Weekly Horoscope
ಸೆಪ್ಟೆಂಬರ್ ತಿಂಗಳ ಮೊದಲ ವಾರ ಪ್ರಾರಂಭವಾಗಿದೆ. ಮೊದಲ ವಾರ ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 08 ರರವರೆಗೆ ಇರಲಿದೆ. ಈ ವಾರದಲ್ಲಿ ಕೆಲವು ಗ್ರಹಗಳ ಚಲನೆ ಉಂಟಾಗಲಿದ್ದು ಕೆಲವು ರಾಶಿಗಳ ಶುಭ-ಅಶುಭಗಳಲ್ಲಿ ಬದಲಾವಣೆ ಆಗಲಿದೆ.
ಮೇಷ ರಾಶಿ
ಸಪ್ಟೆಂಬರ್ ತಿಂಗಳ ಮೊದಲ ವಾರ ಮೇಷ ರಾಶಿಗೆ ಮಿಶ್ರಫಲವಿದೆ. ಕುಟುಂಬದ ಮೇಲೆ ಪ್ರೀತಿ ಕಡಿಮೆ ಆಗಲಿದೆ. ಕೆಲಸದ ಮೇಲೆ ಉತ್ಸಾಹ ಕಳೆದುಕೊಳ್ಳುವಿರಿ. ಮಾತುಗಳಿಂದಾಗಿ ಪರರಿಗೆ ನೋವುಂಟು ಮಾಡಲಿದ್ದೀರಿ. ಒಳ್ಳೆಯ ಮಾತುಗಳನ್ನು ಆಡಿ. ಆದಾಯ ಬರುವ ಸಾಧ್ಯತೆ ಇದೆ, ಆದರೆ ತಡವಾಗಬಹುದು. ದೇವರ ಆರಾಧನೆ ಮಾಡಿ.
ವೃಷಭ ರಾಶಿ
ವೃಷಭ ರಾಶಿಗೆ ಈ ವಾರ ಶುಭ ಆಗಲಿದೆ. ಕೆಲಸಕ್ಕೆ ಹೆಚ್ಚು ಗಮನ ಹರಿಸುವಿರಿ, ಕುಟುಂಬಕ್ಕೆ ಕಡಿಮೆ ಸಮಯ ಕೊಡುವಿರಿ. ವ್ಯಾಪಾರದಲ್ಲಿ ಲಾಭ ಆಗಲಿದೆ. ರೈತರಿಗೂ ಸಹ ದಿನಗಳು ಚೆನ್ನಾಗಿವೆ. ಯೋಚಿಸಿ ಹೆಜ್ಜೆ ಇಡಿ, ವ್ಯಾಪಾರ ಮಾಡಿ, ನಿಮ್ಮ ತಪ್ಪಿನಿಂದಲೇ ನಷ್ಟವಾಗುವ ಸಾಧ್ಯತೆಯೂ ಇದೆ. ಯಂತ್ರಗಳಿಂದ ಸಮಸ್ಯೆ ಆಗಬಹುದು, ಎಚ್ಚರಿಕೆಯಿಂದ ಇರಿ. ನಿಮ್ಮ ಶ್ರಮಕ್ಕೆ ತಕ್ಕ ಪಫಲ ಸಿಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಕೆಟ್ಟ ದಿನಗಳು ಹಾಗೆಯೇ ಮುಂದುವರೆಯಲಿದೆ. ಮನಸ್ಸಿನಲ್ಲಿ ಚಂಚಲತೆ ಇರಲಿದೆ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಮೂಡುವುದಿಲ್ಲ. ಕೆಟ್ಟ ಗೆಳೆಯರ ಸಹವಾಸದಿಂದ ಸಮಸ್ಯೆ ಎದುರಾಗಲಿದೆ. ಕೆಲಸದಲ್ಲಿ ಶ್ರದ್ಧೆ ಇರದು. ನಿಮಗೆ ಒಳ್ಳೆಯ ಗೆಳೆಯರ ಅವಶ್ಯಕತೆ ಇದೆ. ನಿಮ್ಮ ಶಕ್ತಿಯನ್ನು, ಸಾಮರ್ಥ್ಯವನ್ನು ಗುರುತಿಸುವವರು ಬೇಖಾಗಿದ್ದಾರೆ. ವಿವಾಹ ಮಾತುಕತೆಗಳನ್ನು ಮುಂದೂಡಿ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಗೆ ಈ ವಾರ ಮಿಶ್ರ ಫಲ ಇದೆ. ಅಂದುಕೊಂಡ ಕೆಲಸ ಮಾಡಲಾಗದು. ಕೆಲವರಿಗೆ ಉದ್ಯೋಗ ನಷ್ಟದ ಭೀತಿ ಇದೆ. ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಫಲ ಸಿಗದೇ ಹೋಗುವುದು. ಗುರುಬಲ ಇರುವುದರಿಂದ ಬಂದ ಸಮಸ್ಯೆ ಪರಿಹಾರ ಆಗುತ್ತಿವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿ ಅಭ್ಯಾಸ ಮಾಡಬೇಕಿದೆ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಗೆ ಶುಭ ಆಗಲಿದೆ. ಅನಾರೋಗ್ಯ ದೂರವಾಗಲಿದೆ. ಮಾತಿನಿಂದ ವಾದಗಳನ್ನು ಗೆಲ್ಲುವಿರಿ. ಮಾತಿನಿಂದ ಗೌರವ ಪ್ರಾಪ್ತಿ ಆಗಲಿದೆ. ಉದ್ಯೋಗದಲ್ಲಿ ನಿಮಗೆ ಗೆಲುವು ಸಿಗಲಿದೆ. ನಿಮಗೆ ಕೆಲವು ದೊಡ್ಡವರ ಸಹಾಯ ಲಭ್ಯವಾಗಲಿದೆ. ಅಂದುಕೊಂಡ ಕೆಲಸಗಳು ಆಗಲಿವೆ. ವಿದ್ಯಾರ್ಥಿಗಳಿಗೆ ಸಣ್ಣ ಹಿನ್ನಡೆ ಆಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರ ಮಿಶ್ರಫಲವಿದೆ. ಕೆಲವು ಹೊಸ ಗೆಳೆಯರು ಸಿಗಲಿದ್ದಾರೆ. ಭೂ ವ್ಯವಹಾರದಲ್ಲಿ ನಿಮಗೆ ಸಮಸ್ಯೆಗಳು ಎದುರಾಗಲಿವೆ. ಯೋಜನೆ ಮಾಡಿ ವ್ಯವಹಾರಕ್ಕೆ ಮುಂದಾಗಿ. ಮನಸ್ಸಿನ ಶಾಂತಿ ಕೆಡಿಸಿಕೊಳ್ಳಲಿದ್ದೀರಿ. ಆರೋಗ್ಯದ ಕೊಂಚ ಏರು-ಪೇರು ಆಗಲಿದೆ. ಧ್ಯಾನ ಮಾಡಿ.
ತುಲಾ ರಾಶಿ
ತುಲಾ ರಾಶಿಗೆ ಮಿಶ್ರಫಲ ಇದೆ. ಹಣ ಖರ್ಚು ಆಗಲಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಇರದು, ಕುಟುಂಬದಲ್ಲೂ ನಿಮ್ಮ ಮಾತಿನಿಂದ ಎಲ್ಲರಿಗೂ ಬೇಸರ ಆಗಲಿದೆ. ವಿದೇಶಿ ವ್ಯವಹಾರ ಮಾಡುವವರಿಗೆ ಲಾಭ ಆಗಲಿದೆ. ಬಂದ ಹಣವನ್ನು ಯೋಜನೆ ಹಾಕಿ ಖರ್ಚು ಮಾಡಿ, ವಿನಾಕಾರಣ ಖರ್ಚು ಮಾಡಬೇಡಿ. ಮಾನಸಿಕ ನೆಮ್ಮದಿ ಬಯಸುವಿರಿ. ಕೆಲವರ ಮೇಲೆ ಬೇಸರ ಆಗಲಿದೆ.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಗೆ ಮಿಶ್ರಫಲ ಇರಲಿದೆ. ಆರೋಗ್ಯ ಸ್ಥಿರವಾಗಿರಲಿದೆ. ಬಂದ ಹಣ ನಾನಾ ಹಾದಿಯಲ್ಲಿ ಖರ್ಚಾಗಲಿದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ಆಗಲಿವೆ. ನಿಮ್ಮ ಮೃದು ಮಾತುಗಳಿಂದ ನಿಮಗೆ ಗೌರವ ಸಿಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ನ್ಯಾಯಾಲಯದ ವಿವಾದಗಳಲ್ಲಿ ಗೆಲುವು ಸಿಗಲಿದೆ. ಕುಟುಂಬದಲ್ಲಿ ಇರುವ ಭಿನ್ನಾಭಿಪ್ರಾಯ ಅಂತ್ಯ ಆಗಲಿದೆ. ವಿದ್ಯಾರ್ಥಿಗಳಗೆ ಒಳಿತಾಗಲಿದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕ ಸಿಗಲಿದೆ. ದಾಂಪತ್ಯ ಜೀವನ ಉತ್ತಮವಾಗಲಿದೆ.
ಧನು ರಾಶಿ
ದಾಂಪತ್ಯದಲ್ಲಿ ಇದ್ದ ಸಮಸ್ಯೆ ನಿವಾರಣೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಗೌರವ ಸಿಗಲಿದೆ. ಬಡ್ತಿಯೂ ಸಿಗುವ ಸಾಧ್ಯತೆ ಇದೆ. ಕೆಲವು ಒಳ್ಳೆಯ, ದೊಡ್ಡ ವ್ಯಕ್ತಿಗಳ ಭೇಟಿ ಆಗುವಿರಿ. ಉದ್ಯಮ ವಿಸ್ತರಣೆಗೆ ಮನಸ್ಸು ಮಾಡುವಿರಿ. ಚುರುಕಾಗಿ ಕೆಲಸ ಮಾಡಲಿದ್ದೀರಿ. ಜಮೀನು ಮಾರುವ ಕಾರ್ಯ ಮುಗಿಯಲಿದೆ. ಮದುವೆ ಮಾತುಕತೆ ಮುಂದುವರೆಯಲಿದೆ. ಪ್ರೀತಿ ವಿಷಯದಲ್ಲಿ ಗೆಲುವು ಆಗಲಿದೆ.
ಮಕರ ರಾಶಿ
ಮಕರ ರಾಶಿಗೆ ಈ ವಾರ ಶುಭ ಆಗಲಿದೆ. ನಿಮ್ಮ ಶತ್ರು ಯಾರು ಎಂಬುದನ್ನು ಸರಿಯಾಗಿ ಗುರುತಿಸಿ. ಚಿಂತೆಗೆ ಈಡಾಗಿದ್ದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಿರಿಯರ ಬಗ್ಗೆ ಗೌರವ ಇರಲಿ. ಕುಟುಂಬದಲ್ಲಿರುವ ಸಮಸ್ಯೆಗಳು ನಿವಾರಣೆ ಆಗಲಿವೆ. ಈ ವಾರ ನಿಮಗೆ ಆಶ್ಚರ್ಯವೊಂದು ಸಿಗಲಿದೆ. ವ್ಯಾಪಾರ ತುಸು ನಿಧಾನವಾಗಿ ಸಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವಾರ ಮಿಶ್ರಫಲ ಸಿಗಲಿದೆ. ನಿಮ್ಮ ಮಾತುಗಳಿಗೆ ಮಾನ್ಯತೆ ಸಿಗಲಿದೆ. ನಿಮ್ಮ ಯೋಚನೆಗಳಲ್ಲಿ ಅಸ್ಪಷ್ಟತೆ ಇರಲಿದೆ. ಕೆಲವು ವಿಷಯದಲ್ಲಿ ಸರಿಯಾದ ನಿರ್ಧಾರ ಸಾಧ್ಯ ಆಗದೇ ಇರಬಹುದು. ಸಿಗಬೇಕಾಗಿರುವ ಬಡ್ತಿ ನಿಂತು ಹೋಗಲಿದೆ. ದಾಂಪತ್ಯ ಸುಖಕರವಾಗಿರಲಿದೆ. ಉತ್ತಮರೊಟ್ಟಿಗೆ ವಿವಾಹ ಕೂಡಲಿದೆ. ಆದಾಯ ಬರಲಿದೆ, ಯೋಜಿಸಿ ಅದನ್ನು ಖರ್ಚು ಮಾಡಿ.
ಮೀನ ರಾಶಿ
ಮೊದಲ ವಾರದಲ್ಲಿ ಮೀನ ರಾಶಿಗೆ ಮಿಶ್ರಫಲ ಸಿಗಲಿದೆ. ಕುಟುಂಬದಲ್ಲಿ ಸಮಸ್ಯೆಗಳು ಬರಲಿವೆ. ಜಗಳ ಮಾಡಲಿದ್ದೀರಿ. ನಿಮ್ಮ ಬಗ್ಗೆ ನಿಮಗೆ ಬೇಸರ ಮೂಡಲಿದೆ. ನಂಬಿದವರಿಂದಲೇ ಮೋಸ ಆಗಲಿದೆ ಎಚ್ಚರ. ಮಾತಿನಿಂದ ಕಲಹ ಆಗಲಿದೆ, ಮೌನವೇ ಒಳಿತು. ಉದ್ಯೋಗ ಸಿಗುವುದು ಕಷ್ಟ ಆಗಲಿದೆ. ಉದ್ಯೋಗದಲ್ಲಿ ಸಮಸ್ಯೆ ಬರಲಿದೆ ಎಚ್ಚರ.