Rahul Gandhi
ರಾಹುಲ್ ಗಾಂಧಿ ಭಾರತೀಯ ಪ್ರಸ್ತುತ ರಾಜಕೀಯದ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವ್ಯಕ್ತಿ. ಪ್ರಧಾನಿ ಮೋದಿಗೆ ಎದುರಾಳಿಯಾಗಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಬಿಂಬಿಸುತ್ತಿದೆ. ರಾಹುಲ್ ಸಾಮರ್ಥ್ಯದ ಬಗ್ಗೆ ಅನುಮಾನವುಳ್ಳ ದೊಡ್ಡ ಸಂಖ್ಯೆಯ ಜನರಿದ್ದಾರೆ ಅದರ ಜೊತೆಗೆ ರಾಹುಲ್ ಗಾಂಧಿಯ ಸಮಾನತೆ, ಸಹೋದರತೆ, ಮಾನವೀಯ ರಾಜಕೀಯ ಆದರ್ಶಗಳ ಬೆಂಬಲಿಗರು ಸಹ ಅಷ್ಟೆ ಸಂಖ್ಯೆಯಲ್ಲಿದ್ದಾರೆ. ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಕೇರಳದ ವಯನಾಡ್ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡುತ್ತಿದ್ದಾರೆ. ತಮ್ಮ ಆಸ್ತಿ, ವಿದ್ಯಾಭ್ಯಾಸ ಇನ್ನಿತರೆ ವಿವರಗಳನ್ನು ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ, ರಾಹುಲ್ ಗಾಂಧಿ ಬಳಿ 20 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. 2019ಕ್ಕೆ ಹೋಲಿಸಿದರೆ ಸುಮಾರು 30% ಹೆಚ್ಚು ಆಸ್ತಿಯನ್ನು ರಾಹುಲ್ ಗಾಂಧಿ ಸಂಪಾದನೆ ಮಾಡಿದ್ದಾರೆ. 20 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರೂ ಸಹ ರಾಹುಲ್ ಗಾಂಧಿ ಬಳಿ ಯಾವುದೇ ಕಾರು, ಅಥವಾ ಮನೆಯಾಗಲಿ ಇಲ್ಲ. ಮಾತ್ರವಲ್ಲದೆ ರಾಹುಲ್ ಗಾಂಧಿಯ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇರುವುದು ಕೇವಲ 55 ಸಾವಿರ ರೂಪಾಯಿಗಳು ಮಾತ್ರ.
Hassan: ಪೆನ್ ಡ್ರೈವ್ ಪ್ರಕರಣ: ವಕೀಲ ದೇವರಾಜೇಗೌಡಗೆ ಜಾಮೀನು, “ಕಾದು ನೋಡಿ” ಎಂದ ವಕೀಲ
ರಾಹುಲ್ ಗಾಂಧಿ ಬಳಿ 9.24 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಇದೆ. 26.25 ಲಕ್ಷ ರೂಪಾಯಿಗಳು ಫಿಕ್ಸಡ್ ಡೆಪಾಸಿಟ್ (ಎಫ್ಡಿ) ಮಾಡಿದ್ದಾರೆ. ಜಾಣ ಹೂಡಿಕೆದಾರರಾಗಿರುವ ರಾಹುಲ್ ಗಾಂಧಿ 4.33 ಕೋಟಿ ರೂಪಾಯಿ ಹಣವನ್ನು ಬಾಂಡ್ಸ್ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. 3.81 ಕೋಟಿ ರೂಪಾಯಿಗಳನ್ನು ಮ್ಯೂಚ್ಯುಲ್ ಫಂಡ್ನಲ್ಲಿ ಹೂಡಿಕೆ ಮಾಡಿದ್ದಾರೆ. 15.21 ಲಕ್ಷ ರೂಪಾಯಿ ಹಣವನ್ನು ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. 4.20 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ಹೊಂದಿದ್ದಾರೆ.
11.50 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ಗುರುಗ್ರಾಮದಲ್ಲಿ ಆಫೀಸ್ ಕಚೇರಿಯನ್ನು ರಾಹುಲ್ ಗಾಂಧಿ ಹೊಂದಿದ್ದು ಇದರ ಮೌಲ್ಯ 9 ಕೋಟಿ ರೂಪಾಯಿಗಳು. ಇನ್ನು ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಒಟ್ಟಿಗೆ ದೆಹಲಿ ಬಳಿ ಜಮೀನೊಂದನ್ನು ಹೊಂದಿದ್ದು ಈ ಆಸ್ತಿಯು ಹಿರಿಯರಿಂದ ಬಂದಿದ್ದೆಂದು ಅಫಿಡವಿಟ್ನಲ್ಲಿ ರಾಹುಲ್ ಹೇಳಿದ್ದಾರೆ.