Weekly Astrology: ನವೆಂಬರ್ ಮೊದಲ ವಾರದಲ್ಲಿ ಮೂರು ರಾಶಿಗಳಿಗೆ ಅದೃಷ್ಟ

0
341
Weekly Astrology

Weekly Astrology

ನವೆಂಬರ್ ತಿಂಗಳ ಮೊದಲ ವಾರ ಪ್ರಾರಂಭ ಆಗಿದೆ. ಮೊದಲ ವಾರ ನವೆಂಬರ್ 04 ರಿಂದ ನವೆಂಬರ್ 10ರ ವರೆಗೆ ಇರಲಿದೆ. ಕೆಲ ಪ್ರಮುಖ ಗ್ರಹಗಳ ಚಲನೆ ಈ ವಾರದಲ್ಲಿ ನಡೆಯಲಿದ್ದು, ಇದರಿಂದಾಗಿ ಹಲವು ರಾಶಿಗಳಲ್ಲಿ ಬದಲಾವಣೆ ಆಗಲಿದೆ. ಮೂರು ಪ್ರಮುಖ ರಾಶಿಗಳಿಗೆ ಅದೃಷ್ಟ ತರಲಿದೆ ಈ ವಾರ.

ಮೇಷ ರಾಶಿ

ನವೆಂಬರ್ ತಿಂಗಳ ಮೊದಲ ವಾರದಲ್ಲಿ ಮೃಷ ರಾಶಿಯವರಿಗೆ ಅದೃಷ್ಟ ಇದೆ. ಈ ರಾಶಿಯವರಿಗೆ ಈ ವಾರ ಹೊಗಳಿಕೆಗಳು ಸಿಗಲಿದೆ. ವೃತ್ತಿ, ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ. ದಾಂಪತ್ಯದಲ್ಲಿ ಆತ್ಮೀಯತೆ, ಮದುವೆ ಮಾತುಕತೆ ಮುಂದುವರೆಯುವವು. ಸಮಯಕ್ಕೆ ಸರಿಯಾಗಿ ಬಂಧುಗಳು ಆಗಿ ಬರುವರು.

ವೃಷಭ ರಾಶಿ

ವೃಷಭ ರಾಶಿವರಿಗೆ ಮಿಶ್ರಫಲ.‌ ಪತ್ನಿಯೊಂದಿಗೆ ವಿರಸ ಮೂಡಲಿದೆ, ಸಣ್ಣ ಜಗಳವೂ ಸಂಭವಿಸಲಿದೆ. ಐಶಾರಾಮಿ ಜೀವನದ ಕಡೆಗೆ ಮನಸು ವಾಲಲಿದೆ. ಒಲ್ಲದ ಖರ್ಚು ಮಾಡಿ ಹಣ ಕಳೆದುಕೊಳ್ಳಲಿದ್ದೀರಿ. ಶನಿಕಾಟ ಇದ್ದು ಕೆಲಸದ ಮೇಲೆ ಆಸಕ್ತಿ ಹೋಗಲಿದೆ. ಉದ್ಯೋಗದಲ್ಲಿ ಬದಲಾವಣೆ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ನವೆಂಬರ್ ಮೊದಲ ವಾರ ಮಿಶ್ರಫಲ ನೀಡಲಿದೆ. ಪ್ರೇಮಕ್ಕೆ ಒಪ್ಪಿಗೆ ಸಿಗಲಿದೆ. ಉದ್ಯೋಗ ಬದಲಾವಣೆಗೆ ಮನಸು ಮಾಡುವಿರಿ, ಉದ್ಯೋಗದಲ್ಲಿ ಮಿಶ್ರಫಲ ಇರುವುದು. ಕೆಲವು ಆತ್ಮೀಯರ ಬಗ್ಗೆ ಬೇಸರ ಮೂಡಲಿದೆ. ಪತ್ನಿಯ ಮೇಲೆ ಒಲವು ಮೂಡಲಿದೆ. ಮಕ್ಕಳಿಂದ ಖುಷಿ ಪಡೆಯಲಿದ್ದಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ವಾರ ಶುಭ ಫಲ ಇದೆ. ಪ್ರೀತಿಯಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಏಕಾಗ್ರತೆಯಿಂದ ಪಠ್ಯಚಟುವಟಿಕೆ ಮಾಡಲಿದ್ದೀರಿ. ದೇಹಾಲಸ್ಯ ಕಾಣಿಸಿಕೊಳ್ಳಲಿದೆ, ಕುಟುಂಬದ ಜೊತೆಗೆ ಖುಷಿಯಿಂದ ಇರುವಿರಿ. ಕೆಲಸದ ಸ್ಥಳದಲ್ಲಿ ಸಣ್ಣ-ಪುಟ್ಟ ಸಮಸ್ಯೆ ಎದುರಾಗಲಿದೆ.

2025 prediction: ನಾಸ್ಟ್ರೋಡಾಮಸ್, ಬಾಬಾ ವಂಗಾ ನುಡಿದಿದ್ದಾರೆ ಕರಾಳ ಭವಿಷ್ಯ, 2025 ಕ್ಕೆ ಏನಾಗಲಿದೆ?

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರಫಲ ಇದೆ. ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಇದು ಶುಭ ಕಾಲ. ಕೆಲವು ಸಲಹೆಗಳು ನಿಮಗೆ ಸಿಗಲಿದೆ. ಕೋಪದ ಮೇಲೆ ನಿಯಂತ್ರಣ ಇರಲಿ, ಕೆಲಸಕ್ಕೆ ಸೇರಿಕೊಳ್ಳಲು ಕೆಲವರ ಹೆಸರು ಬಳಸಿಕೊಳ್ಳುವಿರಿ. ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವ ಸಂಭವ ಇದೆ. ಕಣ್ಣುಗಳ ಬಗ್ಗೆ ಜಾಗೃತೆ ಇರಲಿ.

ಕನ್ಯಾ ರಾಶಿ

ಈ ರಾಶಿಯವರಿಗೆ ಈ ವಾರ ಶುಭ ಫಲ ಇರಲಿದೆ. ಸಂಬಂಧಗಳಲ್ಲಿ ಹೊಸತ ಇರಲಿದೆ. ಮನಸ್ಸು ಉಲ್ಲಾಸದಾಯಕವಾಗಿರಲಿದೆ. ಪತ್ನಿಯ ಮೇಲೆ ಪ್ರೀತಿ ಮೂಡಲಿದೆ. ಉದ್ಯೋಗ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಸಾಹಿತಿಗಳಿಗೆ ಹೆಸರು, ಪ್ರಶಸ್ತಿ ಸಿಗಲಿದೆ. ಅವಿವಾಹಿತರಿಗೆ ಮದುವೆ ಭಾಗ್ಯ. ಶತ್ರುಗಳಿಗೆ ಹಿನ್ನಡೆ ಆಗಲಿದೆ.

ತುಲಾ ರಾಶಿ

ತುಲಾ ರಾಶಿಗೆ ಈ ವಾರ ಮಿಶ್ರ ಫಲ ಇರಲಿದೆ. ಸಹೋದರನ ಜೊತೆಗೆ ವಾಕ್ಸಮರ ನಡೆಯಲಿದೆ. ಕೆಲಸದ ಬಗ್ಗೆ ಬೇಸರ ಮೂಡಲಿದೆ. ಪ್ರೇಮಿಗಳಿಗೆ ಕಷ್ಟದ ಸಮಯ, ಅನಾರೋಗ್ಯ ಇರಲಿದೆ. ಮಕ್ಕಳಿಂದ ನೀವು ಎಣಿಸಿದ ಸಂಗತಿಗಳು ಬಾರವು. ಆರೋಗ್ಯದ ಕಡೆ ಗಮನ ಹರಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಶುಭ ಫಲ ಸಿಗಲಿದೆ. ಮಾನಸಿಕ ನೆಮ್ಮದಿ ಇರಲಿದೆ. ಕುಟುಂಬದವರು ಖುಷಿಯಾಗಿರಲಿದ್ದಾರೆ. ವಾಹನದಿಂದ ಲಾಭ ಆಗಲಿದೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇದು ಶುಭ ಕಾಲ. ನಿಮ್ಮ ಬಗ್ಗೆ ಆತ್ಮವಿಶ್ವಾಸ ಇರಲಿ. ಹೊಸ ಕೆಲಸ ಪ್ರಾರಂಭಿಸಲು ಭಯ ಮೂಡುವುದು, ಕೆಲಸಗಳಿಗೆ ಗೊಂದಲ ಮೂಡಲಿದೆ.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ಮಿಶ್ರಫಲ ಇರಲಿದೆ. ಈ ವಾರ ನಿಮ್ಮ ರಾಶಿಯಲ್ಲಿ ಗ್ರಹ ಚಲನೆ ನಡೆಯಲಿದೆ. ಹೊಸ ವ್ಯಕ್ತಿಯ ಮೇಲೆ ಪ್ರೇಮ ಮೂಡಲಿದೆ. ಗುರುಬಲ ಹೊರಟು ಹೋಗಿರುವ ಕಾರಣ ಕೆಲವೆಡೆ ನಷ್ಟ ಅನುಭವಿಸಲಿದ್ದೀರಿ, ಕುಟುಂಬದವಿರಗೂ ಸಮಸ್ಯೆ ಇರಲಿದೆ. ಯೋಚಿಸಿ ಹೆಜ್ಜೆ ಇಡಿ.

ಮಕರ ರಾಶಿ

ಮಕರ ರಾಶಿಗೂ ಸಹ ಈ ವಾರ ಮಿಶ್ರ ಫಲ. ವಾಹನ ಓಡಿಸುವಾಗ ಎಚ್ಚರಿಕೆ ಇರಲಿ, ವಾಹನ ವ್ಯಾಪಾರ ಮಾಡುವಾಗಲೂ ಎಚ್ಚರಿಕೆ ಇರಬೇಕಾಗುತ್ತದೆ. ಉದ್ಯಮ ಮಾಡುವವರಿಗೆ ಹಿನ್ನಡೆ ಆಗಲಿದೆ. ಭೂಮಿಯ ವಿಚಾರದಲ್ಲಿ ಹಿನ್ನಡೆ ಆಗಲಿದೆ. ವಿನಾಕಾರಣ ನಿಮ್ಮ ಮೇಲೆ ಆರೋಪ ಬರಬಹುದು.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ಶುಭ ಫಲ ಇರಲಿದೆ. ಬರಬೇಕಾದ ಹಣ, ಆಸ್ತಿ ನಿಮಗೆ ಬರುವುದು. ಸಾಲ ಪಡೆದವರೂ ನಿಮಗೆ ಅಚ್ಚರಿಯಾಗುವಂತೆ ಹಣವನ್ನು ಮರಳಿ ಕೊಡುವರು. ಕೆಲಸದ ಸ್ಥಳದಲ್ಲಿ ಕೆಲ ಬದಲಾವಣೆ ಆಗುವುದು, ಅಥವಾ ಹೊಸ ಕೆಲಸ ಸಿಕ್ಕರೂ ಸಿಗಬಹುದು.

ಮೀನ ರಾಶಿ

ಮೀನ ರಾಶಿಗೆ ಈ ವಾರ ಶುಭ ಫಲ ಇರಲಿದೆ. ‌ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕಲಾವಿರಿಗೆ ದೊಡ್ಡ ಅವಕಾಶ ಸಿಗಲಿದೆ, ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗುತ್ತದೆ. ಮಣ್ಣಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಭಾರಿ ಲಾಭ ಸಿಗಲಿದೆ. ಕಲಾವಿದರು ವಿದೇಶ ಪ್ರಯಾಣ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here