Weekly Astrology: ದಸರಾ ಹಬ್ಬದ ವಾರ, ಯಾವ ರಾಶಿಗೆ ಶುಭ? ಯಾವುದಕ್ಕೆ ಅಶುಭ

0
257
weekly astrology

Weekly Astrology

ಅಕ್ಟೋಬರ್ ತಿಂಗಳ ಎರಡನೇ ವಾರ 07 ರಿಂದ 12ರವರೆಗೆ ಇರಲಿದೆ. ಈ ವಾರದಲ್ಲಿ ನವರಾತ್ರಿಯೂ ಇದ್ದು, ಕೆಲವು ಗ್ರಹಗಳ ಚಲನೆ ಸಹ ಇದೆ. ಕೆಲವು ರಾಶಿಗಳಿಗೆ ಅದೃಷ್ಟ ಬದಲಾವಣೆಯ ವಾರ ಇದಾಗಲಿದೆ. ಕೆಲವು ರಾಶಿಗಳ ಭವಿಷ್ಯದಲ್ಲಿ ಬದಲಾವಣೆಯೂ ಆಗಲಿದೆ. ನಿಮ್ಮ ರಾಶಿ ಭವಿಷ್ಯ ಹೇಗಿದೆ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಮೇಷ ರಾಶಿಯವರ ಸಮಯ ಚೆನ್ನಾಗಿದೆ. ಸಂಗಾತಿಯ ಮಾತುಗಳನ್ನು ಕೇಳುವಿರಿ. ಚರ್ಚೆಗಳಲ್ಲಿ ಗೆಲುವು ನಿಮ್ಮದಾಗಲಿದೆ. ಕುಟುಂಬದ ವಿಚಾರವಾಗಿ ಬೇಜಾರು ಮಾಡಿಕೊಳ್ಳುವಿರಿ. ವೈವಾಹಿಕ ಜೀವನದಲ್ಲಿ ಉನ್ನತಿ, ಮದುವೆ ಮಾತುಕತೆ ನಡೆಯಲಿದೆ. ಈಗ ಒಳ್ಳೆಯ ಸಮಯವಿದೆ, ಮಾಡಬೇಕಿರುವ ಕೆಲಸ ಮಾಡಿಬಿಡಿ.

ವೃಷಭ ರಾಶಿ

ಕೆಲವು ವ್ಯಕ್ತಿಗಳ ಬಗ್ಗೆ ಅಸಮಾಧಾನ, ಕಿರಿ ಉಂಟಾಗಲಿದೆ. ನಿಮ್ಮ ಮಾತನ್ನು ನಿರ್ಲಕ್ಷ್ಯ ಮಾಡುವರು. ಕಠಿಣವಾಗಿ ಮಾತನಾಡಿ ಕೆಲಸ ಮಾಡಿಸಿಕೊಳ್ಳಿ. ಬೇಸರದಲ್ಲೇ ದಿನಗಳನ್ನು ದೂಡುವಿರಿ. ಅನವಶ್ಯಕ, ಸಿಟ್ಟು ಬೇಸರ ಆಗಲಿದೆ, ಆದರೆ ನಿಮ್ಮ ಮನಶಾಂತಿ ಕಳೆದುಕೊಳ್ಳಬೇಡಿ. ವಾಹನ ಚಲಾಯಿಸುವಾಗ, ಕೆಲಸಗಳನ್ನು ಮಾಡುವಾಗ ಎಚ್ಚರವಿರಲಿ.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರ ಮಿಶ್ರ ಫಲ ಇರಲಿದೆ. ಮಕ್ಕಳ ಬಗ್ಗೆ ಹೆಮ್ಮೆ ಆಗಲಿದೆ, ಮಕ್ಕಳ ಓದಿನಲ್ಲಿ ಪ್ರಗತಿ ಕಾಣಲಿದೆ. ಸಿಟ್ಟಿನಿಂದಾಗಿ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ನಿರಾಶೆಯನ್ನು ಇಟ್ಟುಕೊಳ್ಳದೇ ಎಲ್ಲವನ್ನೂ ಶುಭದಂತೆ ಸ್ವೀಕರಿಸಿ. ದುರ್ಬಲನಾದ ಗುರುವು ನಿಮಗೆ ಮುಂದೆ ಶುಭವನ್ನೇ ಕೊಡುವನು.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಈ ವಾರ ಶುಭವಾಗಿದೆ. ಕುಟುಂಬದ ಬಗ್ಗೆ ಪ್ರೀತಿ ಇರಲಿದೆ. ಗೆಳಯರು, ಬಂಧುಗಳಿಂದ ಖುಷಿ ವಿಚಾರ ಸಿಗಲಿದೆ. ಪ್ರಯಾಣ ಮಾಡಬೇಕಾಗಿ ಬರಬಹುದು. ಎಚ್ಚರಿಕೆಯಿಂದ ಪ್ರಯಾಣ ಮಾಡಿ, ಅದೃಷ್ಟದ ಉಪಯೋಗ ಮಾಡಿಕೊಳ್ಳಿ.

ಸಿಂಹ ರಾಶಿ

ಈ ಸಿಂಹ ರಾಶಿಗೆ ಮಿಶ್ರ ಫಲಗಳು ಇವೆ. ಒಡಹುಟ್ಟಿದವರೊಟ್ಟಿಗೆ ಕಲಹ ನಡೆಯಲಿದೆ. ನಿಮ್ಮ ಶಕ್ತಿಯ ಪರಿಚಯ ನಿಮಗೆ ಆಗಲಿದೆ. ಯಶಸ್ಸನ್ನು ನೀವು ಪಡೆದುಕೊಳ್ಳುವಿರಿ. ಉದ್ಯಮ ಆರಂಭ ಮಾಡುವ ಉತ್ಸಾಹ ಮೂಡಲಿದೆ. ಪಾಲುದಾರಿಕೆ ಮಾಡುವ ಪ್ರಯತ್ನ ಮಾಡುವಿರಿ. ನಿಮಗೆ ಕೆಲವು ಉತ್ತಮ ಅವಕಾಶಗಳು ಸಹ ಸಿಗಲಿವೆ. ದೇವರ ಆಶೀರ್ವಾದ ಪಡೆಯಿರಿ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಕೆಲವು ಲಾಭಗಳು ಈ ವಾರ ಇವೆ. ಕೆಲವರೊಡನೆ ಸಂಧಾನ ಮಾಡಿಕೊಳ್ಳುವಿರಿ. ಕಲಹಗಳನ್ನು ಅಂತ್ಯ ಮಾಡಿಕೊಳ್ಳುವಿರಿ. ನಿಮ್ಮ ಸಂವಹನ ಕಲೆ ಉತ್ತಮಗೊಳ್ಳಲಿದೆ. ಸಂಗಾತಿಯ ಬಗ್ಗೆ ಅನುಮಾನ ಮೂಡಲಿದೆ. ಕುಟುಂಬದಲ್ಲಿ ನಿಮಗೆ ಸಿಗುತ್ತಿರುವ ಗೌರವವನ್ನು ಉಳಿಸಿಕೊಳ್ಳಿ. ರೋಗಗಳ ಬಗ್ಗೆ ಜಾಗೃತಿ ಇರಲಿ, ಆರೋಗ್ಯದ ಕಾಳಜಿ ಅವಶ್ಯಕ.

ತುಲಾ ರಾಶಿ

ಈ ವಾರ ಕೆಲವು ಗೊಂದಲಗಳು ಪರಿಹಾರ ಆಗಲಿದೆ, ಮಾನಸಿಕ ನೆಮ್ಮದಿ ಸಹ ದೊರಕಲಿದೆ. ಆತ್ಮ ಸ್ಥೈರ್ಯ ಮೂಡಲಿದೆ. ಕೆಲಸಗಳನ್ನು ನಿರ್ವಹಿಸುವ ಧೈರ್ಯ ಮೂಡಿ ಬರಲಿದೆ. ಅದೃಷ್ಟ ಈ ವಾರ ಇರದು, ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಿ. ಮನೆಯನ್ನು ಉತ್ತಮ ಪಡಿಸಲು ಪ್ರಯತ್ನ ಮಾಡುವಿರಿ, ಸೌಂದರ್ಯದ ಬಗ್ಗೆ ಯೋಚನೆ ಮಾಡಲಿದ್ದೀರಿ. ಪತ್ನಿಯಿಂದ ಗೌರವ ಸಿಗಲಿದೆ.

ವೃಶ್ಚಿಕ ರಾಶಿ

ಈ ವಾರ ನಿಮಗೆ ಅದೃಷ್ಟ ಇರಲಿದೆ. ಮಾಡಬೇಕಾದ ಕೆಲಸಗಳು ಸುಲಭವಾಗಿ ಮುಗಿಯುವುವು. ಕೆಲಸದಲ್ಲಿ ಆಸಕ್ತಿ ಸಹ ಇರಲಿದೆ. ಆದರೆ ನಿಮ್ಮ ಮಾತಿಗೆ ಬೆಂಬಲ ಸಿಗುವುದಿಲ್ಲ. ಎಚ್ಚರಿಕೆಯಿಂದ ಮಾತನಾಡಿ ಎಲ್ಲವನ್ನೂ ಸರಿ ಮಾಡಿಕೊಳ್ಳಿ. ಉದ್ಯೋಗಿಗಳಿಗೆ ಸಂಬಳ ಹೆಚ್ಚಾದರೆ ವ್ಯಾಪಾರಿಗಳಿಗೆ ಲಾಭ ಹೆಚ್ಚಾಗಲಿದೆ. ಹೊಸ ಉದ್ಯಮ ಪ್ರಾರಂಭ ಮಾಡುವುದಾದರೆ ಎಚ್ಚರಿಕೆ ಇರಲಿ.

ಧನು ರಾಶಿ

ಕಲಾ ಕ್ಷೇತ್ರದಲ್ಲಿ ಇರುವವರಿಗೆ ಈ ವಾರ ಅದೃಷ್ಟ ಇದೆ. ಹೊಸ ಕೆಲಸಗಳು ಸಿಗಲಿವೆ. ಪ್ರತಿಭಾವಂತರ ಭೇಟಿ ಆಗಲಿದೆ. ಅವಕಾಶದ ಸದುಪಯೋಗ ಮಾಡಿಕೊಳ್ಳಿ. ವೃತ್ತಿಯನ್ನು ಬದಲು ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಅದೃಷ್ಟದ ನಿರೀಕ್ಷೆಯಲ್ಲಿದ್ದರೆ ಕೆಲಸ ಆಗದು, ಶ್ರಮಪಟ್ಟರೆ ಅದೃಷ್ಟ ತಾನಾಗಿಯೇ ಬರಲಿದೆ. ಕೆಲಸದ ಬಗ್ಗೆ ಗಮನವಹಿಸಿ.

ಮಕರ ರಾಶಿ

ಉದ್ಯೋಗ ಸ್ಥಳದಲ್ಲಿ ಬಿಕ್ಕಟ್ಟು ಮೂಡಲಿದೆ. ಆದರೆ ತಾಳ್ಮೆ ಇರಲಿ, ಬಿಕ್ಕಟ್ಟುಗಳು ಸರಿ ಹೋಗಲಿವೆ. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನಿರಾಸೆಗೆ ಬೀಳಬೇಡಿ ನಿಮಗೆ ಹತ್ತಿರದಲ್ಲೇ ಅದೃಷ್ಟವಿದೆ. ಸಮಯಕ್ಕಾಗಿ ಕಾಯಿರಿ. ದೇವರ ಆರಾಧನೆ ಮರೆಯಬೇಡಿ, ಕುಟುಂಬದೊಟ್ಟಿಗೆ ಉತ್ತಮ ಬಾಂಧವ್ಯ ಇರಲಿ.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಶುಭ ಫಲ ಇದೆ. ಸ್ಪರ್ಧೆಗಳಲ್ಲಿ ನಿಮಗೆ ಗೆಲುವು ಸಿಗಲಿದೆ. ಅದೃಷ್ಟವೂ ಸಹ ನಿಮ್ಮ ಪರವಾಗಿಯೇ ಇರಲಿದೆ. ನಿಮ್ಮ ಪ್ರತಿಭೆಗೆ ಈ ವಾರ ಗೌರವ ಸಿಗಲಿದೆ. ನಿಮಗೆ ಸನ್ಮಾನ, ಪುರಸ್ಕಾರ ಸಹ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮಗೆ ಭೇಷ್ ಎನ್ನಲಿದ್ದಾರೆ. ನಿಮಗೆ ಗೌರವ ಪ್ರಾಪ್ತಿ ಆಗಲಿದೆ.

ಮೀನ ರಾಶಿ

ಮೀನ ರಾಶಿಯವರಿಗೆ ಮಿಶ್ರ ಫಲ ಇದೆ. ತುಸು ಅನಾರೋಗ್ಯ ಕಾಡಲಿದೆ. ನಿರೀಕ್ಷೆಯಲ್ಲಿದ್ದ ಸಂತೋಷದ ವಿಚಾರ ತಡವಾಗಿ ಬರಲಿದೆ. ಏನಾದರೂ ಮಾತುಕತೆ, ಒಪ್ಪಂದಗಳು ಇ್ದರೆ ಈ ವಾರವೇ ಮುಗಿಸಿಕೊಳ್ಳಿ ಒಳಿತಾಗಲಿದೆ. ನಿಮಗೆ ಉದ್ಯೋಗದ ಬದಲಾವಣೆ ಮಾಡುವ ಮನಸ್ಸಾಗುವುದು. ಯಾವುದರ ಬಗ್ಗೆಯೂ ಆತುರದ ನಿರ್ಧಾರ ಮಾಡುವುದು ಬೇಡ.

LEAVE A REPLY

Please enter your comment!
Please enter your name here