weekly horoscope: ಅಕ್ಟೋಬರ್ ತಿಂಗಳ ಈ ವಾರ ಎರಡು ರಾಶಿಯವರಿಗೆ ಭಾರಿ ಅದೃಷ್ಟ

0
291
Weekly Horoscope

weekly horoscope

ಅಕ್ಟೋಬರ್ ತಿಂಗಳ ನಾಲ್ಕನೇ ವಾರ ಅಕ್ಟೋಬರ್ 21 ರಿಂದ ಅಕ್ಟೋಬರ್ 27ರ ವರೆಗೆ ಇರಲಿದೆ. ಈ ವಾರ ಕೆಲವು ರಾಶಿಗಳಲ್ಲಿ ಕೆಲವು ಬದಲಾವಣೆ ಆಗಲಿದೆ. ಕೆಲವು ರಾಶಿಗಳಿಗೆ ಈ ವಾರ ಅತ್ಯಂತ ಲಾಭದಾಯಕ ಆಗಿರಲಿದೆ. ಇನ್ನು ಕೆಲ ರಾಶಿಗಳವರು ಜಾಗೃತೆಯಾಗಿ ಇರಬೇಕಿದೆ. ಈ ವಾರ ಯಾರ ಭವಿಷ್ಯ ಹೇಗಿರಲಿದೆ? ತಿಳಿಯೋಣ ಬನ್ನಿ.

ಮೇಷ ರಾಶಿ

ಮೇಷ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಹೊಸ ಸಾಹಸಗಳಿಗೆ ಕೈ ಹಾಕುವಿರಿ. ಆಸ್ತಿ ಖರೀದಿ ಯೋಚನೆ ಮಾಡಲಿದ್ದೀರಿ. ಆದರೆ ಜಾಗೃತೆ ಇರಲಿ. ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಹಣಕಾಸಿನ ಹರಿವು ಈ ವಾರ ಚೆನ್ನಾಗಿರಲಿದೆ. ನಿಮ್ಮ ಹೆಸರು ಬಳಸಿ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದಾರೆ.

ವೃಷಭ ರಾಶಿ

ವೃಷಭ ರಾಶಿಗೆ ಈ ವಾರ ಅಷ್ಟೇನೂ ಶುಭ ಅಲ್ಲ. ಅನಾರೋಗ್ಯ ಕಾಡಲಿದೆ. ಶತ್ರುಗಳೊಟ್ಟಿಗೆ ಮುಖಾ-ಮುಖಿ ಆಗಲಿದೆ. ಕಲಾವಿದರಿಗೆ ಇದು ಒಳ್ಳೆಯ ಸಮಯ. ಒಳ್ಳೆಯ ಅವಕಾಶ, ಪ್ರಯಾಣ ಸೌಕರ್ಯ ಇರಲಿದೆ. ಮಾನಸಿಕವಾಗಿ ತುಸು ಕುಗ್ಗಲಿದ್ದೀರಿ, ಬೇಡದ ಯೋಚನೆಗಳು ನಿಮ್ಮನ್ನು ಕಾಡಲಿವೆ.

ಮಿಥುನ ರಾಶಿ

ಮಿಥುನ ರಾಶಿಯವರ ಆರೋಗ್ಯದಲ್ಲಿ ತುಸು ಏರು-ಪೇರಾಗಲಿದೆ. ಮಾನಸಿಕ ಒತ್ತಡಕ್ಕೆ ಒಳಗಾಗಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕೆಲ ಸಮಸ್ಯೆಗಳು ಎದುರಾಗಲಿವೆ. ಆತ್ಮೀಯರೊಟ್ಟಿಗೆ ಬೇಸರವನ್ನು ತೋಡಿಕೊಳ್ಳಲಿದ್ದೀರಿ. ದೇವರ ಅನುಗ್ರಹವನ್ನು ತಪ್ಪದೆ ಪಡೆದುಕೊಳ್ಳಿ.

ಕರ್ಕಾಟಕ ರಾಶಿ

ಕರ್ನಾಟಕ ರಾಶಿಗೆ ಈ ವಾರ ತುಸು ಉತ್ತಮವಾಗಿದೆ. ಕೆಲವು ಒಳ್ಳೆಯ ಯೋಚನೆಗಳು ಬರಲಿವೆ. ನಿಮ್ಮ ಐಡಿಯಾಗಳಿಗೆ ಸ್ಪಂದನೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಾಮಾಜಿಕ ಹೊಗಳಿಕೆಗೆ ನೀವು ಪಾತ್ರ ಆಗಲಿದ್ದೀರಿ. ಈ ವಾರ ನೀವು ಯಶಸ್ಸನ್ನು ಪಡೆಯಲಿದ್ದೀರಿ, ಕೆಲಸಗಳು ಸುಗಮವಾಗಿ ನಡೆಯಲಿವೆ. ಆದರೆ ದುರಭ್ಯಾಸಗಳಿಂದ, ದುಷ್ಟ ಕೂಟಗಳಿಂದ ದೂರವೇ ಇರಿ. ಅಹಂಕಾರ ಪ್ರದರ್ಶನ ಬೇಡ.

2025 prediction: ನಾಸ್ಟ್ರೋಡಾಮಸ್, ಬಾಬಾ ವಂಗಾ ನುಡಿದಿದ್ದಾರೆ ಕರಾಳ ಭವಿಷ್ಯ, 2025 ಕ್ಕೆ ಏನಾಗಲಿದೆ?

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಆಲೋಚನೆಗಳಲ್ಲಿ ಮುಳುಗಿ ಹೋಗಲಿದ್ದೀರಿ. ಮನೆ ರಿಪೇರಿ ಕಡೆ ಗಮನ ವಹಿಸಲಿದ್ದೀರಿ. ಹಣ ಖರ್ಚಾಗಲಿದೆ. ಹಳೆಯ ವಸ್ತುಗಳನ್ನು ನೀವು ಬದಲಾವಣೆ ಮಾಡಲಿದ್ದೀರಿ. ಹಳೆ ಗೆಳೆಯರು ಸಿಗಲಿದ್ದಾರೆ, ಕುಟುಂಬದೊಟ್ಟಿಗೆ ಸಮಯ ಕಳೆಯಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕೆಲ ಸಮಸ್ಯೆ ಎದುರಿಸಲಿದ್ದೀರಿ. ಉದ್ಯೋಗ ಬಿಡುವ ಆಲೋಚನೆ ಬರಲಿದೆ.

ಕನ್ಯಾ ರಾಶಿ

ಕೌಟುಂಬಿಕ ನೆಮ್ಮದಿ ಇರಲಿದೆ. ಮಕ್ಕಳ ಬಗ್ಗೆ ಸಂತೋಷ ಇರಲಿದೆ. ಈ ವಾರ ತುಸು ಏರಿಳಿತಗಳು ಸಂಭವಿಸಲಿವೆ. ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಳ್ಳಿ. ಯಾವುದಕ್ಕೂ ಚಿಂತಿತರಾಗುವುದು ಬೇಡ. ನಿಮಗೆ ಎಲ್ಲಿಂದಲೋ ನೆರವಿನ ಹಸ್ತ ಬರಲಿದೆ. ಕೈಗೆ ಬಂದ ಅವಕಾಶವನ್ನು ಬಿಟ್ಟುಕೊಡಬೇಡಿ. ಧ್ಯಾನ ಮಾಡಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ಶುಭ ಆಗಿರಲಿದೆ. ಪ್ರೀತಿ ಪಾತ್ರರೊಟ್ಟಿಗೆ ಒಳ್ಳೆಯ ದಿನಗಳನ್ನು ಕಳೆಯಲಿದ್ದೀರಿ. ಖುಷಿಯ ವಾರ ಇದಾಗಿರಲಿದೆ. ನೆಮ್ಮದಿ, ಖುಷಿ, ಆನಂದ ಸಿಗಲಿದೆ. ಪ್ರಯಾಣದ ಯೋಗವೂ ಈ ವಾರ ಇದೆ. ಆದರೆ ಮಾಡುವ ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ. ದೇವರ ಆರಾಧನೆಯನ್ನು ಮರೆಯಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಬರಬೇಕಾದ ಹಣ ತುಸು ತಡವಾಗಿ ಸೇರಲಿದೆ, ಆತುರ ಬೇಡ. ಆತ್ಮೀಯರೊಂದಿಗೆ ಮುನಿಸು-ವಿರಸ ಏರ್ಪಡಲಿದೆ. ಉದ್ಯೋಗದ ಸ್ಥಳದಲ್ಲಿ ಸಮಸ್ಯೆಗಳು ಬಂದರೂ ನಿವಾರಣೆ ಆಗಲಿವೆ. ವ್ಯಾಪಾರದಲ್ಲಿಯೂ ಸಹ ಸಮಸ್ಯೆಗಳು ಎದುರಾಗಲಿವೆ. ಈ ವಾರ ನಿಮಗೆ ಪ್ರೀತಿ ಆಗುವ ಸಾಧ್ಯತೆ ಇದೆ.

ಧನು ರಾಶಿ

ಈ ವಾರ ಮನಸ್ಸು ಚಂಚಲವಾಗಿ ಇರಲಿದೆ. ಮನಸ್ಸು ಗಟ್ಟಿಯಾಗಿಸಿಕೊಳ್ಳಿ, ಕೆಲವು ಘಟನೆಗಳು ನಿಮ್ಮ ಊಹೆಗೆ ವಿರುದ್ಧವಾಗಿ ನಡೆಯಲಿದೆ. ವಾರದ ಅಂತ್ಯದ ವೇಳೆಗೆ ಪರಿಸ್ಥಿತಿ ತಿಳಿ ಆಗಲಿದೆ. ಕೆಲವು ಬಂಧುಗಳು ನಿಮ್ಮ ವಿರುದ್ಧ ನಿಲ್ಲುವರು. ಕೆಲಸದಲ್ಲಿ ಏಕಾಗ್ರತೆ ಇರದು. ಗಟ್ಟಿ ಮನಸ್ಸು ಮಾಡಿ ತಾಳ್ಮೆ ತಂದುಕೊಳ್ಳಿ ಎಲ್ಲವೂ ಸರಿ ಹೋಗಲಿದೆ.

ಮಕರ ರಾಶಿ

ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ವಿದೇಶ ಪ್ರಯಾಣ ಯೋಗವೂ ಇದೆ. ಹಣದ ಆಗಮನ ಆಗಲಿದೆ. ಉದ್ಯೋಗ ಹುಡುಕುತ್ತಿರುವವರಿಗೂ ಸಹ ಒಳ್ಳೆಯ ಸಮಯ ಬರಲಿದೆ. ಈ ವಾರ ದೈಹಿಕ ಶ್ರಮದಿಂದಾಗಿ ಆಲಸ್ಯ, ಅನಾರೋಗ್ಯ ಕಾಡಬಹುದು. ಕುಟುಂಬದಲ್ಲಿ ವಾಗ್ವಾದ ನಡೆಯಲಿದೆ.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಶುಭ ಫಲ ಹೆಚ್ಚಿವೆ. ನಿವು ಮಾಡಿದ ಕೆಲವು ಒಳ್ಳೆಯ ಕೆಲಸಗಳು ಈ ವಾರ ಫಲ ನೀಡಲಿವೆ. ನಿಮ್ಮ ಮಾತಿಗೆ ಗೌರವ ಸಿಗಲಿದೆ. ಹಣಕಾಸಿನ ಸಮಸ್ಯೆ ನಿವಾರಣೆ ಆಗಲಿದೆ. ನೀವು ಅಂದುಕೊಂಡಿರುವ ಗುರಿಯನ್ನು ಸಾಧಿಸಲು ಬಹಳ ಶ್ರಮ ಪಡಬೇಕಾಗುತ್ತದೆ. ಅದರ ಕಡೆಗೆ ಗುರಿ ಇಡಿ.

ಮೀನ ರಾಶಿ

ಮೀನ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಈ ವಾರ ಹಣಕಾಸಿನ ವಿಷಯದಲ್ಲಿ ಎಚ್ಚರವಾಗಿರಿ. ಶ್ರಮ ಹಾಕಿ ಕೆಲಸ ಮಾಡುವುದು ರೆಯಬೇಡಿ, ಉದ್ಯೋಗಿಗಳ ನೆರವು ಸಿಗಲಿದೆ ಆದರೆ ಉದ್ಯೋಗದಲ್ಲಿ ಮೈಮರೆಯುವುದು ಬೇಡ. ಯಾರೊಂದಿಗೂ ಜಗಳ ಮಾಡಬೇಡಿ, ಉದ್ದಟತನದಿಂದ ಮೆರೆಯಬೇಡಿ.

LEAVE A REPLY

Please enter your comment!
Please enter your name here