Site icon Samastha News

Investment: ಹಣ ಎಲ್ಲಿ ಹೂಡಿಕೆ ಮಾಡ್ತೀರಿ? ಬೆಂಗಳೂರಿನ ಕೋಟ್ಯಧೀಶ ಕೊಟ್ಟರು ಉತ್ತರ

Investment

Investment

ಹಣವಿದ್ದ ಕಡೆಗೆ ಹಣ ಹರಿಯುತ್ತದೆ. ಇದು ಅಪ್ಪಟ ನಿಜ ಹೌದು. ಆದರೆ ಈ ಹಣವಿದ್ದವರು, ಇತರರು ಹೇಗೆ ಹಣ ಮಾಡಬಹುದು ಎಂದು ಹೇಳಿಕೊಡುವುದಿಲ್ಲ. ತೀರ ಅಪರೂಪದ ಕೆಲವು ಕೋಟ್ಯಧೀಶರಷ್ಟೆ ಈ ಗುಟ್ಟು ರಟ್ಟು ಮಾಡುತ್ತಾರೆ. ದೇಶದ ಟಾಪ್ ಯಂಗ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಸಾವಿರಾರು ಕೋಟಿ ಮೌಲ್ಯದ ಕಂಪೆನಿ ಜಿರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಈ ಸಂದರ್ಭದಲ್ಲಿ ಹಣವನ್ನು ಎಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ.

ನಿಖಿಲ್ ಕಾಮತ್ ಯೂಟ್ಯೂಬ್ ನಲ್ಲಿ ಪಾಡ್ ಕಾಸ್ಟ್ ಮಾಡುತ್ತಾರೆ. ಪಾಡ್ ಕಾಸ್ಟ್ ಗೆ ಕೆಲ ಜನಪ್ರಿಯ ವ್ಯಕ್ತಿಗಳನ್ನು, ಉದ್ಯಮಿಗಳನ್ನು ಕರೆಸಿ ಅವರೊಟ್ಟಿಗೆ ಬ್ಯುಸಿನೆಸ್ ಬಗ್ಗೆ ಚರ್ಚಿಸುತ್ತಾರೆ. ಇತ್ತೀಚೆಗೆ ನಿಖಿಲ್ ಕಾಮತ್ ಶೋಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್, ಖ್ಯಾತ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಗಾಯಕ ಬಾದ್ ಶಾ ಬಂದಿದ್ದರು. ಈ ವೇಳೆ ಬಾದ್ ಶಾ, ನಿಮ್ಮ ಬಳಿ ಈಗ 3 ಕೋಟಿ ರೂಪಾಯಿ ಹಣ ಇದೆಯೆಂದರೆ ಅದನ್ನು ಎಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಪ್ರಶ್ನೆ ಕೇಳಿದರು.

ಹೆಚ್ಚು ಯೋಚನೆ ಮಾಡದೆ ಉತ್ತರಿಸಿದ ನಿಖಿಲ್, ನಾನು ಖಂಡಿತ ಷೇರುಗಳಲ್ಲಿ ಹೂಡಿಕೆ ಮಾಡಿರುತ್ತಿದ್ದೆ‌. ಯಾವುದಾದರೂ ಸರಿ ಸೌರಶಕ್ತಿಗೆ ಸಂಬಂಧಿಸಿದ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಿದ್ದೆ. ಬ್ಯಾಟರಿ ಕಂಪೆನಿ, ಸೋಲಾರ್ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಿದ್ದೆ. ಏಕೆಂದರೆ ಸೋಲಾರ್ ಎಂಬುದು ಬೆಳೆಯುತ್ತಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಅವಕಾಶ ಹೆಚ್ಚಿದೆ, ಖರ್ಚು ಕಡಿಮೆ ಇದೆ, ಪ್ರಯೋಜನ ಹೆಚ್ಚಿದೆ ಮತ್ತು ಇದಕ್ಕೆ ಸರ್ಕಾರಗಳ ಬೆಂಬಲವೂ ಇದೆ ಎಂದಿದ್ದಾರೆ.

http://Ratan Tata: ಟಾಟಾ ಕಂಪೆನಿ‌ ಹೊರತಾಗಿ ರತನ್ ಟಾಟಾ ಹೂಡಿಕೆ ಮಾಡಿರುವ ಹತ್ತು ಸಂಸ್ಥೆಗಳು ಇವು

ಇದೇ ರೀತಿಯ ಪ್ರಶ್ನೆಯೊಂದನ್ನು ಈ ಹಿಂದಿನ ಪಾಡ್ ಕಾಸ್ಟ್ ಒಂದರಲ್ಲಿ ಯೂಟ್ಯೂಬರ್ ತನ್ಮಯ್ ಭಟ್, ನಿಖಿಲ್ ಗೆ ಕೇಳಿದ್ದರು‌. ಆಗ ಉತ್ತರಿಸಿದ್ದ ನಿಖಿಲ್, ಮಾರುಕಟ್ಟೆಯಲ್ಲಿ ಹಣ ಮಾಡುವ ಸುಲಭ ರೀತಿ ಯೆಂದರೆ ನಿಫ್ಟಿ ಮೇಲೆ ಹೂಡಿಕೆ ಮಾಡುವುದು. ಅದರ ಹೊರತಾಗಿ ಟಾಪ್ 5 ಬ್ಲೂ ಚಿಪ್ (ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ) ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿ ಕೆಲ ವರ್ಷ ಸುಮ್ಮನೆ ಕೂತರೂ ಸಾಕು‌, ಒಂದೊಳ್ಳೆ ಮೊತ್ತ ಕೈ ಸೇರುತ್ತದೆ ಎಂದಿದ್ದರು ನಿಖಿಲ್.

Exit mobile version