Yuvraj Singh: ಬರಲಿದೆ ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾ, ಹೀರೋ ಯಾರು?

0
98
Yuvraj Singh

Yuvraj Singh

ಭಾರತದ ಕ್ರಿಕೆಟಿಗರಲ್ಲಿ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಅಜರುದ್ದೀನ್ ಅವರುಗಳ ಜೀವನ ಆಧರಿಸಿದ ಸಿನಿಮಾಗಳು ಈಗಾಗಲೇ ತೆರೆಗೆ ಬಂದಿವೆ. ಆದರೆ ಆನ್ ಫೀಲ್ಡ್- ಆಫ್ ಫೀಲ್ಡ್ ಎರಡರಲ್ಲೂ ಕೆಚ್ಚೆದೆಯ ಹೋರಾಟಗಾರ ಆಗಿರುವ ಯುವರಾಜ್ ಸಿಂಗ್ ಅವರ ಜೀವನ ತೆರೆ ಮೇಲೆ ಬರಬೇಕೆಂಬುದು ಕ್ರಿಕೆಟ್ ಪ್ರೇಮಿಗಳ ಬಹು ವರ್ಷದ ಬೇಡಿಕೆ. ಅದೀಗ ಈಡೇರುತ್ತಿದೆ.

ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾ ಕೊನೆಗೂ ತೆರೆಗೆ ಬರುತ್ತಿದೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ, ರಣ್ ಬೀರ್ ಕಪೂರ್ ನಟನೆಯ ‘ಅನಿಮಲ್’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ಟಿ ಸೀರೀಸ್ ನ ಭೂಷಣ್ ಕುಮಾರ್ ಅವರು ಯುವರಾಜ್ ಸಿಂಗ್ ಜೀವನ ಆಧರಿಸಿದ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಸಚಿನ್ ಕುರಿತ ಡಾಕ್ಯುಮೆಂಟರಿ ತೆಗೆದಿದ್ದ ರವಿ ಸಹ ಈ ಪ್ರಾಜೆಕ್ಟ್ ಗೆ ಸಹ ನಿರ್ಮಾಪಕ ಆಗಿದ್ದಾರೆ.

ಯುವರಾಜ್ ಸಿಂಗ್ ಅವರನ್ನು ಭೂಷಣ್ ಕುಮಾರ್ ಹಾಗೂ ರವಿ ಭೇಟಿಯಾಗಿ ಚರ್ಚಿಸಿದ್ದು, ಯುವರಾಜ್ ಅವರಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ ಯುವರಾಜ್ ಸಿಂಗ್ ಅವರ ಜೀವನ ಆಧರಿಸಿದ ಸಿನಿಮಾದಲ್ಲಿ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆ ಇದೀಗ ಬಾಲಿವುಡ್ ನಲ್ಲಿ ಎದ್ದಿದೆ‌‌. ಈ ಸಿನಿಮಾದ ಮುಖ್ಯ ಪಾತ್ರಕ್ಕೆ ಮೂರು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

Darshan: ಅಂದು ದರ್ಶನ್, ಇಂದು ದುನಿಯಾ ವಿಜಿ, ಒಬ್ಬೊಬ್ಬರಿಗೆ ಒಂದೊಂದು ಟೈಂ

ಯುವರಾಜ್ ಸಿಂಗ್ ಜೀವನ ಆಧರಿದ‌ ಸಿನಿಮಾದಲ್ಲಿ ಯುವರಾಜ್ ಸಿಂಗ್ ಪಾತ್ರವನ್ನು ರಣ್ ಬೀರ್ ಕಪೂರ್ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಣ್ ಬೀರ್ ಕಪೂರ್ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ಆದರೆ ಕ್ರಿಕೆಟ್ ಅದೂ ಎಡಗೈ ಕ್ರಿಕೆಟರ್ ಪಾತ್ರಕ್ಕೆ ಅವರು ಜೀವ ತುಂಬಬಲ್ಲರೆ ಎಂಬುದು ಅನುಮಾನ. ಅದು ರಣ್ ಬೀರ್ ಕಪೂರ್ ಪಾಲಿಗೆ ಸವಾಲಿನದ್ದಾಗಿರಲಿದೆ. ಇನ್ನು ರಣ್ ವೀರ್ ಸಿಂಗ್ ಹೆಸರು ಸಹ ಯುವರಾಜ್ ಪಾತ್ರಕ್ಕೆ ಕೇಳಿ ಬರುತ್ತಿದೆ. ರಣ್ ವೀರ್ ಸಿಂಗ್ ಈಗಾಗಲೇ ಕಪಿಲ್ ದೇವ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಮತ್ತೊಬ್ಬ ಪ್ರತಿಭಾವಂತ ನಟ ವಿಕ್ಕಿ‌ ಕಶಲ್ ಹೆಸರು ಸಹ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here