Weekly Horoscope: ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ, ಮೇ 12 ರಿಂದ 19ರ ವರೆಗಿನ ರಾಶಿ ಭವಿಷ್ಯ ಇಲ್ಲಿವೆ

0
167
Weekly Horoscope

Weekly Horoscope

ಮೇಷ ರಾಶಿ
ಮೇಷ ರಾಶಿಯವರು ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಈ ವಾರ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಆದರೆ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೆಲವು ಕಷ್ಟಕರ ಸಂದರ್ಭಗಳು ಸಹ ಬರಬಹುದು. ಚಿಂತನಶೀಲವಾಗಿ ಕೆಲಸ ಮಾಡಬೇಕಾಗುತ್ತದೆ. ಪೂರ್ಣ ಪರಿಶ್ರಮ ಹಾಕಿ ಕೆಲಸ ಮಾಡಿ ಒಳಿತಾಗುತ್ತದೆ. ವಾರದ ಅಂತ್ಯದಲ್ಲಿ ತುಸು ಒತ್ತಡ ಪರಿಸ್ಥಿತಿ ನಿರ್ಮಾಣವಾಗಲಿದೆ. ಕುಟುಂಬದಲ್ಲಿ ಸಹೋದರ, ಸಂಬಂಧಿಗಳ ಜೊತೆಗೆ ಸಣ್ಣ ವಿವಾದಗಳು ಉಂಟಾಗಬಹುದು. ವಿವಾದಗಳನ್ನು ತಪ್ಪಿಸುವ ಪ್ರಯತ್ನ ಮಾಡಿ.

ವೃಷಭ ರಾಶಿ
ಈ ವಾರ ಕೆಲವು ಸಮಸ್ಯೆಗಳು ಬಗೆ ಹರಿಯಲಿವೆ. ವಾರದ ಮಧ್ಯಭಾಗದಲ್ಲಿ ಲಾಭ ಸಹ ಸಿಗಲಿದೆ. ಜಾಣತನದಿಂದ, ಎಚ್ಚರಿಕೆಯಿಂದ ವ್ಯಾಪಾರ-ವ್ಯವಹಾರ ಮಾಡಿ. ಯಾವುದೇ ಕೆಲಸ ಮಾಡಲು ಆತುರತೆ ಬೇಡ. ಪ್ರೀತಿಪಾತ್ರರಿಂದಾಗಿ ಕುಟುಂಬದಲ್ಲಿ ಸಮಾಧಾನದ ವಾತಾವರಣ ಇರಲಿದೆ. ಹಳೆಯ ಗಾಯಗಳನ್ನು ಕೆರೆಯುವ ಪ್ರಯತ್ನ ಬೇಡ. ಸಿಹಿಯಾಗಿ ಮಾತನಾಡಿ, ಹಳೆಯ ದ್ವೇಷವು ವಾಸಿಯಾಗುತ್ತವೆ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ, ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ
ಈ ವಾರ ಶ್ರಮದಾಯಕವಾಗಿರಲಿದೆ. ನೀವು ಅಂದುಕೊಂಡಿರುವ ಗುರಿಯ ಕಡೆಗೆ ನಡೆಯಲು ಯತ್ನಿಸಿ. ಗುರಿ ತಲುಪಲು ಸರಿಯಾಗಿ ಯೋಜನೆಗಳನ್ನು ಹಾಕಿಕೊಳ್ಳಿ. ನಿರೀಕ್ಷಿತ ಕೆಲಸಗಳು ಆಗುತ್ತವೆ. ಹೂಡಿಕೆ ದೊರೆತು ದೊಡ್ಡ ಲಾಭ ಸಿಗುವ ಸಾಧ್ಯತೆಯೂ ಇದೆ. ಬೆಣ್ಣೆಯಂಥಹಾ ಮಾತುಗಳಿಗೆ ಮರುಳಾಗಬೇಡಿ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸಿ. ಸಮಯಕ್ಕೆ ಊಟ ಮಾಡಿ, ಇಲ್ಲವಾದರೆ ಆರೋಗ್ಯ ಸಮಸ್ಯೆ ಉದ್ಭವಿಸಬಹುದು. ಈ ವಾರ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ
ಈ ವಾರ ಕರ್ನಾಟಕ ರಾಶಿಯವರಿಗೆ ಬಯಸಿದ ಕೆಲಸ ಸಿಗುವ ಯೋಗವಿದೆ. ಬಟ್ಟೆ-ಬರೆಗಳ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಸಿಗುವ ಸಾಧ್ಯತೆ ಇದೆ. ವೃತ್ತಿಯ ಕಾರಣಕ್ಕೆ ಹೆಚ್ಚು ಪ್ರಯಾಣ ಮಾಡಬೇಕಾಗಬಹುದು. ನೀವು ತಾಯಿಯ ಬೆಂಬಲ ನಿಮಗೆ ಸಿಗುತ್ತದೆ. ಇದರಿಂದ ನಿಂತಿರುವ ಕೆಲಸಗಳು ಪೂರ್ಣವಾಗುತ್ತವೆ. ಈ ವಾರ ಕೈಯಿಗೆ ಗಾಯವಾಗುವ ಸಾಧ್ಯತೆಗಳು ಇದೆ ಎಚ್ಚರಿಕೆ ಇರಲಿ. ಸುರಕ್ಷಿತವಾಗಿರಿ ಮತ್ತು ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಿ.

ಸಿಂಹ ರಾಶಿ
ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಬಡ್ತಿ ಸಿಗಲಿದೆ. ಈ ವಾರ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಬಹುದು. ಕ್ಷುಲ್ಲಕ ಕಾರಣದಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವಿವಾದದಿಂದ ಮಾನಸಿಕ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವಿವಾದದ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ತಪ್ಪಿಸಿ. ಮಹಿಳೆಯರು ಅತಿಯಾಗಿ ಒತ್ತಡ ತಂದುಕೊಳ್ಳದೇ ಇರುವುದು ಒಳಿತು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ. ನೀವು ಈಗಾಗಲೇ ಪೂರೈಸಲು ಯೋಜಿಸಿದ್ದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಆಲಸ್ಯದಿಂದ ಯಾವುದನ್ನೂ ಮುಂದೂಡುವುದು ಬೇಡ.

ಕನ್ಯಾ ರಾಶಿ
ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಪ್ರಯತ್ನ ಬಿಡುವುದು ಬೇಡ. ಧಾನ್ಯ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಿದೆ. ಸಣ್ಣ ವ್ಯಾಪಾರಿಗಳು ವ್ಯವಹಾರದಲ್ಲಿ ಸುಧಾರಣೆ ಕಾಣುವರು. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಅದರ ಬಗ್ಗೆ ಸರಿಯಾಗಿ ಮಾಹಿತಿ ಪಡೆಯಿರಿ, ಆತುರದಿಂದ ಯಾವುದೇ ಕೆಲಸ ಮಾಡುವುದು ಬೇಡ. ಸಹೋದರರ ಜೊತೆ ಮನಸ್ತಾಪ ಬರುವ ಸಾಧ್ಯತೆ ಇದೆ. ಭಿನ್ನಾಭಿಪ್ರಾಯದ ಸಮಯದಲ್ಲಿ ಪರಿಸ್ಥಿತಿಯನ್ನು ಗಮನಿಸಿ, ತಾಳ್ಮೆಯಿಂದ ವರ್ತಿಸಿ. ಎತ್ತರದಲ್ಲಿ ನಿಂತು ಕೆಲಸ ಮಾಡಬೇಡಿ. ಸಹಾಯವನ್ನು ಬಯಸಿದವರಿಗೆ ಸಹಾಯ ಮಾಡಿ. ದೇವರ ಪೂಜೆ ಮಾಡಿ.

ತುಲಾ ರಾಶಿ
ಈ ವಾರ ನಿಮಗೆ ಬರಬೇಕಿದ್ದ ಸಾಲ ಬಾಕಿ ವಾಪಸ್ ಬರುವ ಸಾಧ್ಯತೆ ಇದೆ. ತಾಳ್ಮೆಯಿಂದ ಪ್ರಯತ್ನಿಸಿ. ಉದ್ಯೋಗದಲ್ಲಿ ತುಸು ಸಮಾಧಾನ ಸಿಗಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರ ಮಾಡುವವರಿಗೆ ಈ ವಾರ ಲಾಭವಾಗಲಿದೆ. ವಿದ್ಯಾರ್ಥಿಗಳು ಶ್ರಮ ಪಟ್ಟರೆ ಅವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಕೆಲಸ ಮಾಡುವ ಮುನ್ನ ಯೋಜನೆಯನ್ನು ಸರಿಯಾಗಿ ಮಾಡಿಕೊಂಡು ಬಳಿಕ ಮುಂದುವರೆಯಿರಿ. ಮನೆಯ ಒಳಾಂಗಣವನ್ನು ಬದಲಾಯಿಸುವ ಸಾಧ್ಯತೆ ಇದೆ. ಮನೆಗೆ ಬೇಕಾದ ಕೆಲವು ಅವಶ್ಯಕ ವಸ್ತುಗಳನ್ನು ಖರೀದಿ ಮಾಡುವಿರಿ. ಇತರರಿಗೆ ಸಹಾಯ ಮಾಡಿ, ತೃಪ್ತಿ ಸಿಗಲಿದೆ.

ವೃಶ್ಚಿಕ ರಾಶಿ
ಈ ವಾರ ಎಚ್ಚರಿಕೆಯಿಂದ ಕೆಲಸ ಮಾಡಿ. ಮೇಲಿನ ಅಧಿಕಾರಿಗಳು ನಿಮ್ಮ ಪ್ರಾಮಾಣಿಕತೆಯನ್ನು ಪರೀಕ್ಷೆ ಮಾಡಬಹುದು. ವ್ಯವಹಾರವನ್ನು ಬುದ್ಧಿಯಿಂದ ನಡೆಸಿ. ಸಮಸ್ಯೆಗಳನ್ನು ಪರಿಹರಿಸಲು ಜಾಣತನವನ್ನು ಬಳಸಿ. ಅಹಂಕಾರ ಬಿಡಿ, ಅದರಿಂದ ಸಂಘರ್ಷ ಉಂಟಾಂಗಿ ಸಂಬಂಧದಲ್ಲಿ ಬಿರುಕು ಬರಬಹುದು. ಭಿನ್ನಾಭಿಪ್ರಾಯ, ವಿವಾದದ ಸನ್ನಿವೇಶ ಸೃಷ್ಟಿಯಾದರೆ ಅದನ್ನು ಜಾಣತನದಿಂದ ನಿರ್ವಹಿಸಿ. ಕುಟುಂಬದಲ್ಲಿ ತಂದೆಯ ಜೊತೆ ಭಿನ್ನಾಭಿಪ್ರಾಯ ಬರಬಹುದು. ಸಭ್ಯತೆ ಮತ್ತು ನಮ್ರತೆಯಿಂದ ಮಾತನಾಡುವುದರಿಂದ ಪರಿಸ್ಥಿತಿ ಸರಿ ಹೋಗಬಹುದು. ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ನೀವು ಹಿಂದೆ ಮಾಡಿದ ಶ್ರಮ ಈಗ ಫಲ ನೀಡಲಿದೆ.

ಧನು ರಾಶಿ
ಈ ವಾರ ಕೆಲಸ ಹೆಚ್ಚೇನು ಇರದು. ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ಯುವಕರು ವಿನಾ ಕಾರಣ ಚಿಂತೆ ಮಾಡುವರು. ಕೆಲವು ಋಣಾತ್ಮಕ ವ್ಯಕ್ತಿಗಳ ಸಹವಾಸದಿಂದ ದೂರವಾದರೆ ಮುಂದೆ ಒಳ್ಳೆಯದಾಗಲಿದೆ. ವಿನಾ ಕಾರಣ ಕೆಲವು ಆರೋಪಗಳು ಬರಬಹುದು. ಕುಟುಂಬದಲ್ಲಿ ಕೆಲವು ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರು ಮಾತಿನ ಮೇಲೆ ನಿಗಾ ಇರಲಿ. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಬಹುದು. ಕೈ ಹಿಡಿದ ಕೆಲಸವನ್ನು ಬಿಡಬೇಡಿ.

ಮಕರ ರಾಶಿ
ಈ ವಾರ ಸಹೋದ್ಯೋಗಿಗಳ ಮನಸ್ತಾಪ ಉಂಟಾಗುವುದು. ಆದರೆ ಜಗಳವನ್ನು ದೊಡ್ಡದು ಮಾಡುವುದು ಬೇಡ. ದೊಡ್ಡದು ಮಾಡಿದರೆ ನಿಮಗೇ ಸಮಸ್ಯೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಳ್ಳೆಯ ಸಮಯ. ಬಾಕಿ ಉಳಿದಿರುವ ವ್ಯವಹಾರಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಪ್ರಯತ್ನಿಸಿ. ಕೌಟುಂಬಿಕ ಕೆಲಸ ಮಾಡಲು ಮನೆಯಲ್ಲಿ ಎಲ್ಲರ ಒಪ್ಪಿಗೆ ಪಡೆಯಿರಿ. ಯಾವುದಾದರೂ ಕೆಲಸವಿದ್ದರೆ ಮೊದಲು ಎಲ್ಲರ ಜೊತೆ ಕುಳಿತು ಅವರ ಅಭಿಪ್ರಾಯ ತಿಳಿದುಕೊಳ್ಳಿ. ಮಾತುಗಳನ್ನು ಮೃದುವಾಗಿ ಆಡಿ.

ಕುಂಭ ರಾಶಿ
ಈ ವಾರ ಕೆಲಸದ ಒತ್ತಡ ತುಸು ಹೆಚ್ಚಾಗಿರುತ್ತದೆ. ಉದ್ಯಮಿಗಳು ತಮ್ಮ ಆನ್‌ಲೈನ್ ವ್ಯವಹಾರವನ್ನು ವಿಸ್ತರಿಸುವ ಮುನಸ್ಸು ಮಾಡುವರು. ಪರೀಕ್ಷೆ ಬರೆಯಲು ಯುವಕರು ಹುರುಪುನಿಂದ ತಯಾರಿ ನಡೆಸುವರು. ಪ್ರಯತ್ನ ಮಾಡಿದವರಿಗೆ ಫಲ ಸಿಗಲಿದೆ. ಮದುವೆಗೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಳ್ಳುವುವು. ಇದು ಕುಟುಂಬದ ಸಂತಸಕ್ಕೆ ಕಾರಣವಾಗುತ್ತದೆ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ದುರ್ವ್ಯಸ ತ್ಯಜಿಸಿ. ದುರಭ್ಯಾಸವು ಮಾರಣಾಂತಿಕ ಕಾಯಿಲೆಯ ರೂಪವನ್ನು ತೆಗೆದುಕೊಳ್ಳಬಹುದು. ಮದುವೆ ವಿಳಂಬವಾದರೂ ತೊಂದರೆ ಇಲ್ಲ, ಅರಸಿ ಬಂದ ಸಂಬಂಧವನ್ನು ಒಪ್ಪಿಕೊಳ್ಳಿ.

ಮೀನ ರಾಶಿ
ಈ ವಾರ ಉದ್ಯಮಿಗಳು ಲಾಭ ಮಾಡಲು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು. ಯುವಕರು ಕ್ರಿಯಾತ್ಮಕ ಕೆಲಸಗಳತ್ತ ಗಮನ ಹರಿಸಬೇಕು. ಪ್ರತಿಭಾ ಪ್ರದರ್ಶನಕ್ಕೆ ಇದು ಒಳ್ಳೆಯ ಸಮಯ. ಪೋಷಕರು ತಮ್ಮ ಮಕ್ಕಳ ಅಧ್ಯಯನದಲ್ಲಿ ಸಹಾಯ ಮಾಡಬೇಕು. ಮಕ್ಕಳ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಲು ಇದು ಸೂಕ್ತ ಸಮಯ. ಈ ವಾರ ತುಸು ಆಯಾಸ ಎನ್ನಿಸಬಹುದು ಆದರೆ ಸರಿಯಾದ ಜೀವನ ಕ್ರಮದಿಂದ ಆಯಾಸ ದೂರವಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿ ಸಂತೋಷವಿರಲಿದೆ.

LEAVE A REPLY

Please enter your comment!
Please enter your name here