Bike ಕುಸಿಯುತ್ತಿದೆಯೇ ರಾಯಲ್ ಎನ್’ಫೀಲ್ಡ್ ಹವಾ, ಅತಿ ಹೆಚ್ಚು ಮಾರಾಟವಾದ ಬೈಕ್ ಯಾವುದು?

0
95
Bike

Bike:

ಭಾರತದ ಬೈಕ್ ಮಾರುಕಟ್ಟೆ ಅತ್ಯಂತ ಗಟ್ಟಿಯಾದುದು, ಅತಿ ಹೆಚ್ಚು ಬೈಕ್’ಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.  ಇತ್ತೀಚೆಗಂತೂ ‘ಬೈಕರ್ ಕಮ್ಯೂನಿಟಿ’ ಪ್ರತಿ ನಗರಗಳಲ್ಲೂ ಹೆಚ್ಚಾಗುತ್ತಿದೆ. ಜನ ವಿಶೇಷವಾಗಿ ಯುವಕರು ಶಕ್ತಿಶಾಲಿ ಬೈಕುಗಳ ಖರೀದಿ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ರಾಯಲ್ ಎನ್’ಫೀಲ್ಡ್ ಬಂದ ಬಳಿಕವಂತೂ ಹೆಚ್ಚು ಸಿಸಿ ಬೈಕ್’ಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಆದರೆ ಇತ್ತೀಚೆಗೆ ರಾಯಲ್ ಎನ್’ಫೀಲ್ಡ್ ಹವಾ ತಗ್ಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಬೈಕುಗಳ ಅಂಕಿ ಸಂಖ್ಯೆ ಇದೀಗ ಬಿಡುಗಡೆ ಆಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳ ಮಾರಾಟಕ್ಕೂ ಈ ವರ್ಷದ ಆಗಸ್ಟ್ ತಿಂಗಳ ಮಾರಾಟಕ್ಕೂ ಹೋಲಿಕೆ ಮಾಡಿ ನೋಡಿದರೆ ಜನ ರಾಯಲ್ ಎನ್’ಫೀಲ್ಡ್ ಬಿಟ್ಟು ಇತರೆ ಬೈಕುಗಳತ್ತ ಮುಖ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗ ಬಿಡುಗಡೆ ಆಗಿರುವ 2024ರ ಆಗಸ್ಟ್ ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ರಾಯಲ್ ಎನ್’ಫೀಲ್ಡ್ ಬೈಕುಗಳೇ ಇವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಬೈಕುಗಳ ಮಾರಾಟದಲ್ಲಿ ಭಾರಿ ಇಳಿಕೆ ಆಗಿದೆ.

ರಾಯಲ್ ಎನ್’ಫೀಲ್ಡ್ ಕ್ಲಾಸಿಕ್ ಕಳೆದ ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ 350 ಸಿಸಿ ಬೈಕ್. 28450  ರಾಯಲ್ ಎನ್’ಫೀಲ್ಡ್ ಕ್ಲಾಸಿಕ್ ಮಾರಾಟವಾಗಿವೆ. ಎರಡನೇ ಸ್ಥಾನದಲ್ಲಿ ರಾಯಲ್ ಎನ್’ಫೀಲ್ಡ್ ಹಂಟರ್ ಇದೆ. 13 ಸಾವಿರಕ್ಕೂ ಹೆಚ್ಚು ಹಂಟರ್ ಗಳು ಮಾರಾಟ ಆಗಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಸುಮಾರು 5% ಕುಸಿತವಾಗಿದೆ. ಮೂರನೇ ಸ್ಥಾನದಲ್ಲಿ ರಾಯಲ್ ಎನ್’ಫೀಲ್ಡ್ ಬುಲ್ಲೆಟ್ ಇದೆ. ಆಗಸ್ಟ್ ತಿಂಗಳಲ್ಲಿ 8660 ಬುಲೆಟ್ ಮಾರಾಟ ಆಗಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ 43% ಕುಸಿತ ಕಂಡಿದೆ. ನಾಲ್ಕನೇ ಸ್ಥಾನದಲ್ಲಿ ರಾಯಲ್ ಎನ್’ಫೀಲ್ಡ್ 350 ಇದೆ. ಇದೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ 22% ಕುಸಿತ ಕಂಡಿದೆ. ಐದನೇ ಸ್ಥಾನದಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಂದೊರುವ ಟ್ರಯಂಪ್ ಸ್ಪೀಡ್ 400 ಇದೆ. ಆಗಸ್ಟ್ ನಲ್ಲಿ 3338 ಬೈಕುಗಳಷ್ಟೆ ಮಾರಾಟವಾಗಿದ್ದರೂ ಸಹ ಇದರ ಮಾರಾಟ ಪ್ರಮಾಣದಲ್ಲಿ 5% ಏರಿಕೆ ಆಗಿದೆ. ಇದಕ್ಕೆ ಬೇಡಿಕೆಯೂ ಹೆಚ್ಚಾಗಿದೆ.

Tata Nexon EV: ಬೆಂಕಿಗೆ ಆಹುತಿಯಾದ ಟಾಟಾ ಕಾರು, ಗ್ರಾಹಕನಿಗೆ ನ್ಯಾಯ ಒದಗಿಸಿಕೊಟ್ಟ ನ್ಯಾಯಾಲಯ

ರಾಯಲ್ ಎನ್’ಫೀಲ್ಡ್ ನ ಬಲು ಬೇಡಿಕೆಯ ಬೈಕುಗಳಾಗಿದ್ದ ಹಿಮಾಲಯನ್, ಗರಿಲ್ಲಾ ಬೈಕುಗಳ ಮಾರಾಟದಲ್ಲಿಯೂ ಸುಮಾರು 40 ರಿಂದ 45% ಕುಸಿತ ಕಂಡು ಬಂದಿದೆ. ಒಟ್ಟಾರೆ ಹೇಳುವುದಾದರೆ ರಾಯಲ್ ಎನ್’ಫೀಲ್ಡ್ ನ ಕ್ಲಾಸಿಕ್ ಹೊರತಾಗಿ ಇನ್ನೆಲ್ಲ ಬೈಕುಗಳ ಮಾರಾಟವೂ ಕುಸಿತ ಕಂಡಿದೆ. ಇತರೆ ಜನಪ್ರಿಯ ಬೈಕುಗಳಾದ ಡ್ಯೂಕ್ 390, ಜಾವಾ 350, ಬಜಾಜ್ ಡಾಮಿನಾರ್ 500 ಬೈಕುಗಳ ಮಾರಾಟದಲ್ಲಿಯೂ ಕುಸಿತ ಕಂಡಿದೆ.

LEAVE A REPLY

Please enter your comment!
Please enter your name here