Investment: ಈಗ ನಿಮ್ಮ ಬಳಿ ಇರುವ 10 ಲಕ್ಷ ರೂಪಾಯಿ ಹಣದ ಮೌಲ್ಯ 2050 ರಲ್ಲಿ ಎಷ್ಟಿರುತ್ತದೆ?

0
50
Investment

Investment

ಕೂಡಿಟ್ಟ ಹಣದ ದೊಡ್ಡ ಶತ್ರು, ತೆರಿಗೆ ಅಲ್ಲ, ಸರ್ಕಾರಗಳು, ಬ್ಯಾಂಕ್ ಅಥವ ಅದನ್ನು ಖರ್ಚು ಮಾಡುವ ನಾವು ಯಾವುದೂ ಅಲ್ಲ, ಹಣದ ನಿಜವಾದ ಶತ್ರು ಹಣದುಬ್ಬರ (Inflation). ಹೌದು, ಹಣದ ಮೌಲ್ಯವನ್ನು ವರ್ಷದಿಂದ ವರ್ಷಕ್ಕೆ ಇಳಿಸುತ್ತ ಸಾಗುತ್ತದೆ ಈ ಹಣದುಬ್ಬರ. ಈಗ ವ್ಯಕ್ತಿಯೊಬ್ಬ ಕಷ್ಟ ಪಟ್ಟು  1 ಕೋಟಿ ಗಳಿಸಿದ ಎಂದುಕೊಳ್ಳೋಣ, ಅದನ್ನು ನಿವೃತ್ತಿಯ ಸಮಯದಲ್ಲಿ ಬಳಸೋಣವೆಂದು ಬ್ಯಾಂಕ್ ನಲ್ಲಿ ಇಟ್ಟ, ಅಲ್ಲಿಗೆ ಕತೆ ಮುಗಿಯಿತು,  ವರ್ಷದಿಂದ ವರ್ಷಕ್ಕೆ ಅದರ ಮೌಲ್ಯ ಇಳಿಯುತ್ತಲೇ ಸಾಗುತ್ತದೆ.

ಹಣದುಬ್ಬರ ಹೇಗೆ ಕೆಲಸ ಮಾಡುತ್ತದೆ, ಹೇಗೆ ನಮ್ಮ ಹಣದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಎಂದು ಗಮನಿಸೋಣ. ವರ್ಷದಿಂದ ವರ್ಷಕ್ಕೆ ವಸ್ತುಗಳ, ಸೇವೆಗಳ ಬೆಲೆ ಹೆಚ್ಚಾಗುತ್ತಾ ಹೋಗುವುದನ್ನು ಹಣದುಬ್ಬರ ಎಂದು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು.  5 ವರ್ಷದ ಹಿಂದೆ ಕುಟುಂಬವೊಂದಕ್ಕೆ ದಿನಸಿ ಖರೀದಿ ಮಾಡಲು  5000 ಸಾಕಿತ್ತು, ಈಗ ಅಷ್ಟೆ ದಿನಸಿ ಖರೀದಿ ಮಾಡಲು 10 ಸಾವಿರ ಬೇಕಿದೆ. ಇದೇ ಹಣದುಬ್ಬರ. ಅಲ್ಲಿಗೆ 5 ವರ್ಷದ ಹಿಂದೆ 5 ಸಾವಿರಕ್ಕೆ ಇದ್ದ ಮೌಲ್ಯ ಈಗ 10 ಸಾವಿರ ಆಗಿದೆ ಎಂದು ಅರ್ಥೈಸಿಕೊಳ್ಳಬಹುದು.

ಈ ಹಣದುಬ್ಬರ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರುತ್ತದೆ. ನಮ್ಮ ದೇಶದಲ್ಲಿ ಈಗಿನ ಹಣದುಬ್ಬರ ಏರಿಕೆಯ ಪ್ರಮಾಣ ಸರಾಸರಿ 5% ಇದೆ. ಕಳೆದ ವರ್ಷ ಇದು 5.22% ಇತ್ತು. ಮುಂದಿನ 25 ವರ್ಷಗಳಲ್ಲಿ ಹಣದುಬ್ಬರ ಪ್ರಮಾಣ 5% ಅಷ್ಟೆ ಇರಲಿದೆ ಎಂದು ಊಹೆ ಮಾಡಿಕೊಳ್ಳುವುದಾದರೆ. ಈಗ ನಿಮ್ಮ ಬಳಿ ಇರುವ 10 ಲಕ್ಷ ರೂಪಾಯಿಯ ಮೌಲ್ಯ 2050 ರಲ್ಲಿ ಅದರ ಮೌಲ್ಯ ಕೇವಲ 2.90 ಲಕ್ಷಗಳಾಗುತ್ತದೆ. ಅದೇ ನಿಮ್ಮ ಬಳಿ ಈಗ ಒಂದು ಕೋಟಿ ಇದೆಯೆಂದರೆ 2050 ಕ್ಕೆ ಅದರ ಮೌಲ್ಯ 29 ಕೋಟಿ ಆಗಿರುತ್ತದೆ.

ಈಗ ಹತ್ತು ಲಕ್ಷ ರೂಪಾಯಿಯಲ್ಲಿ ಒಂದು ಮಾರುತಿ ಸ್ವಿಫ್ಟ್ ಕಾರು ಖರೀದಿಸಬಹುದು. 2050 ರಲ್ಲಿ ಅದೇ ಸ್ವಿಫ್ಟ್ ಕಾರು ಖರೀದಿ ಮಾಡಲು‌ 30 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಕೆಲವರು 2050 ಕ್ಕೆ ದೊಡ್ಡ ಬರಬೇಕೆಂದು ಈಗಿನಿಂದಲೇ ಹೂಡಿಕೆ ಮಾಡುತ್ತಿರುತ್ತಾರೆ. FD, ಮ್ಯೂಚ್ಯುಲ್ ಫಂಡ್ ಮಾರಾಟ ಮಾಡುವವರು ಇದನ್ನೇ ಹೇಳುತ್ತಾರೆ. ಈಗ ನೀವು ಇಷ್ಟು ಹೂಡಿಕೆ ಮಾಡಿದರೆ 2050 ಕ್ಕೆ ಅಥವಾ ನಿಗದಿತ ವರ್ಷಕ್ಕೆ ಇಷ್ಟು ದೊಡ್ಡ ಮೊತ್ತ ಬರುತ್ತದೆ ಎನ್ನುತ್ತಾರೆ. ದೊಡ್ಡ ಮೊತ್ತ ಕೈಗೆ ಬರುತ್ತದೆ ನಿಜ, ಆದರೆ ಅದರ ಮೌಲ್ಯ ಎಷ್ಟಿರುತ್ತದೆ ಎಂಬುದು ಬಹಳ ಮುಖ್ಯ.

Businessman: ರಸ್ತೆ ಬದಿಯಲ್ಲಿ ಹಾಲು ಮಾರುತ್ತಿದ್ದ ವ್ಯಕ್ತಿಯ ಆದಾಯ ಈಗ ದಿನಕ್ಕೆ 32 ಕೋಟಿ

ಹಣದುಬ್ಬರದಿಂದ ನಿಮ್ಮ ಹಣದ ಮೌಲ್ಯ ಕಡಿಮೆ ಆಗದೇ ಇರಲು ಸಾಧ್ಯವೇ ಇಲ್ಲ, ಆದರೆ ದೇಶದ ಹಣದುಬ್ಬರ ಪ್ರಮಾಣಕ್ಕಿಂತಲೂ ಹೆಚ್ಚು ರಿಟರ್ನ್ ಕೊಡುವ ಮೂಲಗಳಲ್ಲಿ ಹೂಡಿಕೆ ಮಾಡುವುದರಿಂದ ಹಣದ ಮೌಲ್ಯವನ್ನು ತುಸುವಾದರೂ ಉಳಿಸಿಕೊಳ್ಳಬಹುದು. ಇದರ ಜೊತೆಗೆ ವರ್ಷದಿಂದ ವರ್ಷಕ್ಕೆ ಹೂಡಿಕೆ ಮಾಡುವ‌ಮೊತ್ತವನ್ನು ಏರಿಸಿಕೊಳ್ಳುತ್ತಾ ಸಾಗಿದರೆ ಸಹ ಹಣದ ಮೌಲ್ಯ ತಕ್ಕ ಮಟ್ಟಿಗೆ ಉಳಿದುಕೊಳ್ಳುತ್ತದೆ.

LEAVE A REPLY

Please enter your comment!
Please enter your name here