Bike
ಭಾರತ ದ್ವಿಚಕ್ರ ಮಾರಾಟಕ್ಕೆ ಅತಿ ದೊಡ್ಡ ಮಾರುಕಟ್ಟೆ. ಇತ್ತೀಚೆಗೆ ವಿದೇಶದ ಕೆಲ ದೊಡ್ಡ ಬ್ರ್ಯಾಂಡ್ ಗಳು ಸಹ ಭಾರತದ ಮಾರುಕಟ್ಟೆಗೆ ಹೆಜ್ಜೆ ಇಟ್ಟಿವೆ. ರಾಯಲ್ ಎನ್ ಫೀಲ್ಡ್, ಬಜಾಜ್, ಹೋಂಡಾ, ಹೀರೋ ಮತ್ತು ಟಿವಿಎಸ್ ಗಳ ಹಿಡಿತದಲ್ಲಿರುವ ಭಾರತೀಯ ಬೈಕು ಮಾರುಕಟ್ಟೆ ಶೇರನ್ನು ಕಿತ್ತುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ಸಫಲವಾಗಿದೆ. ಕಳೆದ ತಿಂಗಳು ಅಂದರೆ ಜುಲೈ ತಿಂಗಳಲ್ಲಿ ಭಾರತದಲ್ಲಿ ಯಾವ ಬೈಕ್ ಗಳು ಹೆಚ್ಚು ಮಾರಾಟವಾಗಿವೆ? ಇಲ್ಲಿದೆ ನಿಖರ ಪಟ್ಟಿ.
150 ರಿಂದ 200 ಸಿಸಿ ಒಳಗಿನ ಬೈಕುಗಳ ಪಟ್ಟಿ
ಯಮಹಾ ಎಂಟಿ 150
ಯಮಹಾ ಸಂಸ್ಥೆಯ ಎಂಟಿ 150 ಕಾಲೇಜು ಯುವಕರ ಮತ್ತು ಕೆಲಸಕ್ಕೆ ಹೋಗುವ ಪುರುಷರ ಮೆಚ್ಚಿನ ಬೈಕ್, ಸ್ಟೈಲ್, ಲುಕ್ ಮತ್ತು ಪವರ್ ಎಲ್ಲವೂ ಉಳ್ಳ ಬೈಕ್ ಇದು. ಕಳೆದ ತಿಂಗಳು 9866 ಯಮಹಾ ಎಂ15 ಬೈಕುಗಳು ಮಾರಾಟವಾಗಿವೆ. ಆ ಮೂಲಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಈ ಬೈಕು.
ಯಮಹಾ ಎಪ್ ಜೆಡ್
ಯಮಹಾ ಸಂಸ್ಥೆಯ ಎಪ್ ಜಿ ಬೈಕುಗಳು ಭಾರತೀಯರ ನೆಚ್ಚಿನ ಬೈಕುಗಳಲ್ಲಿ ಒಂದು. ಬಲ್ಕಿ ಲುಕ್ ನ ಈ ಬೈಕುಗಳ ಬುಲೆಟ್ ಗೆ ಸ್ಪರ್ಧೆ ಒಡ್ಡಿದ್ದವು. ಆದರೆ ಬಳಿಕ ಇದರ ಮಾರಾಟ ಕಡಿಮೆಯಾಯ್ತು. ಕಳೆದ ತಿಂಗಳು 10,964 ಯಮಜಾ ಎಫ್ ಜೆಡ್ ಬೈಕುಗಳು ಮಾರಾಟವಾಗಿವೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಈ ಬೈಕು.
ಹೋಂಡಾ ಯೂನಿಕಾರ್ನ್
ಹೊಂಡಾ ಯೂನಿಕಾರ್ನ್ ಪಕ್ಕಾ ಮಧ್ಯಮ ವರ್ಗದ ಮೆಚ್ಚಿನ ಗಾಡಿ. ಒಳ್ಳೆತ ಲುಕ್, ಮೈಲೇಜ್ ಮತ್ತು ಕಡಿಮೆ ಮೇಂಟೆನೆನನ್ಸ್ ನ ಈ ಗಾಡಿ ಭಾರತೀಯ ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಗಾಡಿ. ಕಳೆದ ತಿಂಗಳು 26690 ಹೋಂಡಾ ಯೂನಿಕಾರ್ನ್ ಗಳು ಮಾರಾಟವಾಗಿವೆ. ಆತಂಕದ ವಿಷಯವೆಂದರೆ ಕಳೆದ ವರ್ಷ ಇದೇ ತಿಂಗಳಲ್ಲಿ 40 ಸಾವಿರ ಬೈಕುಗಳು ಮಾರಾಟ ಆಗಿದ್ದವು
ಟಿವಿಎಸ್ ಅಪಾಚೆ
ಟಿವಿಎಸ್ ಭಾರತದ ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಗಾಡಿಗಳನ್ನು ಹೊರತರುತ್ತಿದೆ. ಅದರಲ್ಲಿ ಅಪಾಚೆ ಅಂತೂ ಟಿವಿಎಸ್ ನ ಅತ್ಯುತ್ತಮ ಬೈಕು. 160 ಸಿಸಿ ಯಿಂದ ಪ್ರಾರಂಭವಾಗಿ 390 ಸಿಸಿ ವರೆಗೂ ಅಪಾಚೆ ಲಭ್ಯವಿದೆ. ಕಳೆದ ತಿಂಗಳು ಅಪಾಚೆಯ 160 ಸಿಸಿಯ 31681 ಬೈಕುಗಳು ಮಾರಾಟವಾಗಿವೆ. ಕಳೆದ ವರ್ಷ ಅದೇ ತಿಂಗಳಲ್ಲಿ 22 ಸಾವಿರ ಅಪಾಚೆ ಬೈಕುಗಳಷ್ಟೆ ಮಾರಾಟವಾಗಿದ್ದವು. ಪಟ್ಟಿಯಲ್ಲಿ ಟಿವಿಎಸ್ ಅಪಾಚೆ ಎರಡನೇ ಸ್ಥಾನದಲ್ಲಿದೆ.
Royal Enfield: ಬುಲೆಟ್ ನಿರ್ಮಾಣ ಕೈಬಿಟ್ಟ ರಾಯಲ್ ಎನ್’ಫೀಲ್ಡ್, ಹೊಸ ಮಾದರಿ ಬೈಕಿನತ್ತ ಗಮನ
ಬಜಾಜ್ ಪಲ್ಸರ್
ಜುಲೈ ತಿಂಗಳಲ್ಲಿ ಬಜಾಜ್ ಪಲ್ಸರ್ ದೇಶದಾದ್ಯಂತ ಅತಿ ಹೆಚ್ಚು ಮಾರಾಟವಾದ ಬೈಕ್ ಎನಿಸಿಕೊಂಡಿದೆ. ಜುಲೈ ತಿಂಗಳಲ್ಲಿ ಬರೋಬ್ಬರಿ 31,732 ಬಜಾಜ್ ಪಲ್ಸರ್ ಬೈಕುಗಳು ಮಾರಾಟವಾಗಿದೆ. ಗಮನಿಸಬೇಕಾದ ಅಂಶವೆಂದರೆ ಕಳೆದ ವರ್ಷ ಜುಲೈ ತಿಂಗಳಲ್ಲಿ 34688 ಬಜಾಜ್ ಪಲ್ಸರ್ ಬೈಕುಗಳು ಮಾರಾಟವಾಗಿದ್ದವು.
ಪಟ್ಟಿಯ ಆರನೇ ಸ್ಥಾನದಲ್ಲಿ ಯಮಹಾ ಆರ್ 15, ಏಳನೇ ಸ್ಥಾನದಲ್ಲಿ ಹೋಂಡಾ ಎಸ್ ಪಿ 160, ಎಂಟನೇ ಸ್ಥಾನದಲ್ಲಿ ಕೆಟಿಎಂ 200, ಒಂಬತ್ತನೇ ಸ್ಥಾನದಲ್ಲಿ ಹೀರೋ ಎಕ್ಸ್ ಪ್ಲಸ್ 200 ಮತ್ತು ಹತ್ತನೇ ಸ್ಥಾನದಲ್ಲಿ ಹೀರೋ ಎಕ್ಸ್ಟ್ರೀಮ್ 160 ಮತ್ತು 200 ಇದೆ. ನೆನಪಿರಲಿ ಈ ಪಟ್ಟಿ 150 ರಿಂದ 200 ಸಿಸಿ ಒಳಗಿರುವ ಬೈಕುಗಳಿಗಷ್ಟೆ ಸೀಮಿತ. ಹಾಗಾಗಿ ಪಟ್ಟಿಯಲ್ಲಿ ರಾಯಲ್ ಎನ್’ಫೀಲ್ಡ್ ಇಲ್ಲ.