Site icon Samastha News

Weekly Astrology: ಈ ವಾರ ಮೂರು ರಾಶಿಗಳಿಗೆ ಇದೆ ಭರ್ಜರಿ ಅದೃಷ್ಟ

Weekly Astrology

Weekly Astrology

ಇದು ಅಕ್ಟೋಬರ್ ತಿಂಗಳ ಮೂರನೇ ವಾರ. 14 ರಿಂದ 20 ರ ವರೆಗೆ ಇರಲಿದೆ. ಈ ವಾರದಲ್ಲಿ ಕೆಲವು ರಾಶಿಯವರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ಹಲವರಿಗೆ ದೈವ ಬಲ ಇಲ್ಲದಾಗಲಿದೆ. ಅಪಘಾತದ ಸಂಭವ, ಅದೃಷ್ಟ ಹೀನತೆ ಇರಲಿದೆ. ಯಾವ ಯಾವ ರಾಶಿಗಳ ಭವಿಷ್ಯ ಹೇಗಿರಲಿದೆ ಎಂಬುದು ಈಗ ತಿಳಿಯೋಣ.

ಮೇಷ ರಾಶಿ

ಈ ವಾರದಲ್ಲಿ ಮೇಷ ರಾಶಿಗೆ ಮಿಶ್ರ ಫಲ ಇದೆ. ಅಪನಂಬಿಕೆಗಳು ಕಾಡಲಿವೆ. ವಾಹನ ಸಂಚಾರ ಮಾಡುವಾಗ ಎಚ್ಚರಿಕೆ ಇರಲಿ. ಆನ್​ಲೈನ್ ವ್ಯವಹಾರಗಳಲ್ಲಿ ನಷ್ಟವಾಗುವ ಸಂಭವ ಇದೆ. ವಿದೇಶಿ ಹಣಕಾಸು ವ್ಯವಹಾರ ಬೇಡ. ಸಾಲಗಳನ್ನು ಮರುಪಾವತಿ ಮಾಡುವುದು ಕಷ್ಟ ಆಗಲಿದೆ.

ವೃಷಭ ರಾಶಿ

ವೃಷಭ ರಾಶಿಗೆ ಈ ವಾರ ಶುಭ ಫಲ ಹೆಚ್ಚಿದೆ. ಕುಟುಂಬದೊಟ್ಟಿಗೆ ಕಾಲ ಕಳೆಯುವಿರಿ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ. ನಿಮ್ಮ ಪ್ರಗತಿ ಬಗ್ಗೆ ಪೋಷಕರಲ್ಲಿ ಅಸಮಾಧಾನ ಇರಲಿದೆ. ಸಹೋದರನೊಂದಿಗೆ ಸಣ್ಣ-ಪುಟ್ಟ ಜಗಳ ನಡೆಯಲಿದೆ. ಹಣದ ಆಗಮನ ಆಗಲಿದೆ. ಎಚ್ಚರಿಕೆಯಿಂದ ಖರ್ಚು ಮಾಡಿ.

ಮಿಥುನ ರಾಶಿ

ಮಿಥುನ ರಾಶಿಗೆ ಈ ಅಷ್ಟೇನೂ ಶುಭ ಫಲ ಇಲ್ಲ. ವಿದ್ಯಾರ್ಥಿಗಳಿಗೆ ಇದು ಕಷ್ಟದ ವಾರ ಆಗಲಿದೆ. ಶ್ರಮಪಟ್ಟು ಓದಿದರಷ್ಟೆ ಫಲ ಸಿಗಲಿದೆ. ಪತ್ನಿ ಜೊತೆ ಜಗಳ ಆಗಲಿದೆ, ಆದರೆ ಸಮಾಧಾನದಿಂದ ವರ್ತಿಸಿ. ಕೆಲವು ಅಗೌರವಗಳು ನಿಮಗಾಗಿ ಕಾದಿವೆ. ಸುಲಭವಾಗಿ ಮೋಸ ಹೋಗಲಿದ್ದೀರಿ. ಎಚ್ಚರಿಕೆಯಿಂದ ವ್ಯವಹಾರ ಮಾಡಿ, ಮಾತನಾಡುವಾಗ ಎಚ್ಚರದಿಂದ ಇರಿ. ಹಣ ವ್ಯಯ ಆಗಲಿದೆ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಗೆ ಈ ವಾರ ಶುಭ ಫಲ ಹೆಚ್ಚಿದೆ. ಕೆಲವು ಒಳ್ಳೆಯ ಕೆಲಸಗಳು ನಿಮ್ಮಿಂದ ಆಗಲಿದೆ. ಸಾಮಾಜಿಕ ಗೌರವ ಸಿಗಲಿದೆ. ಕಲಾವಿದರಿಗೆ ದೊಡ್ಡ ಅವಕಾಶ ಸಿಗಲಿದೆ. ವ್ಯಾಪಾರಿಗಳಿಗೆ ಅಷ್ಟೇನೂ ಶುಭ ವಾರ ಇದಲ್ಲ. ವಿದೇಶದಲ್ಲಿರುವವರಿಗೆ ಸಮಸ್ಯೆ, ಕೆಲವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಮುಂದಾಗುವಿರಿ. ಅದು ಸೂಕ್ತವಲ್ಲ. ದೇವರ ಆರಾಧನೆ ಮಾಡಿ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಕಷ್ಟ ಪಟ್ಟು ಮಾಡಿದ ಕೆಲಸ ವ್ಯರ್ಥ ಆಗಲಿದೆ. ನಿಮ್ಮ ಕೆಲಸದಿಂದಲೇ ನೀವು ಸಮಸ್ಯೆಗೆ ಸಿಲುಕಲಿದ್ದೀರಿ. ಪೋಷಕರ ಮೇಲೆ ಗೌರವ, ಪ್ರೀತಿ ಉಕ್ಕಲಿದೆ. ಕೆಲಸದ ಸ್ಥಳದಲ್ಲಿ ಒಂಟಿ ಆಗಲಿದ್ದೀರಿ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬೇಡಿ, ಸಂಘ ಜೀವಿಯಾಗಿ. ಆರ್ಥಿಕವಾಗಿ ಪೆಟ್ಟು ಬೀಳುವ ಸಾಧ್ಯತೆ ಇದೆ. ಜಾಗರೂಕತೆಯಿಂದ ವ್ಯವಹಾರ ಮಾಡಿ. ಜಾಗರೂಕತೆಯಿಂದ ಹೆಜ್ಜೆ ಇಡಿ.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿಗೆ ಮಿಶ್ರಫಲ ಇದೆ. ನೆಮ್ಮದಿ ಇಲ್ಲದ ಸ್ಥಿತಿಯಲ್ಲಿ ಇರಲಿದ್ದೀರಿ. ಬರಬೇಕಾದ ಹಣವೂ ಬಾರದೆ ಆಗಿಬಿಡಲಿದೆ. ಆತಂಕ ಬೇಡ ಮುಂದೆ ಬರಲಿದೆ. ಜಾಣತನದಿಂದ ವರ್ತಿಸಲಿದ್ದೀರಿ. ಕೆಲವರಿಗೆ ಮೋಸ ಮಾಡಿದ ಅನುಭವ ಕಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕೆಲ ಜವಾಬ್ದಾರಿ ನಿಮ್ಮ ಹೆಗಲು ಏರಲಿವೆ.

ತುಲಾ ರಾಶಿ

ತುಲಾ ರಾಶಿಗೆ ಈ ವಾರ ಶುಭ ಫಲ ಇದೆ. ಕೆಲವು ವಸ್ತುಗಳ ಖರೀದಿಗೆ ಹಣ ಬಳಸಲಿದ್ದೀರಿ. ಇಷ್ಟವಾದ ವಸ್ತುಗಳನ್ನು ಖರೀದಿಸಲಿದ್ದೀರಿ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಅವಶ್ಯಕ. ಕೆಲಸದ ಸ್ಥಳದಲ್ಲಿ ಬಹಳ ಸಮಸ್ಯೆ ಆಗಲಿದೆ, ಅನುಭವಿಸಲೇ ಬೇಕಾಗುತ್ತದೆ. ಧೈರ್ಯದಿಂದ ಕೆಲಸ ಕೈಗೊಳ್ಳಲಿದ್ದೀರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಅಂದುಕೊಂಡ ಕಾರ್ಯಗಳು ಆಗುವುದಿಲ್ಲ. ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಸುಸ್ತು ಕಾಡಲಿದೆ. ಅವಿವಾಹಿತರು ಯುವತಿಯೆಡೆ ಆಕರ್ಷಿತರಾಗುವರು. ವಿದೇಶ ಪ್ರಯಾಣ ಮಾಡಲು ಇಚ್ಛಿಸುವವರಿಗೆ ಇದು ಶುಭ ಕಾಲ. ಮಕ್ಕಳ ಬಗ್ಗೆ ಅಸಮಾಧಾನ ಮೂಡಲಿದೆ.

ಧನು ರಾಶಿ

ಧನು ರಾಶಿಗೆ ಈ ವಾರ ಶುಭ ಫಲ ಸಿಗಲಿದೆ. ಅನವಶ್ಯಕ ಖರ್ಚಿನ ಬಗ್ಗೆ ಎಚ್ಚರಿಕೆ ಇರಲಿ. ಹೂಡಿಕೆ ಮಾಡುವಾಗಲೂ ಎಚ್ಚರಿಕೆ ಇರಲಿ. ಹಿಂಜರಿಕೆ ಕಾಡಲಿದೆ. ಕೆಲವು ವಿಷಯಗಳಲ್ಲಿ ನೀವು ಹಿಂದುಳಿಯಲಿದ್ದೀರಿ, ಭಯ ಪಡದೆ ಮುನ್ನುಗ್ಗಿ. ಇಷ್ಟ ದೇವರನ್ನು ಪೂಜೆ ಮಾಡಿ, ಸ್ಮರಿಸುತ್ತಿರಿ.

ಮಕರ ರಾಶಿ

ಮಕರ ರಾಶಿಗೆ ಈ ವಾರ ಶುಭ ಫಲ ಇದೆ. ಐಶಾರಾಮಿ ವಸ್ತುಗಳು ನಿಮಗೆ ಲಭಿಸಲಿವೆ. ಐಶಾರಾಮಿತನದ ಅನುಭವ ಪಡೆಯಲಿದ್ದೀರಿ. ಸಂಸಾರ ಸುಖಮಯವಾಗಿ ಇರಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಫಲ ಸಿಗುವುದಿಲ್ಲ. ಕೊರತೆ ಕಾಡಲಿದೆ. ಜಾಣ್ಮತೆಯಿಂದ ಹೆಜ್ಜೆ ಇಟ್ಟರೆ ಭವಿಷ್ಯ ಬದಲಾವಣೆ ಆಗಲಿದೆ. ತಾಳ್ಮೆ, ಬುದ್ಧಿವಂತಿಕೆ ಬಹಳ ಮುಖ್ಯ. ಗುರುಬಲವೂ ನಿಮಗೆ ಇದೆ.

ಕುಂಭ ರಾಶಿ

ಕುಂಭ ರಾಶಿಗೆ ಮಿಶ್ರಫಲ ಇದೆ. ಕಲಾವಿದರಿಗೆ ವಿಶೇಷವಾಗಿ ವಿನ್ಯಾಸ ಮಾಡುವವರಿಗೆ ಒಳ್ಳೆಯ ಸಮಯ. ಕಲಾವಿದರಿಗೆ ಗೌರವ, ಹಣ ದೊರಕುವುದು. ಕುಟುಂಬದಲ್ಲಿ ಕಲಹ ಉಂಟಾಗಲಿದೆ. ಕೆಲವು ಕೆಲಸಗಳು ಅಂದುಕೊಂಡಂತೆ ನಡೆಯುವುದಿಲ್ಲ. ಮನೆಯ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ. ದೇವರ ಪ್ರಾರ್ಥನೆ ಮಾಡಿ, ಧೃತಿಗೆಡಬೇಡಿ.

ಮೀನ ರಾಶಿ

ಮೀನ ರಾಶಿಗೆ ಈ ವಾರ ಶುಭ ಫಲ ಇದೆ. ವಿವಾಹದ ಮಾತುಕತೆ ಮುಂದುವರೆಯಲಿವೆ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ. ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಧೈರ್ಯ ತಂದುಕೊಳ್ಳಿ. ದೇವರ ಪ್ರಾರ್ಥನೆಯಿಂದ ಒಳಿತು ಆಗಲಿದೆ.

Exit mobile version