Bigg Boss Kannada
ಬಿಗ್ ಬಾಸ್ ಸೀಸನ್ 1 1 ಫಿನಾಲೆಗೆ ಕೆಲವೇ ದಿನ ಬಾಕಿ ಇದೆ. ಮನೆಯಲ್ಲಿ ಇನ್ನೂ ಒಂಬತ್ತು ಮಂದಿ ಇದ್ದಾರೆ. ಎಲ್ಲರೂ ಗೆಲ್ಲಲೆಂದೇ ಆಟ ಆಡುತ್ತಿದ್ದಾರೆ. ಈ ಭಾನುವಾರ ಒಬ್ಬರು ಅಥವಾ ಇಬ್ಬರು ಹೊರಗೆ ಹೋಗಲಿದ್ದಾರೆ. ಅದು ಯಾರೆಂದು ಊಹಿಸುವುದು ಕಷ್ಟ ಏನಲ್ಲ. ಧನರಾಜ್ ಅಥವಾ ಚೈತ್ರಾ ಹೊರಗೆ ಹೋಗುವುದು ಪಕ್ಕಾ ಆಗಿದೆ. ಉಳಿವ ಏಳು ಜನರಲ್ಲಿ ಗೆಲ್ಲುವುದು ಯಾರು? ಕೆಲ ಮೂಲಗಳ ಪ್ರಕಾರ ವಿನ್ನರ್ ಯಾರೆಂದು ಈಗಾಗಲೇ ನಿರ್ಣಯ ಆಗಿದೆ.
ಮೇಲ್ನೋಟಕ್ಕೆ ಕಂಡು ಬರುತ್ತಿರುವಂತೆ ರಜತ್, ತ್ರಿವಿಕ್ರಮ್, ಹನುಮಂತು, ಭವ್ಯಾ, ಮೋಕ್ಷಿತಾ ಅವರುಗಳು ಕೊನೆಯ ಹಂತದ ವರೆಗೆ ಉಳಿವ ಸಾಧ್ಯತೆ ಕಂಡು ಬರುತ್ತಿದೆ. ಮಂಜು ಸಹ ಕೊನೆಯ ಹಂತದ ವರೆಗೆ ಉಳಿವ ಸಾಧ್ಯತೆ ಇದೆ. ಆದರೆ ಇವರಲ್ಲಿ ಗೆಲ್ಲುವುದು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಹನುಂತು ಈಗಾಗಲೇ ಫಿನಾಲೆ ಟಿಕೆಟ್ ಪಡೆದಿದ್ದು, ಫಿನಾಲೆ ವಾರಕ್ಕೆ ಎಂಟ್ರಿ ನೀಡಿದ್ದಾರೆ. ಬರ ಬರುತ್ತಾ ಟಾಸ್ಕ್ ಗಳು ಕಠಿಣವಾಗುತ್ತಿದ್ದು, ಟಾಸ್ಕ್ ಗಳ ಪ್ಯಾಟರ್ನ್ ನೋಡಿದರೆ ತೋಳ್ಬಲದಿಂದ ಗೆಲ್ಲುವ ಟಾಸ್ಕ್ ಗಳು ಹೆಚ್ಚಿಗೆ ಬರುತ್ತಿವೆ. ಹಾಗಾಗಿ ರಜತ್, ತ್ರಿವಿಕ್ರಮ್ ಅವರುಗಳು ಉತ್ತಮ ಪ್ರದರ್ಶನ ನೀಡಿ ಗೆದ್ದು ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ. ಇನ್ನು ಮೋಕ್ಷಿತಾ, ಭವ್ಯಾ ಸಹ ಚೆನ್ನಾಗಿಯೇ ಪ್ರದರ್ಶನ ಮಾಡುತ್ತಿದ್ದು ಅವರೂ ಸಹ ಕೊನೆಯ ಹಂತದ ವರೆಗೆ ಬಂದು ಫಿನಾಲೆ ವೇದಿಕೆಗೆ ಬರುವ ಮುನ್ನ ಎಲಿಮಿನೇಟ್ ಆಗುವ ಸಾಧ್ಯತೆ ಕಂಡು ಬರುತ್ತಿದೆ.
ಮಂಜಣ್ಣನಿಗೆ ಸತತ ಅವಕಾಶಗಳು ಸಿಗುತ್ತಲೆ ಬರುತ್ತಿವೆಯಾದರೂ ಆತ ಸುಧಾರಿತ ಪ್ರದರ್ಶನ ನೀಡಿಲ್ಲವಾದ ಕಾರಣಕ್ಕೆ ಆತ ಮಿಡ್ ವೀಕ್ ಎಲಿನಿಮೇಷನ್ ಗೆ ಬಲಿಯಾಗುವ ಸಾಧ್ಯತೆ ಇದೆ. ಮಂಜಣ್ಣನ ಗೆಳತಿ ಗೌತಮಿ ಫಿನಾಲೆ ವಾರಕ್ಕೆ ಮುಂಚೆಯೇ ಎಲಿಮಿನೇಟ್ ಆಗುತ್ತಾರೆ ಎಂದು ಅವರು ಆಡುತ್ತಿರಿವ ಆಟದಿಂದಲೇ ಊಹಿಸಬಹುದಾಗಿದೆ.
ಅಲ್ಲಿಗೆ ಅಂತಿಮವಾಗಿ ಕಣದಲ್ಲಿ ಉಳಿಯುವುದು ತ್ರಿವಿಕ್ರಮ್, ರಜತ್ ಮತ್ತು ಹನುಮಂತ. ರಜತ್ ಹಾಗೂ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆ ಒಳಗೆ ಬಂದವರು. ರಜತ್ ತುಸು ತಡವಾಗಿ ಬಂದರೆ ಹನುಮಂತ ತುಸು ಬೇಗನೆ ಬಂದಿದ್ದರು. ಈ ಹಿಂದಿನ ಬಿಗ್ ವಾಸ್ ವಿನ್ನರ್ ಗಳು, ಜನ ಓಟು ಹಾಕಿರುವ ಪ್ಯಾಟರ್ನ್ ಗಮನಿಸಿದರೆ ಸುದೀಪ್ ಕೊನೆಯಲ್ಲಿ ಹಿಡಿಯುವ ಕೈಗಳಲ್ಲಿ ಒಂದು ಕೈ ಹನುಮಂತು ಅವರದ್ದು ಪಕ್ಕಾ ಆಗಿರುತ್ತದೆ ಎಂದು ಊಹಿಸಬಹುದು.
SS Rajamouli: ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ, ಕಾರಣ ಏನು ಗೊತ್ತೆ?
ಮೂರು ಜನರಲ್ಲಿ ಹೋಲಿಸಿದರೆ ರಜತ್ ಗೆಲ್ಲುವ ಅವಕಾಶ ತುಸು ಕಡಿಮೆ ಎಂಬಂತೆ ಕಾಣುತ್ತಿದೆ. ಇನ್ನು ತ್ರಿವಿಕ್ರಮ್ ಹಾಗೂ ಹನುಮಂತ ಇಬ್ಬರಲ್ಲಿ ಬಹುಷಃ ತ್ರಿವಿಕ್ರಮ್ ಗೆಲುವು ಸಾಧಿಸಬಹುದು. ಕಳೆದ ಬಾರಿ ಸಹ ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್ ಅವರಲ್ಲಿ ಕಾರ್ತಿಕ್ ಗೆದ್ದಿದ್ದರು. ಈ ಬಾರಿಯೂ ಅದೆ ಪ್ಯಾಟರ್ನ್ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಚಿತ್ರರಂಗ ಅಥವಾ ಟಿವಿ ಲೋಕದ ವ್ಯಕ್ತಿಯೊಬ್ಬ ಫಿನಾಲೆ ಗೆದ್ದರೆ ಅದು ಚಾನೆಲ್’ಗೂ ಒಳ್ಳೆಯದು ಎಂಬ ವಿಷಯವನ್ನು ತಳ್ಳಿ ಹಾಕುವಂತಿಲ್ಲ.