Weekly Astrology
ಜುಲೈ ತಿಂಗಳ ಎರಡನೇ ವಾರ ಜುಲೈ 08 ಇಂದ 14 ರವರೆಗೆ ವಿವಿಧ ರಾಶಿಗಳ ಫಲಾಫಲ ಹೇಗಿದೆ? ಈ ವಾರದಲ್ಲಿ ಕೆಲ ರಾಶಿಗಳಲ್ಲಿ ಚಲನೆ ಇದ್ದು ಕೆಲವು ರಾಶಿಯವರಿಗೆ ಶುಭವನ್ನೂ ಇನ್ನು ಕೆಲವಕ್ಕೆ ಅಶುಭವನ್ನೂ ಆಗುವಂತಿದೆ.
ಮೇಷ ರಾಶಿ
ಮೇಷ ರಾಶಿಗೆ ಈ ವಾರ ಶುಭ ಆಗಲಿದೆ. ಈ ವಾರ ಮೇಷ ರಾಶಿಗೆ ವಾಹನದಿಂದ ಲಾಭ ಆಗಲಿದೆ. ಶತ್ರುವೂ ಸಹ ಮಿತ್ರನಾಗಲಿದ್ದಾನೆ. ಕೆಲಸಗಳು ಅಡ್ಡಿ ಇಲ್ಲದೆ ಸಾಗಲಿವೆ. ಗುರು ಹಿರಿಯರ ಮಾತಿನಂತೆ ನಡೆದರೆ ಲಾಭ ಸಿಗಲಿದೆ. ಹೊಸ ಪಾಲುದಾರರಿಂದ ವ್ಯಾಪಾರ ವಿಸ್ತರಣೆ ಆಗಲಿದೆ. ಮಹಿಳೆಯರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇದೆ.
ವೃಷಭ ರಾಶಿ
ವೃಷಭ ರಾಶಿಯ ಕಲಾವಿದರಿಗೆ ಹಿನ್ನಡೆ ಆಗಲಿದೆ. ಅಂದುಕೊಂಡ ವೇಗದಲ್ಲಿ ಕೆಲಸಗಳು ಆಗದು. ಲಾಭದಾಯಕ ಕೆಲಸ ಸಿಗುತ್ತದೆಯಾದರೂ ಕೆಲಕ್ಕೆ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಪತ್ನಿ ಅಥವಾ ಸಂಗಾತಿಯೊಂದಿಗೆ ಜಗಳ ಆಗುವ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳುವಿರಿ. ಈ ವಾರದಲ್ಲಿ ವ್ಯವಹಾರ ಮಾಡುವಾಗ ತುಸು ಜಾಗೃತೆ. ದೇವರ ಆರಾಧನೆ ಮಾಡಿ.
ಮಿಥುನ ರಾಶಿ
ಮಿಥುನ ರಾಶಿಗೆ ಈ ವಾರ ಮಿಶ್ರಫಲವಿದೆ. ತಾಯಿಯ ಆಶೀರ್ವಾದ ಈ ವಾರ ಇರಲಿದೆ. ಕೆಲ ವಸ್ತುಗಳ ವ್ಯಾಪಾರಿಗಳಿಗೆ ಲಾಭ ಆಗಲಿದೆ. ಮನೆಯಲ್ಲಿ ಕೆಲ ಸೌಕರ್ಯ ಸಿಗಲಿದೆ. ಸಂಗಾತಿಯ ಪ್ರೀತಿ ಕಡಿಮೆ ಆಗಲಿದೆ. ಈ ವಾರ ಎಚ್ಚರಿಕೆಯಿಂದ ವಾಹನ ಓಡಿಸಿ, ಅಪಘಾತದ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳು ಈ ವಾರ ಸುಗಮವಾಗಿ ಮುಗಿಯಲಿವೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಶುಭವಿದೆ. ನಿಮ್ಮ ಕೆಲವು ಇಚ್ಛೆಗಳು ಈ ವಾರ ಪೂರ್ಣವಾಗಲಿವೆ. ಕರ್ಕ ರಾಶಿಯವರು ಈ ವಾರ ಉದ್ಯೋಗದಲ್ಲಿ ಯಶಸ್ಸು ಪಡೆಯುವರು, ಪ್ರಶಂಸೆ ಗಳಿಸುವರು. ಕೀಟನಾಶಕ ವ್ಯವಹಾರ ಮಾಡುವವರಿಗೆ ನಷ್ಟವಾಗಲಿದೆ. ಅನಾರೋಗ್ಯದಿಂದ ಇದ್ದರೆ ಈ ವಾರ ಆರೋಗ್ಯವಂತರಾಗುವಿರಿ. ಆದರೂ ವಾರದ ಮಧ್ಯಭಾಗದಲ್ಲಿ ತುಸು ಎಚ್ಚರವಾಗಿರಿ.
ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ: ಈ ತಿಂಗಳ ಭವಿಷ್ಯ ಹೇಗಿದೆ?
ಸಿಂಹ ರಾಶಿ
ಉದ್ಯೋಗದಲ್ಲಿರುವವರಿಗೆ ಉತ್ತಮ ಸ್ಥಾನ ಸಿಗಲಿದೆ. ವಿಶೇಷವಾಗಿ ಸರ್ಕಾರಿ ಉದ್ಯೋಗದಲ್ಲಿ. ಜೊತೆಗೆ ಮೇಲಾಧಿಕಾರಿಗಳ ಅವಕೃಪೆಗೂ ಪಾತ್ರವಾಗಬಹುದು. ವಾಹನ ವ್ಯಾಪಾರ ಮಾಡುವವರಿಗೆ ಲಾಭ ಇದೆ. ಕುಟುಂಬದವರೊಟ್ಟಿಗೆ ಸಮಯ ಕಳೆಯಿರಿ. ಇದರಿಂದ ನಿಮ್ಮ ತಂದೆಗೆ ಸಂತೋಷಪಡುತ್ತಾರೆ ಮತ್ತು ಅವರು ಮನಃಪೂರ್ವಕವಾಗಿ ನಿಮ್ಮನ್ನು ಆಶೀರ್ವದಿಸುತ್ತಾರೆ. ಕಣ್ಣಿನ ತೊಂದರೆ ಕಾಣಿಸುವುದು.
ಕನ್ಯಾ ರಾಶಿ
ಈ ವಾರ ಕನ್ಯಾ ರಾಶಿಯವರಿಗೆ ಶುಭ ಫಲವಿದೆ. ಕಲಾವಿದರಿಗೆ ಶುಭ ಆಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ವಾರ ಅದೃಷ್ಟ ಇರಲಿದೆ. ಅಪೂರ್ಣವಾಗಿರುವ ಕೆಲಸವನ್ನು ಪೂರ್ಣಗೊಳಿಸಿ. ಸಂಗಾತಿಯೊಂದಿಗೆ ವೈಮನಸ್ಯ ಉಂಟಾಗಲಿದೆ. ಅನಾರೋಗ್ಯಕ್ಕೆ ತುತ್ತಾಗಲಿದ್ದೀರಿ. ಹಳೆ ಸಮಸ್ಯೆಗಳು ಉಲ್ಬಣಗೊಳ್ಳಲವೆ. ಈ ವಾರ ಒತ್ತಡದಲ್ಲಿದ್ದೀರಿ.
ತುಲಾ ರಾಶಿ
ಕಲಾವಿದರಿಗೆ ಹೊಸ ಕೆಲ ಸಿಗಲಿದೆ. ಕ್ರಿಯಾಶೀಲ ಕೆಲಸಕ್ಕೆ ಆದ್ಯತೆ ಸಿಗಲಿದೆ. ವ್ಯಾಪಾರಿಗಳಿಗೆ ಪ್ರತಿಸ್ಪರ್ಧೆ ಜೋರಾಗಿ ಇರಲಿದೆ. ಈ ವಾರ ಸಾಲ ಸಿಗಲಿದೆ. ಆದರೆ ಎಚ್ಚರವಿರಲಿ. ಈ ವಾರ ದೇಹಕ್ಕೆ ಮತ್ತು ಮನಸಿಗೆ ಘಾಸಿ ಆಗಲಿದೆ. ಬರಹಗಾರರಿಗೆ ತುಸು ಒಳ್ಳೆಯ ಸಮಯ. ಶತ್ರು ಬಾಧೆಯೂ ಇರುವುದಿಲ್ಲ, ಆರೋಗ್ಯವು ಚೇತರಿಕೆ ಆಗಲಿದೆ.
ವೃಶ್ಚಿಕ ರಾಶಿ
ಇಷ್ಟು ದಿನ ಇದ್ದ ಕೆಲವು ಕಷ್ಟಗಳು ನಿವಾರಣೆ ಆಗಲಿವೆ. ಸಂಗಾತಿಯ ಜೊತೆಗೆ ಮುನಿಸು ಮೂಡಲಿದೆ. ಈ ವಾರ ದೊಡ್ಡವರ ಸಾಂಗತ್ಯ ಸಿಗಲಿದೆ. ಉದ್ಯೋಗದಲ್ಲಿ ಕೆಲವು ಸಮಸ್ಯೆಗಳು ಬರುವುದು. ಕುಟುಂಬದ ಸಹಕಾರ ಕಳೆದುಕೊಳ್ಳಬೇಡಿ. ಹೃದಯದ ಬಗ್ಗೆ ಕಾಳಜಿ ಇರಲಿ. ಅಜಾಗರೂಕತೆಯಿಂದ ಯಾವುದೇ ಕೆಲಸ ಮಾಡಬೇಡಿ.
ಧನು ರಾಶಿ
ಧನು ರಾಶಿಯವರು ಈ ವಾರ ತುಸು ಎಚ್ಚರದಿಂದಿರಿ. ಅಪಮಾನ ರೋಗಭಾದೆಗಳಿಂದ ದೂರ ಉಳಿಯಿರಿ. ಪ್ರಮುಖ ನಿರ್ಧಾರಗಳನ್ನು ಈ ವಾರ ತೆಗೆದುಕೊಳ್ಳಬೇಕಾಗುತ್ತದೆ. ತಂದೆಗೆ ಒತ್ತಡ ಇರಲಿದೆ. ಉದ್ಯೋಗದಲ್ಲಿ ಹಿನ್ನಡೆ ಅನುಭವಿಸಲಿದ್ದೀರಿ. ವ್ಯಾಪಾರಕ್ಕೆ ಇತರರ ಹಣ ಬಳಸಬೇಡಿ. ವಿನಾಕಾರಣ ಸಿಟ್ಟು ಪ್ರದರ್ಶಿಸುವುದು ಬೇಡ. ಶತ್ರುಗಳ ಕಾಟ ಇರಲಿದೆ ಎಚ್ಚರ ಇರಲಿ.
ಮಕರ ರಾಶಿ
ನಿಂತು ಹೋಗಿರುವ ವಿವಾಹ ಮಾತುಕತೆ ಮುಂದುವರೆಸಬಹುದು. ಉದ್ಯೋಗದಲ್ಲಿ ಪ್ರಗತಿ ಆಗಲಿದೆ. ಉದ್ಯಮಿಗಳಿಗೆ ಅಲ್ಪ ಲಾಭವಿದೆ. ಸರ್ಕಾರದ ಕಾರ್ಯಗಳನ್ನು ಮುಂದೂಡಿ. ಮಕ್ಕಳ ವಿಚಾರದಲ್ಲಿ ಖುಷಿ ಸಿಗಲಿದೆ. ಇಷ್ಟವಿಲ್ಲದ ಕಾರ್ಯ ಮಾಡಲು ಹೋಗಬೇಡಿ. ಧೈರ್ಯದಿಂದ ಕೆಲಸ ಮಾಡಿ, ಮುನ್ನುಗ್ಗಿ.
ಕುಂಭ ರಾಶಿ
ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಿಶ್ರಫಲ. ಯಾವುದೇ ಕೆಲಸ ಮಾಡುವಾಗ ಜಾಗೃತೆ ಇರಲಿ, ತಪ್ಪಾಗಬಹುದು. ನಿಮ್ಮ ಮಾತು ಜನರನ್ನು ಆಕರ್ಷಿಸಲಿದೆ. ಎಚ್ಚರಿಕೆಯಿಂದ ಮಾತನಾಡಿ, ಮಾತಿನಿಂದ ಗೌರವ ಸಿಗಲಿದೆ. ವಾಹನ ಯೋಗ ಇದೆ. ತಾಯಿಯ ಆಶೀರ್ವಾದ ಸಿಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಇಲ್ಲದ ಆರೋಪ ಬರಬಹುದು.
ಮೀನ ರಾಶಿ
ಈ ವಾರ ಮಿಶ್ರಫಲವಿದೆ. ನಿಮಗೆ ಗುರುಬಲ ಇಲ್ಲದೇ ಆಗಿದೆ. ಕೆಟ್ಟ ಯೋಚನೆಗಳು ಬರಬಹುದು. ಮಾಡಬೇಕಾದ ಕೆಲಸವನ್ನು ಮಾಡದೇ ಬಿಡುವಿರಿ. ಸೋಮಾರಿತನ ಬೇಡ. ವ್ಯಾಪಾರ ಮಾಡುವಾಗ ಎಚ್ಚರಿಕೆ ಅಗತ್ಯ. ವಿವಾಹದಲ್ಲಿ ವಿಷಯದಲ್ಲಿ ಸಣ್ಣ ಹಿನ್ನಡೆ. ಸ್ನೇಹಿತರ, ಸಂಗಾತಿಯ ಸಹಾಯ ಸಿಗಲಿದೆ. ಹಿರಿಯರ ಆಶೀರ್ವಾದ ಪಡೆಯಿರಿ.