Weekly Horoscope: ಈ ವಾರ ನಿಮ್ಮ ಭವಿಷ್ಯ ಹೇಗಿದೆ? ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ

0
182
weekly Horoscope
ವಾರ ಭವಿಷ್ಯ

Weekly Horoscope

ಮೇಷ ರಾಶಿ

ಮೇಷ ರಾಶಿಯವರಿಗೆ ಸಂಬಂಧಗಳಲ್ಲಿ ಸಮಸ್ಯೆ ಬರಬಹುದು. ನಿಮ್ಮ ಸಾಧನೆಗಳು ನಿಮಗೆ ಖುಷಿ ನೀಡುತ್ತವೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಬೇರೊಬ್ಬರ ಬಳಿ ಹಣಕಾಸಿನ ಸಹಾಯ ಬೇಡಬೇಡಿ. ಸಂಗಾತಿ ಮುನಿಸಿಕೊಳ್ಳಬಹುದು. ನಿಮ್ಮ ಮುಂದಾಲೋಚನೆಯಿಂದ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಕೊಟ್ಟ ಮಾತು ಉಳಿಸಿಕೊಳ್ಳುವಿರಿ. ಕಾರ್ತಿಕೇಯನ ಉಪಾಸನೆ ಮಾಡಿ.

ವೃಷಭ ರಾಶಿ

ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡಿ. ಗುರಿಯ ಕಡೆಗೆ ಗಮನ ಹರಿಸಲಿದ್ದೀರಿ. ದುಂದು ವೆಚ್ಚವನ್ನು ಬುದ್ಧಿವಂತಿಕೆಯಿಂದ ಕಡಿಮೆ ಮಾಡಿ. ಖರ್ಚು-ವೆಚ್ಚದ ಬಗ್ಗೆ ಎಚ್ಚರ ಇರಲಿ. ಕಚೇರಿ ಕೆಲಸದಲ್ಲಿ ದೋಷಗಳು ನಡೆಯಬಹುದು, ಎಚ್ಚರಿಕೆಯಿಂದ ಕೆಲಸ ಮಾಡಿ. ಕೆಲಸಕ್ಕೆ ಬಾರದ ವಾದ-ವಿವಾದಗಳಿಂದ ಅಂತರ ಕಾಯ್ದುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರಿಕೆಯಿಂದಿರಿ.

ಮಿಥುನ ರಾಶಿ

ನಿರುತ್ಸಾಹ ಕಾಡಲಿದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗಲಿದೆ. ವಾರದ ಕಡೆಯಲ್ಲಿ ಶುಭವಿದೆ. ಕೆಲಸದಲ್ಲಿ ತಪ್ಪುಗಳು ಆಗುವ ಸಂಭವ ಇದೆ ಎಚ್ಚರಿಕೆಯಿಂದ ಕೆಲಸ ಮಾಡಿ. ಸಂಗಾತಿ ಮತ್ತು ನಿಮ್ಮ ಪ್ರೀತಿ ಪಾತ್ರರಿಂದ ಉತ್ತಮ ಬೆಂಬಲ ಪ್ರಾಪ್ತವಾಗುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಶ್ರೀರಾಮನಿಗೆ ಪಾಯಸ ಅರ್ಪಿಸಿ.

ಕರ್ಕಾಟಕ ರಾಶಿ

ಈ ವಾರ ನಿಮಗೆ ಶುಭ. ಅಂದುಕೊಂಡ ಕೆಲಸ ಆಗುವುದು. ಹೂಡಿಕೆದಾರರಿಗೆ ಒಳ್ಳೆಯ ಲಾಭವಿದೆ. ಹೊಸ ಅಧಿಕಾರ ಪ್ರಾಪ್ತವಾಗುತ್ತದೆ. ಭೂಮಿಗೆ ಸಂಬಂದಿಸಿದ ವ್ಯವಹಾರ ಮಾಡುವವರಿಗೆ ಗೆಲವು, ಲಾಭ ಪಡೆಯುತ್ತಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರಲಿವೆ. ಅತಿಯಾದ ನಿರೀಕ್ಷೆ ಸರಿಯಲ್ಲ. ಅತಿಯಾದ ಉತ್ಸಾಹವೂ ಬೇಡ.

ಸಿಂಹ ರಾಶಿ

ಅನಿರೀಕ್ಷಿತ ಬರುವ ಸುದ್ದಿ ಸಂತೋಷ ಕೊಡಲಿದೆ. ಸರ್ಕಾರಕ್ಕೆ ಸಂಬಂಧಪಟ್ಟ ಕಾರ್ಯಗಳು ಸಮಸ್ಯೆ ಇಲ್ಲದೆ ನಡೆಯಲಿವೆ. ವಿದ್ಯಾರ್ಥಿಗಳು ಶ್ರಮಪಟ್ಟರೆ ಗೆಲುವಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ವಿದೇಶಕ್ಕೆ ಹೋಗಲು ಬಯಸುವ ವ್ಯಕ್ತಿಗಳು ಅವಕಾಶ ಸಿಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳು ಬೇಡ. ಮಾತು ಹಿತವಾಗಿರಲಿ.

ಕನ್ಯಾ ರಾಶಿ

ಈ ವಾರ ಶತ್ರುಗಳ ಕಾಟವಿದೆ. ಆದರೆ ಎಚ್ಚರಿಕೆಯಿಂದ ಇದ್ದರೆ ಶತ್ರು ವಿನಾಶ ಆಗಲಿದೆ. ಈ ವಾರ ಬರಬೇಕಾದ ಆದಾಯ ಬಾರದೆ ಹೋಗಬಹುದು. ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಬರಲಿದೆ. ವಿದೇಶ ಪ್ರವಾಸಕ್ಕೆ ಸಕಾಲ. ಹೊಸ ಪಾಲುದಾರರ ಜೊತೆಗೆ ವ್ಯವಹಾರ ಸುಗಮವಾಗಲಿದೆ. ಮನಸ್ಸನ್ನು ದೃಢವಾಗಿಸಿಕೊಳ್ಳಿ.

ತುಲಾ ರಾಶಿ

ಕೆಲಗಳಿಗೆ ಮೆಚ್ಚುಗೆ ಸಿಗಲಿದೆ. ಆದಾಯ ಹೆಚ್ಚಾದಂತೆ ಖರ್ಚು ಸಹ ಈ ವಾರ ಹೆಚ್ಚಿಗೆ ಆಗಲಿದೆ. ಸ್ಪೂರ್ತಿ ದೊರಕುವ ಘಟನೆಗಳು ನಡೆಯಲಿವೆ. ಧನ ನಷ್ಟದ ಸಂಭವ ಇದೆ ಎಚ್ಚರಿಕೆ ಇರಲಿ. ಹಳೆಯ ಗೆಳೆಯರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಸಂಗಾತಿ ಕುರಿತಾಗಿ ಬೇಸರವಾಗುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಶ್ಚಿಕ ರಾಶಿ

ಉತ್ತಮ ಅವಕಾಶ ಈ ವಾರ ಸಿಗಲಿದೆ, ಸಕಾರಾತ್ಮಕವಾಗಿ ಬಳಸಿಕೊಳ್ಳಿ. ಈ ವಾರ ತುಸು ಅದೃಷ್ಟವಿದೆ. ಬಹುದಿನಗಳ ಕನಸು ಈ ವಾರ ನನಸಾಗುವ ಸಾಧ್ಯತೆ ಇದೆ. ಜನಪ್ರಿಯ ವ್ಯಕ್ತಿಗಳೊಡನೆ ಮಾತುಕತೆ ಸ್ಪೂರ್ತಿ ತುಂಬಲಿದೆ. ಉದ್ಯಮಿಗಳು ಹೊಸ ಉದ್ಯಮಗಳನ್ನು ಹುಡುಕುತ್ತಾರೆ. ಆರೋಗ್ಯ ಚೆನ್ನಾಗಿರಲಿದೆ. ಉತ್ಸಾಹದಿಂದ ಕೆಲಸ ಮಾಡಿ ಗೆಲುವು ನಿಮ್ಮದಾಗಲಿದೆ. ಸೋತರೆ ನಿರಾಶೆ ಬೇಡ.

ಧನು ರಾಶಿ

ನೌಕರಿ ಬೇಸರ ತರಿಸುತ್ತದೆ, ಬೇರೆ ಕೆಲಸ ಹುಡುಕುವ ನಿರ್ಧಾರ ಮಾಡಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿಸ್ಪರ್ಧಿಗಳ ಜೊತೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಅನವಶ್ಯಕ ವಾದಕ್ಕೆ ಇಳಿದರೆ ಸಮಯ ವ್ಯರ್ಥ ಆಗಲಿದೆ. ಆತುರದ ನಿರ್ಧಾರಗಳು ಸಮಸ್ಯೆ ತರಲಿವೆ. ಉದ್ಯೋಗದ ಬಗ್ಗೆ ಆತುರದ ನಿರ್ಧಾರ ಬೇಡ, ಅನುಭವಿಗಳೊಟ್ಟಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ಇಕ್ಕಟ್ಟು ಸೃಷ್ಟಿ ಆಗಲಿದೆ. ಮಕ್ಕಳ ಬಗ್ಗೆ ಎಚ್ಚರವಿರಲಿ.

ಮಕರ ರಾಶಿ

ಹೂಡಿಕೆ ಮಾಡುವ ಮುನ್ನ ಜಾಗೃತೆ ಇರಲಿ. ಮನಸ್ಸು ಉತ್ಸಾಹ ಭರಿತವಾಗಿರುತ್ತದೆ. ಕೆಲವರಿಂದ ಗೌರವಕ್ಕೆ ಧಕ್ಕೆ ತರಬಹುದು. ಕೆಲವು ಹೊಸಬರ ಪರಿಚಯ ಆಗುತ್ತದೆ. ಒಳ್ಳೆಯ ನಿರ್ಧಾರಗಳಿಂದ ಒಳಿತೇ ಆಗುತ್ತದೆ. ಅನುಭವಿಗಳ ಸಲಹೆ ಪಡೆದು ಮುಂದುವರೆದರೆ ಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ. ದೇವರ ಆರಾಧನೆ ಬಿಡಬೇಡಿ.

ಕುಂಭ ರಾಶಿ

ಕೆಲಸದಲ್ಲಿ ನಿಮ್ಮ ಪ್ರತಿಭೆ ತೋರಿಸಲು ಅವಕಾಶ ಸಿಗಲಿದೆ. ಹೊಸ ವ್ಯಾಪಾರದಿಂದ ಲಾಭ ಸಿಗಲಿದೆ. ಕಷ್ಟಪಟ್ಟು ಕೆಲಸ ಮಾಡುವ ಕೆಲವರಿಗೆ ಒಳ್ಳೆಯ ಫಲ ಸಿಗಲಿದೆ. ಹಿರಿಕರ ಸಂಪತ್ತು ನಿಮ್ಮದಾಗಿಸಲು ಹಲವು ಅಡೆತಡೆ ಆಗಲಿದೆ. ತಾಳ್ಮೆಯಿಂದ ವ್ಯವಹಿರಿಸಿದರೆ ಇಕ್ಕಟ್ಟಿನಿಂದ ಪಾರಾಗುವಿರಿ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಮೀನ ರಾಶಿ

ಕೆಲವು ಕಠಿಣ ಸವಾಲುಗಳು ಎದುರಾಗಲಿವೆ ಆದರೆ ದಿಟ್ಟತನದಿಂದ ಎದುರಿಸಿ. ಸವಾಲುಗಳಿಂದ ಧೈರ್ಯ ಹೆಚ್ಚಲಿದೆ. ವೈಯಕ್ತಿಕ ವಿಷಯಗಳನ್ನು ನಿರ್ಲಕ್ಷ್ಯ ಮಾಡುವಿರಿ. ಉತ್ತಮ ಕೆಲಸ ಗಮಿಸಿ ಹಿರಿಯರಿಂದ ಪ್ರಶಂಸೆ ಸಿಗಲಿದೆ. ಇದು ನಿಮ್ಮ ವಿಶ್ವಾಸ ಹೆಚ್ಚಿಸಲಿದೆ. ಈ ವಾರ ಕೆಲವು ಒಳ್ಳೆಯ ಘಟನೆ ನಡೆಯಲಿವೆ. ವೈವಾಹಿಕ ಜೀವನದಲ್ಲಿ ಏರಿಳಿತ.

LEAVE A REPLY

Please enter your comment!
Please enter your name here