Chandan Shetty: ಚಂದನ್‌ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನಕ್ಕೆ ಕಾರಣವೇನು?

0
139
Chandan Shetty

Chandan Shetty

ಬಿಗ್‌ಬಾಸ್‌ ಕನ್ನಡ ಸೀಸನ್‌ 5 ರ ಸ್ಪರ್ಧಿಗಳಾಗಿ ಭಾಗಿಯಾಗಿದ್ದ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್‌ ಮನೆಯಲ್ಲಿಯೇ ಪ್ರೇಮಿಗಳಾಗಿದ್ದರು. ಅಲ್ಲಿಯೇ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕವೂ ಈ ಇಬ್ಬರ ಪ್ರೇಮ ಮುಂದುವರೆದು ಕೊನೆಗೆ ಮದುವೆ ಆಗಿದ್ದರು. ಚಂದನ್‌ ಶೆಟ್ಟಿ ಮೈಸೂರು ದಸರಾದ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್‌ ಮಾಡಿ ಸುದ್ದಿಯಾಗಿದ್ದರು. ಆಗ ಸಾಕಷ್ಟು ಟೀಕೆಯನ್ನು ಸಹ ಎದುರಿಸಿತ್ತು ಈ ಜೋಡಿ. ಆದರೆ ಈಗ ವಿಚ್ಛೇದನ ಪಡೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡುತ್ತಾ, ಪರಸ್ಪರರ ಚಿತ್ರಗಳು, ವಿಡಿಯೋಗಳನ್ನು ಅಪ್‌ ಲೋಡ್‌ ಮಾಡುತ್ತಾ ಆದರ್ಶ ದಂಪತಿಯಂತೆ, ರೊಮ್ಯಾಂಟಿಕ್‌ ದಂಪತಿಯಂತೆ ಹೊರಜಗತ್ತಿಗೆ ಕಾಣಿಸಿಕೊಂಡಿದ್ದರು ಚಂದನ್‌ ಹಾಗೂ ನಿವೇದಿತಾ ಆದರೆ ಈಗ ಹಠಾತ್ತನೆ ಪರಸ್ಪರ ದೂರಾಗುವ ನಿರ್ಣಯ ಮಾಡಿದ್ದಾರೆ. ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

ಯಶ್ ‘ಟಾಕ್ಸಿಕ್’ ಸಿನಿಮಾಕ್ಕೆ ಕರೀನಾ ಕಪೂರ್ ನಾಯಕಿಯಲ್ಲ, ದಕ್ಷಿಣದ ನಾಯಕಿಯೇ ಫೈನಲ್!

ಈ ಇಬ್ಬರ ಹಠಾತ್‌ ವಿಚ್ಛೇದನಕ್ಕೆ ಕಾರಣವೇನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದರ್ಶ ದಂಪತಿಯಲ್ಲಿ ತೋರ್ಪಡಿಸಿಕೊಂಡಿದ್ದ ಇವರು ಇಂಥಹಾ ನಿರ್ಣಯವನ್ನೇಕೆ ತೆಗೆದುಕೊಂಡರು ಎಂಬುದು ಹಲವರ ಪ್ರಶ್ನೆಯಾಗಿದೆ. ಕೆಲವು ಮೂಲಗಳ ಪ್ರಕಾರ, ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ಸಹ ತಮ್ಮ ವೃತ್ತಿ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂಬ ನಿರ್ಣಯಕ್ಕೆ ಬಂದು ಈ ವಿಚ್ಛೇದನ ಪಡೆದುಕೊಂಡಿದ್ದಾರಂತೆ. ಅದರಲ್ಲೂ ನಿವೇದಿತಾ ಗೌಡ, ಸಿನಿಮಾ ನಾಯಕಿಯಾಗಬೇಕೆಂಬ ಆಸೆಯಿಂದ ತರಬೇತಿಗಳಲ್ಲಿ ಭಾವಹಿಸುವ ನಿರ್ಣಯ ಮಾಡಿದ್ದಾರಂತೆ. ತಮ್ಮ ವೃತ್ತಿಗೆ ಮದುವೆ ಅಡ್ಡಿ ಬರಬಾರದೆಂಬ ಕಾರಣಕ್ಕೆ ಈ ನಿರ್ಣಯವನ್ನು ತಳೆದಿದ್ದಾರೆ ಎನ್ನಲಾಗುತ್ತಿದೆ.

ನಿವೇದಿತಾ, ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಅವರ ಅಭಿನಯ ಪ್ರತಿಭೆ ಸದಾ ಟ್ರೋಲ್‌ ಗೆ ಗುರಿಯಾಗುತ್ತಿರುತ್ತದೆ. ಆದರೆ ಮಾಡೆಲ್‌, ನಾಯಕಿ ಆಗುವ ಅತೀವ ಆಸಕ್ತಿಯುಳ್ಳ ನಿವೇದಿತಾ ತಮ್ಮ ವೃತ್ತಿಯ ಕಡೆಗೆ ಹೆಚ್ಚಿನ ಗಮನವಹಿಸುವ ನಿರ್ಣಯ ಮಾಡಿರುವ ಕಾರಣ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರೂ ಶಾಂತಿ ನಗರದ ಫ್ಯಾಮಿಲಿ ಕೋರ್ಟ್‌ ನಲ್ಲಿ ಪರಸ್ಪರ ಒಪ್ಪಿಗೆ ಆಧಾರದಲ್ಲಿ ವಿಚ್ಛೇದನ ಪಡೆದುಕೊಂಡು ದೂರಾಗಿದ್ದಾರೆ.

LEAVE A REPLY

Please enter your comment!
Please enter your name here