Youtube: ವಿಲೇಜ್ ಕುಕಿಂಗ್ ಚಾನೆಲ್’ನ ತಿಂಗಳ ಆದಾಯ ಎಷ್ಟು ಲಕ್ಷ ಗೊತ್ತೆ?

0
139
YouTube

Youtube

ಯೂಟ್ಯೂಬ್ ನೋಡುವ ಅಭ್ಯಾಸ ಇರುವವರು ಒಂದಲ್ಲ ಒಂದು ಬಾರಿ ವಿಲೇಜ್ ಕುಕಿಂಗ್ ಚಾನೆಲ್ ನೋಡಿಯೇ ಇರುತ್ತಾರೆ. ಒಬ್ಬ ತಾತ ಸೇರಿದಂತೆ ಕೆಲ ಯುವಕರು ಯಾವುದಾದರೂ ಹೊಲ, ತೋಟದ ಮಧ್ಯೆ ಬಗೆ ಬಗೆಯ ಅಡುಗೆಗಳನ್ನು ಮಾಡಿ ಕೊನೆಗೆ ಅದನ್ನು ರಸ್ತೆ ಬದಿ ಭಿಕ್ಷುಕರಿಗೆ, ಅನಾಥಾಶ್ರಮದ ಮಕ್ಕಳಿಗೆ ಹಂಚುತ್ತಾರೆ. ಒಂದು ಕೋಟಿಗೂ ಹೆಚ್ಚು ಸಬ್ ಸ್ಕ್ರೈಬರ್’ಗಳು ಇರುವ ಈ ಯೂಟ್ಯೂಬ್ ಚಾನೆಲ್ ನಿಂದ ಆ ಯುವಕರು ಪ್ರತಿ ತಿಂಗಳು ಗಳಿಸುವ ಆದಾಯ ಎಷ್ಟು ಲಕ್ಷ ಗೊತ್ತೆ?

ಅವರ ಆದಾಯ ತಿಳಿದುಕೊಳ್ಳುವ ಮೊದಲು ಅವರ ಹಿನ್ನೆಲೆ ತಿಳಿದುಕೊಳ್ಳೋಣ, ಈ ಅಡುಗೆಯವರ ಗುಂಪಿನ ಹಿರಿಯ ವ್ಯಕ್ತಿಯ ಹೆಸರು ಪೆರಿಯತಂಪಿ ಉಳಿದವರು ಮುರುಗೇಸನ್, ಮುತ್ತುಮಾಣಿಕ್ಯಂ, ಅಯ್ಯನಾರ್, ತಮಿಳ್ ಸೆಲ್ವನ್ ಮತ್ತು ಸುಬ್ರಮಣಿಯನ್ (ಅಡ್ಮಿನ್). ಇವರೆಲ್ಲ ತಮಿಳುನಾಡಿನ ವೀರಮಂಗಳಂ ಗ್ರಾಮದವರು.

ಒಂದು ಕೋಟಿಗೂ ಹೆಚ್ಚು ಸಬ್ ಸ್ಕ್ರೈಬ್ ಹೊಂದಿರುವ ವಿಲೇಜ್ ಕುಕಿಂಗ್ ಚಾನೆಲ್, ಕೇವಲ ಯೂಟ್ಯೂಬ್ ಆಡ್ ರೆವಿನ್ಯೂ ಇಂದ ಸುಮಾರು‌ 20 ರಿಂದ 30 ಲಕ್ಷ ರೂಪಾಯಿ ಹಣ ಗಳಿಸುತ್ತದೆ. ಇನ್ನು ಇವರ ಆದಾಯ ಕೇವಲ ಯೂಟ್ಯೂಬ್ ನಿಂದ ಮಾತ್ರವೇ ಬರುವುದಿಲ್ಲ. ಬದಲಿಗೆ ಫೇಸ್’ಬುಕ್, ಇನ್ಸ್ಟಾಗ್ರಾಂನಿಂದಲೂ ಬರುತ್ತದೆ. ಅವುಗಳಿಂದ ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿ ಆದಾಯ ಇವರ ಪಾಲಾಗುತ್ತಿದೆ. ಅಲ್ಲಿಗೆ ಇವರ ತಿಂಗಳ ಅದಾಯ ಸುಮಾರು 40 ಲಕ್ಷ ರೂಪಾಯಿ ಎನ್ನಬಹುದು.

ಅಂದಹಾಗೆ ಆ ವಿಡಿಯೋನಲ್ಲಿ ಕಾಣಿಸಿಕೊಳ್ಳುವ ಎಲ್ಲರೂ ಒಂದೇ ಕುಟುಂಬದವರು. ತಮ್ಮ ಚಾನೆಲ್’ಗೆ ಸೋಷಿಯಲ್ ಮೀಡಿಯಾ, ಎಡಿಟರ್, ಕ್ಯಾಮೆರಾ ಮ್ಯಾನ್ ಇನ್ನಿತರೆ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಇವರು ಬಳಸುವುದು ಸಿನಿಮಾಗಳನ್ನು ಚಿತ್ರೀಕರಿಸಲು ಬಳಸುವ ದುಬಾರಿ ಕ್ಯಾಮೆರಾ ಅನ್ನು. ಇವರ ವಿಡಿಯೋ ಅನ್ನು 8k ನಲ್ಲಿ ಸಹ ವೀಕ್ಷಿಸಬಹುದು. ಹಲವು‌ ದೊಡ್ಡ ಕಂಪೆನಿಗಲು, ಯೂಟ್ಯೂಬ್ ಸೆಲೆಬ್ರಿಟಿಗಳೇ 8k ಕ್ಯಾಮೆರಾ ಬಳಸುವುದಿಲ್ಲ.

Dosa: ಚರ್ಚೆ ಹುಟ್ಟುಹಾಕಿದ ದೋಸೆ ಮಾರುವವನ ತಿಂಗಳ ಆದಾಯ

ವಿಶ್ವ ವಿಖ್ಯಾತ ಬಾಣಸಿಗ ಗೋರ್ಡನ್ ರಾಮ್ಸಿ ಇವರ ಊರಿಗೆ ಬಂದು ಇವರೊಟ್ಟಿಗೆ ಅಡುಗೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಹ ಇವರೊಟ್ಟಿಗೆ ಅಡುಗೆ ಮಾಡಿದ್ದಾರೆ. ಯಾವುದೇ ಪ್ರಾಡೆಕ್ಟ್ ಪ್ರಮೋಷನ್ ಮಾಡದ ಇವರು, ಕೇವಲ ತಮ್ಮ ಯೂಟ್ಯೂಬ್ ವೀವ್ಸ್ ನಿಂದ ಬರುವ ಆದಾಯದ ಮೇಲೆ ನಿರತರಾಗಿದ್ದಾರೆ. ಖಾಸಗಿ ಜಾಹೀರಾತು ಕೊಡಲು ಪ್ರಾರಂಭ ಮಾಡಿದರೆ, ಇವರ ತಿಂಗಳ ಆದಾಯ ಒಂದು ಕೋಟಿ ಮೀರುತ್ತದೆ.

LEAVE A REPLY

Please enter your comment!
Please enter your name here