Site icon Samastha News

Rishab Shetty: ರಿಷಬ್ ಶೆಟ್ಟರ ಬಾಲಿವುಡ್ ಸಿನಿಮಾ ಪ್ರಾರಂಭ ಯಾವಾಗ?

Rishab Shetty

Rishab Shetty and Ashutosh Gowariker

Rishab Shetty

‘ಕಾಂತಾರ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ರಿಷಬ್ ಶೆಟ್ಟಿ. ಊಹಿಸದದಿದ್ದ ಸ್ಟಾರ್ ಗಿರಿಯನ್ನು ತಂದುಕೊಟ್ಟ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಬಾಲಿವುಡ್ ಗೆ ಹೋಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಸುದ್ದಿ ನಿಜವೂ ಹೌದು. ಬಾಲಿವುಡ್ ನ ಬಹುದೊಡ್ಡ ನಿರ್ದೇಶಕರ ಜೊತೆ ರಿಷಬ್ ಸಿನಿಮಾ ಮಾಡಲಿದ್ದಾರೆ. ಆದರೆ ಈ ಸಿನಿಮಾ ಪ್ರಾರಂಭ ಆಗುವುದು ಯಾವಾಗ? ಸಿನಿಮಾದ ಕತೆ ಏನು? ಇಲ್ಲಿದೆ ಮಾಹಿತಿ.

ಭಾರತ ಸಿನಿಮಾ ಇತಿಹಾಸದ ಪುಟಗಳಲ್ಲಿ ದಾಖಲಾದ ಸಿನಿಮಾ ‘ಲಗಾನ್’. ಆಸ್ಕರ್ ನಾಮಿನೇಷನ್ ಹಂತಕ್ಕೆ ತಲುಪಿದ ಮೊದಲ ಭಾರತೀಯ ನಿರ್ಮಾಣದ ಸಿನಿಮಾ ಅದು. ಆ ಸಿನಿಮಾ ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ ಅಶುತೋಷ್ ಗೋವರಿಕರ್ ಅವರ ಮುಂದಿನ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಕತೆ ಕುರಿತು ಈಗಾಗಲೆ ಚರ್ಚಿಸಿದ್ದಾಗಿದ್ದು, ಒಪ್ಪಂದಕ್ಕೆ ಇಬ್ಬರ ಸಹಿಯೂ ಬಿದ್ದಿದ್ದೆ. ಇಬ್ಬರೂ ಒಟ್ಟಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡು ಸುದ್ದಿಗೆ ಅಧಿಕೃತ ಮುದ್ರೆಯನ್ನೂ ಒತ್ತಿದ್ದಾರೆ.

ಆದರೆ ಈ ಸಿನಿಮಾ ಪ್ರಾರಂಭ ಆಗುವುದು ಯಾವಾಗ? ಎಂಬ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ. ಮೂಲಗಳ ಪ್ರಕಾರ ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ’ ಸಿನಿಮಾದ ಶೇಕಡ 50 ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಇನ್ನು ಕೆಲವು ಭಾಗಗಳ ಚಿತ್ರೀಕರಣದ ಬಳಿಕ ಚಿತ್ರತಂಡ ಬ್ರೇಕ್ ಪಡೆಯಲಿದ್ದು, ಆ ಸಮಯದಲ್ಲಿ ರಿಷಬ್, ಆಶುತೋಷ್ ಗೋವರಿಕರ್ ಅವರ ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಕಾಂತಾರ 2’ ಸಿನಿಮಾದ ಚಿತ್ರೀಕರಣ ಮಳೆಗಾಳದಲ್ಲೆ ಮಾಡಬೇಕೆಂದು ರಿಷಬ್ ಶೆಟ್ಟಿ ಕಾದಿದ್ದರು. ಮಳೆಗಾಲ ಪ್ರಾರಂಭವಾಗುವ ಮುನ್ನವೇ ತಮ್ಮ ಊರಾದ ಕೆರಾಡಿಯಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿದ್ದರು. ಈಗ ಉಡುಪಿ, ಕುಂದಾಪುರದಲ್ಲಿ ಮಳೆಗಾಲ ಜೋರಿರುವ ಕಾರಣ ಚಿತ್ರೀಕರಣವನ್ನು ತಡೆಯಿಲ್ಲದೆ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ತೆಗೆಯ ಬೇಕಾದ ದೃಶ್ಯಗಳನ್ನು ಬೇಗನೆ ತೆಗೆದು ಮುಗಿಸಿದ ಬಳಿಕ ಚಿತ್ರತಂಡ ಬ್ರೇಕ್ ತೆಗೆದುಕೊಳ್ಳಲಿದ್ದು, ಮಳೆ ಕಡಿಮೆ ಆದ ಬಳಿಕ ಮತ್ತೊಮ್ಮೆ ಶೂಟಿಂಗ್ ಪ್ರಾರಂಭಿಸಲಿದೆ.

Darshan Thoogudeepa: ದರ್ಶನ್ ಗಾಗಿ ಮತ್ತೊಂದು ವಿಶೇಷ ಪೂಜೆ ಮಾಡಿಸಿದ ವಿಜಯಲಕ್ಷ್ಮಿ

ಇನ್ನು‌ ಖ್ಯಾತ ನಿರ್ದೇಶಕ ಅಶುತೋಷ್ ಗೋವರಿಕರ್, ರಿಷಬ್ ಶೆಟ್ಟಿಗಾಗಿ ಜನಪದ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆಯುವ‌ ಕತೆ ಅದು. ಹಳ್ಳಿಗನೊಬ್ಬ ಊರ ಪಟೇಲರ ವಿರುದ್ಧ ಕ್ರಾಂತಿಯನ್ನೇ ಮಾಡುವ ಕತೆಯನ್ನು ಆ ಸಿನಿಮಾ ಒಳಗೊಂಡಿರಲಿದೆ.

Exit mobile version