Weekly Astrology
ವಾರ ಭವಿಷ್ಯ
ಹೊಸ ವರ್ಷ ನಿಧಾನಕ್ಕೆ ಹಳತಾಗುತ್ತಿದೆ. 2025 ರ ಜನವರಿಯ ಮೂರನೇ ವಾರ ಚಾಲ್ತಿಗೆ ಬಂದಿದೆ. ಈ ವಾರ ಜನವರಿ 13 ರಿಂದ ಜನವರಿ 19ರ ವರೆಗೆ ಇರಲಿದೆ. ಈ ವಾರದಲ್ಲಿ ನಾಲ್ಕು ರಾಶಿಗಳಿಗೆ ವಿಶೇಷ ಅನುಕೂಲಗಳು, ಅದೃಷ್ಟಗಳು ಇರಲಿವೆ. ಸಂಕ್ರಾಂತಿ ಸಹ ಇದೇ ವಾರದಲ್ಲಿ ಇರುವ ಕಾರಣ ಇದು ಜ್ಯೋತಿಷ್ಯದ ಪಾಲಿಗೆ ಮಹತ್ವದ ವಾರವಾಗಿದೆ.
ಮೇಷ ರಾಶಿ
ಮೇಷ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಮಕ್ಕಳು ಕೆಲ ಸಾಧನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆ ಸಮಯ. ವಿವಾಹಿತರ ಜೀವನ ಸುಖಕರವಾಗಿರಲಿದೆ. ಸಂಕಷ್ಟದಲ್ಲಿ ಕೆಲವರ ಸಹಾಯ ಬೇಕಾಗುತ್ತದೆ. ಪ್ರವಾಸದ ಮನಸ್ಸಾಗುತ್ತಿರುತ್ತದೆ. ಆರ್ಥಿಕವಾಗಿ ಸಣ್ಣ ಹಿಂಜರಿಕೆ ಮೂಡಲಿದೆ. ದೇವರ ಅನುಗ್ರಹ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಗೆ ಈ ವಾರ ಶುಭ ಫಲ ಇದೆ. ನಿಮ್ಮ ಪ್ರತಿಭೆ ಈ ವಾರ ಬೆಳಕಿಗೆ ಬರಲಿದೆ. ಸಾಮಾಜಿಕ ಗೌರವ ಪ್ರಾಪ್ತಿ ಆಗಲಿದೆ. ಆಪ್ತರೊಂದಿಗೆ ಒಳ್ಳೆಯ ವಿಚಾರ ಚರ್ಚಿಸಲಿದ್ದೀರಿ. ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ. ನಿಮ್ಮ ಉತ್ಸಾಹ ಹೆಚ್ಚಾಗಲಿದೆ, ಧೈರ್ಯ ಪ್ರಾಪ್ತಿ ಆಗಲಿದೆ. ಪತ್ನಿಯ ವರ್ತನೆಯಲ್ಲಿ ಬದಲಾವಣೆ ಕಾಣಲಿದ್ದೀರಿ. ಅಂದುಕೊಂಡ ಕೆಲಸಗಳು ಆಗಲಿವೆ.
ಮಿಥುನ ರಾಶಿ
ಮಿಥುನ ರಾಶಿವರಿಗೆ ಈ ವಾರ ಮಿಶ್ರಫಲ ಇದೆ. ಪೋಷಕರೊಂದಿಗೆ ಭಿನ್ನಾಭಿಪ್ರಾಯ ಮೂಡಲಿದೆ. ಕೆಲವರು ನಿಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸುವರು. ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಕೆಲಸದ ನಿಮಿತ್ತ ಹೊರ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಕೆಲ ವಿಷಯಗಳಿಗಾಗಿ ಚಿಂತೆಗಳು ನಿಮ್ಮನ್ನು ಕಾಡಲಿದೆ. ನಿಮ್ಮ ಪ್ರಾಮಾಣಿಕತೆ ನಿಮ್ಮನ್ನು ಕಾಡಲಿದೆ.
ಕರ್ಕಾಟಕ ರಾಶಿ
ಈ ವಾರ ಕರ್ನಾಟಕ ರಾಶಿಗೆ ಶುಭ ಫಲ ಇದೆ. ಪತ್ನಿಯೊಂದಿಗೆ ಉತ್ತಮ ಸಂಬಂಧ ಏರ್ಪಡಲಿದೆ. ಅಚಾನಕ್ ನಿರ್ಣಯ ತೆಗೆದುಕೊಳ್ಳುವುದು ಬೇಡ. ಮನಸ್ಸು ಶಾಂತವಾಗಿ ಇರಲಿದೆ. ಗೆಳೆಯರೊಂದಿಗೆ ಸಂಬಂಧ ಉತ್ತಮ ಆಗಲಿದೆ. ಹಣದ ಒಳಹರಿವು ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೂರ ಪ್ರಯಾಣ ಮಾಡುವ ಮುನ್ನ ಎಚ್ಚರಿಕೆ ಇರಲಿ.
ಸಿಂಹ ರಾಶಿ
ಸಿಂಹ ರಾಶಿಗೆ ಈ ವಾರ ಮಿಶ್ರ ಫಲ ಇದೆ. ನಿಮ್ಮ ಕೆಲ ನಿರ್ಣಯಗಳು ನಿಮಗೆ ಸಮಸ್ಯೆ ತಂದೊಡ್ಡಲಿವೆ. ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯ, ತಪ್ಪು ತಿಳುವಳಿಕೆ ಹೆಚ್ಚಾಗಲಿದೆ. ಪೋಷಕರ ಜೊತೆಗಿನ ಸಂಬಂಧ ಉತ್ತಮವಾಗಿರುತ್ತವೆ. ಆರ್ಥಿಕ ಸಂಕಷ್ಟ ದೂರವೇನಿಲ್ಲ, ಎಚ್ಚರಿಕೆಯಿಂದ ಹಣ ಖರ್ಚು ಮಾಡಿ. ಹಣಕಾಸಿನ ಹೂಡಿಕೆಗೂ ಇದು ಸಕಾಲ. ಆರೋಗ್ಯ ಕಾಳಜಿ ಇರಲಿ, ಮಾತಿನ ಮೇಲೆ ನಿಗಾ ಇರಲಿ.
ಕನ್ಯಾ ರಾಶಿ
ಕನ್ಯಾ ರಾಶಿಗೆ ಈ ವಾರ ಶುಭ ಫಲ ಇದೆ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಇದು ಶುಭ ಸಮಯ. ವಿದ್ಯಾರ್ಥಿಗಳಿಗೂ ಇದು ಒಳ್ಳೆಯ ಕಾಲ. ಸಿಕ್ಕಿಕೊಂಡಿರುವ ಹಣವನ್ನು ವಾಪಸ್ ಪಡೆಯುವಿರಿ. ಹೆಚ್ಚಿನ ಲಾಭ ಮಾಡಲು ಹೋಗಿ ಸಂಕಷ್ಟ ಎದುರಿಸುವಿರಿ. ಆತುರದ ನಿರ್ಧಾರಗಳು ಆಘಾತಕಾರಿ ಆಗುವ ಸಾಧ್ಯತೆ ಇದೆ. ನೀರಿನ ಬಗ್ಗೆ ಎಚ್ಚರ ಇರಲಿ. ವಿದ್ಯುತ್ ಬಗ್ಗೆ ಎಚ್ಚರ ಇರಲಿ.
ತುಲಾ ರಾಶಿ
ಈ ವಾರ ತುಲಾ ರಾಶಿಗೆ ಶುಭ ಫಲ ಇದೆ. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರಲಿದೆ. ಪ್ರವಾಸ ಹೋಗಲಿದ್ದೀರಿ. ಐಶಾರಾಮಿ ವಸ್ತುಗಳು, ವೈಭೋಗದ ಕಡೆಗೆ ಮನಸ್ಸು ವಾಲಲಿದೆ. ವ್ಯಾಪಾರದಲ್ಲಿ ತಪ್ಪು ತಿಳಿವಳಿಕೆಯಿಂದ ನಷ್ಟ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಈ ವಾರ ಕಠಿಣವಾಗಿ ಇರಲಿದೆ. ಶ್ರಮ ಪಟ್ಟರಷ್ಟೆ ಫಲಿತಾಂಶ ಸಿಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಈ ವಾರ ಶುಭ ಫಲ ಇದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ನಿಮ್ಮ ಪ್ರತಿಭೆಗಳನ್ನು ಜನ ಮೆಚ್ಚಿಕೊಳ್ಳುವರು. ನಿಮ್ಮ ಜೊತೆಗಿರುವವರ ಬಗ್ಗೆ ಎಚ್ಚರದಿಂದ ಇರಿ. ಕೆಟ್ಟ ಕಾರ್ಯಕ್ಕೆ ನಿಮ್ಮನ್ನು ಕೆಲವರು ಎಳೆಯುವರು. ಮಧ್ಯವರ್ತಿಗಳಿಂದಾಗಿ ನಿಮಗೆ ನಷ್ಟ ಉಂಟಾಗಲಿದೆ. ಹೊಸ ವ್ಯಾಪಾರ ಆರಂಭಿಸುವ ಮನಸ್ಸಾಗಲಿದೆ. ನಿಮ್ಮ ಆಲಸ್ಯದಿಂದಾಗಿ ನಷ್ಟ ಆಗುವ ಸಾಧ್ಯತೆಗಳು ಇರುತ್ತವೆ. ಮೊದಲು ಅದನ್ನು ಬಿಡಿ.
ಧನು ರಾಶಿ
ಅನವಶ್ಯಕ ಅಲೆದಾಟ ಈ ವಾರ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಆದರೆ ಜಾಣತನದಿಂದ ಹಣ ಖರ್ಚು ಮಾಡಿ. ಸಂತೋಷವಾಗಿರುವ ಪ್ರಯತ್ನ ಮಾಡಿ. ಕುಟುಂಬದ ಕಡೆಗೆ ಗಮನ ಹರಿಸಿ. ಕೆಲವು ಒಳ್ಳೆಯ ಗೆಳೆಯರು ಸಿಗಲಿದ್ದಾರೆ. ಉದ್ಯೋಗಾಸಕ್ತರಿಗೆ ಕೆಲವೆಡೆ ಉದ್ಯೋಗ ಸಿಗಲಿವೆ. ಷೇರು ವ್ಯವಹಾರ ಸದ್ಯಕ್ಕೆ ಬೇಡ. ವಿವಾಹ ಆಗಲು ಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಿಸುವುದು. ಆತ್ಮಶಕ್ತಿ ಮೂಡಲಿದೆ. ಸ್ವಂತ ವರ್ಚಸ್ಸು ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಜಗಳ ಹೆಚ್ಚಾಗಲಿದೆ. ಸಣ್ಣ ಪುಟ್ಟ ಅನಾರೋಗ್ಯ ಉಂಟಾಗಲಿದೆ. ಕೆಲವರಿಗೆ ಮದುವೆ ಯೋಗ ಸಿಗಲಿದೆ. ರೈತರಿಗೆ ಇದು ಒಳ್ಳೆಯ ಸಮಯ. ರೈತರಿಗೆ ಹಣಕಾಸು ಬರಲಿದೆ.
ಕುಂಭ ರಾಶಿ
ಕುಂಭ ರಾಶಿಗೆ ಇದು ಮಿಶ್ರ ಫಲ ನೀಡುವ ವಾರ. ಕುಟುಂಬಕ್ಕಾಗಿ ಹಣಕಾಸು ಖರ್ಚು ಮಾಡಲಿದ್ದೀರಿ. ಪೋಷಕರ ಸೇವೆಯನ್ನು ನೀವು ಮಾಡಲಿದ್ದೀರಿ. ದೊಡ್ಡ ವ್ಯಾಪಾರಿಗಳಿಗೆ ಇದು ಲಾಭದ ಸಮಯ. ಭೂಮಿಯ ಒಳಗಿನ ವಸ್ತು ಮಾರುವುದಾದರೆ ಭಾರಿ ಲಾಭ ಇದೆ. ನಿಮಗೆ ಬರಬೇಕಾದ ಹಣ ಬರುತ್ತದೆ. ನಿಮ್ಮ ಕೆಲಸದ ಮೇಲೆ ನೀವು ಗಮನ ಕೊಡಿ. ಸಾಹಸ ಕಲಾವಿದರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಸಂಗಾತಿಗೆ ಸಮಯ ನೀಡಿ.
Weekly Astrology: ಹೊಸ ವರ್ಷದ ಎರಡನೇ ವಾರ ಹೇಗಿದೆ ಭವಿಷ್ಯ
ಮೀನ ರಾಶಿ
ಈ ವಾರ ಶುಭ ಫಲ ಇದೆ. ಒಳ್ಳೆಯ ಸ್ಥಾನ-ಮಾನ ಸಿಗಲಿದೆ. ಬೇರೆವರ ಸಂಕಷ್ಟಕ್ಕೆ ಸಹಾಯ ಮಾಡಲಿದ್ದೀರಿ. ವೈದ್ಯರಿಗೆ ಕೆಲಸದಲ್ಲಿ ಕಷ್ಟಗಳು ಎದುರಾಗಲಿವೆ. ವೃತ್ತಿಗಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಒಳ್ಳೆಯ ಸಮಯ ಇದಾಗಿದೆ. ಧನ ಆಗಮನ ಆಗಲಿದೆ. ಆಪ್ತ ಬಂಧುಗಳು ನಿಮ್ಮ ಬಗ್ಗೆ ಋಣಾತ್ಮಕವಾಗಿ ಮಾತನಾಡಲಿದ್ದಾರೆ. ವೃತ್ತಿಯಲ್ಲಿ ಬಡ್ತಿ ಪಡೆಯಲು ಯತ್ನಿಸುವಿರಿ.