Weekly Horoscope: ಜುಲೈ ತಿಂಗಳ ಕೊನೆಯ ವಾರ ಹೇಗಿರಲಿದೆ ನಿಮ್ಮ ಭವಿಷ್ಯ?

0
139
Weekly Horoscope

Weekly Horoscope

ಜುಲೈ ತಿಂಗಳ ಕೊನೆ ವಾರ ದಿನಾಂಕ 29 ರಿಂದ ಆಗಸ್ಟ್ 04 ರವರೆಗೆ ಇರಲಿದೆ. ಈ ತಿಂಗಳು ಕೆಲವು ಮಹತ್ವದ ಬದಲಾವಣೆಗಳು ರಾಶಿ ಚಕ್ರಗಳಲ್ಲಿ ನಡೆಯಲಿದೆ. ಅದರ ಆಧಾರದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ನಿಮ್ಮ ಈ ತಿಂಗಳ ಭವಿಷ್ಯ ಹೇಗಿರಲಿದೆ? ತಿಳಿಯಿರಿ.

ಮೇಷ ರಾಶಿ

ಮೊದಲ ರಾಶಿ ಮೇಷಕ್ಕೆ ಈ ವಾರ ಮಿಶ್ರ ಫಲವಿದೆ. ಸಂಪತ್ತು ಹಾಗೂ ದೈಹಿಕವಾದ ಆಪತ್ತು ಇರದು. ಬೇರೆ ಮೂಲದಿಂದ ಆದಾಯ ಬರುತ್ತಿದೆ. ಕಷ್ಟಪಟ್ಟಷ್ಟು ಲಾಭ ಬರಲಿದೆ. ಕೆಲವು ಕೆಟ್ಟ ಕೆಲಸಗಳು ನಿಮ್ಮಿಂದ ನಡೆಯಲಿವೆ. ಮದುವೆಗೆ ಇದು ಶುಭ ಸಮಯವಾಗಿದೆ. ನಿಂತಿದ್ದ ಮಾತುಗಳು ಮುಂದುವರೆಯಲಿದೆ.

ವೃಷಭ ರಾಶಿ

ಈ ವಾರ ದೇವಾಲಯಗಳಿಗೆ ಓಡಾಡುವಿರಿ. ಕುಟುಂಬದ ಜೊತೆಗೆ ದೇವಾಲಯಕ್ಕೆ ಹೋಗುವಿರಿ. ಈ ವಾರ ದೇವರಲ್ಲಿ ಭಕ್ತಿ ಮೂಡುತ್ತದೆ. ಉದ್ಯೋಗದಲ್ಲಿ ಕೆಲ ಸಮಸ್ಯೆಗಳು ಎದುರಾಗಲಿವೆ. ಕಷ್ಟದ ಸಮಯದಲ್ಲಿ ಆಪ್ತರ ಸಹಾಯ ಸಿಗಲಿದೆ. ಪತ್ನಿಯೊಟ್ಟಿಗೆ ಮಾತುಕತೆಗೆ ಸಮಯ ಸಿಗದು. ಪಟ್ಟ ಕಷ್ಟಕ್ಕೆ ಫಲ ಸಿಗುವುದಿಲ್ಲ. ಆದರೆ ಮುಂದೆ ದಿನಗಳು ಚೆನ್ನಾಗಿವೆ.

ಮಿಥುನ ರಾಶಿ

ಜುಲೈ ತಿಂಗಳ ಕೊನೆಯ ವಾರ ಮಿಥುನ ರಾಶಿಗೆ ಒಳ್ಳೆಯ ಫಲವಿದೆ. ಪತ್ನಿ, ತಾಯಿ, ಸಹೋದರಿಯರಿಂದ ಖರ್ಚಾಗುತ್ತದೆ. ವಾಹನ ಓಡಿಸುವಾಗ ಎಚ್ಚರದಿಂದಿರಿ. ಕೆಲಸದಲ್ಲಿ ಆಸಕ್ತಿ ಕಡಿಮೆ ಆಗಲಿದೆ. ಉದ್ಯೋಗವನ್ನೇ ತ್ಯಜಿಸುವ ಆಲೋಚನೆ ಮೂಡಲಿದೆ. ಮಾತು ಕಡಿಮೆ ಇರಲಿ, ಅನ್ಯತಾ ಯೋಚನೆ ಮಾಡಲು ಹೋಗಬೇಡಿ, ಒಳ್ಳೆಯ ಕೆಲಸಗಳಲ್ಲಿ ನಿಮ್ಮನ್ನು ಬ್ಯುಸಿಯಾಗಿಟ್ಟುಕೊಳ್ಳಿ. ತಾಳ್ಮೆಯನ್ನು ಕೆಡಿಸಿಕೊಳ್ಳಬೇಡಿ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಯವರಿಗೆ ಈ ವಾರ ಶುಭಫಲವಿದೆ. ಕೈಹಿಡಿದ ಕೆಲಸ ಮುಗಿಯುತ್ತದೆ. ಕೆಲಸದಲ್ಲಿ ತುಸು ಒತ್ತಡ ಇದೆ, ಸಹಿಸಿಕೊಳ್ಳಿ. ಹಿರಿಯರಿಗೆ, ಗುರುಗಳಿಗೆ ಗೌರವ ನೀಡಿ. ಕೆಲವು ಉತ್ಪನ್ನಗಳ ಮಾರಾಟದಿಂದ ಹಣ ಬರಲಿದೆ. ಅನಾರೋಗ್ಯ ಉಂಟಾಗಿದ್ದರೆ ವಾಸಿ ಆಗಲಿದೆ. ಸಂಕಷ್ಟದಲ್ಲಿದ್ದರೆ ಸೂಕ್ತ ಸಮಯಕ್ಕೆ ಸಹಾಯ ಸಿಗಲಿದೆ. ಬಂಧುಗಳು ನೆರವಿಗೆ ಬರಲಿದ್ದಾರೆ.

ಸಿಂಹ ರಾಶಿ

ಹಿಂಹ ರಾಶಿಗೆ ಈ ವಾರ ಸಾಧಾರಣ ಫಲವಿದೆ. ಕೆಲಸಗಳು ನಿಧಾನವಾಗಿ ನಡೆಯಲಿದೆ. ಯಾವುದೇ ಕೆಲಸವನ್ನು ಜಾಗೃತೆಯಿಂದ ಮಾಡಿ. ಪ್ರಯಾಣ ಯೋಗವಿದೆ. ಅನವಶ್ಯಕವಾಗಿ ಹಣ ಖರ್ಚಾಗಲಿದೆ. ನಂಬಿದವರು ನಿಂದನೆ ಮಾಡಲಿದ್ದಾರೆ. ನಿಮ್ಮ ಮೇಲೆ ಕೆಲವರಿಗೆ ಅನುಮಾನ ಬರುವುದು, ಎಲ್ಲರಿಗೂ ನೀವು ಉತ್ತರ ಕೊಡಲಾರಿರಿ. ವ್ಯವಹಾರಸ್ತರಾಗಿದ್ದರೆ ವ್ಯಾಪಾರದಲ್ಲಿ ಅಲ್ಪ ಹಿನ್ನಡೆ.

ಕನ್ಯಾ ರಾಶಿ :

ಕನ್ಯಾ ರಾಶಿಗೆ ಈ ವಾರ ಮಿಶ್ರಫಲವಿದೆ. ಕೆಲಸದಲ್ಲಿ ಕೆಲವು ಆತಂಕ ಬರಬಹುದು. ತಾಳ್ಮೆ ಕಳೆದುಕೊಳ್ಳಬೇಡಿ. ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಧೈರ್ಯಗೆಡುವುದು ಬೇಡ. ಎಲ್ಲವೂ ಬೇಗನೆ ಸರಿ ಹೋಗಲಿದೆ. ಶತ್ರುಗಳ ನಿವಾರಣೆ ಆಗಲಿದೆ. ನಿಮ್ಮ ಒಳ್ಳೆಯತನದ ಅರಿವು ಪತ್ನಿಗೆ ಆಗಲಿದೆ. ಕೋಪ ಅಧಿಕವಾಗುವುದು. ಸ್ವತಂತ್ರ್ಯವಾಗಿ ನಿರ್ಣಯ ತೆಗೆದುಕೊಳ್ಳಬೇಡಿ. ಅನುಭವಿಗಳ ಸಲಹೆ ಪಡೆಯಿರಿ.

ತುಲಾ ರಾಶಿ :

ಕೊನೆಯ ವಾರ ತುಲಾ ರಾಶಿಗೆ ಶುಭವಲ್ಲ. ರಾಶಿಯ ಅಧಿಪತಿಯೂ ಷಷ್ಠ ಸ್ಥಾನಾಧಿಪತಿಯೂ ನೀಚ ಸ್ಥಾನದ ಕಡೆಗೆ ಹೋಗಲಿದ್ದಾನೆ. ಅನಾರೋಗ್ಯದ ಕಾರಣಕ್ಕೆ ನೀವು ಖರ್ಚು ಮಾಡುವಿರಿ. ಅಪಮಾನವನ್ನು ಸಹಿಸಿಕೊಳ್ಳಲಾರಿರಿ. ವಿವಾಹದ ವಿಚಾರದಲ್ಲಿ ಪೂರ್ಣವಾದ ಮನಸ್ಸು ಇರದು. ಉದ್ಯೋಗದಲ್ಲಿ ಹೊಂದಾಣಿಕೆ ಇಲ್ಲವಾಗುವುದು. ಸಂಗಾತಿಯನ್ನು ಮನವೊಲಿಸಿ ಮುನ್ನಡೆಯಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸವು ಕಾರಣಾಂತರದಿಂದ ನಿಲ್ಲುವುದು. ಮುಂದುವರಿಸಲು ಪ್ರೇರಣೆ ಅಗತ್ಯ. ಬಂಧುಗಳ ಜೊತೆ ಮಿತಿಯಲ್ಲಿ ವರ್ತಿಸಿ. ಮಹಾಲಕ್ಷ್ಮಿಯ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ ರಾಶಿ :

ಜುಲೈ ತಿಂಗಳ ಈ ವಾರದಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭ ಫಲ. ದಾಂಪ್ಯದಲ್ಲಿ ಎಲ್ಲವೂ ಚೆನ್ನಾಗಿರುವುದಿಲ್ಲ. ತುಸು ಕಿರಿಕಿರಿ ಇರಲಿದೆ. ಅನವಶ್ತಕ ಜಗಳ ಆಗಲಿದೆ. ತಾಳ್ಮೆ ಇರಲಿ. ಮದುವೆಗೆ ಇದು ಒಳ್ಳೆಯ ಸಮಯ, ಒಳ್ಳೆಯ ಮಡದಿ ಸಿಗುವರು. ಕೆಲವು ಕೆಲಸಗಳು ಬೇಗ ಮುಗಿಯಲಿವೆ. ಆದಾಯ ಹೆಚ್ಚಾಗಲಿದೆ.

ಧನು ರಾಶಿ :

ಜುಲೈ ತಿಂಗಳ ಕೊನೆಯ ವಾರದಲ್ಲಿ ಈ ರಾಶಿಯವರಿಗೆ ಅಶುಭ ಫಲ. ಸ್ವರಾಶಿಯ ಅಧಿಪತಿಯೂ ಚತುರ್ಥ ಸ್ಥಾನಾಧಿಪತಿಯೂ ಆದ ಗುರುವು ಷಷ್ಠದಲ್ಲಿ ಇದ್ದಾನೆ. ಕೌಟುಂಬಿಕ ಸಮಸ್ಯೆಯನ್ನು ಎದುರಿಸಬೇಕಾಗುವುದು. ಕ್ಲೇಶಗಳು ಒಂದೊಂದಾಗಿ ನಿಮ್ಮನ್ನು ಕುಗ್ಗಿಸುವುವು. ವಿದೇಶದಲ್ಲಿ ಇರುವವರಿಗೆ ಆದಾಯ ಕಡಿಮೆ ಖರ್ಚು ಹೆಚ್ಚಾಗಲಿದೆ. ಹಿತಶತ್ರುಗಳಿಂದ ನೀವು ತಪ್ಪಿಸಿಕೊಳ್ಳಲು ಕಷ್ಟವಾಗುವುದು. ಸಂಗಾತಿಯಿಂದ ಆರ್ಥಿಕ‌ ಸಹಕಾರ ಸಿಗುವುದು. ವೃತ್ತಿಯಲ್ಲಿ ಕೆಲವು ಕಹಿ‌ಯಾದ ಮಾತುಗಳನ್ನು ಕೇಳಬೇಕಾಗುವುದು. ನಿಮ್ಮ ಬೆಳವಣಿಗೆಯು ಮಂದಗತಿಯಲ್ಲಿ ಸಾಗಲಿದೆ. ರಾಯರ ಸನ್ನಿಧಿಯಲ್ಲಿ ಸ್ವಲ್ಪ ಸಮಯ ಇದ್ದು ಬನ್ನಿ.

ಮಕರ ರಾಶಿ :

ಈ ತಿಂಗಳಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭ ಫಲ. ಕೊಟ್ಟ ಸಾಲಗಳು ವಾಪಸ್ಸು ಬರಲಿವೆ. ಪೋಷಕರು-ಮಕ್ಕಳ ನಡುವೆ ಮನಸ್ಥಾಪ ಬರಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯವಿದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಯಶಸ್ಸಿನ ಹಾದಿಯಲ್ಲಿದ್ದೀರಿ, ಶ್ರಮ ಪಡಿ. ಅತಿಯಾದ ಬುದ್ಧಿವಂತಿಕೆ ಪ್ರದರ್ಶನ ಮಾಡಬೇಡಿ. ಭಾರ ಎತ್ತುವ ಕೆಲಸ ಬೇಡ.

Manu Bhaker: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಭಾಕೆರ್ ಯಾರು?

ಕುಂಭ ರಾಶಿ :

ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರವು ಮಿಶ್ರ ಫಲ. ಧರ್ಯ ಇರಲಿದೆ ಆದರೆ ಕೆಲಸಗಳು ಪೂರ್ಣವಾಗದು. ಕೆಲವು ಗೊಂದಲಗಳು ಸಹ ಕಾಡಲಿವೆ. ಅತಿಯಾದ ಆಸೆ ಯಾವುದರ ಬಗ್ಗೆಯೂ ಬೇಡ. ಅತಿಯಾಸೆಯಿಂದ ಆಸ್ತಿ ಕಳೆದುಕೊಳ್ಳುವಿರಿ. ಜಮೀನು ಖರೀದಿ ಬಗ್ಗೆ ಯೋಚನೆ ಮಾಡುವಿರಿ. ಮಾತುಗಳು ಸಭ್ಯವಾಗಿರಲಿ. ಸಂಬಂಧಿಗಳು ವಿವಾಹ ಸಂಬಂಧ ತರಲಿದ್ದಾರೆ.

ಮೀನ ರಾಶಿ

ಮೀನ ರಾಶಿಗೆ ಈ ವಾರ ಮಿಶ್ರ ಫಲ. ಕೆಲಸದಲ್ಲಿ ತೊಂದರೆ ಇರಲಿದೆ. ಭಯ, ಗೊಂದಲ ಇರಲಿದೆ. ಅನಾರೋಗ್ಯ ಕಾಡಲಿದೆ. ವಿವಾಹ ಕಾರ್ಯ ನಿಂತು ಹೋಗಲಿದೆ. ಮದುವೆಗಳು ಮುರಿದು ಬೀಳಲಿವೆ. ವಿವಾಹಿತರಿಗೆ ಸಂಗಾತಿಯ ಮನೋಭಾವ ಅರ್ಥವಾಗದು. ಮದುವೆಯಾದ ಜೋಡಿಯ ನಡುವೆ ಭಿನ್ನಾಭಿಪ್ರಾಯ ಮೂಡಲಿದೆ.

LEAVE A REPLY

Please enter your comment!
Please enter your name here