Weekly Horoscope: ಅಕ್ಟೋಬರ್ ಮೊದಲ‌ವಾರ ಈ‌ 3 ರಾಶಿಗಳಿಗೆ ಭಾರಿ ಅದೃಷ್ಟ

0
241
weekly horoscope

Weekly Horoscope

ಅಕ್ಟೋಬರ್ ತಿಂಗಳ ಮೊದಲ ವಾರ. 30 ಸೆಪ್ಟೆಂಬರ್ ಅಕ್ಟೋಬರ್ 6ರ ವರೆಗೆ ಇರಲಿದೆ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಕೆಲ ಗ್ರಹಗಳ ಚಲನೆ ಇದ್ದು ಕೆಲವು ರಾಶಿಗಳ ಫಲಾಫಲದಲ್ಲಿ ಬದಲಾವಣೆ ಆಗಲಿದೆ.

ಮೇಷ ರಾಶಿ

ಈ ವಾರದಲ್ಲಿ ಮೇಷ ರಾಶಿಗೆ ಶುಭ ಫಲವಿದೆ. ಹೊಸ ಸಂಪತ್ತು ನಿಮ್ಮನ್ನು ಅರಸಿ ಬರಲಿದೆ. ಸಾಮಾಜಕ ಗೌರವವೂ ಪ್ರಾಪ್ತಿ ಆಗಲಿದೆ. ಎಲ್ಲೆಡೆ ಸುಖ-ಸಂತೋಷ ಇರಲಿದೆ. ಧಾರ್ಮಿಕ ಕಾರ್ಯಗಳು ನಡೆಯಲಿವೆ. ವಿವಾಹ ಮಾತುಕತೆ ಪೂರ್ಣವಾಗುತ್ತದೆ, ಕೆಲಸ ಹುಡುಕುತ್ತಿರುವವರಿಗೆ ಕೆಲಸ ದೊರಕುತ್ತದೆ. ಆದಾಯ ಚೆನ್ನಾಗಿದೆ, ದೇವರ ಆರಾಧನೆ ಮರೆಯಬೇಡಿ.

ವೃಷಭ ರಾಶಿ

ವೃಷಭ ರಾಶಿಗೂ ಈ ವಾರ ಮಿಶ್ರ ಫಲಗಳು ಇವೆ. ಜನರ ಬಗ್ಗೆ ಜಾಗೃತೆಯಾಗಿರಿ, ಯಾವಾಗ ಯಾರು ಬೇಕಾದರೂ ಶತ್ರುವಾಗಬಹುದು. ನಿಮ್ಮ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ಇದರಿಂದ ವೈರಿಗಳು ಹುಟ್ಟಿಕೊಳ್ಳಲಿದ್ದಾರೆ. ಕೆಲವು ಅಡೆ-ತಡೆಗಳು ಬರುತ್ತವೆ ಆದರೆ ಅವನ್ನು ನೀವು ನಿವಾರಿಸಿಕೊಳ್ಳುವಿರಿ. ಪ್ರತಿಭಾ ಪ್ರದರ್ಶನಕ್ಕೆ ಹೋಗಿ ಅವಮಾನ ಅನುಭವಿಸುವಿರಿ.

ಮಿಥುನ ರಾಶಿ

ಮಿಥುನ ರಾಶಿ ಅಶುಭ ಫಲವಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಸಾಕಷ್ಟು ಹಣ ಖರ್ಚಾಗುತ್ತದೆ, ಎಚ್ಚರಿಕೆಯಿಂದಿರಿ. ಕೆಲಸದ ಸ್ಥಳದಲ್ಲಿ ಮನಸ್ಸು ನಿಲ್ಲದು, ಮನಸ್ಸು ಬದಲಾವಣೆ ಬಯಸುತ್ತಿದೆ. ಕೌಟುಂಬಿಕ ಜೀವನದಲ್ಲಿಯೂ ನೆಮ್ಮದಿ ಇಲ್ಲ. ಕೆಲವು ಬದಲಾವಣೆಗಳು ಗೋಚರಿಸುತ್ತವೆ, ಅವುಗಳಿಂದ ಮುಂದೆ ಒಳ್ಳೆಯದಾಗಲಿದೆ. ಪೋಷಕರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಇರಲಿ, ಭವಿಷ್ಯ ಚೆನ್ನಾಗಿದೆ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಗೆ ಈ ವಾರ ಶುಭ ಇದೆ. ಇಷ್ಟು ದಿನ ಅನುಭವಿಸಿದ ಕಷ್ಟ ಕಳೆಯಲಿದೆ. ಹೊಸ ಉತ್ಸಾಹ ಮೂಡಲಿದೆ. ನಿಂತು ಹೋಗಿರುವ ಕೆಲಸಗಳನ್ನು ಮತ್ತೆ ಪ್ರಾರಂಭಿಸುವಿರಿ. ಕೆಲಸದಲ್ಲಿ ಬಡ್ತಿ ಸಿಗಲಿದೆ. ಕುಟುಂಬದಲ್ಲಿ ಸಂತಸ ಇರಲಿದೆ, ಸಂತಸಕ್ಕೆ ನೀವೇ ಕಾರಣ ಆಗಲಿದ್ದೀರಿ, ಧೈರ್ಯ, ಮುನ್ನುಗ್ಗುವ ಶಕ್ತಿ ನಿಮ್ಮದಾಗಲಿದೆ. ಮದುವೆ ಆಗದೇ ಇರುವವರಿಗೆ ಸಂಬಂಧದಲ್ಲೇ ವಧು ಸಿಗುವಳು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ವಾರ ಮಿಶ್ರ ಫಲ ಇದೆ. ಸುಳ್ಳು ಹೇಳಲು ಹೋಗಬೇಡಿ. ಕೆಲಸ ಮತ್ತು ಕೌಟುಂಬಿಕ ಜೀವನದಲ್ಲಿ ಏರು-ಪೇರು ಆಗಲಿದೆ. ಎಲ್ಲವನ್ನೂ ಸಹಿಸಿಕೊಳ್ಳಿ. ತಾಳ್ಮೆಯೇ ಮುಖ್ಯ ಅಸ್ತ್ರವಾಗಿರಲಿ, ವಿನಾಕಾರಣ ಜಗಳ ಬೇಡ. ಆರೋಗ್ಯದ ಬಗ್ಗೆ ಗಮನ ಹರಿಸಿ. ಪೋಷಕರ ಜೊತೆ ವೈಮನಸ್ಯ ಉಂಟಾಗಲಿದೆ. ಸಣ್ಣ-ಪುಟ್ಟ ಆದಾಯ ಬರಲಿದೆ. ಹೊಸದನ್ನು ಮಾಡುವ ಧೈರ್ಯವೂ ಇರಲಿದೆ.

ಕನ್ಯಾ ರಾಶಿ

ಈ ವಾರ ಕೆಲವು ಒಳ್ಳೆಯ ಸುದ್ದಿಗಳು ಕನ್ಯಾ ರಾಶಿಯನ್ನು ಅರಸಿ ಬರಲಿದೆ. ಕೆಲವು ಒಳ್ಳೆಯ ಘಟನೆ ನಡೆಯಲಿವೆ. ಕೆಲವು ಸಂದರ್ಭದಲ್ಲಿ ಗಟ್ಟಿ ನಿರ್ಧಾರಗಳ ಅವಶ್ಯಕತೆ ಇರಲಿದೆ. ಕೆಲಸ ಮಾಡುವ ಉತ್ಸಾಹ ಹೆಚ್ಚಾಗಲಿದೆ, ನಿಂತಿದ್ದ ಕೆಲಸಗಳಿಗೆ ಚಾಲನೆ ಸಿಗಲಿದೆ. ಮಾಡುತ್ತಿರುವ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಮನೆ ಕಟ್ಟುವ ಪ್ರಕ್ರಿಯೆ ಬಗ್ಗೆ ಆಲೋಚಿಸಲದ್ದೀರಿ. ಸಾಮಾಜಿಕ ಗೌರವ ಪ್ರಾಪ್ತಿ ಆಗಲಿದೆ. ರಾಜಕಾರಣದಲ್ಲಿ ಇರುವವರಿಗೆ ಶುಭ ಸಮಯ ಇದೆ.

ತುಲಾ ರಾಶಿ

ತುಲಾ ರಾಶಿಗೆ ಅಷ್ಟೊಳ್ಳೆ ಸಮಯ ಇದಲ್ಲ. ಅನವಶ್ಯಕ ವಿವಾದಗಳು ಮೇಮೇಲೆ ಬರುತ್ತವೆ. ನಿಮ್ಮಿಂದಲೇ ಕೆಲವು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅನಾರೋಗ್ಯವೂ ಕಾಡಲಿದೆ. ಆಸ್ಪತ್ರೆಗೆ ಹೋಗಬೇಕಾಗಿರುತ್ತದೆ. ಹಣ ಖರ್ಚಾಗಲಿದೆ. ನಿರಾಶರಾಗಬೇಡಿ, ಪೋಷಕರ ಆರೋಗ್ಯದಲ್ಲಿ ವ್ಯತ್ಯಯ ಆಗಲಿದೆ. ಹಣ ಖರ್ಚು ಆಗಲಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ಇರಲಿ.

ವೃಶ್ಚಿಕ ರಾಶಿ

ಈ ವಾರ ಶುಭ ಫಲ ಇದೆ. ನಿಮ್ಮನ್ನು ಕಾಡುತ್ತಿದ್ದ ಮಾನಸಿಕ ನೋವು, ತುಮಲ ಕಾಣೆ ಆಗಲಿವೆ. ನಿಮ್ಮ ನಷ್ಟಗಳು ಪರಿಹಾರ ಆಗಲಿವೆ, ಆರೋಗ್ಯ ಸುಧಾರಣೆಯೂ ಆಗಲಿದೆ. ಮಾನಸಿಕ ನೆಮ್ಮದಿ ಸಹ ಸಿಗಲಿದೆ. ಮದುವೆ ಆಗದವರಿಗೆ ಮದುವೆ ಮಾತುಕತೆ ನಡೆಯಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಂಡವರಗೆ ಇದು ಒಳ್ಳೆ ಸಮಯ. ಮಕ್ಕಳ ಬಗ್ಗೆ ಕಾಳಜಿ ಇರಲಿ.

ಧನಸ್ಸು ರಾಶಿ

ಈ ವಾರ ಶುಭ ಫಲ ಇಲ್ಲ. ಆರ್ಥಿಕ ಇಕ್ಕಟ್ಟು ಉಂಟಾಗುವುದು, ಖರ್ಚು ಮಾಡಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣ. ಆರೋಗ್ಯವೂ ಕೈಕೊಡುವುದು, ಮಾನಸಿಕ ಯೋಚನೆ ಮೂಡುವುದು. ನಿಮಗೆ ಸಂಬಂಧ ಇರದ ವಿವಾದ ಮೈಮೇಲೆ ಬರುವುದು ಎಚ್ಚರ ಇರಲಿ. ಕುಟುಂಬದಲ್ಲಿ ನೆಮ್ಮದಿ ಕಳೆಯುವುದು. ನಿಮ್ಮ ಸ್ಥಾನ ಪಲ್ಲಟ ಆಗಲಿದೆ. ಶನಿ‌ ಮೂರನೇ ರಾಶಿಯಲ್ಲಿ ಇದ್ದು ಸುಖವನ್ನು ಕೊಡುವನು. ಇವನ‌ ಅನುಗ್ರಹದಿಂದ ಪರ್ವತದಂತೆ ಇರುವ ತೊಂದರೆಯನ್ನು ಏನೂ ಇಲ್ಲದಂತೆ ಆಗುವುದು. ನಾಲ್ಕನೇ ರಾಶಿಯಲ್ಲಿ ರಾಹು ಇರುವುದು ತಾಯಿಯ ಜೊತೆಗಿನ ಸಂಬಂಧ ಹದಗೆಡಬಹುದು.‌ ವೃಥಾ ಅಲೆದಾಟ ಇರುತ್ತದೆ. ಬರುವುದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ.

ಮಕರ ರಾಶಿ

ಮಕರ ರಾಶಿಗೆ ಶುಭ ಫಲ ಇದೆ. ಕಾರ್ಯಗಳಲ್ಲಿ ಕೆಲವರಿಂದ ಸಹಾಯ ಸಿಗಲಿದೆ. ಹಿರಿಯರ ಆಶೀರ್ವಾದ ಸಿಗಲಿದೆ. ಮಾನಸಿಕ ತುಮುಲ ನಿವಾರಣೆ ಆಗಲಿದೆ. ಈ ವಾರ ಕೆಲವು ಒಳ್ಳೆಯ ಘಟನೆಗಳು ನಡೆಯಲಿದೆ. ಆಸ್ತಿ ಖರೀದಿ, ವಿದೇಶ ಪ್ರವಾಸ, ಹಣಕಾಸು ಲಾಭ, ನೌಕರಿ, ಮದುವೆಯಂಥಹಾ ಶುಭ ಸುದ್ದಿಗಳು ಬರಲಿವೆ. ಇದು ನಿಮಗೆ ಬಹಳ ಒಳ್ಳೆಯ ಸಮಯ ಸದುಪಯೋಗಪಡಿಸಿಕೊಳ್ಳಿ. ಈ ಹಿಂದಿನ ಕಷ್ಟಗಳು ನಿವಾರಣೆ ಆಗಲಿವೆ.

Weekly Horoscope: ಸೆಪ್ಟೆಂಬರ್ ತಿಂಗಳ ಕೊನೆ ವಾರದಲ್ಲಿ ಮೂರು ರಾಶಿಗಳ ಅದೃಷ್ಟ ಕೈಕೊಡಲಿದೆ

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಶುಭ ಫಲ ಸಿಗಲಿದೆ. ಗುರು ಬಲ ಇರಲಿದೆ. ಕೆಲವು ಅಶುಭ ಘಟನೆಗಳೂ ಸಹ ನಡೆಯಲಿದೆ. ಕೌಟುಂಬಿಕ ವಿಚಾರದಲ್ಲಿ ತುಸು ಹಿನ್ನಡೆ ಆಗಲಿದೆ. ತಾಳ್ಮೆಯಿಂದ ವ್ಯವಹರಿಸಿ. ಸಣ್ಣ-ಪುಟ್ಟ ಅನಾರೋಗ್ಯ ಕಾಡಲಿದೆ. ಹಣಕಾಸಿನ ಸಮಸ್ಯೆ ಸರಿ ಹೋಗಲಿದೆ. ಕೆಲವರಿಂದ ಅವಮಾನ ಆಗುವ ಸಂಭವ ಇದೆ, ಧೈರ್ಯದಿಂದ ಇರಿ.

ಮೀನ ರಾಶಿ

ಈ ವಾರ ಜಾಗರೂಕತೆಯಿಂದ ಇರಿ, ವಾಹನ ಓಡಿಸುವಾಗ ಎಚ್ಚರ ಇರಲಿ, ಬೈಕ್ ಓಡಿಸುವಾಗ ಹೆಲ್ಮೆಟ್ ಧರಿಸಿ, ಆತ್ಮೀಯರಿಂದಲೇ ಮೋಸ, ಅವಮಾನ ಆಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ಎದುರಾಗಲಿವೆ, ವೃಥಾ ಖರ್ಚುಗಳು ಸಹ ಆಗಲಿವೆ. ಪ್ರಾಮಾಣಿಕವಾಗಿರಿ, ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಪ್ರಾಮಾಣಿಕತೆ ಅವಶ್ಯಕ, ದೇವಾಲಯಕ್ಕೆ ಭೇಟಿ ನೀಡಿ.

LEAVE A REPLY

Please enter your comment!
Please enter your name here