Lok Saba Election
ಲೋಕಸಭೆ ಚುನಾವಣೆ ಕಾವು ರಾಷ್ಟ್ರದಾದ್ಯಂತ ಜೋರಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಸುಡುವ ಬಿಸಿನಲ್ಲಿ ಓಡಾಡುತ್ತಾ ಮತ ಯಾಚನೆ ಮಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳದ ಬಿಜೆಪಿ ಸಂಸದನೊಬ್ಬ ಮತ ಕೇಳಲು ಹೋಗಿ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟುಬಿಟ್ಟಿದ್ದಾನೆ. ಸಂಸದನ ಈ ಹುಚ್ಚಾಟದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಬಿಜೆಪಿ ಹಾಲಿ ಸಂಸದ ಕಾಗೆನ್ ಮುರ್ಮು, ಪಶ್ಚಿಮ ಬಂಗಾಳದ ಮಲ್ದಾಹ್ ಉತ್ತರ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತಾ, ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದರು. ಈ ವೇಳೆ ಯುವತಿಯೊಬ್ಬರಿಗೆ ಕಾಗೆನ್ ಮುರ್ಮು ಮುತ್ತು ಕೊಟ್ಟಿದ್ದಾರೆ. ಕಾಗೆನ್ ಮುರ್ಮು ಯುವತಿಗೆ ಮುತ್ತು ಕೊಡುತ್ತಿರುವ ದೃಶ್ಯ ವಿಡಿಯೋನಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಎದುರಾಳಿಯಾಗಿರುವ ಟಿಎಂಸಿ ಹಾಗೂ ಕಾಂಗ್ರೆಸ್ ಪಕ್ಷಗಳು, ಬಿಜೆಪಿ ಸಂಸದ, ಮಹಿಳೆಗೆ ಮುತ್ತು ಕೊಟ್ಟಿರುವ ಚಿತ್ರಗಳನ್ನು ಹಂಚಿಕೊಂಡು ಬಿಜೆಪಿ ವಿರುದ್ಧ ಟೀಕೆಗಳನ್ನು ಮಾಡಿದೆ.
ಆದರೆ ಸಂಸದ ತಮಗೆ ಮುತ್ತು ಕೊಟ್ಟಿರುವ ಬಗ್ಗೆ ಸ್ಥಳೀಯ ಮಾಧ್ಯಮವೊಂದರ ಬಳಿ ಮಾತನಾಡಿರುವ ಯುವತಿ, ಅವರು ನನ್ನ ತಂದೆಯ ವಯಸ್ಸಿನವರು, ಮಗಳ ವಯಸ್ಸಿನ ನನ್ನ ಮೇಲೆ ಪ್ರೀತಿ ತೋರುವ ಉದ್ದೇಶದಿಂದ ನನ್ನ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ ಅದನ್ನೇಕೆ ಜನ ಇಷ್ಟು ದೊಡ್ಡದು ಮಾಡುತ್ತಿದ್ದಾರೆ ಎಂದಿದ್ದಾರೆ.
Bengaluru: ಅಡ್ವಾನ್ಸ್ ರಹಿತ ಬಾಡಿಗೆ ಮನೆ, ಬೆಂಗಳೂರಿನಲ್ಲಿ ಹೀಗೊಂದು ಟ್ರೆಂಡ್
ಬಿಜೆಪಿ ಸಂಸದನ ಕೃತ್ಯ ಖಂಡಿಸಿರುವ ತೃಣಮೂಲ ಕಾಂಗ್ರೆಸ್, ಸಂಸದ ಯುವತಿಗೆ ಮುತ್ತು ಕೊಡುತ್ತಿರುವ ಚಿತ್ರ ಹಂಚಿಕೊಂಡು, ‘ನೀವು ನೋಡುತ್ತಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲವೇ? ಆದರೂ ಇದು ಸತ್ಯ. ಬಿಜೆಪಿ ಸಂಸದನೊಬ್ಬ ಯುವತಿಗೆ ಬಲವಂತವಾಗಿ ಮುತ್ತು ಕೊಡುತ್ತಿರುವ ಚಿತ್ರವಿದು. ಒಬ್ಬ ಬಿಜೆಪಿ ಮಂತ್ರಿ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾನೆ. ಮತ್ತೊಬ್ಬ ಸಂಸದ ಬಂಗಾಳದ ಮಹಿಳೆಯರ ಬಗ್ಗೆ ಅವಾಚ್ಯ ಹಾಡುಗಳನ್ನು ಹಾಡುತ್ತಾನೆ. ಈಗ ಈ ಸಂಸದ ಬೆಂಗಾಳದ ಮಹಿಳೆಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ. ಈ ಬಿಜೆಪಿಯವರು ಮಹಿಳೆಯರಿಗೆ ಕೊಡುವ ಗೌರವ ಇದೇ ನೋಡಿ. ಮೋದಿಯ ಪರಿವಾರದವರು ನಾರಿಯರಿಗೆ ಕೊಡುವ ಗೌರವ ಇದು’ ಎಂದಿದೆ.
ಸಂಸದ ಕಾಗೆನ್ ಮುರ್ಮು ಮಾತನಾಡಿ, ‘ಆ ಯುವತಿ ನನ್ನ ಮಗಳ ವಯಸ್ಸಿನಾಕೆ. ಮಗಳನ್ನು ಪ್ರೀತಿಯಿಂದ ಅಪ್ಪಿಕೊಂಡಂತೆ ಅಪ್ಪಿಕೊಂಡು ಮುತ್ತು ಕೊಟ್ಟಿದ್ದೇನೆ. ಇದನ್ನು ಅನ್ಯತಾ ಭಾವಿಸುವ ಅಗತ್ಯವಿಲ್ಲ’ ಎಂದಿದ್ದಾರೆ.
[…] […]