿ. ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ. ಆದರೆ ಹಣಕಾಸಿನ ವಿಷಯದಲ್ಲಿ ಗೊಂದಲ ಏರ್ಪಡಲಿದೆ. ಅಂದುಕೊಂಡ ಕೆಲಸಗಳು ಕೈಗೂಡುವುವು. ಆಪ್ತರೊಟ್ಟಿಗೆ ಮಾತುಕತೆ ಆಡಲಿದ್ದೀರಿ.

ವೃಷಭ ರಾಶಿ

ವೃಷಭ ರಾಶಿಗೆ ಮಿಶ್ರ ಫಲ ಇದೆ. ಹಣಕಾಸಿನ ಅರಿವು ಇರಲಿದೆ. ಕೆಲವರ ಬೆಂಬಲ ನಿಮಗೆ ಸಿಗಲಿದೆ. ಅನಿರೀಕ್ಷಿತ ಪ್ರವಾಸ ಮಾಡಲಿದ್ದೀರಿ. ಕೆಲವರು ನಿಮ್ಮ ಬೆನ್ನ ಹಿಂದೆ ಮಾತನಾಡುವರು. ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ವಿದೇಶ ಪ್ರಯಾಣಕ್ಕೆ ಅಡ್ಡಿಗಳು ಬರಲಿವೆ.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಉತ್ತಮ ಹೂಡಿಕೆ ಮಾಡುವಿರಿ, ಆದರೆ ಅನುಭವಿಗಳ ನೆರವು ಪಡೆಯಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಹಣ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸಕಾರಾತ್ಮಕ ಯೋಚನೆಗಳನ್ನು ಮಾಡಿ, ನಕಾರಾತ್ಮಕತೆಯನ್ನು ದೂರ ತಳ್ಳಿರಿ. ಕುಟುಂಬದೊಟ್ಟಿಗೆ ಸಮಯ ಕಳೆಯಿರಿ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಗೆ ಶುಭ ಫಲ ಇದೆ. ಈ ರಾಶಿಗೆ ಗುರುಬಲ ಇದೆ. ನೆಮ್ಮದಿ ಇರಲಿದೆ. ಹಣಕಾಸಿನ ಹರಿವು ಚೆನ್ನಾಗಿ ಇರಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಇರಲಿದೆ. ಹಾಗೆಂದು ದೇವರ ಆರಾಧನೆ ಮರೆಯಬೇಡಿ, ಮರೆತರೆ ನಿಮಗೆ ಮುಳುವಾದೀತು. ಯಾವುದೇ ಕಾರಣಕ್ಕೂ ಅನ್ಯರ ಬಗ್ಗೆ ಕೆಟ್ಟದು ಮಾತನಾಡಬೇಡಿ.

ಸಿಂಹ ರಾಶಿ

ಸಿಂಹ ರಾಶಿಗೆ ಮಿಶ್ರ ಫಲ ಇದೆ. ವಿಧ್ಯಾರ್ಥಿಗಳಿಗೆ ಈ ವಾರ ಉತ್ತಮ ಸಮಯ ಇದೆ. ಸಿಂಹ ರಾಶಿಯವರಿಗೆ ಈ ವಾರ ಕೆಲಸ ಹೆಚ್ಚು ಇರಲಿದೆ. ಆಯಾಸವೂ ಆಗಲಿದೆ. ಕೌಟುಂಬಿಕ ಕಲಹಗಳು ಸಹ ಇರಲಿವೆ. ಹಣಕಾಸಿನ ಲಾಭ ಇರುತ್ತದೆಯಾದರೂ ಕೆಲಸವೂ ಸಹ ಹೆಚ್ಚಾಗಿಯೇ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ ಫಲ ಇರಲಿದೆ. ದೈವದ ಅನುಗ್ರಹ ನಿಮ್ಮ ಮೇಲೆ ಇರಲಿದೆ. ದುಃಖಗಳು ದೂರ ಆಗಲಿವೆ. ತಂದೆ-ತಾಯಿಯಿಂದ ಸುಖ ಬರಲಿದೆ. ಸಂಬಂಧಿಕರ ಮೇಲೆ ಸಿಟ್ಟು ಕಡಿಮೆ ಆಗಲಿದೆ. ಕುಟುಂಬದಿಂದ ಸಹಾಯ ಆಗಲಿದೆ. ಹಣಕಾಸನ್ನು ಹೂಡಿಕೆ ಮಾಡುವಾಗ ಜೋಪಾನ. ಗಾಡಿ ಓಡಿಸುವಾಗಲೂ ಜಾಗೃತೆ.

ತುಲಾ ರಾಶಿ

ಈ ವಾರ ನಿಮಗೆ ಅಶುಭ ಫಲ ಇದೆ. ಕೆಟ್ಟ ಅಭ್ಯಾಸಗಳಿಂದ ದೂರ ಇರಿ. ಹಣಕಾಸಿನ ನಷ್ಟ ಉಂಟಾಗಲಿದೆ. ಕುಟುಂಬದ ಒಳಗೆ ಭಿನ್ನಾಭಿಪ್ರಾಯ ಮೂಡಲಿದೆ. ಅನವಶ್ಯಕ ಓಡಾಟದಿಂದ ಸುಸ್ತಾಗಲಿದೆ. ನಂಬಿದವರೇ ಮೋಸ ಮಾಡಲಿದ್ದಾರೆ. ನಿಮ್ಮ ಗಳಿಕೆಯಲ್ಲಿಯೂ ಕಡಿಮೆ ಆಗಲಿದೆ. ಮೋಸ ಹೋಗಲಿದ್ದೀರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಶುಭ ಫಲ ಇದೆ. ಅಂದುಕೊಂಡ ಕಾರ್ಯಗಳು ನಡೆಯುವುದಿಲ್ಲ. ಕೊನೆಯ ಕ್ಷಣದಲ್ಲಿ ರದ್ದಾಗಲಿವೆ. ಬರಬೇಕಿದ್ದ ಲಾಭ ಕೈ ಸೇರಲಿದೆ. ಆದರೆ ಕೆಲವು ಕಡೆ ನಿಮ್ಮ ಹಣ ಸಿಕ್ಕಿಕೊಳ್ಳಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಸ್ನೇಹಿತರ ಸಂಘದ ಬಗ್ಗೆ ಎಚ್ಚರಿಕೆ ಇರಲಿ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಅಶುಭ ಫಲ ಇರಲಿದೆ. ವಿದ್ಯಾರ್ಥಿಗಳಿಗೆ ಇದು ಕಷ್ಟದ ಸಮಯ. ಪ್ರವಾಸಕ್ಕೆ ಹೋಗುವ ಮನಸ್ಸಾಗಲಿದೆ. ವೃತ್ತಿಯಲ್ಲಿ ಗೌರವ ಸಿಗಲಿದೆ. ಪೋಷಕರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಕೆಲವು ಪ್ರಭಾವಿಗಳ ಪರಿಚಯ ಆಗಲಿದೆ. ಮಕ್ಕಳ ಬಗ್ಗೆ ಗಮನ ಇರಲಿ.

ಮಕರ ರಾಶಿ

ಮಕರ ರಾಶಿ ಅವರಿಗೆ ಮಿಶ್ರಫಲ ಇರಲಿದೆ. ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚು ಕಷ್ಟಪಡಬೇಕಾಗುತ್ತದೆ. ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ಸ್ನೇಹಿತರು ದೂರಾಗಬಹುದು. ಎಲ್ಲಿಗಾದರೂ ಹೋಗಿ ಬಿಡುವ ಮನಸ್ಸಾಗುತ್ತದೆ.

Weekly Astrology: ನವೆಂಬರ್ ತಿಂಗಳ ಕೊನೆಯ ವಾರ ಹೇಗಿದೆ ನಿಮ್ಮ ಭವಿಷ್ಯ

ಕುಂಭ ರಾಶಿ

ಕುಂಭ ರಾಶಿ ಯವರಿಗೆ ಈ ವಾರ ಶುಭ ಫಲ ಇದೆ. ಬಂದ ಸಮಸ್ಯೆಗಳು ಬಗೆಹರಿಯಲಿವೆ. ಹೊಸ ವ್ಯಕ್ತಿಗಳ ಪರಿಚಯ ಆಗಲಿದೆ. ಗೆಳೆತನ ಮೂಡಲಿದೆ. ಸೌಂದರ್ಯ ಪ್ರಜ್ಞೆ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದೆ. ದೇವರ ಅನುಗ್ರಹಕ್ಕೆ ಪಾತ್ರರಾಗಿ, ದೇವರ ಪೂಜೆ ನಿಲ್ಲಿಸಬೇಡಿ.

ಮೀನ ರಾಶಿ

ಮೀನ ರಾಶಿಗೆ ಮಿಶ್ರ ಫಲ ಇದೆ. ಕುಟುಂಬದ ಬಗ್ಗೆ ಕಾಳಜಿ ಮಾಡಿ, ಅವರೊಂದಿಗೆ ಸಮಯ ಕಳೆಯಿರಿ. ಅವರಿಂದ ಸಹಾಯ ಆಗಲಿದೆ. ಅವಶ್ಯಕತೆ ಇಲ್ಲದವರ ಗೆಳೆತನ ಮಾಡಬೇಡಿ. ವಿನಾಕಾರಣ ಖರ್ಚುಗಳು ಆಗಲಿವೆ. ಆರೋಗ್ಯ ಕೆಡಲಿಗೆ ಎಚ್ಚರಿಕೆ ಇರಲಿ. ಸ್ತ್ರೀಯರಿಂದ ಅವಮಾನ ಆಗಲಿದೆ.

LEAVE A REPLY

Please enter your comment!
Please enter your name here